A A A A A
×

ಕನ್ನಡ ಬೈಬಲ್ (KNCL) 2016

ಕೀರ್ತನೆಗಳು ೮೯

ಪ್ರಭು, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು I ಸಾರುವೆನು ತಲತಲಾಂತರಕು ನಿನ್ನ ಸತ್ಯತೆಯನು II
ನಿನ್ನಚಲ ಪ್ರೀತಿ ಪ್ರಭು, ನನಗೆ ಶಾಶ್ವತ ಸಿದ್ಧ I ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸ್ಥಾಪಿತ II
ನೀನೆಂದೆ, “ನಾನಾರಿಸಿದವನೊಡನೆ ಮಾಡಿರುವೆ ಒಪ್ಪಂದ I ನನ್ನ ದಾಸ ದಾವೀದನಿಗಿತ್ತಿರುವೆ ಈ ತೆರವಾದ ಶಪಥ: II
“ಸ್ಥಾಪಿಸುವೆ ಶಾಶ್ವತವಾಗಿ ನಿನ್ನ ಸಂತತಿಯನು I ಸ್ಥಿರಪಡಿಸುವೆ ಯುಗಯುಗಕು ನಿನ್ನ ಸಿಂಹಾಸನವನು” II
ಪ್ರಸಿದ್ಧಪಡಿಸುವುದು ಪ್ರಭು, ಗಗನವು ನಿನ್ನ ಮಹತ್ತನು I ಸಂಕೀರ್ತಿಸುವುದು ಸ್ವರ್ಗೀಯ ಸಭೆ, ನಿನ್ನ ಸತ್ಯತೆಯನು II
ಮೇಘಮಂಡಲದಲಿ ಸಮಾನನಾರು ಪ್ರಭುವಿಗೆ I ದೇವದೂತರೊಳು ಹೋಲಿಕೆ ಯಾವುದು ಆತನಿಗೆ II
ಸ್ವರ್ಗೀಯ ಸಭೆಯಲಿ ಪ್ರತಿಭಾವಂತನು ದೇವನು II ಸುತ್ತಣದೆಲ್ಲ ಪರಿವಾರಕ್ಕಿಂತ ಬಹು ಭೀಕರನು II
ಪ್ರಭೂ, ಶಕ್ತಿಸ್ವರೂಪ, ನಿನ್ನ ಸುತ್ತುವರೆದಿದೆ ಸತ್ಯತೆ I ಸ್ವಾಮಿದೇವಾ, ಸರ್ವೇಶ್ವರಾ, ನಿನಗೆಲ್ಲಿಯದು ಸಮಾನತೆ? II
ಕಡಲ ಕಲ್ಲೋಲಗಳನ್ನೆಲ್ಲ ಅಂಕೆಯಲಿ ಇಡುವವನು ನೀನು I ತರಂಗವೇಳುವಾಗಲು ಕೂಡ ತಡೆಹಿಡಿವವನು ನೀನು II
೧೦
ಚದರಿಸಿದೆ ನಿನ್ನ ಭುಜಬಲದಿಂದ ಶತ್ರುಗಳನು I ಛೇದಿಸಿ ಕೊಂದುಹಾಕಿದೆ ಆ ರಾಕ್ಷಸ ರಹಬನನು II
೧೧
ಆಕಾಶವು ನಿನ್ನದು ಪ್ರಭು, ಭೂಮಿಯೂ ನಿನ್ನದೇ I ಜಗವು, ಅದರಲ್ಲಿರುವುದೆಲ್ಲವು, ನಿನ್ನಿಂದಾದುದೇ II
೧೨
ಉತ್ತರ ದಕ್ಷಿಣಗಳನುಂಟು ಮಾಡಿದವನು ನೀನು I ಸ್ತುತಿಸುತ್ತವೆ ತಾಬೋರ್ ಹೆರ್‍ಮೊನ್ ನಿನ್ನ ನಾಮವನು II
೧೩
ನಿನ್ನ ಹಸ್ತ ಶಕ್ತಿಯುತ, ಬಲಗೈ ಮಹೋನ್ನತ I ನಿನ್ನ ಭುಜಬಲವಾದರೊ ಪರಾಕ್ರಮರೂಪಿತ II
೧೪
ನೀತಿನ್ಯಾಯ ನಿನ್ನ ಸಿಂಹಾಸನದಸ್ತಿವಾರ I ಪ್ರೀತಿಸತ್ಯತೆ ನಿನ್ನ ಸಾನ್ನಿಧ್ಯ ಪರಿವಾರ II
೧೫
ಧನ್ಯರು ಪ್ರಭು, ನಿನಗೆ ಜಯಕಾರ ಹಾಡುವವರು I ನಿನ್ನ ಮುಖದ ಪ್ರಕಾಶದೊಳವರು ನಡೆಯುವರು II
೧೬
ಆನಂದಿಸುವರವರು ಸದಾ ನಿನ್ನ ನಾಮದಲಿ I ಪ್ರವರ್ಧಿಸುವರವರು ನಿನ್ನ ನ್ಯಾಯನೀತಿಯಲಿ II
೧೭
ಅವರ ಶಕ್ತಿಸಾಮರ್ಥ್ಯದ ಪ್ರತಿಭೆ ನಿನ್ನದೆ I ನಿನ್ನ ದಯೆಯಿಂದ ನಮಗೆ ಕೋಡುಮೂಡಿದೆ II
೧೮
ಗುರಾಣಿಯಂತಿಹ ನಮ್ಮ ರಾಜನು ಪ್ರಭುವಿನವನೇ I ಇಸ್ರಯೇಲಿನ ಪರಮಪಾವನ ಸ್ವಾಮಿಗೆ ಸೇರಿದವನೇ II
೧೯
ಹಿಂದೊಮ್ಮೆ ನೀ ದರ್ಶನವಿತ್ತು ಇಂತೆಂದೆ ನಿನ್ನ ಭಕ್ತರಿಗೆ: I “ರಕ್ಷಾಬಲವನು ಅನುಗ್ರಹಿಸಿರುವೆ ಶೂರವೀರನೋರ್ವನಿಗೆ I ಪ್ರಜೆಗಳಲೊರ್ವ ಯುವಕನನು ಏರಿಸಿರುವೆ ಉನ್ನತಸ್ಥಾನಕೆ II
೨೦
“ನನ್ನ ದಾಸ ದಾವೀದನನು ಗುರುತಿಸಿರುವೆ I ಪವಿತ್ರ ತೈಲದಿಂದವನನು ಅಭಿಷೇಕಿಸಿರುವೆ II
೨೧
ನನ್ನ ಕೈಯ ಆಸರೆ ಅವನಿಗಿದೆ ಸತತ I ನನ್ನ ಭುಜಬಲವು ಅವನಿಗೆ ಶಕ್ತಿಯುತ II
೨೨
ಸಿಗನು ಶತ್ರುವಿನ ಕುತಂತ್ರಕೆ I ಕುಗ್ಗನು ಕೆಡುಕರಾ ದರ್ಪಕೆ II
೨೩
ಅವನ ಶತ್ರುಗಳನು ಸದೆಬಡಿವೆನು ಅವನ ಮುಂದೆಯೆ I ಅವನ ವಿರೋಧಿಗಳನು ಹತಮಾಡುವೆನು ಅಲ್ಲಿಯೇ II
೨೪
ನಿನ್ನ ಪ್ರೀತಿಸತ್ಯತೆಗಳು ಇರುವುವು ಅವನೊಂದಿಗೆ I ನನ್ನ ನಾಮ ಪ್ರಯುಕ್ತ ಕೋಡು ಮೂಡುವುದವನಿಗೆ II
೨೫
ತೊರೆನದಿಗಳಿಂದ ಸಾಗರದವರೆಗೆ I ಅಧಿಕಾರ ನೀಡುವೆ ಅವನ ಕೈಗೆ II
೨೬
‘ನನಗೆ ಪಿತ, ದೈವ, ದುರ್ಗ, ಉದ್ಧಾರಕ, ನೀನು’ I ಇಂತೆಂದೇ ನನ್ನನು ಸಂಬೋಧಿಸುವನವನು II
೨೭
ಮಾಡುವೆನವನನು ಜೇಷ್ಠಪುತ್ರನನ್ನಾಗಿ I ಭೂರಾಜರುಗಳೊಳು ಅತ್ಯುನ್ನತನನ್ನಾಗಿ I
೨೮
ಇರುವುದು ಎನ್ನಚಲ ಪ್ರೀತಿ ಅವನ ಮೇಲೆ ಶಾಶ್ವತವಾಗಿ I ಅವನೊಡನೆ ನಾ ಮಾಡಿದೊಪ್ಪಂದ ಸ್ಥಿರಸ್ಥಾಯಿಯಾಗಿ II
೨೯
ಉಳಿಸುವೆನು ಅವನ ಸಂತಾನವನು ನಿರಂತರವಾಗಿ I ಅವನ ಸಿಂಹಾಸನವಿರುವುದು ಗಗನದಂತೆ ಸ್ಥಿರವಾಗಿ II
೩೦
ಅವನ ಕುವರರು ತೊರೆದರಾದರೆ ನನ್ನ ಧರ್ಮಶಾಸ್ತ್ರವನು I ಉಲ್ಲಂಘಿಸಿ ನಡೆದರಾದರೆ ನನ್ನ ಆಜ್ಞಾವಿಧಿಗಳನು II
೩೧
ಮೀರಿ ನಡೆದರಾದರೆ ನನ್ನ ಶಾಸನಗಳನು I ಪರಿಪಾಲಿಸದೆ ಹೋದರೆ ಎನ್ನ ನಿಯಮಗಳನು II
೩೨
ದಂಡಿಸುವೆನವರ ದ್ರೋಹವನು ದಂಡದಿಂದ I ಶಿಕ್ಷಿಸುವೆನವರ ಅಪರಾಧವನು ಚಾಟಿಯಿಂದ II
೩೩
ಆದರೆ ನನ್ನೊಲವು ಅವನನ್ನು ಕೈಬಿಡದು I ನನ್ನ ಪ್ರಾಮಾಣಿಕತೆಗದು ಚ್ಯುತಿಯಾಗದು II
೩೪
ಭಂಗಪಡಿಸೆನು ಎನ್ನ ಒಡಂಬಡಿಕೆಯನು I ಮೀರೆನು ನಾನವನಿಗೆ ಕೊಟ್ಟ ಮಾತನು II
೩೫
ಮಾಡಿರುವೆ ಪ್ರಮಾಣ ನನ್ನ ಪವಿತ್ರತೆಯ ಮೇಲೆ I ಸುಳ್ಳಾಡಲಾರೆ ದಾವೀದನಿಗೀ ವಿಷಯದ ಮೇಲೆ II
೩೬
ರವಿಯಂತಿರುವುದು ಎನ್ನ ಮುಂದೆ ಅವನ ಗಾದಿ I ಚಿರ ಶಾಶ್ವತವಾಗಿರುವುದು ಅವನ ಸಂತತಿ II
೩೭
ಅಮರವಾಗಿರುವುದು ಚಂದ್ರನಂತೆ I ಆಗಸದಾ ಪ್ರಮಾಣ ಸಾಕ್ಷಿಯಂತೆ” II
೩೮
ಇಂತೆಂದ ನೀನೆ ತ್ಯಜಿಸಿರುವೆ ನಿನ್ನಾಭಿಷಿಕ್ತನನು I ತಳ್ಳಿಬಿಟ್ಟಿರುವೆ ಕೋಪಾವೇಶದಿಂದ ಅವನನು II
೩೯
ಭಂಗಪಡಿಸಿರುವೆ ದಾಸನೊಡನೆ ಮಾಡಿದ ಒಡಂಬಡಿಕೆಯನು I ಮಣ್ಣುಪಾಲಾಗಿಸಿರುವೆ ಅವನ ಪಟ್ಟದ ಆ ಕಿರೀಟವನು II
೪೦
ಸೀಳಿಬಿಟ್ಟಿರುವೆ ಅವನಾ ಪೌಳಿಗೋಡೆಗಳನು I ಹಾಳುಮಾಡಿಬಿಟ್ಟಿರುವೆ ಕೋಟೆಕೊತ್ತಲಗಳನು II
೪೧
ಸುಲಿಗೆ ಮಾಡುತಿಹರವನನು ದಾರಿಗರೆಲ್ಲರು I ಪರಿಹಾಸ್ಯಕ್ಕೆ ಈಡುಮಾಡುತಿಹರು ನೆರೆಯವರು II
೪೨
ಮೇಲಾಗಿಸಿರುವೆ ಅವನ ವಿರೋಧಿಗಳ ಕೈಯನು I ಉಲ್ಲಾಸಗೊಳಿಸಿರುವೆ ಅವನೆಲ್ಲಾ ವೈರಿಗಳನು II
೪೩
ಮೊಂಡಾಗಿಸಿರುವೆ ಅವನ ಕತ್ತಿಯ ಮೊನೆಯನು I ಕಾಳಗಕೆ ನಿಲ್ಲದಂತಾಗಿಸಿರುವೆ ಅವನನು II
೪೪
ಕಿತ್ತುಹಾಕಿರುವೆ ಅವನ ರಾಜದಂಡವನು I ನೆಲಕ್ಕೆ ಉರುಳಿಸಿರುವೆ ಅವನ ಸಿಂಹಾಸನವನು II
೪೫
ಮುಪ್ಪಾಗಿಸಿರುವೆ ಅವನನು ಕಾಲಕ್ಕೆ ಮುಂಚೆ I ನಿನ್ನ ನಿಮಿತ್ತ ಅವನನು ಆವರಿಸಿದೆ ಲಜ್ಜೆ II
೪೬
ಒಡೆಯಾ, ಚಿರಮರೆಯಾಗಿರುವೆ? ಇನ್ನೆಷ್ಟರವರೆಗೆ? I ನಿನ್ನ ಕೋಪಾಗ್ನಿ ಎಡೆಬಿಡದೆ ಉರಿಯುತ್ತಿರಬೇಕೆ? II
೪೭
ಎಷ್ಟು ಅಲ್ಪವಾದುದೆನ್ನ ಜೀವಮಾನಕಾಲ I ಎಷ್ಟು ನಶ್ವರ ನೀ ನಿರ್ಮಿಸಿದ ಮಾನವ ಕುಲ! II
೪೮
ಸಾಯದೆಯೇ ಜೀವಿಸಬಲ್ಲ ನರನಾರು? I ಆ ತಳದಿಂದ ತಪ್ಪಿಸಿಕೊಳ್ಳುವವನಾರು? II
೪೯
ದಾವೀದನಿಗೆ ಪ್ರಭು, ನೀನಿತ್ತ ವಾಗ್ದಾನವೆಲ್ಲಿ? I ಗತಕಾಲದಲಿ ನೀ ತೋರಿದಚಲ ಪ್ರೀತಿಯೆಲ್ಲಿ? II
೫೦
ನೆನೆಸಿಕೊ ಪ್ರಭು, ನಿನ್ನ ಅಪಮಾನಿತ ಸೇವಕನನು I ಸ್ಮರಿಸಿಕೊ ಆತ ಹೊತ್ತಿರುವ ಪರರ ನಿಂದೆಯನು II
೫೧
ನಿಂದಿಸುತಿಹರು ಪ್ರಭು, ವೈರಿಗಳು ನಿನ್ನಭಿಷಿಕ್ತನನು I ಹೆಜ್ಜೆಹೆಜ್ಜೆಗು ಅವಮಾನಿಸುತಿಹರು ಶತ್ರುಗಳವನನು I ಆಮೆನ್, ಆಮೆನ್, ಪ್ರಭುವಿಗೆ ಸರ್ವದಾ ಧನ್ಯವಾದವು II
ಕೀರ್ತನೆಗಳು ೮೯:1
ಕೀರ್ತನೆಗಳು ೮೯:2
ಕೀರ್ತನೆಗಳು ೮೯:3
ಕೀರ್ತನೆಗಳು ೮೯:4
ಕೀರ್ತನೆಗಳು ೮೯:5
ಕೀರ್ತನೆಗಳು ೮೯:6
ಕೀರ್ತನೆಗಳು ೮೯:7
ಕೀರ್ತನೆಗಳು ೮೯:8
ಕೀರ್ತನೆಗಳು ೮೯:9
ಕೀರ್ತನೆಗಳು ೮೯:10
ಕೀರ್ತನೆಗಳು ೮೯:11
ಕೀರ್ತನೆಗಳು ೮೯:12
ಕೀರ್ತನೆಗಳು ೮೯:13
ಕೀರ್ತನೆಗಳು ೮೯:14
ಕೀರ್ತನೆಗಳು ೮೯:15
ಕೀರ್ತನೆಗಳು ೮೯:16
ಕೀರ್ತನೆಗಳು ೮೯:17
ಕೀರ್ತನೆಗಳು ೮೯:18
ಕೀರ್ತನೆಗಳು ೮೯:19
ಕೀರ್ತನೆಗಳು ೮೯:20
ಕೀರ್ತನೆಗಳು ೮೯:21
ಕೀರ್ತನೆಗಳು ೮೯:22
ಕೀರ್ತನೆಗಳು ೮೯:23
ಕೀರ್ತನೆಗಳು ೮೯:24
ಕೀರ್ತನೆಗಳು ೮೯:25
ಕೀರ್ತನೆಗಳು ೮೯:26
ಕೀರ್ತನೆಗಳು ೮೯:27
ಕೀರ್ತನೆಗಳು ೮೯:28
ಕೀರ್ತನೆಗಳು ೮೯:29
ಕೀರ್ತನೆಗಳು ೮೯:30
ಕೀರ್ತನೆಗಳು ೮೯:31
ಕೀರ್ತನೆಗಳು ೮೯:32
ಕೀರ್ತನೆಗಳು ೮೯:33
ಕೀರ್ತನೆಗಳು ೮೯:34
ಕೀರ್ತನೆಗಳು ೮೯:35
ಕೀರ್ತನೆಗಳು ೮೯:36
ಕೀರ್ತನೆಗಳು ೮೯:37
ಕೀರ್ತನೆಗಳು ೮೯:38
ಕೀರ್ತನೆಗಳು ೮೯:39
ಕೀರ್ತನೆಗಳು ೮೯:40
ಕೀರ್ತನೆಗಳು ೮೯:41
ಕೀರ್ತನೆಗಳು ೮೯:42
ಕೀರ್ತನೆಗಳು ೮೯:43
ಕೀರ್ತನೆಗಳು ೮೯:44
ಕೀರ್ತನೆಗಳು ೮೯:45
ಕೀರ್ತನೆಗಳು ೮೯:46
ಕೀರ್ತನೆಗಳು ೮೯:47
ಕೀರ್ತನೆಗಳು ೮೯:48
ಕೀರ್ತನೆಗಳು ೮೯:49
ಕೀರ್ತನೆಗಳು ೮೯:50
ಕೀರ್ತನೆಗಳು ೮೯:51
ಕೀರ್ತನೆಗಳು 1 / ಕೀರ್ತ 1
ಕೀರ್ತನೆಗಳು 2 / ಕೀರ್ತ 2
ಕೀರ್ತನೆಗಳು 3 / ಕೀರ್ತ 3
ಕೀರ್ತನೆಗಳು 4 / ಕೀರ್ತ 4
ಕೀರ್ತನೆಗಳು 5 / ಕೀರ್ತ 5
ಕೀರ್ತನೆಗಳು 6 / ಕೀರ್ತ 6
ಕೀರ್ತನೆಗಳು 7 / ಕೀರ್ತ 7
ಕೀರ್ತನೆಗಳು 8 / ಕೀರ್ತ 8
ಕೀರ್ತನೆಗಳು 9 / ಕೀರ್ತ 9
ಕೀರ್ತನೆಗಳು 10 / ಕೀರ್ತ 10
ಕೀರ್ತನೆಗಳು 11 / ಕೀರ್ತ 11
ಕೀರ್ತನೆಗಳು 12 / ಕೀರ್ತ 12
ಕೀರ್ತನೆಗಳು 13 / ಕೀರ್ತ 13
ಕೀರ್ತನೆಗಳು 14 / ಕೀರ್ತ 14
ಕೀರ್ತನೆಗಳು 15 / ಕೀರ್ತ 15
ಕೀರ್ತನೆಗಳು 16 / ಕೀರ್ತ 16
ಕೀರ್ತನೆಗಳು 17 / ಕೀರ್ತ 17
ಕೀರ್ತನೆಗಳು 18 / ಕೀರ್ತ 18
ಕೀರ್ತನೆಗಳು 19 / ಕೀರ್ತ 19
ಕೀರ್ತನೆಗಳು 20 / ಕೀರ್ತ 20
ಕೀರ್ತನೆಗಳು 21 / ಕೀರ್ತ 21
ಕೀರ್ತನೆಗಳು 22 / ಕೀರ್ತ 22
ಕೀರ್ತನೆಗಳು 23 / ಕೀರ್ತ 23
ಕೀರ್ತನೆಗಳು 24 / ಕೀರ್ತ 24
ಕೀರ್ತನೆಗಳು 25 / ಕೀರ್ತ 25
ಕೀರ್ತನೆಗಳು 26 / ಕೀರ್ತ 26
ಕೀರ್ತನೆಗಳು 27 / ಕೀರ್ತ 27
ಕೀರ್ತನೆಗಳು 28 / ಕೀರ್ತ 28
ಕೀರ್ತನೆಗಳು 29 / ಕೀರ್ತ 29
ಕೀರ್ತನೆಗಳು 30 / ಕೀರ್ತ 30
ಕೀರ್ತನೆಗಳು 31 / ಕೀರ್ತ 31
ಕೀರ್ತನೆಗಳು 32 / ಕೀರ್ತ 32
ಕೀರ್ತನೆಗಳು 33 / ಕೀರ್ತ 33
ಕೀರ್ತನೆಗಳು 34 / ಕೀರ್ತ 34
ಕೀರ್ತನೆಗಳು 35 / ಕೀರ್ತ 35
ಕೀರ್ತನೆಗಳು 36 / ಕೀರ್ತ 36
ಕೀರ್ತನೆಗಳು 37 / ಕೀರ್ತ 37
ಕೀರ್ತನೆಗಳು 38 / ಕೀರ್ತ 38
ಕೀರ್ತನೆಗಳು 39 / ಕೀರ್ತ 39
ಕೀರ್ತನೆಗಳು 40 / ಕೀರ್ತ 40
ಕೀರ್ತನೆಗಳು 41 / ಕೀರ್ತ 41
ಕೀರ್ತನೆಗಳು 42 / ಕೀರ್ತ 42
ಕೀರ್ತನೆಗಳು 43 / ಕೀರ್ತ 43
ಕೀರ್ತನೆಗಳು 44 / ಕೀರ್ತ 44
ಕೀರ್ತನೆಗಳು 45 / ಕೀರ್ತ 45
ಕೀರ್ತನೆಗಳು 46 / ಕೀರ್ತ 46
ಕೀರ್ತನೆಗಳು 47 / ಕೀರ್ತ 47
ಕೀರ್ತನೆಗಳು 48 / ಕೀರ್ತ 48
ಕೀರ್ತನೆಗಳು 49 / ಕೀರ್ತ 49
ಕೀರ್ತನೆಗಳು 50 / ಕೀರ್ತ 50
ಕೀರ್ತನೆಗಳು 51 / ಕೀರ್ತ 51
ಕೀರ್ತನೆಗಳು 52 / ಕೀರ್ತ 52
ಕೀರ್ತನೆಗಳು 53 / ಕೀರ್ತ 53
ಕೀರ್ತನೆಗಳು 54 / ಕೀರ್ತ 54
ಕೀರ್ತನೆಗಳು 55 / ಕೀರ್ತ 55
ಕೀರ್ತನೆಗಳು 56 / ಕೀರ್ತ 56
ಕೀರ್ತನೆಗಳು 57 / ಕೀರ್ತ 57
ಕೀರ್ತನೆಗಳು 58 / ಕೀರ್ತ 58
ಕೀರ್ತನೆಗಳು 59 / ಕೀರ್ತ 59
ಕೀರ್ತನೆಗಳು 60 / ಕೀರ್ತ 60
ಕೀರ್ತನೆಗಳು 61 / ಕೀರ್ತ 61
ಕೀರ್ತನೆಗಳು 62 / ಕೀರ್ತ 62
ಕೀರ್ತನೆಗಳು 63 / ಕೀರ್ತ 63
ಕೀರ್ತನೆಗಳು 64 / ಕೀರ್ತ 64
ಕೀರ್ತನೆಗಳು 65 / ಕೀರ್ತ 65
ಕೀರ್ತನೆಗಳು 66 / ಕೀರ್ತ 66
ಕೀರ್ತನೆಗಳು 67 / ಕೀರ್ತ 67
ಕೀರ್ತನೆಗಳು 68 / ಕೀರ್ತ 68
ಕೀರ್ತನೆಗಳು 69 / ಕೀರ್ತ 69
ಕೀರ್ತನೆಗಳು 70 / ಕೀರ್ತ 70
ಕೀರ್ತನೆಗಳು 71 / ಕೀರ್ತ 71
ಕೀರ್ತನೆಗಳು 72 / ಕೀರ್ತ 72
ಕೀರ್ತನೆಗಳು 73 / ಕೀರ್ತ 73
ಕೀರ್ತನೆಗಳು 74 / ಕೀರ್ತ 74
ಕೀರ್ತನೆಗಳು 75 / ಕೀರ್ತ 75
ಕೀರ್ತನೆಗಳು 76 / ಕೀರ್ತ 76
ಕೀರ್ತನೆಗಳು 77 / ಕೀರ್ತ 77
ಕೀರ್ತನೆಗಳು 78 / ಕೀರ್ತ 78
ಕೀರ್ತನೆಗಳು 79 / ಕೀರ್ತ 79
ಕೀರ್ತನೆಗಳು 80 / ಕೀರ್ತ 80
ಕೀರ್ತನೆಗಳು 81 / ಕೀರ್ತ 81
ಕೀರ್ತನೆಗಳು 82 / ಕೀರ್ತ 82
ಕೀರ್ತನೆಗಳು 83 / ಕೀರ್ತ 83
ಕೀರ್ತನೆಗಳು 84 / ಕೀರ್ತ 84
ಕೀರ್ತನೆಗಳು 85 / ಕೀರ್ತ 85
ಕೀರ್ತನೆಗಳು 86 / ಕೀರ್ತ 86
ಕೀರ್ತನೆಗಳು 87 / ಕೀರ್ತ 87
ಕೀರ್ತನೆಗಳು 88 / ಕೀರ್ತ 88
ಕೀರ್ತನೆಗಳು 89 / ಕೀರ್ತ 89
ಕೀರ್ತನೆಗಳು 90 / ಕೀರ್ತ 90
ಕೀರ್ತನೆಗಳು 91 / ಕೀರ್ತ 91
ಕೀರ್ತನೆಗಳು 92 / ಕೀರ್ತ 92
ಕೀರ್ತನೆಗಳು 93 / ಕೀರ್ತ 93
ಕೀರ್ತನೆಗಳು 94 / ಕೀರ್ತ 94
ಕೀರ್ತನೆಗಳು 95 / ಕೀರ್ತ 95
ಕೀರ್ತನೆಗಳು 96 / ಕೀರ್ತ 96
ಕೀರ್ತನೆಗಳು 97 / ಕೀರ್ತ 97
ಕೀರ್ತನೆಗಳು 98 / ಕೀರ್ತ 98
ಕೀರ್ತನೆಗಳು 99 / ಕೀರ್ತ 99
ಕೀರ್ತನೆಗಳು 100 / ಕೀರ್ತ 100
ಕೀರ್ತನೆಗಳು 101 / ಕೀರ್ತ 101
ಕೀರ್ತನೆಗಳು 102 / ಕೀರ್ತ 102
ಕೀರ್ತನೆಗಳು 103 / ಕೀರ್ತ 103
ಕೀರ್ತನೆಗಳು 104 / ಕೀರ್ತ 104
ಕೀರ್ತನೆಗಳು 105 / ಕೀರ್ತ 105
ಕೀರ್ತನೆಗಳು 106 / ಕೀರ್ತ 106
ಕೀರ್ತನೆಗಳು 107 / ಕೀರ್ತ 107
ಕೀರ್ತನೆಗಳು 108 / ಕೀರ್ತ 108
ಕೀರ್ತನೆಗಳು 109 / ಕೀರ್ತ 109
ಕೀರ್ತನೆಗಳು 110 / ಕೀರ್ತ 110
ಕೀರ್ತನೆಗಳು 111 / ಕೀರ್ತ 111
ಕೀರ್ತನೆಗಳು 112 / ಕೀರ್ತ 112
ಕೀರ್ತನೆಗಳು 113 / ಕೀರ್ತ 113
ಕೀರ್ತನೆಗಳು 114 / ಕೀರ್ತ 114
ಕೀರ್ತನೆಗಳು 115 / ಕೀರ್ತ 115
ಕೀರ್ತನೆಗಳು 116 / ಕೀರ್ತ 116
ಕೀರ್ತನೆಗಳು 117 / ಕೀರ್ತ 117
ಕೀರ್ತನೆಗಳು 118 / ಕೀರ್ತ 118
ಕೀರ್ತನೆಗಳು 119 / ಕೀರ್ತ 119
ಕೀರ್ತನೆಗಳು 120 / ಕೀರ್ತ 120
ಕೀರ್ತನೆಗಳು 121 / ಕೀರ್ತ 121
ಕೀರ್ತನೆಗಳು 122 / ಕೀರ್ತ 122
ಕೀರ್ತನೆಗಳು 123 / ಕೀರ್ತ 123
ಕೀರ್ತನೆಗಳು 124 / ಕೀರ್ತ 124
ಕೀರ್ತನೆಗಳು 125 / ಕೀರ್ತ 125
ಕೀರ್ತನೆಗಳು 126 / ಕೀರ್ತ 126
ಕೀರ್ತನೆಗಳು 127 / ಕೀರ್ತ 127
ಕೀರ್ತನೆಗಳು 128 / ಕೀರ್ತ 128
ಕೀರ್ತನೆಗಳು 129 / ಕೀರ್ತ 129
ಕೀರ್ತನೆಗಳು 130 / ಕೀರ್ತ 130
ಕೀರ್ತನೆಗಳು 131 / ಕೀರ್ತ 131
ಕೀರ್ತನೆಗಳು 132 / ಕೀರ್ತ 132
ಕೀರ್ತನೆಗಳು 133 / ಕೀರ್ತ 133
ಕೀರ್ತನೆಗಳು 134 / ಕೀರ್ತ 134
ಕೀರ್ತನೆಗಳು 135 / ಕೀರ್ತ 135
ಕೀರ್ತನೆಗಳು 136 / ಕೀರ್ತ 136
ಕೀರ್ತನೆಗಳು 137 / ಕೀರ್ತ 137
ಕೀರ್ತನೆಗಳು 138 / ಕೀರ್ತ 138
ಕೀರ್ತನೆಗಳು 139 / ಕೀರ್ತ 139
ಕೀರ್ತನೆಗಳು 140 / ಕೀರ್ತ 140
ಕೀರ್ತನೆಗಳು 141 / ಕೀರ್ತ 141
ಕೀರ್ತನೆಗಳು 142 / ಕೀರ್ತ 142
ಕೀರ್ತನೆಗಳು 143 / ಕೀರ್ತ 143
ಕೀರ್ತನೆಗಳು 144 / ಕೀರ್ತ 144
ಕೀರ್ತನೆಗಳು 145 / ಕೀರ್ತ 145
ಕೀರ್ತನೆಗಳು 146 / ಕೀರ್ತ 146
ಕೀರ್ತನೆಗಳು 147 / ಕೀರ್ತ 147
ಕೀರ್ತನೆಗಳು 148 / ಕೀರ್ತ 148
ಕೀರ್ತನೆಗಳು 149 / ಕೀರ್ತ 149
ಕೀರ್ತನೆಗಳು 150 / ಕೀರ್ತ 150