೧ |
ಇಂತೆಂದರು ಸರ್ವೇಶ್ವರ ತಾನು ಅಭಿಷೇಕಿಸಿದ ಕೋರೆಷನಿಗೆ “ರಾಷ್ಟ್ರಗಳನ್ನು ನೀ ಸದೆಬಡಿಯುವಂತೆ ರಾಜಮಹಾರಾಜರನು ನಿಶ್ಯಸ್ತ್ರರನ್ನಾಗಿ ಮಾಡುವಂತೆ ಮುಚ್ಚಲಾಗದ ಹಾಗೆ ಬಾಗಿಲು ಹೆಬ್ಬಾಗಿಲುಗಳನ್ನು ತೆರೆಯುವಂತೆ ನಾ ನಿನ್ನ ಕೈಹಿಡಿದು ನಡೆಸುವೆನು ಮುಂದೆ. |
೨ |
ನಿನ್ನ ಮುಂದೆ ಸಾಗುವೆನು ನಾನು ಸಮಮಾಡುವೆನು ಬೆಟ್ಟಗುಡ್ಡಗಳನು ಒಡೆದುಹಾಕುವೆನು ಕಂಚಿನ ಕದಗಳನು ಮುರಿದುಬಿಡುವೆನು ಕಬ್ಬಿಣದ ಅಗುಳಿಗಳನು. |
೩ |
ಹೆಸರು ಹಿಡಿದು ನಿನ್ನ ಕರೆಯುವ ಸರ್ವೇಶ್ವರ ನಾನು ಕೊಡುವೆ ನಾ ನಿನಗೆ ಕತ್ತಲಲಿ ಬಚ್ಚಿಟ್ಟ ಭಂಡಾರಗಳನು ಗುಪ್ತಸ್ಥಳಗಳಲ್ಲಿ ಮರೆಮಾಡಿರುವ ನಿಧಿನಿಕ್ಷೇಪಗಳನು. ಈ ಪರಿ ಅರಿತುಕೊಳ್ಳುವೆ ನೀನು ನಾನೇ ಇಸ್ರಯೇಲರ ದೇವರೆಂಬುದನು. |
೪ |
ನನ್ನ ಸೇವಕನಾದ ಯಕೋಬನ ನಿಮಿತ್ತ ನಾನು ಆರಿಸಿಕೊಂಡ ಇಸ್ರಯೇಲಿನ ನಿಮಿತ್ತ ನನ್ನ ಅರಿವೇ ಇಲ್ಲದ ನಿನ್ನನು ಹೆಸರು ಹಿಡಿದು ಕರೆದಿರುವೆನು, ಬಿರುದಿತ್ತು ಸನ್ಮಾನಿಸಿರುವೆನು. |
೫ |
ಸರ್ವೇಶ್ವರ ನಾನಲ್ಲದೆ ಬೇರಾರು ಅಲ್ಲ ನನ್ನ ಹೊರತು ಯಾವ ದೇವರು ಇಲ್ಲ. ನೀನು ನನ್ನನ್ನು ಅರಿಯದವನಾಗಿರುವೆ ಆದರೂ ನಿನ್ನನ್ನು ಶಸ್ತ್ರಧಾರಿಯಾಗಿಸುವೆ. |
೬ |
ಇದ ಕಂಡು ತಿಳಿಯುವರೆಲ್ಲರು ಪೂರ್ವದಿಂದ ಪಶ್ಚಿಮದವರೆಗು: ನಿನ್ನ ವಿನಾ ದೇವರಾರು ಇಲ್ಲವೆಂದು ನಾನೇ ಸರ್ವೇಶ್ವರ ಮತ್ತಾರು ಅಲ್ಲವೆಂದು; |
೭ |
ಬೆಳಕಿಗೂ ಕತ್ತಲಿಗೂ ನಾನೆ ಸೃಷ್ಟಿಕರ್ತನೆಂದು ಸುಖದುಃಖಗಳಿಗೆ ಕಾರಣಕರ್ತನೆಂದು ಸಕಲವನು ನಡೆಸುವ ಸರ್ವೇಶ್ವರ ನಾನೇ ಎಂದು. |
೮ |
ವರ್ಷಿಸಲಿ ಸದ್ಧರ್ಮವನು ಆಕಾಶಮಂಡಲ ಸುರಿಸಲಿ ಮೇಲಿಂದ ಅದನ್ನು ಆ ಗಗನಮಂಡಲ; ಅಂಕುರಿಸಲಿ ಜೀವೋದ್ಧಾರವನು ಭೂಮಂಡಲ ಬೆಳೆಯಲಿ ಅದರೊಡನೆಯೇ ಸದ್ಧರ್ಮದ ಫಲ, ಸರ್ವೇಶ್ವರನಾದ ನಾನೇ ಕರ್ತ ಇದಕ್ಕೆಲ್ಲಾ.” |
೯ |
ಧಿಕ್ಕಾರ! ತನ್ನನು ರೂಪಿಸಿದವನೊಡನೇ ವ್ಯಾಜ್ಯ ಮಾಡುವವನಿಗೆ; ಅವನು ಕೂಡ ಮಣ್ಣುಮಡಕೆಗಳಲ್ಲಿ ಒಂದು ಮಡಕೆ ಅಲ್ಲವೇ? “ಏನು ಮಾಡುತ್ತಿ” ಎಂದು ಮಣ್ಣು ಕುಂಬಾರನನು ಕೇಳುವುದುಂಟೆ? ‘ನಾನು ನಿನ್ನ ಕೈಯ ಕೃತಿ ಅಲ್ಲ’ ಎಂದು ಆ ಮಡಕೆ ಹೇಳುವುದುಂಟೆ? |
೧೦ |
‘ನೀನು ಹುಟ್ಟಿಸುವುದೇನು’ ಎಂದು ತಂದೆಯನು ಕೇಳುವವನಿಗೆ ಧಿಕ್ಕಾರ! ‘ನೀನು ಹೆರುವುದೇನು’ ಎಂದು ತಾಯಿಯನು ಕೇಳುವವನಿಗೆ ಧಿಕ್ಕಾರ! |
೧೧ |
ಸರ್ವೇಶ್ವರ ಇಸ್ರಯೇಲಿನ ಪರಮಪಾವನ ಸ್ವಾಮಿ, ಅದರ ಸೃಷ್ಟಿಕರ್ತ. ಆ ಸರ್ವೇಶ್ವರನ ನುಡಿಯಿದು: “ನನ್ನ ಮಕ್ಕಳ ಬಗ್ಗೆ ನೀ ಕೇಳುವುದೆಂತು? ನನ್ನ ಕೈಯ ಕೃತಿಗಳ ಬಗ್ಗೆ ನೀ ವಿಧಿಸುವುದೆಂತು? |
೧೨ |
ಜಗವನು, ಅದರಲ್ಲಿನ ಮನುಜರನು ಸೃಜಿಸಿದವನು ನಾನೇ, ಆಕಾಶಮಂಡಲವನು ವಿಶಾಲವಾಗಿ ಹರಡಿದ್ದು ನನ್ನ ಕೈಗಳೇ, ಸೂರ್ಯ, ಚಂದ್ರ, ನಕ್ಷತ್ರಗಳನು ನಿಯಂತ್ರಿಸುವವನು ನಾನೆ. |
೧೩ |
ಧರ್ಮಸಾಧನೆಗಾಗಿ ಕೋರೆಷನನ್ನು ಉದಯಗೊಳಿಸಿರುವೆನು ಅವನ ಮಾರ್ಗಗಳನ್ನು ನಾನೇ ಸರಾಗಮಾಡುವೆನು ನನ್ನ ನಗರವನು ಪುನರ್ ನಿರ್ಮಾಣಮಾಡುವನು ಅವನು ಸೆರೆಯಾದ ನನ್ನ ಜನರನು ಬಿಡುಗಡೆ ಮಾಡುವನು ಸಂಬಳವನ್ನಾಗಲಿ ಸಂಭಾವನೆಯನ್ನಾಗಲಿ ಸ್ವೀಕರಿಸನು. ಇದ ನುಡಿದಿರುವೆನು ಸೇನಾಧೀಶ್ವರ ಸರ್ವೇಶ್ವರನಾದ ನಾನು.” |
೧೪ |
ಕೇಳಿರಿ ಸರ್ವೇಶ್ವರನ ಈ ಮಾತನ್ನು: “ನಿಮ್ಮದಾಗುವುದು ಈಜಿಪ್ಟಿನ ಸಿರಿಯು, ಸುಡಾನಿನ ಸಂಪದವು. ನಿಮ್ಮನ್ನು ಸೇರಿ ನಿಮಗಧೀನರಾಗುವರು ಎತ್ತರದ ಸೆಬಾಯರು. ಬೇಡಿತೊಟ್ಟು ಅಡ್ಡಬೀಳುವರು ನಿಮ್ಮ ಮುಂದೆ ಅರಿಕೆಮಾಡಿಕೊಳ್ಳುವರು ಹೀಗೆಂದೆ: ‘ನಿಶ್ಚಯವಾಗಿ ನಿಮ್ಮಲ್ಲಿಹರು ದೇವರು ಅವರಲ್ಲದೆ ದೇವರಿಲ್ಲ ಬೇರೆಯಾರು.’ |
೧೫ |
ಇಸ್ರಯೇಲರ ದೇವರೇ, ಉದ್ಧಾರಕನೇ, ನಿಶ್ಚಯವಾಗಿ ದೇವರಾದ ನೀನು ಮರೆಯಾಗಿರುವೆ. |
೧೬ |
ಮೂರ್ತಿಗಳನು ಮಾಡುವವರೆಲ್ಲರು ಈಡಾಗುವರು ನಾಚಿಕೆಗೆ ಮಾನಭಂಗಪಟ್ಟು ಒಟ್ಟಿಗೆ ಮುಳುಗುವರವರು ಅವಮಾನದೊಳಗೆ. |
೧೭ |
ಇಸ್ರಯೇಲಿಗಾದರೋ, ದೊರೆವುದು ಶಾಶ್ವತ ರಕ್ಷಣೆ ಸರ್ವೇಶ್ವರನಿಂದ; ಯುಗಯುಗಾಂತರಕ್ಕೂ ಅದಕ್ಕಾಗದು ಲಜ್ಜೆ, ಮಾನಭಂಗ.” |
೧೮ |
ಕೇಳಿ, ಆಕಾಶಮಂಡಲವನ್ನು ಸೃಷ್ಟಿಸಿದ ಸರ್ವೇಶ್ವರನ ಮಾತನ್ನು: ಭೂಲೋಕವನ್ನು ನಿರ್ಮಿಸಿ, ರೂಪಿಸಿ, ಸ್ಥಾಪಿಸಿದ ದೇವರು ಆತನು. ಅದನ್ನು ಶೂನ್ಯಸ್ಥಾನವಾಗಿ ಸೃಷ್ಟಿಸದೆ, ಜನನಿವಾಸಕ್ಕಾಗಿಯೇ ರೂಪಿಸಿದವನು ಆತನು. ಅಂಥವನು ಇಂತೆನ್ನುತ್ತಾನೆ: “ಸರ್ವೇಶ್ವರ ನಾನೇ; ನಾನಲ್ಲದೆ ಇನ್ನಾರೂ ಇಲ್ಲ. |
೧೯ |
ನಾನು ಗುಟ್ಟುಗುಟ್ಟಾಗಿ ಮಾತಾಡಿದವನಲ್ಲ ಕಗ್ಗತ್ತಲೆಯೊಳಗಿನಿಂದ ನುಡಿದವನಲ್ಲ ಶೂನ್ಯದಲ್ಲಿ ನನ್ನ ಹುಡುಕಿರಿ ಎಂದು ಯಕೋಬ ವಂಶಕ್ಕೆ ಹೇಳಿದವನಲ್ಲ. ಸರ್ವೇಶ್ವರನಾದ ನಾನು ಸತ್ಯಾನುಸಾರ ನುಡಿಯುವವನು, ನೆಟ್ಟನೆಯ ಮಾತುಗಳನ್ನೆ ಸ್ಪಷ್ಟವಾಗಿ ಹೇಳುವವನು.” |
೨೦ |
“ಅಳಿದುಳಿದ ಅನ್ಯಜನರೇ, ನೆರೆದು ಬನ್ನಿ, ಒಟ್ಟಿಗೆ ನನ್ನ ಬಳಿಗೆ ಬನ್ನಿ. ತಮ್ಮ ಮರದ ಬೊಂಬೆಯನು ಹೊತ್ತು ತಿರುಗುವವರು ರಕ್ಷಿಸಲಾಗದ ದೇವತೆಗೆ ಮೊರೆಯಿಡುವ ಬುದ್ಧಿಹೀನರು. |
೨೧ |
ಹೇಳಿ, ನ್ಯಾಯಸ್ಥಾನಕ್ಕೆ ಬಂದು ನಿಮ್ಮ ವಾದವನ್ನು ಮಂಡಿಸಿ; ನಿಮ್ಮ ದೇವರುಗಳು ತಮ್ಮತಮ್ಮೊಳಗೆ ಪರ್ಯಾಲೋಚಿಸಿ ನೋಡಲಿ. ಪ್ರಾರಂಭದಿಂದಲೂ ಈ ವಿಷಯವನ್ನು ಪ್ರಕಟಿಸಿದವರು ಯಾರು? ಅದು ನಡೆಯುವುದಕ್ಕೆ ಮುಂಚೆಯೇ ತಿಳಿಸಿದವನು ನಾನಲ್ಲದೆ ಇನ್ಯಾರು? ನನ್ನ ಹೊರತು ಇನ್ನು ಯಾವ ದೇವರೂ ಇಲ್ಲ; ನಾನಲ್ಲದೆ ಸತ್ಯಸ್ವರೂಪನು, ಉದ್ಧಾರಕನು ಆದ ದೇವನಿಲ್ಲವೇ ಇಲ್ಲ. |
೨೨ |
“ಎಲ್ಲೆ ಎಲ್ಲೆಗಳಲ್ಲಿರುವ ಜನರೇ, ತಿರುಗಿಕೊಳ್ಳಿರಿ ನನ್ನ ಕಡೆಗೆ, ಆಗ ಉದ್ಧಾರವಾಗುವಿರಿ. ದೇವರು ಬೇರಾರೂ ಇಲ್ಲ, ನಾನೊಬ್ಬನೆ ಎಂಬುದನರಿಯಿರಿ. |
೨೩ |
ಪ್ರತಿಯೊಬ್ಬರು ಮೊಣಕಾಲೂರುವರು ನನಗೆ ಎಲ್ಲರು ನಾನೇ ದೇವರೆಂದು ಮಾಡುವರು ಪ್ರತಿಜ್ಞೆ. ಆ ನುಡಿ ಹೊರಟಿದೆ ನನ್ನ ಸತ್ಯದ ಬಾಯಿಂದ ಅದನ್ನು ಹಿಂತೆಗೆಯೆನು ನನ್ನ ಮೇಲಿಟ್ಟ ಆಣೆಯಿಂದ. |
೨೪ |
“ಜೀವೋದ್ಧಾರವು, ಶಕ್ತಿಯು ಸರ್ವೇಶ್ವರನಲ್ಲಿ ಮಾತ್ರ ಉಂಟು ಆತನ ವಿರೋಧಿಗಳೆಲ್ಲರೂ ಆತನನ್ನೇ ಮರೆಹೋಗುವರು ನಾಚಿಕೆಪಟ್ಟು. |
೨೫ |
ಪಡೆವರು ಇಸ್ರಯೇಲಿನ ವಂಶಜರೆಲ್ಲರು ಸರ್ವೇಶ್ವರನಲ್ಲೇ ಜೀವೋದ್ಧಾರವನು, ಆನಂದವನು.” |
Kannada Bible (KNCL) 2016 |
No Data |
ಯೆಶಾಯನ ೪೫:1 |
ಯೆಶಾಯನ ೪೫:2 |
ಯೆಶಾಯನ ೪೫:3 |
ಯೆಶಾಯನ ೪೫:4 |
ಯೆಶಾಯನ ೪೫:5 |
ಯೆಶಾಯನ ೪೫:6 |
ಯೆಶಾಯನ ೪೫:7 |
ಯೆಶಾಯನ ೪೫:8 |
ಯೆಶಾಯನ ೪೫:9 |
ಯೆಶಾಯನ ೪೫:10 |
ಯೆಶಾಯನ ೪೫:11 |
ಯೆಶಾಯನ ೪೫:12 |
ಯೆಶಾಯನ ೪೫:13 |
ಯೆಶಾಯನ ೪೫:14 |
ಯೆಶಾಯನ ೪೫:15 |
ಯೆಶಾಯನ ೪೫:16 |
ಯೆಶಾಯನ ೪೫:17 |
ಯೆಶಾಯನ ೪೫:18 |
ಯೆಶಾಯನ ೪೫:19 |
ಯೆಶಾಯನ ೪೫:20 |
ಯೆಶಾಯನ ೪೫:21 |
ಯೆಶಾಯನ ೪೫:22 |
ಯೆಶಾಯನ ೪೫:23 |
ಯೆಶಾಯನ ೪೫:24 |
ಯೆಶಾಯನ ೪೫:25 |
ಯೆಶಾಯನ 1 / ಯೆಶ 1 |
ಯೆಶಾಯನ 2 / ಯೆಶ 2 |
ಯೆಶಾಯನ 3 / ಯೆಶ 3 |
ಯೆಶಾಯನ 4 / ಯೆಶ 4 |
ಯೆಶಾಯನ 5 / ಯೆಶ 5 |
ಯೆಶಾಯನ 6 / ಯೆಶ 6 |
ಯೆಶಾಯನ 7 / ಯೆಶ 7 |
ಯೆಶಾಯನ 8 / ಯೆಶ 8 |
ಯೆಶಾಯನ 9 / ಯೆಶ 9 |
ಯೆಶಾಯನ 10 / ಯೆಶ 10 |
ಯೆಶಾಯನ 11 / ಯೆಶ 11 |
ಯೆಶಾಯನ 12 / ಯೆಶ 12 |
ಯೆಶಾಯನ 13 / ಯೆಶ 13 |
ಯೆಶಾಯನ 14 / ಯೆಶ 14 |
ಯೆಶಾಯನ 15 / ಯೆಶ 15 |
ಯೆಶಾಯನ 16 / ಯೆಶ 16 |
ಯೆಶಾಯನ 17 / ಯೆಶ 17 |
ಯೆಶಾಯನ 18 / ಯೆಶ 18 |
ಯೆಶಾಯನ 19 / ಯೆಶ 19 |
ಯೆಶಾಯನ 20 / ಯೆಶ 20 |
ಯೆಶಾಯನ 21 / ಯೆಶ 21 |
ಯೆಶಾಯನ 22 / ಯೆಶ 22 |
ಯೆಶಾಯನ 23 / ಯೆಶ 23 |
ಯೆಶಾಯನ 24 / ಯೆಶ 24 |
ಯೆಶಾಯನ 25 / ಯೆಶ 25 |
ಯೆಶಾಯನ 26 / ಯೆಶ 26 |
ಯೆಶಾಯನ 27 / ಯೆಶ 27 |
ಯೆಶಾಯನ 28 / ಯೆಶ 28 |
ಯೆಶಾಯನ 29 / ಯೆಶ 29 |
ಯೆಶಾಯನ 30 / ಯೆಶ 30 |
ಯೆಶಾಯನ 31 / ಯೆಶ 31 |
ಯೆಶಾಯನ 32 / ಯೆಶ 32 |
ಯೆಶಾಯನ 33 / ಯೆಶ 33 |
ಯೆಶಾಯನ 34 / ಯೆಶ 34 |
ಯೆಶಾಯನ 35 / ಯೆಶ 35 |
ಯೆಶಾಯನ 36 / ಯೆಶ 36 |
ಯೆಶಾಯನ 37 / ಯೆಶ 37 |
ಯೆಶಾಯನ 38 / ಯೆಶ 38 |
ಯೆಶಾಯನ 39 / ಯೆಶ 39 |
ಯೆಶಾಯನ 40 / ಯೆಶ 40 |
ಯೆಶಾಯನ 41 / ಯೆಶ 41 |
ಯೆಶಾಯನ 42 / ಯೆಶ 42 |
ಯೆಶಾಯನ 43 / ಯೆಶ 43 |
ಯೆಶಾಯನ 44 / ಯೆಶ 44 |
ಯೆಶಾಯನ 45 / ಯೆಶ 45 |
ಯೆಶಾಯನ 46 / ಯೆಶ 46 |
ಯೆಶಾಯನ 47 / ಯೆಶ 47 |
ಯೆಶಾಯನ 48 / ಯೆಶ 48 |
ಯೆಶಾಯನ 49 / ಯೆಶ 49 |
ಯೆಶಾಯನ 50 / ಯೆಶ 50 |
ಯೆಶಾಯನ 51 / ಯೆಶ 51 |
ಯೆಶಾಯನ 52 / ಯೆಶ 52 |
ಯೆಶಾಯನ 53 / ಯೆಶ 53 |
ಯೆಶಾಯನ 54 / ಯೆಶ 54 |
ಯೆಶಾಯನ 55 / ಯೆಶ 55 |
ಯೆಶಾಯನ 56 / ಯೆಶ 56 |
ಯೆಶಾಯನ 57 / ಯೆಶ 57 |
ಯೆಶಾಯನ 58 / ಯೆಶ 58 |
ಯೆಶಾಯನ 59 / ಯೆಶ 59 |
ಯೆಶಾಯನ 60 / ಯೆಶ 60 |
ಯೆಶಾಯನ 61 / ಯೆಶ 61 |
ಯೆಶಾಯನ 62 / ಯೆಶ 62 |
ಯೆಶಾಯನ 63 / ಯೆಶ 63 |
ಯೆಶಾಯನ 64 / ಯೆಶ 64 |
ಯೆಶಾಯನ 65 / ಯೆಶ 65 |
ಯೆಶಾಯನ 66 / ಯೆಶ 66 |
|
|
|
|
|