A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಕೀರ್ತನೆಗಳು ೫೩



ಮನದಲಿ “ದೇವನಿಲ್ಲ” ಎನ್ನುವವರು ದುರ್ಮತಿಗಳು I ಹೇಯಕೃತ್ಯವೆಸಗುವವರು ಆ ಭ್ರಷ್ಟಾಚಾರಿಗಳು I ಒಳಿತನ್ನು ಮಾಡುವವರಾರೂ ಇಲ್ಲ ಅವರೊಳು II
ಮಾನವರನು ದೇವ ಸ್ವರ್ಗದಿಂದ ಸಮೀಕ್ಷಿಸುತಿಹನು I ತನ್ನನು ಅರಸುವ ಸನ್ಮತಿಗಳಾರೆಂದು ವೀಕ್ಷಿಸುತಿಹನು II
ಒಳಿತನೆಸಗುವವರು ಒಬ್ಬರೂ ಇಲ್ಲ I ದ್ರೋಹಿಗಳು, ದುಷ್ಕರ್ಮಿಗಳು ಅವರೆಲ್ಲ II
ದುರ್ಜನರು ನನ್ನ ಜನರನು ಕೂಳಿನಂತೆ ನುಂಗುವುದೇಕೆ? I ದೇವರನು ನೆನೆಯದಾ ದುಷ್ಕರ್ಮಿಗಳಿಗೆ ಅರಿವಿಲ್ಲವೇಕೆ? II
ದಿಗ್ಭ್ರಾಂತರಾಗುವರಿದೋ ಹಿಂದೆಂದು ಇಲ್ಲದಂತೆ ದುರುಳರು I ದೇವರಿಂದ ತಿರಸ್ಕೃತವಾದ ಅವರು ಪರಾಜಿತರಾಗುವರು I ದಿಕ್ಕುಪಾಲಾಗುವುವು ನಿಮ್ಮ ಮೇಲೆ ಬಿದ್ದವರ ಮೂಳೆಗಳು II
ಬರಲಿ ಇಸ್ರಯೇಲಿಗೆ ಜೀವೋದ್ಧಾರ ಸಿಯೋನಿನಿಂದ I ತರಲಿ ದೇವರು ತನ್ನ ಪ್ರಜೆಗೆ ಮರಳಿ ಸಿರಿಸಂಪದ I ನೀಡಲಿ ಯಕೋಬ ಮೇಣ್ ಇಸ್ರಯೇಲ ಜನತೆಗೆ ಹರ್ಷಾನಂದ II