೧ |
ಬಳಿಕ ಶೂಹ್ಯನಾದ ಬಿಲ್ದದನು ಹೀಗೆಂದನು: |
೨ |
“ದೇವರು ಮಹೋನ್ನತ ಪ್ರಭು; ಭಯಭಕ್ತಿಗೆ ಪಾತ್ರನು ಉನ್ನತಲೋಕದಲ್ಲಿ ಶಾಂತಿಸಮಾಧಾನವನು ಸ್ಥಾಪಿಸಿಹನು. |
೩ |
ಲೆಕ್ಕವಿದೆಯೇ ಆತನ ಸೇನೆಗಳಿಗೆ? ಆತನ ತೇಜಸ್ಸು ಮೂಡದಿರುವುದು ಯಾರಿಗೆ? |
೪ |
ನರನು ದೇವರ ದೃಷ್ಟಿಯಲ್ಲಿ ಸಜ್ಜನನಾಗಿರಲು ಸಾಧ್ಯವೆ? ಸ್ತ್ರೀಯರಲ್ಲಿ ಹುಟ್ಟಿದವನು ಪರಿಶುದ್ಧನಾಗಿರುವುದು ಶಕ್ಯವೆ? |
೫ |
ಆತನ ದೃಷ್ಟಿಗೆ ಚಂದ್ರನೂ ಕಾಂತಿಯುತನಲ್ಲ ನಕ್ಷತ್ರಗಳೂ ನಿರ್ಮಲವಾದವುಗಳಲ್ಲ. |
೬ |
ಇಂತಿರಲು ಹುಳುವಿನಂಥ ನರನು ಏತರವನು? ಕ್ರಿಮಿಯಂಥ ನರನು ಎಷ್ಟುಮಾತ್ರದವನು?”
|
Kannada Bible (KNCL) 2016 |
No Data |