೧ |
ಸರ್ವಸ್ತುತಿಗೆ ಪಾತ್ರ, ಪ್ರಭುವು ಪರಮೋನ್ನತ I ದೇವನಗರದಲಿ ಆತನ ಪವಿತ್ರ ಪರ್ವತ II |
೨ |
ಎತ್ತರದಲಿ ಸುಂದರ, ಉತ್ತರದಲಿ ಸಿಯೋನ್ ಶಿಖರ I ಆನಂದದಾಯಕ ರಾಜಾಧಿರಾಜನ ಆ ನಗರ II |
೩ |
ಅದರ ಕೋಟೆಕೊತ್ತಲಗಳ ನಡುವೆ ದೇವನು I ತಾನೇ ಸುಭದ್ರ ದುರ್ಗವೆಂದು ತೋರಿಹನು II |
೪ |
ಕೂಡಿದರೊಂದಾಗಿ ರಾಜರುಗಳು, ದಾಳಿಮಾಡಬಂದರು I ನೋಡಿ ನಿಬ್ಬೆರಗಾದರು, ತಲ್ಲಣಗೊಂಡು ಓಡಿಹೋದರು II |
೫ |
*** |
೬ |
ನಡುಗುವಂತಾಯಿತಲ್ಲಿ ಗಡಗಡನೆ I ಪ್ರಸವ ವೇದನೆಯಂತಾಯಿತವರಿಗೆ II |
೭ |
ತಾರ್ಷಿಷ್ ನಾಡಿನ ದೊಡ್ಡ ದೊಡ್ಡ ಹಡಗುಗಳನು I ಚಂಡಮಾರುತದಿಂದ ಪುಡಿಪುಡಿ ಮಾಡಿದೆ ನೀನು II |
೮ |
ಕಿವಿಯಾರೆ ಕೇಳಿದಂತೆಯೆ ಕಣ್ಣಾರೆ ಕಂಡೆವು I ಸರ್ವಶಕ್ತ ಪ್ರಭುವನು ದೇವನಗರದಲಿ ಕಂಡೆವು II |
೯ |
ನಿನ್ನಚಲ ಪ್ರೀತಿಯನು ದೇವಾ, ಸ್ಮರಿಸುವೆವು I ನಿನ್ನ ಮಹದಾಲಯದೊಳು ಅದನು ಧ್ಯಾನಿಸುವೆವು II |
೧೦ |
ನಿನ್ನ ನಾಮದಂತೆ ನಿನ್ನಾ ಹೊಗಳಿಕೆ I ಮುಟ್ಟುತ್ತದೆ ಜಗದ ಎಲ್ಲೆ ಎಲ್ಲೆಗೆ I ದೇವಾ, ನೀತಿಭರಿತ ನಿನ್ನ ಆಳ್ವಿಕೆ II |
೧೧ |
ಸಿಯೋನ್ ಪಟ್ಟಣಿಗರು ಹರ್ಷಗೊಳ್ಳಲಿ I ಯೆಹೂದ್ಯ ನಗರಗಳು ಆನಂದಪಡಲಿ I ನಿನ್ನ ನ್ಯಾಯವನು ನೆನಪಿಸಿಕೊಳ್ಳಲಿ II |
೧೨ |
ಸಂಚಾರಮಾಡಿರಿ ಸಿಯೋನ್ ನಗರದೊಳು I ಮಾಡಿರಿ ಪ್ರದಕ್ಷಿಣೆ ಅದರ ಸುತ್ತಲು I ಲೆಕ್ಕವಿಲ್ಲದಿವೆ ನೋಡಿ ಗೋಪುರಗಳು II |
೧೩ |
ಕಣ್ಣಿಟ್ಟು ನೋಡಿರಿ ಅದರ ಕೋಟೆಗಳನು I ಚೆನ್ನಾಗಿ ಗಮನಿಸಿರಿ ಅದರ ಪ್ರಾಕಾರಗಳನು II |
೧೪ |
ಆಗ ತಿಳಿಸಿರಿ ಮುಂದಣ ಪೀಳಿಗೆಗಿಂತೆಂದು - “ಈತನೀತನೇ ನಮ್ಮ ದೇವನು ಯುಗಯುಗಕು I ನಮಗೀತ ಮಾರ್ಗದರ್ಶಕ ತಲತಲಾಂತರಕು” II
|
Kannada Bible (KNCL) 2016 |
No Data |