೧ |
ಎಲೀಹುವನು ಮತ್ತೆ ಹೀಗೆಂದನು: |
೨ |
“ಜ್ಞಾನಿಗಳೇ, ನನ್ನ ಮಾತನ್ನು ಗಮನಿಸಿ: ಮೇಧಾವಿಗಳೇ, ನನಗೆ ಕಿವಿಗೊಡಿ: |
೩ |
ನಾಲಿಗೆ ಆಹಾರವನು ರುಚಿನೋಡುವಂತೆ ಕಿವಿ ನುಡಿಮಾತುಗಳನು ವಿವೇಚಿಸುತ್ತದೆ. |
೪ |
ಸರಿಯಾದುದನ್ನೇ ಆಯ್ದುಕೊಳ್ಳೋಣ ಒಳಿತಾದುದನ್ನು ನಮ್ಮ ನಮ್ಮಲ್ಲೇ ನಿಶ್ಚಯಿಸಿಕೊಳ್ಳೋಣ. |
೫ |
ಇಂತಿದೆ ಯೋಬನ ವಾದ - ‘ನಾನು ಸತ್ಯವಂತ ನನಗೆ ದೇವರಿಂದ ನ್ಯಾಯ ದೊರೆತಿಲ್ಲ. |
೬ |
ನನ್ನಲ್ಲಿ ನ್ಯಾಯವಿದ್ದರೂ ಸುಳ್ಳುಗಾರನೆನಿಸಿಕೊಂಡಿದ್ದೇನೆ ನಿರ್ದೋಷಿಯಾಗಿದ್ದರೂ ನನಗೆ ದೇವರ ಪೆಟ್ಟು ಬಾಣಬಿಟ್ಟಂತಿದೆ.’ |
೭ |
ಈ ಯೋಬನಂಥ ಮನುಜನು ಯಾರಿದ್ದಾನೆ? ಇಗೋ, ದೇವದೂಷಣೆಯನು ನೀರಿನಂತೆ ಕುಡಿಯುತ್ತಾನೆ! |
೮ |
ಇವನು ದುರ್ಜನರ ಸಂಗಡ ಸಂಚರಿಸುವವನು ಕೆಡುಕರ ಸಂಗಡ ನಡೆದಾಡುವವನು. |
೯ |
ದೇವರನು ಪ್ರೀತಿಸಿ ಬಾಳುವುದರಿಂದ ಪ್ರಯೋಜನವಿಲ್ಲವೆಂಬುದು ಇವನ ವಾದ. |
೧೦ |
ಹೀಗಿರಲು ಬುದ್ದಿವಂತರೇ, ನನ್ನ ಮಾತುಗಳಿಗೆ ಕಿವಿಗೊಡಿ ದೇವರು ಕೆಟ್ಟದ್ದನ್ನು ಮಾಡಿಯಾನೆಂಬ ಯೋಚನೆ ದೂರವಿರಲಿ ಸರ್ವಶಕ್ತನು ಅನ್ಯಾಯವನು ಎಸಗಿಯಾನೆಂಬ ಭಾವನೆ ಬಾರದಿರಲಿ. |
೧೧ |
ದೇವರು ನರನಿಗೆ ಅವನ ಕೃತ್ಯಗಳಿಗೆ ತಕ್ಕಂತೆ ಪ್ರತಿಫಲವನ್ನೀಯುತ್ತಾನೆ ಪ್ರತಿಯೊಬ್ಬನು ಅವನವನ ಕರ್ಮಕ್ಕೆ ತಕ್ಕಂತೆ ಅನುಭವಿಸಮಾಡುತ್ತಾನೆ. |
೧೨ |
ಹೌದು, ದೇವರು ಎಂದಿಗೂ ಕೆಡುಕನು ಮಾಡನು ಸರ್ವಶಕ್ತನು ಎಂದಿಗೂ ನೇರವಾದುದನು ಡೊಂಕುಮಾಡನು. |
೧೩ |
ಭೂಲೋಕವನು ಆತನ ವಶಕ್ಕೆ ಕೊಟ್ಟವನುಂಟೆ? ಆತನಲ್ಲದೆ ಭೂಮಂಡಲವನು ಕ್ರಮಪಡಿಸಿದವನುಂಟೆ? |
೧೪ |
ದೇವರು ಮನಸ್ಸುಮಾಡಿ ತನ್ನ ಆತ್ಮವನ್ನು ಹಿಂದಕ್ಕೆ ತೆಗೆದುಕೊಂಡನಾದರೆ ತನ್ನ ಶ್ವಾಸವನ್ನು ಹಿಂದಕೆ ಎಳೆದುಕೊಂಡನಾದರೆ, |
೧೫ |
ಸಮಸ್ತಜನರು ಒಟ್ಟಾಗಿ ಅಳಿದುಹೋಗುವರು ಮರಳಿ ಮನುಷ್ಯರೆಲ್ಲರೂ ಮಣ್ಣಾಗಿ ಮಾರ್ಪಡುವರು. |
೧೬ |
ಬುದ್ದಿಯಿದ್ದರೆ ಇದನು ಕೇಳಿ ನನ್ನ ಮಾತಿನ ದನಿಗೆ ಕಿವಿಗೊಡಿ. |
೧೭ |
ನ್ಯಾಯವನ್ನು ದ್ವೇಷಿಸುವವನು, ಶಿಸ್ತನು ಪಾಲಿಸುವನೋ? ಸತ್ಯಸ್ವರೂಪಿ, ಸರ್ವಶಕ್ತ ಆದ ದೇವರನು ಕೆಟ್ಟವನೆನ್ನುವಿಯೋ? |
೧೮ |
ದೇವರು ರಾಜನಿಗೆ “ಮೂರ್ಖ’ ಎಂದು ಹೇಳಬಲ್ಲನು ಪ್ರಭುಗಳನ್ನು “ದುಷ್ಟರು” ಎಂದು ಕರೆಯಬಲ್ಲನು. |
೧೯ |
ಅಧಿಪತಿಗಳಿಗೆ ಮುಖದಾಕ್ಷಿಣ್ಯವನ್ನು ತೋರಿಸುವನು ಬಡವ-ಬಲ್ಲಿದನೆಂಬ ಭೇದವನ್ನು ಮಾಡನು. ಏಕೆಂದರೆ ಅವರೆಲ್ಲರು ಆ ದೇವನಿಂದಲೇ ಸೃಷ್ಟಿಯಾದವರು. |
೨೦ |
ಕ್ಷಣಮಾತ್ರದೊಳು, ನಡುರಾತ್ರಿಯೊಳು ಸತ್ತುಹೋಗುವರು ನಾಡಿನ ಪ್ರಜೆಗಳು ತಲ್ಲಣಗೊಂಡು ಇಲ್ಲದೆಹೋಗುವರು ಮನುಷ್ಯರ ಕೈಸೋಂಕದೆಯೆ ಪರಾಕ್ರಮಿಗಳು ಮಾಯವಾಗುವರು. |
೨೧ |
ದೇವರ ಕಣ್ಣು ಮನುಷ್ಯನ ಮಾರ್ಗಗಳ ಮೇಲೆ ಅವನ ಹೆಜ್ಜೆಗಳೆಲ್ಲ ಗೋಚರವಾಗಿವೆ ಆತನಿಗೆ. |
೨೨ |
ಆತನ ದೃಷ್ಟಿಯಿಂದ ದುರುಳರು ಅಡಗಿಕೊಳ್ಳುವಂತಿಲ್ಲ ಅಂಥವರನ್ನು ಅಡಗಿಸಬಲ್ಲ ಇರುಳಿಲ್ಲ ಕಾರಿರುಳೂ ಇಲ್ಲ. |
೨೩ |
ದೇವರು ಮನುಷ್ಯನ ಮೇಲೆ ಹೆಚ್ಚು ಗಮನ ಇಡಬೇಕಾಗಿಲ್ಲ ಅವನನ್ನು ನ್ಯಾಯವಿಚಾರಣೆಗೆ ಕರೆಯುವ ಅವಶ್ಯಕತೆ ಇಲ್ಲ. |
೨೪ |
ವಿಚಾರಣೆ ಇಲ್ಲದೆಯೆ ಪರಾಕ್ರಮಿಗಳನು ಸದೆಬಡಿಯುವನು ಅವರ ಸ್ಥಾನದಲ್ಲಿ ಇತರರನ್ನು ನಿಲ್ಲಿಸಬಲ್ಲನು. |
೨೫ |
ದುಷ್ಕಾರ್ಯಗಳು ಆತನಿಗೆ ತಿಳಿದಿರುವ ಕಾರಣ ಇರುಳಲ್ಲೇ ದುರುಳರನು ಕೆಡವಿ ನಾಶಕ್ಕೆ ಗುರಿಮಾಡುವನು. |
೨೬ |
ಅಪರಾಧಿಗಳಂತೆ ಅವರನು ದಂಡಿಸುವನು ಎಲ್ಲರು ನೋಡುವಂತೆ ಅವರನು ಖಂಡಿಸುವನು. |
೨೭ |
ದೇವರ ಮಾರ್ಗಗಳೆಲ್ಲವನು ಅವರು ಅಲಕ್ಷ್ಯಮಾಡಿದರು ಆತನಿಗೆ ವಿಧೇಯರಾಗದೆ ತಿರುಗಿಬಿದ್ದರು. |
೨೮ |
ಬಡವರ ಗೋಳಾಟ ದೇವರಿಗೆ ಮುಟ್ಟುವಂತೆ ಮಾಡಿದ್ದರು ದಿಕ್ಕಿಲ್ಲದವರ ಗೋಗರೆತ ಆತನ ಕಿವಿಗೆ ಬೀಳುವಂತೆ ಮಾಡಿದ್ದರು. |
೨೯ |
ವ್ಯಕ್ತಿಯಾಗಿರಲಿ, ರಾಷ್ಟ್ರವಾಗಿರಲಿ, ಯಾರಾಗಿದ್ದರೇನು? ದೇವರು ಸುಮ್ಮನಿದ್ದರೆ ತಪ್ಪುಹೊರಿಸುವವರಾರು? ವಿಮುಖನಾದರೆ ಆತನ ದರ್ಶನ ಪಡೆಯಬಲ್ಲವರಾರು? |
೩೦ |
ಭಕ್ತಿಹೀನನು ಜನರನು ಆಳಬಾರದು ಅಂಥವನು ಜನರಿಗೆ ಉರುಲಾಗಬಾರದು. |
೩೧ |
ಅಂಥ ಮನುಷ್ಯನು ದೇವರಿಗೆ: ‘ಪ್ರಾಯಶ್ಚಿತ್ತ ಮಾಡಿರುವೆ, ಇನ್ನು ಮುಂದೆ ಪಾಪಮಾಡೆ. |
೩೨ |
ಕಾಣದಿರುವ ಮಾರ್ಗವನ್ನು ತೋರೆನಗೆ ತಪ್ಪುಮಾಡಿದ್ದರೂ ಮತ್ತೆ ಮಾಡೆ’ ಎಂದು ಹೇಳಿದ್ದಾದರೆ, |
೩೩ |
ದೇವರು ಅಂಥವರನ್ನು ದಂಡಿಸಬೇಕೆನ್ನುತ್ತೀಯೋ? ಆತನ ತೀರ್ಪನ್ನು ನೀನೇ ಅಲ್ಲಗಳೆದಿರುವೆಯಲ್ಲವೆ? ಈಗ ನಾನು ಹೇಳಲಾರೆ, ನೀನೇ ಹೇಳು, ನಿನ್ನ ಅಭಿಪ್ರಾಯವನು ನಮಗೆ ತಿಳಿಸು. |
೩೪ |
ಬುದ್ದಿವಂತರು, ನನ್ನನಾಲಿಸಿದ ಜ್ಞಾನಿಗಳು ನಿನ್ನ ವಿಷಯವಾಗಿ ಹೇಳುವ ಮಾತುಗಳಿವು: |
೩೫ |
‘ಯೋಬನು ತಿಳುವಳಿಕೆಯಿಲ್ಲದೆ ನುಡಿದಿದ್ದಾನೆ ಅವನ ಮಾತುಗಳಲ್ಲಿ ಬುದ್ದಿವಂತಿಕೆ ಇಲ್ಲ. |
೩೬ |
ಅವನ ಪರಿಶೋಧನೆ ಇನ್ನೂ ಮುಂದುವರೆದರೆ ಒಳಿತು ಅವನು ಕೊಟ್ಟ ಉತ್ತರ ದುರುಳರಿಗೆ ತಕ್ಕುದಾದುದು. |
೩೭ |
ಅವನು ಅಪರಾಧಿ ಮಾತ್ರವಲ್ಲ, ದೇವದ್ರೋಹವೆಸಗಿದ್ದಾನೆ ನಮ್ಮ ಮಧ್ಯೆ ಸಂದೇಹವನು ಎಬ್ಬಿಸಿದ್ದಾನೆ ದೇವರಿಗೆ ವಿರುದ್ಧವಾಗಿ ಅಧಿಕ ಪ್ರಸಂಗಮಾಡುತ್ತಾನೆ’.”
|
Kannada Bible (KNCL) 2016 |
No Data |