A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಜ್ಞಾನೋಕ್ತಿಗಳು ೧೩



ಬುದ್ಧಿವಂತ ಮಗ ತಂದೆಯ ಶಿಕ್ಷಣವನ್ನು ಕೇಳುವನು; ಕಿತ್ತಾಡುವ ಮಗ ಗದರಿಕೆಯನ್ನೂ ಕೇಳಲೊಲ್ಲನು.
ಸಜ್ಜನರ ಊಟ ಫಲಹಾರ; ವಂಚಕರ ಆಹಾರ ಹಿಂಸಾಚಾರ.
ಬಾಯಿಯನ್ನು ಕಾಯುವವನು ಜೀವವನ್ನು ಕಾಯುವನು; ತುಟಿಗಳನ್ನು ಹತೋಟಿಯಲ್ಲಿಡದವನು ನಾಶವಾಗುವನು.
ಸೋಮಾರಿಗೆ ಹಸಿದಿದ್ದರೂ ಊಟವಿಲ್ಲ; ಶ್ರಮಜೀವಿಗಳಿಗಾದರೋ ಬಲಿಷ್ಠರನ್ನಾಗಿಸುವ ಮೃಷ್ಟಾನ್ನ.
ಸಜ್ಜನನಿಗೆ ಮೋಸಮಾತು ಅಸಹ್ಯ; ದುರ್ಜನನ ನಡತೆ ನಿಂದಾಸ್ಪದ.
ನೀತಿ ಕಾಪಾಡುವುದು ನಿರ್ದೋಷಿಯನ್ನು; ಅನೀತಿ ಕೆಡವಿಬಿಡುವುದು ಪಾಪಿಯನ್ನು.
ಒಬ್ಬ ಹಣಕೂಡಿಸಿದ್ದರೂ ಘನದರಿದ್ರನಿರಬಹುದು; ಮತ್ತೊಬ್ಬ ಹಣವೆಚ್ಚಮಾಡಿ ಕಡುಬಡವನಾಗಿದ್ದರೂ ಐಶ್ವರ್ಯವಂತನಾಗಿರಬಹುದು.
ಹಣವಂತನ ಪ್ರಾಣರಕ್ಷಣೆಗೆ ಅವನ ಹಣವೇ ಈಡು; ಬಡವನಿಗೆ ಈಡಿನ ಬೆದರಿಕೆಯೂ ಇರದು.
ಸಜ್ಜನರ ಬೆಳಕು ಪ್ರಜ್ವಲಿಸುವುದು; ದುರ್ಜನರ ದೀಪವು ಆರಿಹೋಗುವುದು.
೧೦
ಗರ್ವದಿಂದ ಹುಟ್ಟುವುದು ಕಲಹಕದನ; ಆಲೋಚನೆಯನ್ನು ಕೇಳುವುದು ಸುಜ್ಞಾನ.
೧೧
ಬಿಟ್ಟಿಯಾಗಿ ಸಿಕ್ಕಿದ ಸಂಪತ್ತು ಬೇಗನೆ ಕರಗುವುದು; ದುಡಿದು ಕೂಡಿಸಿದ ಹಣ ಅಭಿವೃದ್ಧಿಯಾಗುವುದು.
೧೨
ಕೋರಿದ್ದು ತಡವಾದರೆ ಮನಸ್ಸಿಗೆ ತುಡಿತ; ಕೈಗೂಡಿದ ಇಷ್ಟಾರ್ಥ ಜೀವವೃಕ್ಷ.
೧೩
ದೇವವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು; ಆಜ್ಞೆಯನ್ನು ನಿಷ್ಠೆಯಿಂದ ಪಾಲಿಸುವವನು ಫಲಪಡೆಯುವನು.
೧೪
ಜ್ಞಾನಿಯ ಬೋಧೆ ಜೀವದ ಬುಗ್ಗೆ; ಮಾಡುವುದದು ಮರಣದಿಂದ ಬಿಡುಗಡೆ.
೧೫
ಸುಬುದ್ಧಿ ದಯಾಸ್ಪದ; ದುರಾಚಾರ ವಿನಾಶಕರ.
೧೬
ಜಾಣನು ತಿಳುವಳಿಕೆಯಿಂದ ವರ್ತಿಸುತ್ತಾನೆ; ಮೂಢನು ಮೂರ್ಖತನವನ್ನು ತೋರ್ಪಡಿಸುತ್ತಾನೆ.
೧೭
ಕೆಟ್ಟದೂತನು ಕೇಡಿಗೆ ಸಿಕ್ಕಿಸುವನು; ನಂಬಿಕಸ್ಥ ದೂತನು ಸುಕ್ಷೇಮಕಾರನು.
೧೮
ಶಿಕ್ಷೆಯನ್ನು ಉಪೇಕ್ಷಿಸುವವನಿಗೆ ಕಾದಿದೆ ಬಡತನ ಹಾಗು ಅವಮಾನ; ಗದರಿಕೆಯನ್ನು ಗಮನಿಸುವವ ಹೊಂದುವನು ಸನ್ಮಾನ.
೧೯
ಇಷ್ಟಸಿದ್ಧಿ ಮನಸ್ಸಿಗೆ ಸಿಹಿ; ಕೆಟ್ಟದ್ದನ್ನು ಬಿಡುವುದು ಮೂಢರಿಗೆ ಕಹಿ.
೨೦
ಸುಜ್ಞಾನಿಗಳ ಸಹವಾಸದಿಂದ ಜನರು ಸುಜ್ಞಾನಿಗಳಾಗುವರು; ಅಜ್ಞಾನಿಗಳ ಒಡನಾಟದಿಂದ ಸಂಕಟಪಡುವರು.
೨೧
ಅಮಂಗಳವು ಪಾಪಿಗಳನ್ನು ಹಿಂಬಾಲಿಸುವುದು; ಮಂಗಳವು ಸತ್ಪುರುಷರಿಗೆ ಸಿಗುವ ಪ್ರತಿಫಲವು.
೨೨
ಒಳ್ಳೆಯವನ ಆಸ್ತಿ ಸಂತತಿಯವರಿಗೆ ಬಾಧ್ಯದ ಸೊತ್ತು; ಪಾಪಿಯ ಸೊತ್ತು ಸತ್ಪುರುಷರಿಗೆ ಸೇರುವ ಸಂಪತ್ತು.
೨೩
ಬಡವರಿಗೆ ಬಂಜರುಭೂಮಿಯೂ ಬೆಳೆಯನ್ನೀಯುವುದುಂಟು; ಭಂಡತನ ಇರುವಲ್ಲಿ ಅದು ಕೂಡ ಹಾಳಾಗುವುದುಂಟು.
೨೪
ಬೆತ್ತಹಿಡಿಯದ ತಂದೆ ಮಗನಿಗೆ ಶತ್ರು; ಎಚ್ಚರಿಕೆಯಿಂದ ಶಿಕ್ಷಿಸುವ ತಂದೆ ಮಗನಿಗೆ ಮಿತ್ರನು.
೨೫
ನೀತಿವಂತನು ಹೊಟ್ಟೆತುಂಬ ಉಣ್ಣುವನು; ದುಷ್ಟನ ಹೊಟ್ಟೆ ಹಸಿವಿನಿಂದ ಬಳಲುವುದು.











ಜ್ಞಾನೋಕ್ತಿಗಳು ೧೩:1
ಜ್ಞಾನೋಕ್ತಿಗಳು ೧೩:2
ಜ್ಞಾನೋಕ್ತಿಗಳು ೧೩:3
ಜ್ಞಾನೋಕ್ತಿಗಳು ೧೩:4
ಜ್ಞಾನೋಕ್ತಿಗಳು ೧೩:5
ಜ್ಞಾನೋಕ್ತಿಗಳು ೧೩:6
ಜ್ಞಾನೋಕ್ತಿಗಳು ೧೩:7
ಜ್ಞಾನೋಕ್ತಿಗಳು ೧೩:8
ಜ್ಞಾನೋಕ್ತಿಗಳು ೧೩:9
ಜ್ಞಾನೋಕ್ತಿಗಳು ೧೩:10
ಜ್ಞಾನೋಕ್ತಿಗಳು ೧೩:11
ಜ್ಞಾನೋಕ್ತಿಗಳು ೧೩:12
ಜ್ಞಾನೋಕ್ತಿಗಳು ೧೩:13
ಜ್ಞಾನೋಕ್ತಿಗಳು ೧೩:14
ಜ್ಞಾನೋಕ್ತಿಗಳು ೧೩:15
ಜ್ಞಾನೋಕ್ತಿಗಳು ೧೩:16
ಜ್ಞಾನೋಕ್ತಿಗಳು ೧೩:17
ಜ್ಞಾನೋಕ್ತಿಗಳು ೧೩:18
ಜ್ಞಾನೋಕ್ತಿಗಳು ೧೩:19
ಜ್ಞಾನೋಕ್ತಿಗಳು ೧೩:20
ಜ್ಞಾನೋಕ್ತಿಗಳು ೧೩:21
ಜ್ಞಾನೋಕ್ತಿಗಳು ೧೩:22
ಜ್ಞಾನೋಕ್ತಿಗಳು ೧೩:23
ಜ್ಞಾನೋಕ್ತಿಗಳು ೧೩:24
ಜ್ಞಾನೋಕ್ತಿಗಳು ೧೩:25






ಜ್ಞಾನೋಕ್ತಿಗಳು 1 / ಜ್ಞಾನ 1
ಜ್ಞಾನೋಕ್ತಿಗಳು 2 / ಜ್ಞಾನ 2
ಜ್ಞಾನೋಕ್ತಿಗಳು 3 / ಜ್ಞಾನ 3
ಜ್ಞಾನೋಕ್ತಿಗಳು 4 / ಜ್ಞಾನ 4
ಜ್ಞಾನೋಕ್ತಿಗಳು 5 / ಜ್ಞಾನ 5
ಜ್ಞಾನೋಕ್ತಿಗಳು 6 / ಜ್ಞಾನ 6
ಜ್ಞಾನೋಕ್ತಿಗಳು 7 / ಜ್ಞಾನ 7
ಜ್ಞಾನೋಕ್ತಿಗಳು 8 / ಜ್ಞಾನ 8
ಜ್ಞಾನೋಕ್ತಿಗಳು 9 / ಜ್ಞಾನ 9
ಜ್ಞಾನೋಕ್ತಿಗಳು 10 / ಜ್ಞಾನ 10
ಜ್ಞಾನೋಕ್ತಿಗಳು 11 / ಜ್ಞಾನ 11
ಜ್ಞಾನೋಕ್ತಿಗಳು 12 / ಜ್ಞಾನ 12
ಜ್ಞಾನೋಕ್ತಿಗಳು 13 / ಜ್ಞಾನ 13
ಜ್ಞಾನೋಕ್ತಿಗಳು 14 / ಜ್ಞಾನ 14
ಜ್ಞಾನೋಕ್ತಿಗಳು 15 / ಜ್ಞಾನ 15
ಜ್ಞಾನೋಕ್ತಿಗಳು 16 / ಜ್ಞಾನ 16
ಜ್ಞಾನೋಕ್ತಿಗಳು 17 / ಜ್ಞಾನ 17
ಜ್ಞಾನೋಕ್ತಿಗಳು 18 / ಜ್ಞಾನ 18
ಜ್ಞಾನೋಕ್ತಿಗಳು 19 / ಜ್ಞಾನ 19
ಜ್ಞಾನೋಕ್ತಿಗಳು 20 / ಜ್ಞಾನ 20
ಜ್ಞಾನೋಕ್ತಿಗಳು 21 / ಜ್ಞಾನ 21
ಜ್ಞಾನೋಕ್ತಿಗಳು 22 / ಜ್ಞಾನ 22
ಜ್ಞಾನೋಕ್ತಿಗಳು 23 / ಜ್ಞಾನ 23
ಜ್ಞಾನೋಕ್ತಿಗಳು 24 / ಜ್ಞಾನ 24
ಜ್ಞಾನೋಕ್ತಿಗಳು 25 / ಜ್ಞಾನ 25
ಜ್ಞಾನೋಕ್ತಿಗಳು 26 / ಜ್ಞಾನ 26
ಜ್ಞಾನೋಕ್ತಿಗಳು 27 / ಜ್ಞಾನ 27
ಜ್ಞಾನೋಕ್ತಿಗಳು 28 / ಜ್ಞಾನ 28
ಜ್ಞಾನೋಕ್ತಿಗಳು 29 / ಜ್ಞಾನ 29
ಜ್ಞಾನೋಕ್ತಿಗಳು 30 / ಜ್ಞಾನ 30
ಜ್ಞಾನೋಕ್ತಿಗಳು 31 / ಜ್ಞಾನ 31