A A A A A
×

ಕನ್ನಡ ಬೈಬಲ್ (KNCL) 2016

ಪರಮಗೀತೆ ೧

ಸೊಲೊಮೋನನ ಪರಮಗೀತೆ: ನಲ್ಲೆ:
ಚುಂಬಿಸೆನ್ನನು ನಿನ್ನ ತುಟಿಗಳಿಂದ ನಿನ್ನ ಪ್ರೀತಿ ಅತಿ ಮಧುರ ಮಧುಪಾನಕ್ಕಿಂತ.
ನೀನು ಹಚ್ಚಿಕೊಂಡಿರುವ ತೈಲ ಎನಿತು ಸುವಾಸನೀಯ ಸುರಿದ ಪರಿಮಳದಂತೆ ವ್ಯಾಪ್ತ ನಿನ್ನ ನಾಮಾಂಕಿತ ಕನ್ಯೆಯರೆಲ್ಲರು ನಿನ್ನನು ಪ್ರೀತಿಸದಿರಲು ಅಸಾಧ್ಯ.
ನನ್ನನ್ನು ತುಸು ಎಳೆ, ಓಡೋಣ ನಾವು ಮುಂದಕ್ಕೆ; ಅರಸನಾಗಿರು ನನಗೆ ಕರೆದೊಯ್ಯಿ ನನ್ನನ್ನು ಅಂತಃಪುರಕ್ಕೆ. ಹರ್ಷಿಸೋಣ, ಒಂದಿಗೆ ಆನಂದಿಸೋಣ ಮಧುಪಾನಕ್ಕಿಂತ ನಿನ್ನ ಪ್ರೀತಿ ಸ್ತುತ್ಯಾರ್ಹ ನಿನ್ನನ್ನು ಪ್ರೀತಿಸುವುದು ಎನಿತು ಸಹಜ!
ಓ ಜೆರುಸಲೇಮಿನ ಮಹಿಳೆಯರೇ, ನಾನು ಕಪ್ಪಾಗಿರುವೆ ಕೇದಾರಿನ ಗುಡಾರಗಳಂತೆ ಆದರೂ ಚೆಲುವೆ ಸೊಲೊಮೋನನಾ ಪರದೆಗಳಂತೆ.
ದಿಟ್ಟಿಸಿ ನೋಡಬೇಡಿ ನನ್ನ ರೂಪವನ್ನೆ ನಾ ಕಪ್ಪಾಗಿರುವುದು ಸೂರ್ಯನ ತಾಪದಿಂದಲೆ. ಸಿಟ್ಟುಗೊಂಡರು ಸಹೋದರರು ನನ್ನ ಮೇಲೆ ಅಟ್ಟಿದರು ನನ್ನನು ತೋಟಕಾಯುವುದಕ್ಕೆ ಗಮನ ಕೊಡಲಾಗಲಿಲ್ಲ ನನ್ನ ತನು ತೋಟಕ್ಕೆ.
ನನ್ನ ಪ್ರಾಣಪ್ರಿಯನೇ ಹೇಳು: ನಿನ್ನ ಮಂದೆಯನ್ನು ನೀನು ಮೇಯಿಸುವುದೆಲ್ಲಿ? ನಡುಹಗಲಲ್ಲಿ ಅದು ವಿಶ್ರಮಿಸುವುದೆಲ್ಲಿ? ನಾನೇಕೆ ಅಲೆಯಬೇಕು ಮುಸುಕು ಹಾಕಿದವಳಂತೆ ನಿನ್ನ ಗೆಳೆಯರ ಮಂದೆಗಳ ಹಿಂದೆ? ನಲ್ಲ:
ಸ್ತ್ರೀಯರಲ್ಲಿ ಅತಿ ಸುಂದರಿಯೇ, ನಿನಗಿದು ಗೊತ್ತಿಲ್ಲವಾದರೆ ಹೋಗು ಕುರಿಹಿಂಡಿನ ಜಾಡಿನಲ್ಲೆ ಮೇಯಿಸು ನಿನ್ನ ಮೇಕೆಮರಿಗಳನೆ ಕುರುಬರ ಗುಡಾರಗಳ ಸಮೀಪದಲ್ಲೆ.
ಫರೋಹನ ರಥವನ್ನೆಳೆವ ಹೆಣ್ಣುಕುದುರೆಗೆ ಹೋಲಿಸಿರುವೆ ನಾ ನಿನ್ನನು ಪ್ರಿಯಳೇ.
೧೦
ಎಷ್ಟು ಅಂದವಾಗಿವೆ ನಿನ್ನ ಕೆನ್ನೆಗಳು ಕಿವಿಯೋಲೆಗಳಿಂದ! ನಿನ್ನ ಕೊರಳು ಕಂಠಹಾರಗಳಿಂದ!
೧೧
ಮಾಡಿಸುವೆ ನಿನಗೆ ಬಂಗಾರದ ಅಂಚು, ಬೆಳ್ಳಿಯ ಕುಚ್ಚು. ನಲ್ಲೆ:
೧೨
ಅತ್ತ ರಾಜನು ಮಂಚದ ಮೇಲೆ ಮಲಗಿಕೊಂಡಿರಲು ಇತ್ತ ಬೀರುತ್ತಿತ್ತು ನನ್ನ ಪರಿಮಳ ತೈಲ ಸುವಾಸನೆಯನು.
೧೩
ನನ್ನ ಭಾಗ್ಯಕ್ಕೆ ನನ್ನ ನಲ್ಲ ಸ್ತನಗಳ ಮಧ್ಯೆಯಿರುವ ಪರಿಮಳ ಚೀಲ.
೧೪
ನನ್ನ ಪಾಲಿಗೆ ನನ್ನ ಪ್ರಿಯನು ಏನ್ಗೆದಿಯ ತೋಟದ ಹೂಗೊಂಚಲು. ನಲ್ಲ:
೧೫
ಆಹಾ, ನನ್ನ ಪ್ರಿಯಳೇ, ನೀನೆಷ್ಟು ಚೆಲುವೆ ಆಹಾ, ನೀನೆಷ್ಟು ಕೋಮಲೆ ನಿನ್ನ ನೇತ್ರಗಳು ಪಾರಿವಾಳಗಳಂತೆ! ನಲ್ಲೆ:
೧೬
ಆಹಾ, ಎನ್ನಿನಿಯಾ, ನೀನೆಷ್ಟು ಸುಂದರ ನೀನೆಷ್ಟು ಮನೋಹರ!
೧೭
ನಮ್ಮ ಹಾಸಿಗೆ ಪಚ್ಚೆಪಸರೇ, ನಮ್ಮ ಮೇಲ್ಛಾವಣಿ ತುರಾಯಿ ಮರಗಳೇ ಅದರ ತೊಲೆಗಳು ದೇವದಾರು ವೃಕ್ಷಗಳೇ.
ಪರಮಗೀತೆ ೧:1
ಪರಮಗೀತೆ ೧:2
ಪರಮಗೀತೆ ೧:3
ಪರಮಗೀತೆ ೧:4
ಪರಮಗೀತೆ ೧:5
ಪರಮಗೀತೆ ೧:6
ಪರಮಗೀತೆ ೧:7
ಪರಮಗೀತೆ ೧:8
ಪರಮಗೀತೆ ೧:9
ಪರಮಗೀತೆ ೧:10
ಪರಮಗೀತೆ ೧:11
ಪರಮಗೀತೆ ೧:12
ಪರಮಗೀತೆ ೧:13
ಪರಮಗೀತೆ ೧:14
ಪರಮಗೀತೆ ೧:15
ಪರಮಗೀತೆ ೧:16
ಪರಮಗೀತೆ ೧:17
ಪರಮಗೀತೆ 1 / ಪರಮ 1
ಪರಮಗೀತೆ 2 / ಪರಮ 2
ಪರಮಗೀತೆ 3 / ಪರಮ 3
ಪರಮಗೀತೆ 4 / ಪರಮ 4
ಪರಮಗೀತೆ 5 / ಪರಮ 5
ಪರಮಗೀತೆ 6 / ಪರಮ 6
ಪರಮಗೀತೆ 7 / ಪರಮ 7
ಪರಮಗೀತೆ 8 / ಪರಮ 8