A A A A A
×

ಕನ್ನಡ ಬೈಬಲ್ (KNCL) 2016

ಯೋಬನ ೨೦

ಬಳಿಕ ನಾಮಾಥ್ಯನಾದ ಚೋಫರನು ಹೀಗೆಂದನು:
“ನಿನಗೆ ಉತ್ತರಕೊಡಲು ನಾನು ತವಕಪಡುತ್ತಿರುವೆ ನನ್ನ ನೊಂದ ಮನ ನನಗೆ ಪ್ರತ್ಯುತ್ತರ ಹೇಳಿಕೊಡುತ್ತದೆ:
ನನಗೆ ಅವಮಾನ ತರುವ ನಿನ್ನ ಖಂಡನೆಯನು ಕೇಳಿದ್ದೇನೆ ನನ್ನ ಮನ ತನ್ನ ವಿವೇಚನೆ ಕಲಿಸಿದ ಉತ್ತರವನು ತಿಳಿಸುತ್ತಿದೆ.
ಆದಿಯಿಂದಲೆ, ನರನನ್ನು ಧರೆಯಮೇಲೆ ಇರಿಸಿದಂದಿನಿಂದಲೆ, ನಡೆದುಬರುತ್ತಿರುವ ಈ ವಿಷಯ ನಿನಗೆ ತಿಳಿಯದೆ?
ದುಷ್ಟನ ಜಯಘೋಷ ಅಲ್ಪಕಾಲದ್ದು ಭ್ರಷ್ಟನ ಉಲ್ಲಾಸ ಕ್ಷಣಿಕವಾದದ್ದು.
ಅವನ ಪ್ರತಿಷ್ಠೆ ಆಕಾಶಕ್ಕೆ ಏರಿದರೂ ಅವನ ತಲೆ ಮೋಡಗಳನು ಮುಟ್ಟಿದರೂ,
ತನ್ನ ಮಲದ ಹಾಗೆ ನಿತ್ಯಕ್ಕು ಅವನು ನಶಿಸಿಹೋಗುವನು ಅವನನು ಅರಿತವರೆಲ್ಲರೂ “ಅವನೆಲ್ಲಿಯೋ!’ ಎಂದು ಹೇಳುವರು.
ಸ್ವಪ್ನದಂತೆ ಅವನು ಸಿಗದೆ ಹಾರಿಹೋಗುವನು ರಾತ್ರಿಯ ಕನಸಿನಂತೆ ಓಡಿಹೋಗುವನು.
ಕಂಡವನ ಕಣ್ಣಿಗೆ ಅವನು ಮತ್ತೆ ಕಾಣಿಸನು ಅವನ ನಿವಾಸ ಮತ್ತೆ ಅವನನು ನೋಡದು.
೧೦
ಅವನ ಮಕ್ಕಳು ಬಡವರಿಗೆ ಪರಿಹಾರವನು ತೆರುವರು ಅವನ ಕೈಗಳೆ ಅವನಾಸ್ತಿಯನು ಹಿಂತಿರುಗಿಸಬೇಕಾಗುವುದು.
೧೧
ಯೌವನ ಅವನ ದೇಹದಲ್ಲಿ ತುಂಬಿತ್ತು ಅದು ಕೂಡ ಅವನ ಸಮೇತ ಧೂಳಿನಲಿ ಮಲಗುವುದು.
೧೨
ಕೆಡಕುತನ ಸಿಹಿಯಾಗಿತ್ತು ಅವನ ಬಾಯಿಗೆ ಬಚ್ಚಿಟ್ಟುಕೊಂಡಿದ್ದನು ಅದನ್ನು ನಾಲಿಗೆ ಕೆಳಗೆ.
೧೩
ಅದನ್ನು ಬಿಟ್ಟುಕೊಡಲು ಅವನಿಗೆ ಇಷ್ಟವಿಲ್ಲ ಬಾಯಲ್ಲೇ ಇಟ್ಟುಕೊಳ್ಳುತ್ತಾನೆ ಚಪ್ಪರಿಸುತ್ತಾ.
೧೪
ಆದರೆ ಆ ತಿಂಡಿ ತಿಂದ ಮೇಲೆ ಮಾರ್ಪಡುವುದು ಅವನ ಕರುಳೊಳಗೆ ನಾಗರವಿಷವಾಗುವುದು.
೧೫
ನುಂಗಿದ ಗಂಟನು ಅವನು ಹೊರಗೆ ಕಕ್ಕುವನು ಹೊಟ್ಟೆಯಿಂದ ದೇವರು ಅದನು ಹೊರಡಿಸುವನು.
೧೬
ಅವನು ಹೀರುವುದು ನಾಗರವಿಷವನು ಸರ್ಪದ ನಾಲಿಗೆ ಕೊಲ್ಲುವುದು ಅವನನು.
೧೭
ಅವನು ನೋಡನು ಎಣ್ಣೆ ಹರಿವ ಕಾಲುವೆಗಳನು ಜೇನು ಹಾಲು ತುಂಬಿ ಹರಿವ ನದಿಗಳನು.
೧೮
ತಾನು ದುಡಿದು ಗಳಿಸಿದ್ದನ್ನು ತಿಂದು ಅನುಭವಿಸಲಾರನು ಅದು ಪರರ ಪಾಲಾಗುವುದು ವ್ಯಾಪಾರದಿಂದ ಬಂದ ವರಮಾನ ಅವನಿಗೆ ಆನಂದ ತರದು.
೧೯
ಏಕೆಂದರೆ ಬಡವರನು ತುಳಿದು ತೊರೆದುಬಿಟ್ಟ ತಾನು ಕಟ್ಟದ ಮನೆಯನು ಕಿತ್ತುಕೊಂಡುಬಿಟ್ಟ.
೨೦
ಅವನ ಆಕಾಂಕ್ಷೆಗೆ ತೃಪ್ತಿಯೇ ಇಲ್ಲ ಅವನ ಸಿರಿಸಂಪತ್ತು ಅವನನ್ನು ರಕ್ಷಿಸುವುದಿಲ್ಲ.
೨೧
ಏನನ್ನೂ ಬಿಡದೆ ಕಬಳಿಸಿದ ಅವನ ಸಂತಾನಕ್ಕೆ ಉಳಿಗಾಲವಿಲ್ಲ.
೨೨
ಸಮೃದ್ಧಿಯಿಂದಿರುವಾಗಲೇ ಕೊರತೆ ಅವನನ್ನು ಕಾಡುವುದು ಶ್ರಮಜೀವಿಗಳೆಲ್ಲರ ಕೈ ಅವನ ಮೇಲೆ ಎರಗುವುದು.
೨೩
ಅವನು ಹೊಟ್ಟೆಯನು ತುಂಬಿಸಿಕೊಳ್ಳುವಾಗಲೇ ದೇವರು ಸುರಿಸುವರು ಕೋಪಾಗ್ನಿಯನು ಆಹಾರದಂತೆ.
೨೪
ಕಬ್ಬಿಣದ ಆಯುಧಕ್ಕೆ ಹೆದರಿ ಓಡಿದ ಆದರೆ ಅವನನು ಇರಿಯಿತು ಕಂಚಿನ ಬಾಣ.
೨೫
ಆ ಬಾಣವನು ಕೀಳಲು ಅದು ಹೊರಬಂತು ಅವನ ಬೆನ್ನಿನಿಂದ ಅದರ ಮಿಂಚುಮೊನೆ ಆಚೆಬಂತು ಅವನ ಪಿತ್ತಕೋಶದಿಂದ ಅವನನು ಆವರಿಸಿಕೊಂಡಿತು ಭಯಭ್ರಾಂತ.
೨೬
ಅವನ ನಿಧಿನಿಕ್ಷೇಪಕ್ಕಾಗಿ ಕಾರಿರುಳು ಕಾದಿದೆ ಯಾರೂ ಹೊತ್ತಿಸದ ಬೆಂಕಿ ಅವನನು ಕಬಳಿಸಲಿದೆ ಅವನ ಗುಡಾರದಲಿ ಉಳಿದದ್ದೆಲ್ಲ ನಾಶವಾಗಲಿದೆ.
೨೭
ಆಕಾಶವೇ ಅವನ ದೋಷವನು ಪ್ರಕಟಿಸುವುದು ಭೂಲೋಕವೇ ಅವನ ವಿರುದ್ಧ ಸಾಕ್ಷಿನಿಲ್ಲುವುದು.
೨೮
ಅವನ ಮನೆಯ ಧನಧಾನ್ಯ ಹಾಳಾಗುವುದು ದೇವರ ಸಿಟ್ಟಿನಾದಿನ ನೀರುಪಾಲಾಗುವುದು.
೨೯
ಇದುವೆ ದುರುಳನಿಗೆ ದೇವರು ವಿಧಿಸುವ ಭಾಗ್ಯ ದೇವರಿಂದ ಅವನಿಗೆ ನೇಮಿಸಲಾಗಿರುವ ಸ್ವಾಸ್ತ್ಯ.”
ಯೋಬನ ೨೦:1
ಯೋಬನ ೨೦:2
ಯೋಬನ ೨೦:3
ಯೋಬನ ೨೦:4
ಯೋಬನ ೨೦:5
ಯೋಬನ ೨೦:6
ಯೋಬನ ೨೦:7
ಯೋಬನ ೨೦:8
ಯೋಬನ ೨೦:9
ಯೋಬನ ೨೦:10
ಯೋಬನ ೨೦:11
ಯೋಬನ ೨೦:12
ಯೋಬನ ೨೦:13
ಯೋಬನ ೨೦:14
ಯೋಬನ ೨೦:15
ಯೋಬನ ೨೦:16
ಯೋಬನ ೨೦:17
ಯೋಬನ ೨೦:18
ಯೋಬನ ೨೦:19
ಯೋಬನ ೨೦:20
ಯೋಬನ ೨೦:21
ಯೋಬನ ೨೦:22
ಯೋಬನ ೨೦:23
ಯೋಬನ ೨೦:24
ಯೋಬನ ೨೦:25
ಯೋಬನ ೨೦:26
ಯೋಬನ ೨೦:27
ಯೋಬನ ೨೦:28
ಯೋಬನ ೨೦:29
ಯೋಬನ 1 / ಯೋ 1
ಯೋಬನ 2 / ಯೋ 2
ಯೋಬನ 3 / ಯೋ 3
ಯೋಬನ 4 / ಯೋ 4
ಯೋಬನ 5 / ಯೋ 5
ಯೋಬನ 6 / ಯೋ 6
ಯೋಬನ 7 / ಯೋ 7
ಯೋಬನ 8 / ಯೋ 8
ಯೋಬನ 9 / ಯೋ 9
ಯೋಬನ 10 / ಯೋ 10
ಯೋಬನ 11 / ಯೋ 11
ಯೋಬನ 12 / ಯೋ 12
ಯೋಬನ 13 / ಯೋ 13
ಯೋಬನ 14 / ಯೋ 14
ಯೋಬನ 15 / ಯೋ 15
ಯೋಬನ 16 / ಯೋ 16
ಯೋಬನ 17 / ಯೋ 17
ಯೋಬನ 18 / ಯೋ 18
ಯೋಬನ 19 / ಯೋ 19
ಯೋಬನ 20 / ಯೋ 20
ಯೋಬನ 21 / ಯೋ 21
ಯೋಬನ 22 / ಯೋ 22
ಯೋಬನ 23 / ಯೋ 23
ಯೋಬನ 24 / ಯೋ 24
ಯೋಬನ 25 / ಯೋ 25
ಯೋಬನ 26 / ಯೋ 26
ಯೋಬನ 27 / ಯೋ 27
ಯೋಬನ 28 / ಯೋ 28
ಯೋಬನ 29 / ಯೋ 29
ಯೋಬನ 30 / ಯೋ 30
ಯೋಬನ 31 / ಯೋ 31
ಯೋಬನ 32 / ಯೋ 32
ಯೋಬನ 33 / ಯೋ 33
ಯೋಬನ 34 / ಯೋ 34
ಯೋಬನ 35 / ಯೋ 35
ಯೋಬನ 36 / ಯೋ 36
ಯೋಬನ 37 / ಯೋ 37
ಯೋಬನ 38 / ಯೋ 38
ಯೋಬನ 39 / ಯೋ 39
ಯೋಬನ 40 / ಯೋ 40
ಯೋಬನ 41 / ಯೋ 41
ಯೋಬನ 42 / ಯೋ 42