೧ |
ದೇವಾ ಆಲಿಸೆನ್ನ ಮೊರೆಯನು I ಕಿವಿಗೊಟ್ಟು ಕೇಳೆನ್ನ ಜಪವನು II |
೨ |
ಎದೆಗುಂದಿ ಮೊರೆಯಿಡುತ್ತಿರುವೆ ಜಗದೆಲ್ಲೆಯಿಂದ I ಹತ್ತಲಾಗದ ಆಶ್ರಯಗಿರಿಗೆ ಹತ್ತಿಸೆನ್ನ II |
೩ |
ದೇವಾ, ನೀನೆನಗೆ ಶರಣು ಮಹತ್ತರ I ಶತ್ರುಗೆಟುಕದ ಸುಭದ್ರ ಗೋಪುರ II |
೪ |
ನಿನ್ನ ಗುಡಾರವಾಗಲಿ ನನಗೆ ನಿರಂತರ ಬಿಡಾರ I ನಿನ್ನ ರೆಕ್ಕೆಗಳ ಮರೆಯೆ ನನಗೆ ಆಶ್ರಯದಾಗರ II |
೫ |
ನಾ ಹೊತ್ತ ಹರಕೆಗಳಿಗೆ ದೇವಾ ನೀ ಲಕ್ಷ್ಯವಿತ್ತೆ I ನಿನ್ನ ಭಕ್ತರಿಗೆ ಸಿಗುವ ಭಾದ್ಯತೆಯ ನನಗೂ ಇತ್ತೆ II |
೬ |
ದೀರ್ಘಾಯುಸ್ಸನು ದಯಪಾಲಿಸು ರಾಜನಿಗೆ I ತಲತಲಾಂತರಕು ಉಳಿಯಲಿ ಆತನಾಳ್ವಿಕೆ II |
೭ |
ದೇವರ ಸಾನ್ನಿಧ್ಯದಲಿ ಆತನು ಸದಾ ಸಾಮ್ರಾಜ್ಯವಾಳಲಿ I ನಿನ್ನಯ ಪ್ರೀತಿ ಸತ್ಯತೆಗಳು ಆತನಿಗೆ ಬೆಂಗಾವಲಾಗಿರಲಿ II |
೮ |
ಸಲ್ಲಿಸುವೆನಾಗ ದಿನಬಿಡದೆ ನಿನಗೆ ಹರಕೆಗಳನು I ಸಂಕೀರ್ತಿಸುವೆನು ಸದಾ ನಿನ್ನ ಶ್ರೀನಾಮವನು II
|
Kannada Bible (KNCL) 2016 |
No Data |