೧ |
ಸಂಕಟ ಬಂದಾಗ, ಪ್ರಭು ನಿನಗೆ ಕಿವಿಗೊಡಲಿ I ಯಕೋಬ ದೇವರ ನಾಮ, ನಿನ್ನ ಕಾಪಾಡಲಿ II |
೨ |
ನೆರವು ನೀಡಲಾತ ಪವಿತ್ರಾಲಯದಿಂದ I ನಿನಗೊತ್ತಾಸೆ ಬರಲಿ, ಸಿಯೋನ್ ಶಿಖರದಿಂದ II |
೩ |
ನೆನಸಿಕೊಳ್ಳಲಾತ ನೀನರ್ಪಿಸಿದ ಕಾಣಿಕೆಗಳನು I ಒಲಿದು ಸ್ವೀಕರಿಸಲಿ, ನೀನಿತ್ತಾ ಯಜ್ಞಬಲಿಗಳನು II |
೪ |
ನೆರವೇರಿಸಲಿ ಆತ ನಿನ್ನಿಷ್ಟಾರ್ಥಗಳನು I ಪೂರೈಸಲಿ ಪ್ರಭು ನಿನ್ನಭೀಪ್ಸೆಗಳೆಲ್ಲವನು II |
೫ |
ಜಯಘೋಷ ಮಾಡುವೆವು, ನಿನ್ನ ಗೆಲುವಿನ ನಿಮಿತ್ತ I ಧ್ವಜ ಹಾರಿಪೆವು, ಎಮ್ಮ ದೇವನ ನಾಮದ ನಿಮಿತ್ತ I ನಿನ್ನ ಕೋರಿಕೆಗಳೆಲ್ಲವನು, ಕೈಗೂಡಿಸಲಿ ಆತ II |
೬ |
ಒದಗುವನು ಪ್ರಭುವು ಅಭಿಷಿಕ್ತನಿಗೆ I ಓಗೊಡುವನು ಸ್ವರ್ಗದಿಂದಾತನಿಗೆ I ಗೆಲುವನೀವನು ಭುಜಬಲದಿಂದವನಿಗೆ II |
೭ |
ಹೆಚ್ಚಳಪಡುತಿಹರು ಕೆಲವರು ರಥಗಳಲಿ, ಹಲವರು ಅಶ್ವಗಳಲಿ I ಹೆಮ್ಮೆಪಡುತಿಹೆವು ನಾವಾದರೋ, ನಮ್ಮ ದೇವರ ನಾಮದಲಿ II |
೮ |
ಕೆಳಗಿಳಿವರವರು, ಕುಸಿದು ಬೀಳುವರವರು I ಏಳುವೆವು, ಸ್ಥಿರನಿಲ್ಲುವೆವು ನಾವೆಲ್ಲರು II |
೯ |
ಜಯವ ನೀಡು ಪ್ರಭು, ಅರಸನಿಗೆ I ಕಿವಿಗೊಡು ನೀ, ನಮ್ಮ ಪ್ರಾರ್ಥನೆಗೆ II
|
Kannada Bible (KNCL) 2016 |
No Data |