೧ |
ಶೆಯಲ್ತೀಯೇಲನ ಮಗ ಜೆರುಬ್ಬಾಬೆಲ್ ಹಾಗು ಯೇಷೂವ ಇವರೊಡನೆ ಜುದೇಯ ನಾಡಿಗೆ ಹಿಂದಿರುಗಿ ಬಂದ ಯಾಜಕರು ಮತ್ತು ಲೇವಿಯರ ಪಟ್ಟಿ: ಯಾಜಕರು - |
೨ |
ಸೆರಾಯ, ಯೆರೆಮೀಯ, ಎಜ್ರ, ಅಮರ್ಯ, |
೩ |
ಮಲ್ಲೂಕ್, ಹಟ್ಟೂಷ್, ಶೆಕನ್ಯ, ರೆಹುಮ್, ಮೆರೇಮೋತ್, ಇದ್ದೋ, |
೪ |
ಗಿನ್ನೆತೋನ್, ಅಬೇಯ, |
೫ |
ಮಿಯ್ಯಾಮೀನ್, ಮಾದ್ಯ, ಬಿಲ್ಗ, ಶೆಮಾಯ, |
೬ |
*** |
೭ |
ಯೋಯಾರೀಬ್, ಯೆದಾಯ, ಸಲ್ಲೂ, ಆಮೋಕ್, ಹಿಲ್ಕೀಯ, ಯೆದಾಯ. ಇವರು ಯೇಷೂವನ ಕಾಲದಲ್ಲಿ ಯಾಜಕರ ಮತ್ತು ಅವರ ಬಂಧುಗಳ ಮುಖಂಡರಾಗಿದ್ದರು. |
೮ |
ಲೇವಿಯರು - ಯೇಷೂವ, ಬೆನ್ನೂಯ್, ಕದ್ಮೀಯೇಲ್, ಶೇರೇಬ್ಯ, ಯೆಹೂದ್ಯ, ಮತ್ತನ್ಯ ಇವರು. ಮತ್ತನ್ಯನೂ ಅವನ ಸಹೋದರರೂ ಕೃತಜ್ಞತಾಭಜನ ನಾಯಕರು. |
೯ |
ಇವರ ಸಹೋದರರಾದ ಬಕ್ಬುಕ್ಯ, ಉನ್ನೀ ಎಂಬವರು ಭಜನ ಸೇವೆಯಲ್ಲಿ ಇವರೆದುರಿಗೆ ನಿಂತು ಹಾಡುವವರು. |
೧೦ |
ಯೇಷೂವನಿಗೆ ಯೋಯಾಕೀಮನು, ಯೋಯಾಕೀಮನಿಗೆ ಎಲ್ಯಾಷೀಬನು, ಎಲ್ಯಾಷೀಬನಿಗೆ ಯೋಯಾದನು, |
೧೧ |
ಯೋಯಾದನಿಗೆ ಯೋನಾತಾನನು, ಯೋನಾತಾನನಿಗೆ ಯದ್ದೂವನು ಹುಟ್ಟಿದರು. |
೧೨ |
ಯೋಯಾಕೀಮನ ಕಾಲದಲ್ಲಿ ಯಾಜಕರಾಗಿದ್ದ ಗೋತ್ರಪ್ರಧಾನರು - [ಯಾಜಕ] — [ಗೋತ್ರ] ಮೆರಾಯ — ಸೆರಾಯ ಹನನ್ಯ — ಯೆರೆಮೀಯ ಮೆಷುಲ್ಲಾಮ್ — ಎಜ್ರ ಯೆಹೋಹಾನಾನ್ — ಅಮರ್ಯ ಯೋನಾತಾನ್ — ಮಲ್ಲೂಕಿ ಜೋಸೇಫ್ — ಶೆಬನ್ಯ ಅದ್ನ — ಹಾರಿಮ ಹೆಲ್ಕೈ — ಮೆರಾಯೋತ ಜಕರ್ಯ — ಇದ್ದೋ ಮೆಷುಲ್ಲಾಮ್ — ಗಿನ್ನೆತೋನ ಜೆಕ್ರೀ — ಅಬೀಯ ಪಿಲ್ಟೈ — ಮಿನ್ಯಾಮೀನ್ ಮತ್ತು ಮೋವದ್ಯ ಶಮ್ಮೂವ — ಬಿಲ್ಗಾ ಯೆಹೋನಾತಾನ್ — ಶೆಮಾಯ ಮತ್ತೆನೈ — ಯೋಯಾರೀಬ ಉಜ್ಜೀ — ಯೆದಾಯ ಕಲ್ಲೈ — ಸಲ್ಲೈ ಏಬೆರ್ — ಆಮೋಕ ಹಷಬ್ಯ — ಹಿಲ್ಕೀಯ ನೆತನೇಲ್ — ಯೆದಾಯ |
೧೩ |
*** |
೧೪ |
*** |
೧೫ |
*** |
೧೬ |
*** |
೧೭ |
*** |
೧೮ |
*** |
೧೯ |
*** |
೨೦ |
*** |
೨೧ |
*** |
೨೨ |
ಎಲ್ಯಾಷೀಬ್, ಯೋಯಾದ, ಯೋಹಾನಾನ್, ಯದ್ದೂವ ಇವರ ಕಾಲಗಳಲ್ಲಿದ್ದ ಲೇವಿಯ ಗೋತ್ರಪ್ರಧಾನರ ಪಟ್ಟಿ ಹಾಗು ಪರ್ಷಿಯಾದ ದಾರ್ಯಾವೆಷ ರಾಜನ ಆಳ್ವಿಕೆಯವರೆಗಿದ್ದ ಯಾಜಕರ ಪಟ್ಟಿಯೂ ಇದೆ. |
೨೩ |
ಎಲ್ಯಾಷೀಬನ ಮೊಮ್ಮಗನಾದ ಯೋಹಾನಾನನ ಕಾಲದ ಲೇವಿಯ ಗೋತ್ರಪ್ರಧಾನರ ಪಟ್ಟಿಯು ಪೂರ್ವಕಾಲದ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತದೆ. |
೨೪ |
ಈ ಲೇವಿ ಗೋತ್ರಪ್ರಧಾನರಲ್ಲಿ ಯೇಷೂವನ ಮಗನೂ ಯೋಚಾದಾಕನ ಮೊಮ್ಮಗನೂ ಆದ ಯೋಯಾಕೀಮ್, ರಾಜ್ಯಪಾಲನಾದ ನೆಹೆಮೀಯ, ಯಾಜಕನೂ ಧರ್ಮೋಪದೇಶಕನೂ ಆದ ಎಜ್ರ |
೨೫ |
ಇವರ ಕಾಲದಲ್ಲಿದ್ದವರು - ಹಷಬ್ಯ, ಶೇರೇಬ್ಯ, ಯೇಷೂವ, ಬಿನ್ನೂಯ್, ಕದ್ಮೀಯೇಲ್ ಇವರು.ದೈವಪುರುಷ ದಾವೀದನ ಅಪ್ಪಣೆಯ ಮೇರೆಗೆ ಇವರೂ ಇವರ ಸಹೋದರರೂ ಸರದಿಗೆ ಎರಡೆರಡು ವರ್ಗಗಳಾಗಿ ಪರಸ್ಪರ ಹಾಡುತ್ತಾ ಕೀರ್ತನೆಯನ್ನೂ ಕೃತಜ್ಞತಾಸ್ತುತಿಯನ್ನೂ ಮಾಡುತ್ತಿದ್ದರು. |
೨೬ |
ಇವರಲ್ಲದೆ ಬಾಗಿಲುಗಳ ಬಳಿಯಲ್ಲಿದ್ದ ಉಗ್ರಾಣಗಳನ್ನು ಕಾಯತಕ್ಕ ದ್ವಾರಪಾಲಕರಾದ ಮತ್ತನ್ಯ, ಬಕ್ಬುಕ್ಯ, ಓಬದ್ಯ, ಮೆಷುಲ್ಲಾಮ್, ಟಲ್ಮೋನ್, ಅಕ್ಕೂಬ್ ಎಂಬವರು. |
೨೭ |
ಜೆರುಸಲೇಮಿನ ಗೋಡೆಯನ್ನು ಪ್ರತಿಷ್ಠಿಸುವ ಸಮಯ ಬಂದಾಗ, ಆಯಾ ಸ್ಥಳಗಳಲ್ಲಿದ್ದ ಲೇವಿಯರನ್ನು ಕೀರ್ತನಗಾಯನಗಳಿಂದಲೂ ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದಲೂ ಪ್ರತಿಷ್ಠೆಯ ಉತ್ಸವವನ್ನು ಆಚರಿಸುವುದಕ್ಕಾಗಿ ಜೆರುಸಲೇಮಿಗೆ ಕರೆಯಿಸಲಾಯಿತು. |
೨೮ |
ಆಗ ಜೆರುಸಲೇಮಿನ ಸುತ್ತಣ ಪ್ರಾಂತ್ಯಗಳಲ್ಲಿ ತಮಗಾಗಿ ಹಳ್ಳಿಗಳನ್ನು ಕಟ್ಟಿಕೊಂಡಿದ್ದ ಗಾಯಕಮಂಡಲಿಯವರು ಜೋರ್ಡನ್ ನದಿಯ ತಗ್ಗು, ಜೆರುಸಲೇಮಿನ ಸುತ್ತಣಪ್ರದೇಶ, ನೆಟೋಫಾತ್ಯರ ಗ್ರಾಮ |
೨೯ |
ಬೇತ್ಹಗಿಲ್ಗಾಲ್, ಗೆಬ ಮತ್ತು ಅಜ್ಮಾವೇತ್ ಊರುಗಳಿಗೆ ಸೇರಿರುವ ಹಳ್ಳಿಗಳು. ಇವುಗಳಿಂದ ಕೂಡಿಬಂದರು. |
೩೦ |
ಯಾಜಕರೂ ಲೇವಿಯರೂ ತಮ್ಮನ್ನು ಶುದ್ಧಿಪಡಿಸಿಕೊಂಡ ಮೇಲೆ ಜನರನ್ನೂ ಊರುಬಾಗಿಲುಗಳನ್ನೂ ಗೋಡೆಯನ್ನೂ ಶುದ್ಧಪಡಿಸಿದರು. |
೩೧ |
ಆಮೇಲೆ ನಾನು ಯೆಹೂದ ಪ್ರಮುಖರನ್ನು ಗೋಡೆಯ ಮೇಲೆ ಕರೆದುಕೊಂಡು ಬಂದೆ; ಭಜನೆ ಮಂಡಲಿಯವರಿಗೆ, “ಎರಡು ದೊಡ್ಡ ಗುಂಪುಗಳಾಗಿ ಇಲ್ಲಿ ನಿಲ್ಲಿ,” ಎಂದು ಅಪ್ಪಣೆಮಾಡಿದೆ. ಒಂದು ಗುಂಪಿನವರು ಮೆರವಣಿಗೆಯಿಂದ ಗೋಡೆಯ ಮೇಲೆ ತಿಪ್ಪೆಬಾಗಿಲಿನಿಂದ ಬಲಗಡೆಗೆ ಹೋದರು. |
೩೨ |
ಅವರ ಹಿಂದೆ ಯೆಹೂದ ಪ್ರಮುಖರು ಅರ್ಧಜನರೊಡನೆ ಹೋದರು; ಹೋಷಾಯನು |
೩೩ |
ತುತೂರಿ ಹಿಡಿದಿರುವ ಯಾಜಕರೊಡನೆ |
೩೪ |
ಅಜರ್ಯ, ಎಜ್ರ, ಮೆಷುಲ್ಲಾಮ್, ಯೆಹೂದ್ಯ, ಬೆನ್ಯಾಮೀನ್, ಶೆಮಾಯ, ಯೆರೆಮೀಯ ಎಂಬವರು ಹೋದರು. |
೩೫ |
ಅವರೊಂದಿಗೆ ಆಸಾಫ್ ಸಂತಾನದ ಜಕ್ಕೂರನಿಗೆ ಹುಟ್ಟಿದ ಮೀಕಾಯನ ವಂಶದವನೂ ಮತ್ತನ್ಯನ ಮರಿಮಗನೂ ಶೆಮಾಯನ ಮೊಮ್ಮಗನೂ ಯೋನಾತಾನನ ಮಗನೂ ಆದ |
೩೬ |
ಜೆಕರ್ಯನೂ ದೈವಪುರುಷ ದಾವೀದನ ವಾದ್ಯಗಳನ್ನು ಹಿಡಿದಿದ್ದ. ಇವನ ಬಂಧುಗಳಾದ ಶೆಮಾಯ, ಅಜರೇಲ್, ಮಿಲಲೈ, ಗಿಲಾಲೈ, ಮಾಯೈ, ನೆತನೇಲ್, ಯೆಹೂದ, ಹನಾನೀ ಎಂಬವರೂ ಹೋದರು. ಧರ್ಮೋಪದೇಶಕನಾದ ಎಜ್ರನು ಇವರ ಮುಂದಾಳಾಗಿ ಇದ್ದನು. |
೩೭ |
ಇವರು ಬುಗ್ಗೆಬಾಗಿಲನ್ನು ಹಾದು ನೆಟ್ಟಗೆ ದಾವೀದನಗರದ ಸೋಪಾನಗಳ ಮಾರ್ಗವಾಗಿ ಗೋಡೆಯನ್ನನುಸರಿಸಿ, ಅರಮನೆಯ ಮೇಲಣ ದಿನ್ನೆಯನ್ನು ಹತ್ತಿ, ಪೂರ್ವದಿಕ್ಕಿನಲ್ಲಿರುವ ನೀರು ಬಾಗಿಲಿನವರೆಗೆ ಹೋದರು. |
೩೮ |
ಅವರನ್ನು ಎದುರುಗೊಳ್ಳುವ ಹಾಗೆ ಭಜನೆಮಂಡಲಿಯ ಎರಡನೆಯ ಗುಂಪಿನವರೂ ನಾನೂ ಉಳಿದ ಅರ್ಧಜನರೂ ಗೋಡೆಯ ಮೇಲೆ ಒಲೆಬುರುಜಿನಿಂದ ಅಗಲ ಗೋಡೆಯವರೆಗೂ |
೩೯ |
ಅಲ್ಲಿಂದ ಎಫ್ರಯಿಮ್ ಬಾಗಿಲು, ಯೆಷಾನಾ ಬಾಗಿಲು, ಮೀನು ಬಾಗಿಲು, ಹನನೇಲ್ ಬುರುಜು, ಹಮ್ಮೇಯಾ ಬುರುಜು ಇವುಗಳ ಮಾರ್ಗವಾಗಿ ಕುರಿಬಾಗಿಲಿನವರೆಗೂ ಹೋಗಿ ಸೆರೆಮನೆಯ ಬಾಗಿಲಿನ ಬಳಿಯಲ್ಲಿ ನಿಂತೆವು. |
೪೦ |
ಎರಡು ಭಜನೆಮಂಡಲಿಯ ಗುಂಪಿನವರೂ ನಾನು ನನ್ನ ಜೊತೆಯಲ್ಲಿದ್ದ ಅರ್ಧಮಂದಿ ಅಧಿಕಾರಿಗಳೂ |
೪೧ |
ತುತೂರಿ ಹಿಡಿದಿರುವ ಯಾಜಕರಾದ ಎಲ್ಯಾಕೀಮ್, ಮಾಸೇಯ, ಮಿನ್ಯಾಮೀನ್, ಮೀಕಾಯ, ಎಲ್ಯೋವೇನೈ, |
೪೨ |
ಜೆಕರ್ಯ, ಹನನ್ಯ ಇವರೂ, ಮಾಸೇಯ, ಶೆಮಾಯ, ಎಲ್ಲಾಜಾರ್, ಉಜ್ಜೀ, ಯೆಹೋ ಹಾನಾನ್, ಮಲ್ಕೀಯ, ಏಲಾಮ್, ಎಜೆರ್ ಎಂಬವರೂ ದೇವಾಲಯದ ಬಳಿಯಲ್ಲಿ ನಿಂತರು. ಗಾಯಕರು ಹಾಡತೊಡಗಿದರು. ಇಜ್ರಹ್ಯನು ಇವರ ನಾಯಕನಾಗಿದ್ದನು. |
೪೩ |
ದೇವರು ತಮಗೆ ವಿಶೇಷಾನಂದವನ್ನುಂಟು ಮಾಡಿದ್ದರಿಂದ ಜನರು ಆ ದಿನ ಅನೇಕ ಬಲಿದಾನಗಳನ್ನು ಸಮರ್ಪಿಸಿ ತಮ್ಮ ಮಡದಿಮಕ್ಕಳೊಡನೆ ಮಹೋತ್ಸವ ಮಾಡಿದರು. ಜೆರುಸಲೇಮಿನ ಉತ್ಸವದ ಹರ್ಷಧ್ವನಿ ಬಹುದೂರದವರೆಗೂ ಕೇಳಿಸಿತು. |
೪೪ |
ಸೇವೆಮಾಡುತ್ತಿದ್ದ ಯಾಜಕರ ಮತ್ತು ಲೇವಿಯರ ವಿಷಯದಲ್ಲಿ ಯೆಹೂದ್ಯರಿಗೆ ಬಹು ಸಂತೋಷವುಂಟಾಯಿತು. ಆ ದಿನದಲ್ಲಿ ಅವರು ಧರ್ಮವಿಧಿಯ ಪ್ರಕಾರ ಆಯಾ ಊರುಗಳ ಭೂಮಿಯಿಂದ ಯಾಜಕರಿಗೂ ಲೇವಿಯರಿಗೂ ಸಿಕ್ಕತಕ್ಕ ಭಾಗಗಳನ್ನು ಅಂದರೆ, ದೇವರಿಗಾಗಿ ಪ್ರತ್ಯೇಕಿಸತಕ್ಕ ವಸ್ತು, ಪ್ರಥಮಫಲ, ದಶಮಾಂಶ ಇವುಗಳನ್ನು ಸಂಗ್ರಹಮಾಡತಕ್ಕ ಕೊಠಡಿಗಳ ಮೇಲೆ ಪಾರುಪತ್ಯಗಾರರನ್ನು ನೇಮಿಸಿದರು. |
೪೫ |
ಆ ಯಾಜಕರೂ ಲೇವಿಯರೂ ತಮ್ಮ ದೇವರ ಸೇವಾಸಂಬಂಧದಲ್ಲಿ ಹಾಗು ಶುದ್ಧೀಕರಣ ಸಂಬಂಧದಲ್ಲಿ ತಮ್ಮ ಕರ್ತವ್ಯವನ್ನು ಜಾಗರೂಕತೆಯಿಂದ ನೆರವೇರಿಸುತ್ತಿದ್ದರು. ಅವರಂತೆ ಗಾಯಕರೂ ದ್ವಾರಪಾಲಕರೂ ಸಹ ದಾವೀದನಿಂದಲೂ ಅವನ ಮಗ ಸೊಲೊಮೋನನಿಂದಲೂ ಸ್ಥಾಪಿತವಾದ ಕ್ರಮಾನುಸಾರ ನಡೆಯುತ್ತಿದ್ದರು. |
೪೬ |
ಗಾಯನಮಂಡಲಿಗಳು ಕೃತಜ್ಞತಾ ಸ್ತುತಿಕೀರ್ತನೆಗಳ ದೇವಸೇವೆಯೂ ಪೂರ್ವಕಾಲದಲ್ಲಿ ಅಂದರೆ, ದಾವೀದನ ಮತ್ತು ಆಸಾಫನ ಕಾಲದಲ್ಲೇ ಇದ್ದವು. |
೪೭ |
ಜೆರುಬ್ಬಾಬೆಲ್, ನೆಹೆಮೀಯ ಇವರ ಕಾಲಗಳಲ್ಲಿ ಎಲ್ಲಾ ಇಸ್ರಯೇಲರು ಗಾಯಕರಿಗೂ ದ್ವಾರಪಾಲಕರಿಗೂ ದಿನದಿನಕ್ಕೆ ಸಿಕ್ಕತಕ್ಕ ಪಾಲುಗಳನ್ನು ಕೊಡುತ್ತ ಇದ್ದರು. ಇವರು ಅವುಗಳಲ್ಲಿ ದಶಮಾಂಶವನ್ನು ಲೇವಿಯರಿಗೂ ಲೇವಿಯರು ತಮ್ಮದರಲ್ಲಿ ದಶಮಾಂಶವನ್ನು ಆರೋನನ ಮಕ್ಕಳಿಗೂ ಕೊಡುತ್ತಿದ್ದರು.
|
Kannada Bible (KNCL) 2016 |
No Data |