೧ |
ವಂದನೆ ಹೇ ದೇವಾ, ಕೃತಜ್ಞತಾ ವಂದನೆ I ನೀ ಸಾಧಿಸಿದ ಸತ್ಕಾರ್ಯಗಳ ವಿವರಣೆ I ತಂದಿದೆ ನಮಗೆ ನಿನ್ನ ನಾಮದ ಸ್ಮರಣೆ II |
೨ |
ಈ ಪರಿ ನುಡಿದಿರುವನಾ ದೇವನು: I “ಕ್ಲುಪ್ತಕಾಲದಲಿ ನಾ ನೀಡುವೆನು I ತೀರ್ಪನು, ನ್ಯಾಯವಾದ ತೀರ್ಪನು II |
೩ |
ಇಳೆಯು ಭೂನಿವಾಸಿಗಳ ಸಮೇತ ತಳಮಳಗೊಳ್ಳಲು I ಅದರ ತಳಹದಿಯ ಬಿಗಿಹಿಡಿದಿರುವವನು ನಾನಿಲ್ಲದಿನ್ನಾರು? II |
೪ |
ಗರ್ವಿಗಳೇ, ಸಾಕುಮಾಡಿ ನಿಮ್ಮ ಸೊಕ್ಕುಮಾತುಗಳನು I ದುರ್ಜನರೇ, ತೋರಬೇಡಿ ನಿಮ್ಮ ಕೋರೆಕೊಂಬುಗಳನು II |
೫ |
ಕಾಣಿಸಿಕೊಳ್ಳದಿರಲಿ ನಿಮ್ಮ ಕೋರೆಕೊಂಬುಗಳು I ಮಾತೆತ್ತದಿರಲಿ ನಿಮ್ಮಗಳ ಕೊಬ್ಬಿದಾ ಕಂಠಗಳು” II |
೬ |
ಪೂರ್ವಪಶ್ಚಿಮದಿಂದ ಬರುವುದಿಲ್ಲ ಉದ್ಧಾರ I ಅರಣ್ಯದಿಂದ ದೊರಕುವುದಿಲ್ಲ ಜೀವೋದ್ಧಾರ II |
೭ |
ನ್ಯಾಯತೀರ್ಪು ಬರುವುದು ದೇವನಿಂದಲೇ I ಉನ್ನತಿಯು ಅವನತಿಯು ಆತನಿಂದಲೇ II |
೮ |
ಪ್ರಭುವಿನ ಕರಗಳಲ್ಲಿದೆ ಕೋಪಕೊಡ ಒಂದು I ತುಂಬಿದೆ ಅಮಲುಮಿಶ್ರ ರೌದ್ರರಸದಿಂದದು II ಅದನವನು ಸುರಿಯಲು ಕುಡಿವರು ಜಗದ ದುರುಳರು I ಮಡ್ಡಿಯನು ಕೂಡ ಬಿಡದೆ ಕುಡಿವರೆಲ್ಲರು II |
೯ |
ನಾನಾದರೊ ಕೀರ್ತಿಸುವೆನು ಯಕೋಬ ದೇವರನು I ಮಾಡುವೆನು ಅನವರತ ಆತನ ಗುಣಗಾನವನು II |
೧೦ |
ಕತ್ತರಿಸುವನು ಕೆಡುಕರ ಕೋರೆಕೋಡುಗಳನು I ಎತ್ತರಿಸುವನು ಸಜ್ಜನರ ಕೋರೆಕೊಂಬುಗಳನು II
|
Kannada Bible (KNCL) 2016 |
No Data |