೧ |
ಆಗ ನಾಮಾಥ್ಯನಾದ ಚೋಫರನು ಹೀಗೆಂದ: |
೨ |
“ಇಷ್ಟೆಲ್ಲ ಮಾತುಗಳಿಗೆ ತಕ್ಕ ಉತ್ತರ ಬೇಡವೆ? ಮಾತಿನಮಲ್ಲನು ನೀತಿವಂತ ಎನಿಸಿಕೊಳ್ಳುವನೆ? |
೩ |
ನಿನ್ನ ವಾಕ್ ಚಮತ್ಕಾರಕ್ಕೆ ಜನ ಬಾಯಿಮುಚ್ಚಿಕೊಳ್ಳಬೇಕೆ? ನಿನ್ನ ಕುಚೋದ್ಯಕ್ಕೆ ನಿನಗಾಗಬೇಡವೆ ನಾಚಿಕೆ? |
೪ |
ನೀನು ಹೇಳುವುದೇ ಸತ್ಯವೆಂದು ವಾದಿಸುತ್ತಿರುವೆ ದೇವರ ದೃಷ್ಟಿಯಲ್ಲಿ ನೀನು ಪರಿಶುದ್ಧನು ಎನ್ನುತ್ತಿರುವೆ. |
೫ |
ಆದರೆ ದೇವರೇ ಬಾಯ್ದೆರೆದು ನಿನಗೆ ವಿರುದ್ಧ ಮಾತನಾಡಿದರೆ ಒಳಿತು! |
೬ |
ಜ್ಞಾನದ ರಹಸ್ಯಗಳನು ದೇವರೇ ನಿನಗೆ ತಿಳಿಸಲಿ ಸುಜ್ಞಾನ ಬಹುಮುಖವಾದುದೆಂದು ಆತನೇ ತೋರಿಸಲಿ ನಿನ್ನ ದೋಷಗಳನ್ನೆಲ್ಲ ಆತ ಲಕ್ಷಿಸಿಲ್ಲ ಎಂಬುದು ನಿನಗೆ ತಿಳಿದಿರಲಿ. |
೭ |
ನೀನು ಕಂಡುಕೊಳ್ಳಬಲ್ಲೆಯಾ ದೇವರ ಅಂತರಾಳವನ್ನು? ಗ್ರಹಿಸಿಕೊಳ್ಳಬಲ್ಲೆಯಾ ಸರ್ವಶಕ್ತನ ಇತಿಮಿತಿಯನ್ನು? |
೮ |
ಅದು ಆಕಾಶಕ್ಕಿಂತಲೂ ಎತ್ತರ; ನಿನ್ನಿಂದೇನು ಮಾಡಲು ಸಾಧ್ಯ? ಅದು ಪಾತಾಳಕ್ಕಿಂತಲೂ ಆಳ; ನಿನ್ನಿಂದ ಹೇಗೆ ತಿಳಿಯಲು ಸಾಧ್ಯ? |
೯ |
ಅದು ಭೂಮಿಗಿಂತಲು ಉದ್ದ ಸಮುದ್ರಕ್ಕಿಂತಲು ಅಗಲ. |
೧೦ |
ಆತ ಹಾದುಹೋದರೂ ಸೆರೆಹಿಡಿದರೂ ನ್ಯಾಯಾಲಯಕ್ಕೆ ಎಳೆದರೂ ತಡೆವರಾರು? |
೧೧ |
ಆತ ದುರುಳರನು ಗುರುತು ಹಚ್ಚುತ್ತಾನೆ ನೆರವಿಲ್ಲದೆ ಅಕ್ರಮವನು ಕಂಡುಹಿಡಿಯುತ್ತಾನೆ. |
೧೨ |
ಕಾಡುಕತ್ತೆಮರಿ ನರಜನ್ಮ ತಾಳಿದಾಗ ಪೆದ್ದ ಮಾನವ ಬುದ್ಧಿವಂತನಾದ! |
೧೩ |
ಸರಿಪಡಿಸಿಕೋ ನಿನ್ನ ಅಂತರಂಗವನ್ನು ದೇವರತ್ತ ಎತ್ತು ನಿನ್ನ ಕರಗಳನ್ನು. |
೧೪ |
ನಿನ್ನ ಕೈಯಿಂದ ದೂರವಿರಲಿ ಅಕ್ರಮ ನಿನ್ನ ಗುಡಾರದಲಿ ನೆಲಸದಿರಲಿ ಅನ್ಯಾಯ. |
೧೫ |
ಆಗ ಮಾತ್ರ ನೀನು ತಲೆಯೆತ್ತಬಲ್ಲೆ ಗೌರವದಿಂದ ಸ್ಥಿರಚಿತ್ತನಾಗಿರಬಲ್ಲೆ ನಿರ್ಭಯದಿಂದ. |
೧೬ |
ಮರೆತುಬಿಡುವೆ ಆಗ ನಿನ್ನ ಕಷ್ಟದುಃಖವನ್ನು ನಿನ್ನ ನೆನಪಿಗೆ ಅದು ಹರಿದುಹೋದ ನೀರು. |
೧೭ |
ಆಗ ನಿನ್ನ ಬಾಳು ನಡುಹಗಲಿಗಿಂತ ಪ್ರಜ್ವಲ ಕತ್ತಲು ಕೂಡ ಪ್ರಾತಃಕಾಲದಂತೆ ಉಜ್ವಲ! |
೧೮ |
ನಂಬಿಕೆಯಿಂದಿರುವುದರಿಂದ ಧೈರ್ಯದಿಂದಿರುವೆ ಸುತ್ತಲು ಸುರಕ್ಷಿತನಾಗಿ ನೆಮ್ಮದಿಯಿಂದ ಮಲಗುವೆ. |
೧೯ |
ಆಗ ನೀನು ವಿಶ್ರಮಿಸುವೆ ಹೆದರಿಕೆಯಿಲ್ಲದೆ ಅನೇಕರಿಗೆ ಬೇಕಾಗುವುದು ನಿನ್ನ ಮುಖಪ್ರಸನ್ನತೆ. |
೨೦ |
ದುರ್ಜನರು ನಿರಾಶೆಯಿಂದ ಕಂಗೆಡುವರು ಪ್ರಾಣಬಿಡಬೇಕೆಂಬುದೇ ಅವರ ಆಶೆಯಾಗಿರುವುದು.”
|
Kannada Bible (KNCL) 2016 |
No Data |
|
|
|
|
|
|
|
|
|
|
ಯೋಬನ ೧೧:1 |
ಯೋಬನ ೧೧:2 |
ಯೋಬನ ೧೧:3 |
ಯೋಬನ ೧೧:4 |
ಯೋಬನ ೧೧:5 |
ಯೋಬನ ೧೧:6 |
ಯೋಬನ ೧೧:7 |
ಯೋಬನ ೧೧:8 |
ಯೋಬನ ೧೧:9 |
ಯೋಬನ ೧೧:10 |
ಯೋಬನ ೧೧:11 |
ಯೋಬನ ೧೧:12 |
ಯೋಬನ ೧೧:13 |
ಯೋಬನ ೧೧:14 |
ಯೋಬನ ೧೧:15 |
ಯೋಬನ ೧೧:16 |
ಯೋಬನ ೧೧:17 |
ಯೋಬನ ೧೧:18 |
ಯೋಬನ ೧೧:19 |
ಯೋಬನ ೧೧:20 |
|
|
|
|
|
|
ಯೋಬನ 1 / ಯೋ 1 |
ಯೋಬನ 2 / ಯೋ 2 |
ಯೋಬನ 3 / ಯೋ 3 |
ಯೋಬನ 4 / ಯೋ 4 |
ಯೋಬನ 5 / ಯೋ 5 |
ಯೋಬನ 6 / ಯೋ 6 |
ಯೋಬನ 7 / ಯೋ 7 |
ಯೋಬನ 8 / ಯೋ 8 |
ಯೋಬನ 9 / ಯೋ 9 |
ಯೋಬನ 10 / ಯೋ 10 |
ಯೋಬನ 11 / ಯೋ 11 |
ಯೋಬನ 12 / ಯೋ 12 |
ಯೋಬನ 13 / ಯೋ 13 |
ಯೋಬನ 14 / ಯೋ 14 |
ಯೋಬನ 15 / ಯೋ 15 |
ಯೋಬನ 16 / ಯೋ 16 |
ಯೋಬನ 17 / ಯೋ 17 |
ಯೋಬನ 18 / ಯೋ 18 |
ಯೋಬನ 19 / ಯೋ 19 |
ಯೋಬನ 20 / ಯೋ 20 |
ಯೋಬನ 21 / ಯೋ 21 |
ಯೋಬನ 22 / ಯೋ 22 |
ಯೋಬನ 23 / ಯೋ 23 |
ಯೋಬನ 24 / ಯೋ 24 |
ಯೋಬನ 25 / ಯೋ 25 |
ಯೋಬನ 26 / ಯೋ 26 |
ಯೋಬನ 27 / ಯೋ 27 |
ಯೋಬನ 28 / ಯೋ 28 |
ಯೋಬನ 29 / ಯೋ 29 |
ಯೋಬನ 30 / ಯೋ 30 |
ಯೋಬನ 31 / ಯೋ 31 |
ಯೋಬನ 32 / ಯೋ 32 |
ಯೋಬನ 33 / ಯೋ 33 |
ಯೋಬನ 34 / ಯೋ 34 |
ಯೋಬನ 35 / ಯೋ 35 |
ಯೋಬನ 36 / ಯೋ 36 |
ಯೋಬನ 37 / ಯೋ 37 |
ಯೋಬನ 38 / ಯೋ 38 |
ಯೋಬನ 39 / ಯೋ 39 |
ಯೋಬನ 40 / ಯೋ 40 |
ಯೋಬನ 41 / ಯೋ 41 |
ಯೋಬನ 42 / ಯೋ 42 |