೧ |
ಹಾಡುವೆ ನಾನೆನ್ನ ಪ್ರಿಯನಿಗೆ ಗೀತೆಯೊಂದನು ಅವನ ದ್ರಾಕ್ಷಾವನದ ಕುರಿತು ಪ್ರೇಮಗೀತೆಯನು: ಪ್ರಿಯತಮನಿಗೆ ಇತ್ತೊಂದು ದ್ರಾಕ್ಷಿಯ ತೋಟ ಫಲವತ್ತಾಗಿಹ ಗುಡ್ಡದ ಮೇಲಿನ ತೋಟ. ಆರಿಸಿ ಎಸೆದನು ಕಲ್ಲುಮುಳ್ಳುಗಳನು ಅಗೆದು ಹದಮಾಡಿದನಾತ ಗುಡ್ಡವನು. |
೨ |
ನೆಟ್ಟನು ಒಳ್ಳೊಳ್ಳೆ ದ್ರಾಕ್ಷಿಯ ಸಸಿಗಳನು ಕಟ್ಟಿದನು ಕಾವಲಿಗಾಗಿ ಅಟ್ಟಣೆಯೊಂದನು ಕಟ್ಟಿದನು ಅದರೊಳಗೆ ಆಲೆಯೊಂದನು. ನಿರೀಕ್ಷಿಸುತ್ತಿರೆ ಆತ ಸಿಹಿದ್ರಾಕ್ಷಿ ಹಣ್ಣನು, ಬಿಟ್ಟಿತದೋ ಅವನಿಗೆ ಹುಳಿ ಹಣ್ಣನು! |
೩ |
ಆದುದರಿಂದ ನನ್ನ ಪ್ರಿಯನು ಹೀಗೆಂದು ಕೇಳುತ್ತಾನೆ: “ಜೆರುಸಲೇಮಿನ ನಿವಾಸಿಗಳೇ, ಜುದೇಯದ ಜನರೇ, ನನಗೂ ನನ್ನ ತೋಟಕ್ಕೂ ಮಧ್ಯೆ ಇರುವ ವ್ಯಾಜ್ಯವನ್ನು ತೀರಿಸಿರಿ. |
೪ |
ನನ್ನ ತೋಟಕ್ಕಾಗಿ ನಾನು ಮಾಡಿದ್ದಕ್ಕಿಂತಲೂ ಇನ್ನೇನು ಮಾಡಬೇಕಾಗಿತ್ತು? ಅದು ಸಿಹಿದ್ರಾಕ್ಷಿಯನ್ನು ಕೊಡುವುದೆಂದು ನಾನು ನಿರೀಕ್ಷಿಸುತ್ತಿರಲು, ಅದು ಹುಳಿ ಹಣ್ಣನ್ನು ಕೊಟ್ಟಿತೇಕೆ? ನನ್ನ ಈ ತೋಟಕ್ಕೆ ಏನು ಮಾಡುವೆನೆಂದು ಹೇಳುತ್ತೇನೆ, ಕೇಳಿ: |
೫ |
ಕಿತ್ತೆಸೆಯುವೆನು ಅದರ ಬೇಲಿಯನು; ತುತ್ತಾಗುವುದದು ದನಕರುಗಳಿಗೆ. ಕೆಡವಿಹಾಕುವೆನು ಅದರ ಗೋಡೆಯನು; ಈಡಾಗುವುದದು ಪರರ ತುಳಿದಾಟಕ್ಕೆ. |
೬ |
ಬಂಜರು ಭೂಮಿಯಾಗಿಸುವೆನು ಅದನ್ನು; ಕುಡಿಕತ್ತರಿಸುವರಾರೂ ಇರರು ಅದಕ್ಕೆ. ಮುಳ್ಳುಕಳೆ ಬೆಳೆಯುವುದು ಅದರೊಳಗೆ. ನೀಡುವೆನು ಆಣತಿಯೊಂದನು ಮೋಡಗಳಿಗೆ; ಸುರಿಸವು ತುಂತುರು ಮಳೆಯನ್ನೂ ಅದಕ್ಕೆ. |
೭ |
ಇಸ್ರಯೇಲ್ ಮನೆತನವೇ ಸೇನಾಧೀಶ್ವರ ಸರ್ವೇಶ್ವರ ನೆಟ್ಟ ಆ ದ್ರಾಕ್ಷಿಯ ತೋಟ. ಜುದೇಯದ ಜನರೇ ಆತ ನಾಟಿಮಾಡಿದಾ ಸುಂದರ ಸಸಿತೋಟ. ನ್ಯಾಯನೀತಿಯನು ನಿರೀಕ್ಷಿಸಿದನಾತ ಆದರೆ ಸಿಕ್ಕಿತವನಿಗೆ ರಕ್ತಪಾತ! ಸತ್ಸಂಬಂಧವನು ಎದುರುನೋಡಿದನಾತ ಇಗೋ, ದಕ್ಕಿತವನಿಗೆ ದುಃಖಿತರ ಆರ್ತನಾದ! |
೮ |
ಮನೆಯ ಮೇಲೆ ಮನೆಯನ್ನು, ಹೊಲದ ಮೇಲೆ ಹೊಲವನ್ನು ಕೂಡಿಹಾಕಿಸುತ್ತಾ ಇರುವವರಿಗೆ ಧಿಕ್ಕಾರ! ಇತರರಿಗೆ ಕಿಂಚಿತ್ತನ್ನೂ ಬಿಡದೆ ನಾಡಿನ ನಡುವೆ ತಾವೇ ಗೌಡರಾಗಿ ವಾಸಿಸುವ ಇವರಿಗೆ ಧಿಕ್ಕಾರ! |
೯ |
ಸೇನಾಧೀಶ್ವರಸ್ವಾಮಿಯಿಂದ ನಾನು ಕಿವಿಯಾರೆ ಕೇಳಿದಂತೆ ಹಲವಾರು ಮಂದಿರಗಳು ಬರಿದಾಗುವುವು. ಸುಂದರ ಹಾಗೂ ಸವಿಸ್ತಾರವಾದ ಭವನಗಳು ನಿವಾಸಿಗಳಿಲ್ಲದೆ ಪಾಳುಬೀಳುವುವು. |
೧೦ |
ಹತ್ತು ಎಕರೆ ದ್ರಾಕ್ಷಿತೋಟ ಕೇವಲ ಎಂಟು ಲೀಟರ್ ದ್ರಾಕ್ಷಾರಸವನ್ನು ಕೊಡುವುದು. ನೂರೆಂಬತ್ತು ಲೀಟರ್ ಬೀಜಬಿತ್ತಿದರೆ, ಕೇವಲ ಹದಿನೆಂಟು ಲೀಟರ್ ಧಾನ್ಯ ಮಾತ್ರ ಸಿಗುವುದು. |
೧೧ |
ಮದ್ಯದ ಗೀಳಿನಿಂದ ಮುಂಜಾನೆ ಏಳುವವರಿಗೆ ಧಿಕ್ಕಾರ! ಅಮಲೇರಿ ಉನ್ಮತ್ತರಾಗುವಂತೆ ರಾತ್ರಿಯಲ್ಲಿ ಹೊತ್ತುಮೀರಿ ಕುಡಿಯುತ್ತಾ ಕಾಲಹರಣ ಮಾಡುವವರಿಗೆ ಧಿಕ್ಕಾರ! |
೧೨ |
ಕಿನ್ನರಿ, ವೀಣೆ, ತಬಲ, ಕೊಳಲು, ಮದ್ಯಪಾನ ಇವೇ ಅವರ ದುಂದೌತಣದ ಸೊಬಗು. ಸ್ವಾಮಿಯ ಕಾರ್ಯಗಳನ್ನು ಅವರು ಲಕ್ಷಿಸರು. ಸ್ವಾಮಿಯ ಕೃತಿಗಳನ್ನವರು ಧ್ಯಾನಿಸರು. |
೧೩ |
ಈ ಕಾರಣ, ನನ್ನ ಜನರು ಬುದ್ಧಿಹೀನರಂತೆ ಸೆರೆಹೋಗುವುದು ನಿಶ್ಚಯ. ಅವರ ಮುಖಂಡರು ಹಸಿವಿನಿಂದ ಸಾಯುವರು. ಅವರಲ್ಲಿ ಜನಸಾಮಾನ್ಯರು ಬಾಯಾರಿ ಸೊರಗಿಹೋಗುವರು. |
೧೪ |
ಪಾತಾಳವು ಹಸಿದು ಹಂಬಲಿಸುತ್ತಿದೆ. ಅಗಾಧವಾಗಿ, ಬಾಯಿ ತೆರೆದು ನಿಂತಿದೆ. ಜೆರುಸಲೇಮಿನ ಶ್ರೀಮಂತರು, ಸದ್ದುಗದ್ದಲ ಮಾಡುವ, ಹೆಮ್ಮೆಯಿಂದ ಹಿಗ್ಗುವ ಜನಸಾಮಾನ್ಯರು ಆ ಪಾತಾಳದೊಳಕ್ಕೆ ಬಿದ್ದುಹೋಗುವರು. |
೧೫ |
ನರಮಾನವರು ತಗ್ಗಿಹೋಗುವರು. ಕುಲೀನರು ಕುಗ್ಗಿಹೋಗುವರು. ಗರ್ವಿಷ್ಠರ ಸೊಕ್ಕು ಅಡಗಿಹೋಗುವುದು. |
೧೬ |
ಸೇನಾಧೀಶ್ವರ ಸ್ವಾಮಿಯಾದರೋ ನ್ಯಾಯತೀರಿಸುವುದರಲ್ಲಿ ಸರ್ವಶ್ರೇಷ್ಠರು. ಧರ್ಮಪಾಲನೆಯಲ್ಲಿ ಪರಮಪರಿಶುದ್ಧರು ಎಂದು ಕಾಣಿಸಿಕೊಳ್ಳುತ್ತಾರೆ. |
೧೭ |
ಪಟ್ಟಣ ಪ್ರದೇಶಗಳು ಹಾಳಾಗಿ ಮೇಕೆಮರಿಗಳಿಗೆ ಹುಲ್ಲುಗಾವಲುಗಳಾಗುವುವು. ಕುರಿಮರಿಗಳು ಅಲ್ಲಿ ಮೇಯುವುವು. |
೧೮ |
ಅಕ್ರಮವೆಂಬ ಹಗ್ಗಗಳಿಂದ ಅಪರಾಧ ಎಂಬ ತೇರನ್ನು ಎಳೆಯುವವರಿಗೆ ಧಿಕ್ಕಾರ! |
೧೯ |
“ಸ್ವಾಮಿ ತ್ವರೆಮಾಡಲಿ, ತನ್ನ ಕಾರ್ಯವನ್ನು ತುರ್ತಾಗಿ ನಡೆಸಲಿ, ನೋಡೋಣ; ಇಸ್ರಯೇಲಿನ ಪರಮ ಪಾವನ ಸ್ವಾಮಿಯ ಯೋಜನೆ ಶೀಘ್ರವಾಗಿ ಕೈಗೂಡಲಿ, ಆಗ ಪರಿಗ್ರಹಿಸೋಣ” ಎಂದು ಹೇಳುವ ಜನರಿಗೆ ಧಿಕ್ಕಾರ! |
೨೦ |
ಕೆಟ್ಟದ್ದನ್ನು ಒಳ್ಳೆಯದೆಂದೂ ಒಳ್ಳೆಯದನ್ನು ಕೆಟ್ಟದ್ದೆಂದೂ ಬೋಧನೆ ಮಾಡುವವರಿಗೆ ಧಿಕ್ಕಾರ! ಕತ್ತಲನ್ನು ಬೆಳಕೆಂದೂ ಬೆಳಕನ್ನು ಕತ್ತಲೆಂದೂ ಸಾಧಿಸುವಂಥವರಿಗೆ ಧಿಕ್ಕಾರ! ಕಹಿಯನ್ನು ಸಿಹಿಯೆಂದೂ ಸಿಹಿಯನ್ನು ಕಹಿಯೆಂದೂ ವಾದಿಸುವಂಥವರಿಗೆ ಧಿಕ್ಕಾರ! |
೨೧ |
ತಮ್ಮ ದೃಷ್ಟಿಯಲ್ಲಿ ತಾವೇ ಜ್ಞಾನಿಗಳೆಂದು ತಮ್ಮ ಗಣನೆಯಲ್ಲಿ ತಾವೇ ವಿವೇಕಿಗಳೆಂದು ಭಾವಿಸುವವರಿಗೆ ಧಿಕ್ಕಾರ! |
೨೨ |
ಸುರಾಪಾನದಲ್ಲಿ ಶೂರರಾಗಿ, ಮದ್ಯಮಿಶ್ರಣದಲ್ಲಿ ಸಾಹಸಿಗಳಾಗಿ ಇರುವವರಿಗೆ ಧಿಕ್ಕಾರ! |
೨೩ |
ಲಂಚಕ್ಕೋಸ್ಕರ ನಿರ್ದೋಷಿಗಳನ್ನು ಅಪರಾಧಿಗಳೆಂದು ತೀರ್ಮಾನಿಸಿ ವಂಚಿಸುವವರಿಗೆ ಧಿಕ್ಕಾರ! |
೨೪ |
ಹೀಗಿರಲು, ಒಣಗಿದ ಕಳೆಯನ್ನು ಅಗ್ನಿಜ್ವಾಲೆ ಕಬಳಿಸುವಂತೆ, ಒಣಹುಲ್ಲು ಬೆಂಕಿಯಲ್ಲಿ ಬೂದಿಯಾಗುವಂತೆ, ಅವರ ಬೇರು ಕೊಳೆತುಹೋಗುವುದು. ಅವರ ಹೂ ಧೂಳಿನಂತೆ ತೂರಿಹೋಗುವುದು. ಏಕೆಂದರೆ, ಅವರು ಸೇನಾಧೀಶ್ವರಸ್ವಾಮಿಯ ಉಪದೇಶವನ್ನು ನಿರಾಕರಿಸಿದ್ದಾರೆ. ಇಸ್ರಯೇಲಿನ ಪರಮಪಾವನ ಸ್ವಾಮಿಯ ವಾಕ್ಯವನ್ನು ಅಸಡ್ಡೆಮಾಡಿದ್ದಾರೆ. |
೨೫ |
ಎಂದೇ ತಮ್ಮ ಜನರ ವಿರುದ್ಧ ಸ್ವಾಮಿಯ ಕೋಪ ಭುಗಿಲೆದ್ದಿದೆ. ಹೊಡೆಯುವುದಕ್ಕೆ ಅವರ ಕೈ ಮೇಲಕ್ಕೆತ್ತಿದೆ. ಬೆಟ್ಟಗುಡ್ಡಗಳು ನಡುಗುವುವು. ಸತ್ತ ಹೆಣಗಳು ಕಸದಂತೆ ಬೀದಿಯಲ್ಲಿ ಬಿದ್ದಿರುವುವು. ಇಷ್ಟೆಲ್ಲ ನಡೆದರೂ ಸ್ವಾಮಿಯ ಕೋಪ ತಣಿಯದು, ಎತ್ತಿದ ಕೈ ಇಳಿಯದು. |
೨೬ |
ದೂರದ ಜನಾಂಗಕ್ಕೆ ಸ್ವಾಮಿ ಧ್ವಜಾರೋಹಣ ಮಾಡುವರು ಗುರುತಾಗಿ, ಕರೆಯುವರವರನು ಜಗದ ಕಟ್ಟಕಡೆಯಿಂದ ಸೀಟಿಹಾಕಿ; ಬರುವರಾಗ ಆ ಜನರು ತ್ವರೆಮಾಡಿ, ವೇಗವಾಗಿ. |
೨೭ |
ಬಳಲಿ ಹೋಗರು ಅವರಲ್ಲಿ ಯಾರೂ ಮುಗ್ಗರಿಸಿ, ನಿದ್ರಿಸರು ಯಾರೂ ತೂಕಡಿಸಿ, ಸಡಿಲವಾಗದವರ ನಡುಕಟ್ಟು, ಕಿತ್ತುಹೋಗದವರ ಕೆರದ ಕಟ್ಟು. |
೨೮ |
ಚೂಪಾಗಿವೆ ಅವರ ಬಾಣಗಳು; ಬಿಗಿದಿವೆ ಬಿಲ್ಲುಗಳು, ಬೆಣಚುಕಲ್ಲಿನಂತಿವೆ ಕುದುರೆಗಳ ಗೊರಸುಗಳು, ಸುತ್ತುತ್ತಿವೆ ಸುಂಟರಗಾಳಿಯಂತವರ ಚಕ್ರಗಳು. |
೨೯ |
ಗರ್ಜಿಸುತಿಹರು ಸೈನಿಕರು ಸಿಂಹದಂತೆ, ಆರ್ಭಟಿಸುತಿಹರವರು ಪ್ರಾಯದ ಸಿಂಹಗಳಂತೆ, ಗುರುಗುಟ್ಟುತಿಹರು ಬೇಟೆ ಹಿಡಿದ ಕೇಸರಿಯಂತೆ. ಅದನ್ನೆತ್ತಿಕೊಂಡು ಓಡುತಿಹರು, ಬಿಡಿಸುವರಾರೂ ಇಲ್ಲದಂತೆ. |
೩೦ |
ಗುರುಗುಟ್ಟುತಿಹರು ಯೆಹೂದ್ಯರ ಮೇಲೆ ಭೋರ್ಗರೆಯುವ ಸಮುದ್ರದಂತೆ; ನಾಡಿನೆಲ್ಲೆಡೆ ಕವಿದಿಹುದು ಗಾಡಾಂಧಕಾರ; ತಾಂಡವವಾಡುತಿಹುದು ನೋಡಿದೆಡೆ ದುಃಖದುಗುಡ; ಮೋಡ ಕವಿದು ಇರುಳಾಗಿಹುದು ಹಗಲೊಳು ಕೂಡ!
|
Kannada Bible (KNCL) 2016 |
No Data |
|
|
|
|
|
|
|
|
|
|
ಯೆಶಾಯನ ೫:1 |
ಯೆಶಾಯನ ೫:2 |
ಯೆಶಾಯನ ೫:3 |
ಯೆಶಾಯನ ೫:4 |
ಯೆಶಾಯನ ೫:5 |
ಯೆಶಾಯನ ೫:6 |
ಯೆಶಾಯನ ೫:7 |
ಯೆಶಾಯನ ೫:8 |
ಯೆಶಾಯನ ೫:9 |
ಯೆಶಾಯನ ೫:10 |
ಯೆಶಾಯನ ೫:11 |
ಯೆಶಾಯನ ೫:12 |
ಯೆಶಾಯನ ೫:13 |
ಯೆಶಾಯನ ೫:14 |
ಯೆಶಾಯನ ೫:15 |
ಯೆಶಾಯನ ೫:16 |
ಯೆಶಾಯನ ೫:17 |
ಯೆಶಾಯನ ೫:18 |
ಯೆಶಾಯನ ೫:19 |
ಯೆಶಾಯನ ೫:20 |
ಯೆಶಾಯನ ೫:21 |
ಯೆಶಾಯನ ೫:22 |
ಯೆಶಾಯನ ೫:23 |
ಯೆಶಾಯನ ೫:24 |
ಯೆಶಾಯನ ೫:25 |
ಯೆಶಾಯನ ೫:26 |
ಯೆಶಾಯನ ೫:27 |
ಯೆಶಾಯನ ೫:28 |
ಯೆಶಾಯನ ೫:29 |
ಯೆಶಾಯನ ೫:30 |
|
|
|
|
|
|
ಯೆಶಾಯನ 1 / ಯೆಶ 1 |
ಯೆಶಾಯನ 2 / ಯೆಶ 2 |
ಯೆಶಾಯನ 3 / ಯೆಶ 3 |
ಯೆಶಾಯನ 4 / ಯೆಶ 4 |
ಯೆಶಾಯನ 5 / ಯೆಶ 5 |
ಯೆಶಾಯನ 6 / ಯೆಶ 6 |
ಯೆಶಾಯನ 7 / ಯೆಶ 7 |
ಯೆಶಾಯನ 8 / ಯೆಶ 8 |
ಯೆಶಾಯನ 9 / ಯೆಶ 9 |
ಯೆಶಾಯನ 10 / ಯೆಶ 10 |
ಯೆಶಾಯನ 11 / ಯೆಶ 11 |
ಯೆಶಾಯನ 12 / ಯೆಶ 12 |
ಯೆಶಾಯನ 13 / ಯೆಶ 13 |
ಯೆಶಾಯನ 14 / ಯೆಶ 14 |
ಯೆಶಾಯನ 15 / ಯೆಶ 15 |
ಯೆಶಾಯನ 16 / ಯೆಶ 16 |
ಯೆಶಾಯನ 17 / ಯೆಶ 17 |
ಯೆಶಾಯನ 18 / ಯೆಶ 18 |
ಯೆಶಾಯನ 19 / ಯೆಶ 19 |
ಯೆಶಾಯನ 20 / ಯೆಶ 20 |
ಯೆಶಾಯನ 21 / ಯೆಶ 21 |
ಯೆಶಾಯನ 22 / ಯೆಶ 22 |
ಯೆಶಾಯನ 23 / ಯೆಶ 23 |
ಯೆಶಾಯನ 24 / ಯೆಶ 24 |
ಯೆಶಾಯನ 25 / ಯೆಶ 25 |
ಯೆಶಾಯನ 26 / ಯೆಶ 26 |
ಯೆಶಾಯನ 27 / ಯೆಶ 27 |
ಯೆಶಾಯನ 28 / ಯೆಶ 28 |
ಯೆಶಾಯನ 29 / ಯೆಶ 29 |
ಯೆಶಾಯನ 30 / ಯೆಶ 30 |
ಯೆಶಾಯನ 31 / ಯೆಶ 31 |
ಯೆಶಾಯನ 32 / ಯೆಶ 32 |
ಯೆಶಾಯನ 33 / ಯೆಶ 33 |
ಯೆಶಾಯನ 34 / ಯೆಶ 34 |
ಯೆಶಾಯನ 35 / ಯೆಶ 35 |
ಯೆಶಾಯನ 36 / ಯೆಶ 36 |
ಯೆಶಾಯನ 37 / ಯೆಶ 37 |
ಯೆಶಾಯನ 38 / ಯೆಶ 38 |
ಯೆಶಾಯನ 39 / ಯೆಶ 39 |
ಯೆಶಾಯನ 40 / ಯೆಶ 40 |
ಯೆಶಾಯನ 41 / ಯೆಶ 41 |
ಯೆಶಾಯನ 42 / ಯೆಶ 42 |
ಯೆಶಾಯನ 43 / ಯೆಶ 43 |
ಯೆಶಾಯನ 44 / ಯೆಶ 44 |
ಯೆಶಾಯನ 45 / ಯೆಶ 45 |
ಯೆಶಾಯನ 46 / ಯೆಶ 46 |
ಯೆಶಾಯನ 47 / ಯೆಶ 47 |
ಯೆಶಾಯನ 48 / ಯೆಶ 48 |
ಯೆಶಾಯನ 49 / ಯೆಶ 49 |
ಯೆಶಾಯನ 50 / ಯೆಶ 50 |
ಯೆಶಾಯನ 51 / ಯೆಶ 51 |
ಯೆಶಾಯನ 52 / ಯೆಶ 52 |
ಯೆಶಾಯನ 53 / ಯೆಶ 53 |
ಯೆಶಾಯನ 54 / ಯೆಶ 54 |
ಯೆಶಾಯನ 55 / ಯೆಶ 55 |
ಯೆಶಾಯನ 56 / ಯೆಶ 56 |
ಯೆಶಾಯನ 57 / ಯೆಶ 57 |
ಯೆಶಾಯನ 58 / ಯೆಶ 58 |
ಯೆಶಾಯನ 59 / ಯೆಶ 59 |
ಯೆಶಾಯನ 60 / ಯೆಶ 60 |
ಯೆಶಾಯನ 61 / ಯೆಶ 61 |
ಯೆಶಾಯನ 62 / ಯೆಶ 62 |
ಯೆಶಾಯನ 63 / ಯೆಶ 63 |
ಯೆಶಾಯನ 64 / ಯೆಶ 64 |
ಯೆಶಾಯನ 65 / ಯೆಶ 65 |
ಯೆಶಾಯನ 66 / ಯೆಶ 66 |