A A A A A
×

ಕನ್ನಡ ಬೈಬಲ್ (KNCL) 2016

ಯೋಬನ ೩೯

“ಕಾಡುಮೇಕೆ ಈಯುವ ವೇಳೆಯನು ತಿಳಿದಿರುವೆಯಾ? ಹುಲ್ಲೆಗಳ ಹೆರಿಗೆಯನು ಗ್ರಹಿಸಿರುವೆಯಾ?
ಎಣಿಸಿರುವೆಯಾ ಅವು ಗರ್ಭಹೊರುವ ತಿಂಗಳನು? ಗೊತ್ತುಹಚ್ಚಿರುವೆಯಾ ಅವು ಈಯುವ ವೇಳೆಯನು?
ಅವು ಬಗ್ಗಿ ಮರಿಹಾಕುತ್ತವೆ ಒಡನೆಯೆ ವೇದನೆಯನು ಮರೆತುಬಿಡುತ್ತವೆ.
ಅವುಗಳ ಮರಿಗಳು ಪುಷ್ಟಿಯಾಗಿ ಬಯಲಿನಲ್ಲಿ ಬೆಳೆಯುತ್ತವೆ ತಾಯಿಯನ್ನು ಅಗಲಿದ ಬಳಿಕ ಅವು ಮರಳಿ ಬರುವುದಿಲ್ಲ.
ಕಾಡುಕತ್ತೆಗೆ ಸ್ವಾತಂತ್ರ್ಯವನು ಕೊಟ್ಟವರಾರು? ಅದರ ಕಟ್ಟನು ಬಿಚ್ಚಿದವರಾರು?
ಅದಕ್ಕೆ ಅಡವಿಯನೆ ಮನೆಯನ್ನಾಗಿಸಿದವನು ನಾನು ಸವಳುಬಯಲನೇ ಅದರ ನಿವಾಸವಾಗಿಸಿದವನು ನಾನು.
ಅದು ಧಿಕ್ಕರಿಸುತ್ತದೆ ಊರಗದ್ದಲವನು ಅದು ಕೇಳಿದ್ದಿಲ್ಲ ಓಡಿಸುವವನ ಕೂಗನು.
ಎತ್ತರವಾದ ಬೆಟ್ಟಗಳೇ ಅದರ ಕಾವಲು ಹಸಿರೆಲ್ಲಿದ್ದರೂ ಅದುವೆ ಅದರಸುವ ಮೇವು.
ಕಾಡುಕೋಣ ಒಪ್ಪಿದೆಯೇ ನಿನಗೆ ಸೇವೆಮಾಡಲು? ನಿನ್ನ ಗೋದಲಿಯ ಹತ್ತಿರವೇ ತಂಗಿರಲು?
೧೦
ಕಟ್ಟಬಲ್ಲೆಯಾ ಅದನು ಹಗ್ಗದಿಂದ ನೇಗಿಲ ಸಾಲಿಗೆ ಕುಂಟೆ ಎಳೆಯಲು ಅದು ನಿನ್ನ ಹಿಂದೆ?
೧೧
ಬಲವಿದೆಯೆಂದು ಅದರಲಿ ನಂಬಿಕೆಯಿಡುವೆಯಾ? ಬಲಿಷ್ಠಕಾರ್ಯಗಳನು ಅದಕ್ಕೆ ಒಪ್ಪಿಸಿಬಿಡುವೆಯಾ?
೧೨
ಬೆಳೆಯನು ಅದು ನಿನಗೆ ಹೊತ್ತು ತರುವುದೆಂದು ನಂಬುವೆಯಾ? ಕಣದಲಿ ನಿನಗೆ ಕಾಳನು ಕೂಡಿಸುವುದೆಂಬ ನಂಬಿಕೆ ನಿನಗಿದೆಯಾ?
೧೩
ಉಷ್ಟ್ರಪಕ್ಷಿ ಲವಲವಿಕೆಯಿಂದ ರೆಕ್ಕೆಬಡಿಯುತ್ತದೆ ಆದರೆ ಪ್ರೀತಿವ್ಯಾಮೋಹವಿದೆಯೆ ಅದರ ರೆಕ್ಕೆ ಗರಿಗಳಿಗೆ?
೧೪
ಮೊಟ್ಟೆಗಳನು ಭೂಮಿಯ ಮೇಲೆ ಬಿಟ್ಟುಬಿಡುವಾ ಪಕ್ಷಿ, ಕೇವಲ ಧೂಳಿನಿಂದ ಅವಕ್ಕೆ ಕಾವು ಕೊಡುತ್ತದೆ, ಅಲ್ಲವೆ?
೧೫
ಆ ಮೊಟ್ಟೆಗಳನು ಜನರು ಕಾಲಿನಿಂದ ಮೆಟ್ಟಿಯಾರು ಕಾಡುಮೃಗ ಅವುಗಳನು ತುಳಿದೀತು ಎಂಬ ಯೋಚನೆ ಅದನು ಕಾಡದು.
೧೬
ತನ್ನ ಮರಿ ತನ್ನದೇ ಅಲ್ಲ ಎಂಬಷ್ಟು ಕ್ರೂರತೆ ಅದರದು ತನ್ನ ಹೆರಿಗೆ ನಿಷ್ಫಲವಾಯಿತೆಂಬ ಸಂಕಟ ಅದಕ್ಕಿರದು.
೧೭
ಅದಕ್ಕೆ ನಾನು ಕೊಡಲಿಲ್ಲ ಜ್ಞಾನವನು ದಯಪಾಲಿಸಲಿಲ್ಲ ಗ್ರಹಿಕೆಯನು.
೧೮
ಆದರೂ ಅದು ರೆಕ್ಕೆ ಬಡಿದು ದೌಡಾಯಿಸುವಾಗಲಂತು ಕುದುರೆ ರಾಹುತರನೂ ಅಣಕಿಸಬಲ್ಲದು.
೧೯
ಕುದುರೆಗೆ ಶಕ್ತಿಕೊಟ್ಟವನು ನೀನೋ? ಅದರ ಕೊರಳಿಗೆ ಜುಟ್ಟುಗುಡುಗನ್ನು ಕಟ್ಟಿದವನು ನೀನೋ?
೨೦
ಮಿಡತೆಯ ಹಾಗೆ ಅದು ಜಿಗಿಯಮಾಡಿದವನು ನೀನೋ? ಅದರ ಕೆನೆತದ ಪ್ರಭಾವ ಭೀತಿಯನು ತರುತ್ತದೆ, ನೋಡು!
೨೧
ನೆಲವನು ಕೆರೆಯುತ್ತಾ, ತನ್ನ ಶಕ್ತಿಗಾಗಿ ಹಿಗ್ಗುತ್ತಾ ಸನ್ನದ್ಧ ಸೈನ್ಯವನು ಇದಿರಿಸುತ್ತಾ ನುಗ್ಗುತ್ತದೆ ನೋಡು!
೨೨
ಖಡ್ಗಕ್ಕೆ ಹಿಂದೆಗೆಯದೆ, ಕಳವಳಗೊಳ್ಳದೆ ಭಯಭೀತಿಗೆ ಹೆದರದೆ ನಗುತ್ತದೆ!
೨೩
ಅದರ ಮೇಲಿನ ಬತ್ತಳಿಕೆ ಜಣಜಣಿಸುತ್ತದೆ ಈಟಿ ಭರ್ಜಿಗಳು ಥಳಥಳಿಸುತ್ತವೆ.
೨೪
ಕಹಳೆಯ ನಾದಕೇಳಿ ನಿಲ್ಲದದು ಸುಮ್ಮನೆ ಉದ್ರೇಕಗೊಂಡು ದೌಡಾಯಿಸುತ್ತದೆ ವೇಗವನೇ ನುಂಗುವಂತೆ.
೨೫
ರಣಕಹಳೆ ಮೊಳಗಿದಾಗಲೆ ಕೆನೆಯುತ್ತದೆ ಕಾಳಗ, ಆರ್ಭಟ, ದಳಪತಿಗಳ ಗರ್ಜನೆ ಇವುಗಳನ್ನೆಲ್ಲಾ ದೂರದಿಂದಲೆ ಮೂಸುತ್ತದೆ.
೨೬
ಗಿಡುಗವು ರೆಕ್ಕೆ ಹರಡುವುದನು ದಕ್ಷಿಣದಿಕ್ಕಿಗೆ ಹಾರಿ ವಲಸೆಹೋಗುವುದನು ನಿನ್ನಿಂದ ಕಲಿತದೆಂತು?
೨೭
ರಣಹದ್ದಿಗೆ ನಿನ್ನಪ್ಪಣೆ ಬೇಕೋ ಮೇಲೆ ಹಾರುವುದಕೆ? ನಿನ್ನ ಸಮ್ಮತಿ ಬೇಕೋ ಉನ್ನತ ಸ್ಥಳದಲ್ಲಿ ಗೂಡು ಕಟ್ಟುವುದಕೆ?
೨೮
ಅದು ವಾಸಮಾಡುತ್ತದೆ ಕಲ್ಲು ಬಂಡೆ ಮೇಲೆ ಅದು ತಂಗುತ್ತದೆ ಶಿಲಾಶಿಖರದ ದುರ್ಗದೊಳಗೆ.
೨೯
ಬೇಟೆಯನು ನೋಡುತ್ತದೆ ಅಲ್ಲಿಂದಲೆ ಅದನ್ನು ಕಂಡು ಹಿಡಿಯುತ್ತದೆ ದೂರದಿಂದಲೆ.
೩೦
ಹೆಣ ಬಿದ್ದಲ್ಲಿ ರಣಹದ್ದು ಅದರ ಮರಿಗಳೂ ಹೀರುತ್ತವೆ ರಕ್ತವನು.”
ಯೋಬನ ೩೯:1
ಯೋಬನ ೩೯:2
ಯೋಬನ ೩೯:3
ಯೋಬನ ೩೯:4
ಯೋಬನ ೩೯:5
ಯೋಬನ ೩೯:6
ಯೋಬನ ೩೯:7
ಯೋಬನ ೩೯:8
ಯೋಬನ ೩೯:9
ಯೋಬನ ೩೯:10
ಯೋಬನ ೩೯:11
ಯೋಬನ ೩೯:12
ಯೋಬನ ೩೯:13
ಯೋಬನ ೩೯:14
ಯೋಬನ ೩೯:15
ಯೋಬನ ೩೯:16
ಯೋಬನ ೩೯:17
ಯೋಬನ ೩೯:18
ಯೋಬನ ೩೯:19
ಯೋಬನ ೩೯:20
ಯೋಬನ ೩೯:21
ಯೋಬನ ೩೯:22
ಯೋಬನ ೩೯:23
ಯೋಬನ ೩೯:24
ಯೋಬನ ೩೯:25
ಯೋಬನ ೩೯:26
ಯೋಬನ ೩೯:27
ಯೋಬನ ೩೯:28
ಯೋಬನ ೩೯:29
ಯೋಬನ ೩೯:30
ಯೋಬನ 1 / ಯೋ 1
ಯೋಬನ 2 / ಯೋ 2
ಯೋಬನ 3 / ಯೋ 3
ಯೋಬನ 4 / ಯೋ 4
ಯೋಬನ 5 / ಯೋ 5
ಯೋಬನ 6 / ಯೋ 6
ಯೋಬನ 7 / ಯೋ 7
ಯೋಬನ 8 / ಯೋ 8
ಯೋಬನ 9 / ಯೋ 9
ಯೋಬನ 10 / ಯೋ 10
ಯೋಬನ 11 / ಯೋ 11
ಯೋಬನ 12 / ಯೋ 12
ಯೋಬನ 13 / ಯೋ 13
ಯೋಬನ 14 / ಯೋ 14
ಯೋಬನ 15 / ಯೋ 15
ಯೋಬನ 16 / ಯೋ 16
ಯೋಬನ 17 / ಯೋ 17
ಯೋಬನ 18 / ಯೋ 18
ಯೋಬನ 19 / ಯೋ 19
ಯೋಬನ 20 / ಯೋ 20
ಯೋಬನ 21 / ಯೋ 21
ಯೋಬನ 22 / ಯೋ 22
ಯೋಬನ 23 / ಯೋ 23
ಯೋಬನ 24 / ಯೋ 24
ಯೋಬನ 25 / ಯೋ 25
ಯೋಬನ 26 / ಯೋ 26
ಯೋಬನ 27 / ಯೋ 27
ಯೋಬನ 28 / ಯೋ 28
ಯೋಬನ 29 / ಯೋ 29
ಯೋಬನ 30 / ಯೋ 30
ಯೋಬನ 31 / ಯೋ 31
ಯೋಬನ 32 / ಯೋ 32
ಯೋಬನ 33 / ಯೋ 33
ಯೋಬನ 34 / ಯೋ 34
ಯೋಬನ 35 / ಯೋ 35
ಯೋಬನ 36 / ಯೋ 36
ಯೋಬನ 37 / ಯೋ 37
ಯೋಬನ 38 / ಯೋ 38
ಯೋಬನ 39 / ಯೋ 39
ಯೋಬನ 40 / ಯೋ 40
ಯೋಬನ 41 / ಯೋ 41
ಯೋಬನ 42 / ಯೋ 42