೧ |
ಆಗ ಯೋಬನು ಹೀಗೆ ಉತ್ತರಕೊಟ್ಟನು: |
೨ |
“ನಿಶ್ಯಕ್ತನಿಗೆ ನಿನ್ನಿಂದ ಮಹದುಪಕಾರವಾಯಿತು ದುರ್ಬಲವಾದ ಕೈಗಳಿಗೆ ಮಹಾ ನೆರವು ದೊರಕಿತು! |
೩ |
ಮಂದಮತಿಯಾದವನಿಗೆ ಎಷ್ಟೋ ಬುದ್ಧಿ ಹೇಳಿರುವೆ ಸುಜ್ಞಾನವನ್ನು ಬಹಳವಾಗಿ ಬೋಧನೆಮಾಡಿರುವೆ! |
೪ |
ಆ ಮಾತುಗಳನ್ನು ನಿನಗೆ ಕಲಿಸಿದವರಾರು? ಈ ನುಡಿಗಳಿಂದ ನಿನ್ನನು ಪ್ರೇರೇಪಿಸಿದ ಪುಣ್ಯಾತ್ಮನಾರು? |
೫ |
ಬಿಲ್ದದನು: ಜಲಚರಗಳಿಂದ ತುಂಬಿದ ಸಾಗರದ ಕೆಳಗಿನ ಲೋಕದೊಳು (ದೇವರ ಭಯದಿಂದ) ಯಾತನೆಪಡುತ್ತಿವೆ ಪ್ರೇತಗಳು. |
೬ |
ಪಾತಾಳ ತೆರೆದಿದೆ ದೇವರ ದೃಷ್ಟಿಗೆ ಅಧೋಲೋಕ ಮರೆಯಾಗಿಲ್ಲ ಆತನಿಗೆ. |
೭ |
ಉತ್ತರ ದಿಕ್ಕನ್ನು ವಿಸ್ತರಿಸಿಹನು ಶೂನ್ಯದ ಮೇಲೆ ಭೂಮಂಡಲವನ್ನು ತೂಗುಹಾಕಿಹನು ಏನೂ ಇಲ್ಲದರ ಮೇಲೆ. |
೮ |
ಮೇಘಗಳನ್ನು ನೀರಿನಿಂದ ತುಂಬಿಸಿಹನು ಮೋಡ ಅದರ ಭಾರದಿಂದ ಒಡೆದುಹೋಗದು. |
೯ |
ಪೂರ್ಣಚಂದ್ರನನ್ನು ಮರೆಮಾಡುತ್ತಾನೆ ಅದರ ಮುಂದೆ ಮೋಡ ಕವಿಸುತ್ತಾನೆ. |
೧೦ |
ಬೆಳಕು-ಕತ್ತಲು ಸಂಧಿಸುವ ಸ್ಥಾನದಲಿ ಮೇರೆಹಾಕಿದ್ದಾನೆ ಸಮುದ್ರದ ಸುತ್ತಲಲಿ. |
೧೧ |
ಆಕಾಶಮಂಡಲದ ಸ್ತಂಭಗಳು ಕದಲುವುವು ಆತನ ಗದರಿಕೆಗೆ ಅವುಗಳು ಬೆರಗಾಗುವುವು. |
೧೨ |
ಸಮುದ್ರವನು ಭೇದಿಸುತ್ತಾನೆ ಪರಾಕ್ರಮದಿಂದ ಘಟಸರ್ಪವನೂ ಹೊಡೆದು ಹಾಕುತ್ತಾನೆ ವಿವೇಕಶಕ್ತಿಯಿಂದ. |
೧೩ |
ಆತನ ಶ್ವಾಸ ಶುಭ್ರವಾಗಿಸುತ್ತದೆ ಆಕಾಶಮಂಡಲವನು ಆತನ ಹಸ್ತ ಇರಿಯುತ್ತದೆ ಹರಿದೋಡುವ ಸರ್ಪವನು. |
೧೪ |
ದೇವರ ಅದ್ಭುತಗಳಲ್ಲಿ ಇವು ಕೆಲವು ಮಾತ್ರ ಆತನ ಬಗ್ಗೆ ನಾವು ಕೇಳಿರುವುದು ಕಿಂಚಿತ್ತು ಮಾತ್ರ ಆತನ ಘನ ಗರ್ಜನೆಯ ಪ್ರಾಬಲ್ಯವನ್ನು ಗ್ರಹಿಸಲು ಯಾರಿಂದ ಸಾಧ್ಯ?”
|
Kannada Bible (KNCL) 2016 |
No Data |