೧ |
ಪ್ರಭುವಿಗೆ ಸ್ತುತಿಸ್ತೋತ್ರ ಅಲ್ಲೆಲೂಯ I ಮನವೇ, ವಂದಿಸು ಆತನನು ಅಲ್ಲೆಲೂಯ II |
೨ |
ಪ್ರಾಣವಿರುವವರೆಗೆ ಸ್ತುತಿಸುವೆನು ಪ್ರಭುವನು I ಬಾಳೆಲ್ಲ ಹಾಡಿ ಭಜಿಪೆನು ನನ್ನ ದೇವರನು II |
೩ |
ನಂಬಬೇಡ ಅಧಿಕಾರಿಯನು I ನೆಚ್ಚಬೇಡ ನರಮಾನವನನು I ಉದ್ಧರಿಸಲು ಅಸಮರ್ಥನವನು II |
೪ |
ಉಸಿರುಹೋದುದೇ ಮರಳುತ್ತಾನವನು ಮಣ್ಣಿಗೆ I ಅಂದೇ ಅಳಿಯುತ್ತದೆ ಅವನೆಲ್ಲಾ ಯೋಜನೆ II |
೫ |
ಇಸ್ರಯೇಲ ಕುಲದೇವರು ಯಾರಿಗೆ ಉದ್ಧಾರಕನೋ, ಅವನೇ ಧನ್ಯನು I ಪ್ರಭುವನು ತನ್ನ ದೇವರೆಂದು ಯಾರು ನಂಬಿಹನೋ, ಅವನೇ ಧನ್ಯನು II |
೬ |
ಭೂಮ್ಯಾಕಾಶ, ಸಾಗರ, ಚರಾಚರಗಳನು ನಿರ್ಮಿಸಿದವ ಆತನೆ I ಕೊಟ್ಟ ವಾಗ್ದಾನಗಳನು ತಪ್ಪದೆ ನೆರವೇರಿಸುವವ ಆತನೆ II |
೭ |
ದೊರಕಿಸುವನು ನ್ಯಾಯ ದಲಿತರಿಗೆ I ಒದಗಿಸುವನು ಆಹಾರ ಹಸಿದವರಿಗೆ I ನೀಡುವನು ಬಿಡುಗಡೆ ಬಂಧಿತರಿಗೆ II |
೮ |
ಕಣ್ಣನ್ನೀಯುವನು ಪ್ರಭು ಕುರುಡರಿಗೆ I ಉದ್ಧಾರಕನಾ ಪ್ರಭು ಕುಗ್ಗಿದವರಿಗೆ I ಆತನ ಒಲವಿರುವುದು ಸಾಧು ಸಜ್ಜನರಿಗೆ II |
೯ |
ರಕ್ಷಿಸುವನು ಪ್ರಭು ಪರದೇಶಿಗಳನು I ಆದರಿಸುವನು ಅನಾಥರನು, ವಿಧವೆಯರನು I ನಿರ್ಮೂಲ ಮಾಡುವನು ದುರ್ಜನರ ಮಾರ್ಗವನು II |
೧೦ |
ಪ್ರಭುವೇ ಅರಸನು ಸದಾಕಾಲಕು I ಸಿಯೋನ್, ನಿನ್ನ ದೇವನಾಳ್ವನು ತಲತಲಾಂತರಕು I ಅಲ್ಲೆಲೂಯ! II
|
Kannada Bible (KNCL) 2016 |
No Data |