೧ |
ಅರಸ ಅಹಷ್ವೇರೋಷನು ತನ್ನ ರಾಜ್ಯಕ್ಕೆ ಸೇರಿದ ಎಲ್ಲಾ ದೇಶಗಳ ಮೇಲೂ ಸಮುದ್ರ-ದ್ವೀಪಗಳ ಮೇಲೂ ತೆರಿಗೆಯನ್ನು ವಿಧಿಸಿದನು. |
೨ |
ಅವನ ಶಕ್ತಿಸಾಮರ್ಥ್ಯದ ಸಾಹಸಕಾರ್ಯಗಳೆಲ್ಲವು ಹಾಗೂ ಅರಸನು ಮೊರ್ದೆಕೈಯನ್ನು ಅತ್ಯುನ್ನತ ಗೌರವಸ್ಥಾನಕ್ಕೆ ಏರಿಸಿದ್ದನ್ನು ಕುರಿತ ಪೂರ್ಣ ವಿವರವು ಮೇದ್ಯ ಮತ್ತು ಪರ್ಷಿಯ ದೇಶಗಳ ಅರಸರ ವೃತ್ತಾಂತಗ್ರಂಥದಲ್ಲಿ ಬರೆಯಲಾಗಿವೆ. |
೩ |
ಯೆಹೂದ್ಯನಾದ ಮೊರ್ದೆಕೈಯಾದರೋ ಅರಸ ಅಹಷ್ವೇರೋಷನಿಗೆ ದ್ವಿತೀಯಸ್ಥಾನದವನೂ ಯೆಹೂದ್ಯರಲ್ಲಿ ಸನ್ಮಾನಿತನೂ ತನ್ನ ಬಂಧುಬಳಗದವರಲ್ಲಿ ಪ್ರೀತಿಪಾತ್ರನೂ ಸ್ವಜನರ ಹಿತಚಿಂತಕನೂ ಸ್ವಕುಲದವರೆಲ್ಲರಿಗೆ ಶಾಂತಿದೂತನೂ ಆಗಿದ್ದನು.
|
Kannada Bible (KNCL) 2016 |
No Data |