A A A A A
×

ಕನ್ನಡ ಬೈಬಲ್ (KNCL) 2016

ಜ್ಞಾನೋಕ್ತಿಗಳು ೧೪

ಬುದ್ಧಿವಂತೆ ತನ್ನ ಮನೆಯನ್ನು ಕಟ್ಟೆಬ್ಬಿಸುತ್ತಾಳೆ; ಬುದ್ಧಿಹೀನೆ ಅದನ್ನು ಕೈಯಿಂದ ಕೆಡವಿಹಾಕುತ್ತಾಳೆ.
ಸನ್ಮಾರ್ಗಿಯು ಸರ್ವೇಶ್ವರನಿಗೆ ಭಯಪಡುತ್ತಾನೆ; ದುರ್ಮಾರ್ಗಿಯು ಆತನನ್ನು ಅಸಡ್ಡೆಮಾಡುತ್ತಾನೆ.
ಮೂರ್ಖನ ಬಾಯಲ್ಲಿ ಗರ್ವವು ಅಂಕುರಿಸುವುದು; ಜ್ಞಾನಿಗಳ ವಚನಗಳು ಅವರನ್ನು ಕಾಪಾಡುವುವು.
ಎತ್ತುಗಳಿಲ್ಲದಿರುವಾಗ ಗೋದಲಿ ಶುದ್ಧ; ಆದರೆ ಎತ್ತಿನ ಶಕ್ತಿಯಿಂದಲೇ ಬೆಳೆಯ ಉತ್ಪನ್ನ.
ಸತ್ಯಸಾಕ್ಷಿ ಸುಳ್ಳಾಡದ ವ್ಯಕ್ತಿ; ಸುಳ್ಳು ಸಾಕ್ಷಿ ಅಬದ್ಧಪ್ರಿಯ ವ್ಯಕ್ತಿ.
ಕುಚೋದ್ಯನಿಗೆ ಜ್ಞಾನ ಹುಡುಕಿದರೂ ಸಿಕ್ಕದು; ವಿವೇಕಿಗೆ ತಿಳುವಳಿಕೆ ಸುಲಭವಾಗಿ ದಕ್ಕುವುದು.
ಮೂರ್ಖನಿಂದ ದೂರವಿರು; ಜ್ಞಾನವಚನ ಅವನಲ್ಲಿ ಕಾಣಸಿಗದು.
ವಿವೇಕಿಯ ಜ್ಞಾನ ಸನ್ಮಾರ್ಗದಲ್ಲಿ ನಡೆಸುತ್ತದೆ; ಮೂಢರ ಮೂರ್ಖತನ ಮೋಸಗೊಳಿಸುತ್ತದೆ.
ಪಾಪಪರಿಹಾರವನ್ನು ಪರಿಹಾಸ್ಯಮಾಡುತ್ತಾರೆ ಮೂರ್ಖರು; ಪಾಪಕ್ಷಮೆಯನ್ನು ಕೋರುತ್ತಾರೆ ಸತ್ಪುರುಷರು.
೧೦
ಆಯಾಯ ಹೃದಯಕ್ಕೆ ಗೊತ್ತು ಅದರ ಗೋಳು; ಅದರ ಸಂತೋಷದಲ್ಲೂ ಪಾಲುಗೊಳ್ಳಲಾಗದು ಬೇರೆಯವರು.
೧೧
ದುಷ್ಟರ ಮನೆಮಠ ನಿರ್ಮೂಲವಾಗುವುದು; ಸಜ್ಜನರ ಗುಡಾರ ಉದ್ಧಾರವಾಗುವುದು.
೧೨
ಒಂದು ಮಾರ್ಗ ಒಬ್ಬನಿಗೆ ನೇರವೆಂದು ತೋರಬಹುದು; ಕೊನೆಗೆ ಅದು ಮರಣಕ್ಕೊಯ್ಯುವ ಹಾದಿಯಾಗಬಹುದು.
೧೩
ನಗೆಯಲ್ಲೂ ಅಳು ಉಂಟು; ನಲಿವು ನೋವಾಗಿ ಕೊನೆಗೊಳ್ಳುವುದುಂಟು.
೧೪
ಕೆಟ್ಟವನು ತನ್ನ ಕರ್ಮದ ಕಹಿಫಲದಿಂದ ತಿಂದು ತೇಗುವನು; ಒಳ್ಳೆಯವನು ತನ್ನ ಕಾರ್ಯದ ಸತ್ಫಲದಿಂದ ತೃಪ್ತನಾಗುವನು.
೧೫
ಪೆದ್ದನು ಕಿವಿಗೆ ಬಿದ್ದುದೆಲ್ಲವನ್ನು ನಂಬಿಬಿಡುವನು; ಜಾಣನು ವಿವೇಚನೆ ಮಾಡಿ ಹೆಜ್ಜೆ ಇಡುವನು.
೧೬
ಬುದ್ಧಿವಂತನು ಕೇಡಿಗೆ ಅಂಜಿ ಓರೆಯಾಗುವನು; ಬುದ್ಧಿಹೀನನು ಸೊಕ್ಕಿನಿಂದ ಅದರತ್ತ ಧಾವಿಸುವನು.
೧೭
ಮುಂಗೋಪಿಗೆ ಬುದ್ಧಿಮಟ್ಟುಂಟು; ವಿವೇಕಿಗಾದರೊ ಸಹನೆಯುಂಟು.
೧೮
ದಡ್ಡರ ಸೊತ್ತು ಮೂಢತನ; ಜಾಣರಿಗೆ ಜ್ಞಾನವೆ ಭೂಷಣ.
೧೯
ಕೆಟ್ಟವರು ಒಳ್ಳೆಯವರಿಗೆ ಬಾಗಬೇಕಾಗುವುದು; ದುಷ್ಟರು ಸಜ್ಜನರ ಬಾಗಿಲಿಗೆ ಅಡ್ಡಬೀಳಬೇಕಾಗುವುದು.
೨೦
ಬಡವನನ್ನು ನೆರೆಯವರೂ ತುಚ್ಛವಾಗಿ ಕಾಣುವರು; ಹಣವಂತನಿಗಾದರೊ ಬಹುಜನ ಮಿತ್ರರು.
೨೧
ಹಸಿದವನನ್ನು ತಿರಸ್ಕರಿಸುವವನು ಪಾಪಿಷ್ಠನು; ದಲಿತರಿಗೆ ದಯೆ ತೋರಿಸುವವನು ಭಾಗ್ಯವಂತನು.
೨೨
ಕೆಟ್ಟದ್ದನ್ನು ಕಲ್ಪಿಸುವವರು ಮಾರ್ಗಭ್ರಷ್ಟರು; ಒಳ್ಳೆಯದನ್ನು ಕಲ್ಪಿಸುವವರು ಮರ್ಯಾದಸ್ಥರು.
೨೩
ದುಡಿಮೆಯಿಂದ ಸದಾ ಲಾಭವುಂಟು; ಬರಿ ಮಾತಿನಿಂದ ಬಡತನ ಬರುವುದುಂಟು.
೨೪
ಬುದ್ಧಿವಂತರ ಕಿರೀಟ ಅವರ ಜ್ಞಾನವೇ; ದಡ್ಡರ ಶಿರಮುಕುಟ ಅವರ ದಡ್ಡತನವೆ.
೨೫
ಸತ್ಯವಾಡುವವನ ಸಾಕ್ಷಿ ಪ್ರಾಣಕ್ಕೆ ರಕ್ಷಣೆ; ಸುಳ್ಳಾಡುವವನ ಮಾತು ಬರೀ ವಂಚನೆ.
೨೬
ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವನಿಗೆ ಇದೆ ದೃಢಭರವಸೆ; ಆತನ ಮಕ್ಕಳಿಗೆ ಆಶ್ರಯ ಇದ್ದೇ ಇರುತ್ತದೆ.
೨೭
ಸರ್ವೇಶ್ವರನಲ್ಲಿ ಭಯಭಕ್ತಿಯು ಜೀವಜಲದ ಚಿಲುಮೆಯು; ಮರಣಪಾಶದಿಂದ ತಪ್ಪಿಸಿಕೊಳ್ಳಲು ಅದುವೆ ಸಾಧನವು.
೨೮
ಪ್ರಜೆಗಳ ಬಹುಸಂಖ್ಯೆ ಅರಸನಿಗೆ ಅತಿ ಹಿರಿಮೆ; ಪ್ರಜೆಗಳ ಕೊರತೆ ರಾಜಕುವರನಿಗೂ ಅಂಜಿಕೆ.
೨೯
ದೀರ್ಘಶಾಂತನು ಬಹು ಬುದ್ಧಿವಂತನು; ಉಗ್ರಕೋಪಿ ಎತ್ತಿಹಿಡಿವನು ಮೂರ್ಖತನವನ್ನು.
೩೦
ಶಾಂತಗುಣವು ದೇಹಕ್ಕೆ ಆರೋಗ್ಯದಾಯಕವು; ಹೊಟ್ಟೆಕಿಚ್ಚು ಎಲುಬಿಗೆ ಕ್ಷಯ ರೋಗವು.
೩೧
ಬಡವರನ್ನು ಹಿಂಸಿಸುವವನು ತನ್ನ ಸೃಷ್ಟಿಕರ್ತನನ್ನೇ ಹೀನೈಸುತ್ತಾನೆ; ನಿರ್ಗತಿಕನಿಗೆ ದಯೆತೋರಿಸುವವನು ಆತನನ್ನು ಘನಪಡಿಸುತ್ತಾನೆ.
೩೨
ಆಪತ್ಕಾಲ ಬಂದಾಗ ದುಷ್ಟನು ಹಾಳಾಗುತ್ತಾನೆ; ಮರಣವೇಳೆಯಲ್ಲೂ ನೀತಿವಂತ ನಂಬಿಕೆಯಿಂದಿರುತ್ತಾನೆ.
೩೩
ಬುದ್ಧಿವಂತರ ಹೃದಯ ಜ್ಞಾನದ ಆಶ್ರಯ; ಬುದ್ಧಿಹೀನರ ಹೃದಯ ಜ್ಞಾನದ ಶೂನ್ಯ.
೩೪
ಸದಾಚಾರದಿಂದ ನಾಡಿನ ಉನ್ನತಿ; ಅನಾಚಾರದಿಂದ ಅದರ ಅವನತಿ.
೩೫
ಜಾಣನಾದ ಸೇವಕನ ಮೇಲೆ ರಾಜನ ಕೃಪೆಯಿರುತ್ತದೆ; ಲಜ್ಜಾಸ್ಪದ ಸೇವಕನ ಮೇಲೆ ಅವನ ಕೋಪ ಎರಗುತ್ತದೆ.
ಜ್ಞಾನೋಕ್ತಿಗಳು ೧೪:1
ಜ್ಞಾನೋಕ್ತಿಗಳು ೧೪:2
ಜ್ಞಾನೋಕ್ತಿಗಳು ೧೪:3
ಜ್ಞಾನೋಕ್ತಿಗಳು ೧೪:4
ಜ್ಞಾನೋಕ್ತಿಗಳು ೧೪:5
ಜ್ಞಾನೋಕ್ತಿಗಳು ೧೪:6
ಜ್ಞಾನೋಕ್ತಿಗಳು ೧೪:7
ಜ್ಞಾನೋಕ್ತಿಗಳು ೧೪:8
ಜ್ಞಾನೋಕ್ತಿಗಳು ೧೪:9
ಜ್ಞಾನೋಕ್ತಿಗಳು ೧೪:10
ಜ್ಞಾನೋಕ್ತಿಗಳು ೧೪:11
ಜ್ಞಾನೋಕ್ತಿಗಳು ೧೪:12
ಜ್ಞಾನೋಕ್ತಿಗಳು ೧೪:13
ಜ್ಞಾನೋಕ್ತಿಗಳು ೧೪:14
ಜ್ಞಾನೋಕ್ತಿಗಳು ೧೪:15
ಜ್ಞಾನೋಕ್ತಿಗಳು ೧೪:16
ಜ್ಞಾನೋಕ್ತಿಗಳು ೧೪:17
ಜ್ಞಾನೋಕ್ತಿಗಳು ೧೪:18
ಜ್ಞಾನೋಕ್ತಿಗಳು ೧೪:19
ಜ್ಞಾನೋಕ್ತಿಗಳು ೧೪:20
ಜ್ಞಾನೋಕ್ತಿಗಳು ೧೪:21
ಜ್ಞಾನೋಕ್ತಿಗಳು ೧೪:22
ಜ್ಞಾನೋಕ್ತಿಗಳು ೧೪:23
ಜ್ಞಾನೋಕ್ತಿಗಳು ೧೪:24
ಜ್ಞಾನೋಕ್ತಿಗಳು ೧೪:25
ಜ್ಞಾನೋಕ್ತಿಗಳು ೧೪:26
ಜ್ಞಾನೋಕ್ತಿಗಳು ೧೪:27
ಜ್ಞಾನೋಕ್ತಿಗಳು ೧೪:28
ಜ್ಞಾನೋಕ್ತಿಗಳು ೧೪:29
ಜ್ಞಾನೋಕ್ತಿಗಳು ೧೪:30
ಜ್ಞಾನೋಕ್ತಿಗಳು ೧೪:31
ಜ್ಞಾನೋಕ್ತಿಗಳು ೧೪:32
ಜ್ಞಾನೋಕ್ತಿಗಳು ೧೪:33
ಜ್ಞಾನೋಕ್ತಿಗಳು ೧೪:34
ಜ್ಞಾನೋಕ್ತಿಗಳು ೧೪:35
ಜ್ಞಾನೋಕ್ತಿಗಳು 1 / ಜ್ಞಾನ 1
ಜ್ಞಾನೋಕ್ತಿಗಳು 2 / ಜ್ಞಾನ 2
ಜ್ಞಾನೋಕ್ತಿಗಳು 3 / ಜ್ಞಾನ 3
ಜ್ಞಾನೋಕ್ತಿಗಳು 4 / ಜ್ಞಾನ 4
ಜ್ಞಾನೋಕ್ತಿಗಳು 5 / ಜ್ಞಾನ 5
ಜ್ಞಾನೋಕ್ತಿಗಳು 6 / ಜ್ಞಾನ 6
ಜ್ಞಾನೋಕ್ತಿಗಳು 7 / ಜ್ಞಾನ 7
ಜ್ಞಾನೋಕ್ತಿಗಳು 8 / ಜ್ಞಾನ 8
ಜ್ಞಾನೋಕ್ತಿಗಳು 9 / ಜ್ಞಾನ 9
ಜ್ಞಾನೋಕ್ತಿಗಳು 10 / ಜ್ಞಾನ 10
ಜ್ಞಾನೋಕ್ತಿಗಳು 11 / ಜ್ಞಾನ 11
ಜ್ಞಾನೋಕ್ತಿಗಳು 12 / ಜ್ಞಾನ 12
ಜ್ಞಾನೋಕ್ತಿಗಳು 13 / ಜ್ಞಾನ 13
ಜ್ಞಾನೋಕ್ತಿಗಳು 14 / ಜ್ಞಾನ 14
ಜ್ಞಾನೋಕ್ತಿಗಳು 15 / ಜ್ಞಾನ 15
ಜ್ಞಾನೋಕ್ತಿಗಳು 16 / ಜ್ಞಾನ 16
ಜ್ಞಾನೋಕ್ತಿಗಳು 17 / ಜ್ಞಾನ 17
ಜ್ಞಾನೋಕ್ತಿಗಳು 18 / ಜ್ಞಾನ 18
ಜ್ಞಾನೋಕ್ತಿಗಳು 19 / ಜ್ಞಾನ 19
ಜ್ಞಾನೋಕ್ತಿಗಳು 20 / ಜ್ಞಾನ 20
ಜ್ಞಾನೋಕ್ತಿಗಳು 21 / ಜ್ಞಾನ 21
ಜ್ಞಾನೋಕ್ತಿಗಳು 22 / ಜ್ಞಾನ 22
ಜ್ಞಾನೋಕ್ತಿಗಳು 23 / ಜ್ಞಾನ 23
ಜ್ಞಾನೋಕ್ತಿಗಳು 24 / ಜ್ಞಾನ 24
ಜ್ಞಾನೋಕ್ತಿಗಳು 25 / ಜ್ಞಾನ 25
ಜ್ಞಾನೋಕ್ತಿಗಳು 26 / ಜ್ಞಾನ 26
ಜ್ಞಾನೋಕ್ತಿಗಳು 27 / ಜ್ಞಾನ 27
ಜ್ಞಾನೋಕ್ತಿಗಳು 28 / ಜ್ಞಾನ 28
ಜ್ಞಾನೋಕ್ತಿಗಳು 29 / ಜ್ಞಾನ 29
ಜ್ಞಾನೋಕ್ತಿಗಳು 30 / ಜ್ಞಾನ 30
ಜ್ಞಾನೋಕ್ತಿಗಳು 31 / ಜ್ಞಾನ 31