೧ |
(ಯಾತ್ರಾಗೀತೆ) ಸಂಕಟದಲಿ ಮೊರೆಯಿಟ್ಟೆನು ಪ್ರಭುವಿಗೆ I ಕೊಟ್ಟನು ಸದುತ್ತರವನು ಆತನೆನಗೆ II |
೨ |
ಬಿಡಿಸೆನ್ನನು ಪ್ರಭು ಸುಳ್ಳುಬಾಯಿಂದ I ವಂಚಿಸುವ ನಾಲಿಗೆ ಉಳ್ಳವರಿಂದ II |
೩ |
ವಂಚಕ ನಾಲಿಗೆಯೆ, ನಿನಗೆ ಸಿಕ್ಕುವುದೇನು? I ನಿನಗೆ ಬಂದೊದಗುವ ಶಿಕ್ಷೆಯಾದರೂ ಏನು? II |
೪ |
ತಟ್ಟುವುವು ಶೂರನ ಹರಿತ ಬಾಣಗಳು I ಗಿಟ್ಟುವುವು ಉರಿಯುವ ಬೆಂಕಿ ಕೆಂಡಗಳು II |
೫ |
ಅಯ್ಯೋ ತಂಗಬೇಕಲ್ಲಾ ಮೇಷೆಕಿನವರ ಮಧ್ಯದಲಿ II ಅಕಟಾ ಇರಬೇಕಲ್ಲಾ ಕೇದಾರಿನ ಪಾಳೆಯಗಳಲಿ II |
೬ |
ಶಾಂತಿಗೆ ಶತ್ರುಗಳಾದವರ ಒಡನಾಟ I ಸಾಕು ಆ ದೀರ್ಘ ಬಾಳಿನ ಸಂಕಟ II |
೭ |
ಶಾಂತಿಪರ ಮಾತು ನನ್ನದು I ಸಮರದ ಕಾತರ ಅವರದು II
|
Kannada Bible (KNCL) 2016 |
No Data |