A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಎಜ್ರನು ೧೦ಎಜ್ರನು ದೇವಾಲಯದ ಮುಂದೆ ಹೀಗೆ ಅಡ್ಡಬಿದ್ದು ಅಳುತ್ತಾ, ವಿಜ್ಞಾಪನೆಯನ್ನೂ ಪಾಪ ನಿವೇದನೆಯನ್ನೂ ಮಾಡುತ್ತಿರುವಾಗ ಇಸ್ರಯೇಲರ ಗಂಡಸರು, ಹೆಂಗಸರು ಹಾಗು ಮಕ್ಕಳು ಮಹಾಸಮೂಹವಾಗಿ ಅವನ ಬಳಿಗೆ ಬಂದು ಕೂಡಿದರು. ಜನರೆಲ್ಲರು ಅಲ್ಲಿ ಬಹಳವಾಗಿ ದುಃಖಿಸತೊಡಗಿದರು.
ಆಗ ಏಲಾಮ್ ಸಂತಾನದ ಯೆಹೀಯೇಲನ ಮಗ ಶೆಕನ್ಯನು ಎಜ್ರನಿಗೆ, “ಇಸ್ರಯೇಲರಾದ ನಾವು ಅನ್ಯಜನರಾದ ಈ ದೇಶನಿವಾಸಿಗಳಿಂದ ಹೆಣ್ಣನ್ನು ತೆಗೆದುಕೊಂಡು ನಮ್ಮ ದೇವರಿಗೆ ವಿರುದ್ಧ ದ್ರೋಹಮಾಡಿದ್ದರೂ ನಮ್ಮನ್ನು ನಾವು ತಿದ್ದಿಕೊಳ್ಳುವ ನಿರೀಕ್ಷೆ ಇನ್ನೂ ಉಂಟು.
ನೀನು ಹಾಗು ನಮ್ಮ ದೇವರ ಆಜ್ಞೆಯನ್ನು ಗೌರವಿಸುವವರು ಹೇಳಿಕೊಟ್ಟ ಬುದ್ಧಿವಾದಾನುಸಾರ ಅಂಥ ಎಲ್ಲ ಹೆಂಡತಿಯರನ್ನೂ ಅವರ ಮಕ್ಕಳನ್ನೂ ಕಳುಹಿಸಿಬಿಡುವುದಾಗಿ, ಈಗಲೇ ನಮ್ಮ ದೇವರಿಗೆ ಪ್ರತಿಜ್ಞೆಮಾಡಿ, ಧರ್ಮಶಾಸ್ತ್ರಕ್ಕನುಸಾರ ನಡೆಯೋಣ.
ಎದ್ದೇಳು, ಈ ಕಾರ್ಯ ನಿನ್ನಿಂದಾಗಬೇಕು. ನಾವು ನಿನಗೆ ಸಹಾಯಕರಾಗಿ ನಿಲ್ಲುತ್ತೇವೆ. ಧೈರ್ಯದಿಂದ ಮುನ್ನುಗ್ಗು,” ಎಂದು ಹೇಳಿದನು.
ಆಗ ಎಜ್ರನು ಎದ್ದು, ಯಾಜಕರ ಮತ್ತು ಲೇವಿಯರ ಮುಖ್ಯಸ್ಥರಿಗೂ ಎಲ್ಲ ಇಸ್ರಯೇಲರಿಗೂ ಈ ಪ್ರಕಾರ ನಡೆಯುವುದಾಗಿ ಪ್ರಮಾಣ ಮಾಡಬೇಕೆಂದು ಹೇಳಿದನು. ಅವರು ಹಾಗೆಯೇ ಪ್ರಮಾಣ ಮಾಡಿದರು.
ಆಮೇಲೆ ಎಜ್ರನು ಎದ್ದು, ದೇವಾಲಯದ ಮುಂಭಾಗದ ಸ್ಥಳವನ್ನು ಬಿಟ್ಟು, ಎಲ್ಯಾಷೀಬನ ಮಗ ಯೆಹೋಹಾನಾನನ ಕೊಠಡಿಗೆ ಹೋಗಿ, ಅಲ್ಲಿ ಸೆರೆ ಇಂದ ಬಂದವರಿಗಾಗಿ ದುಃಖಿಸುತ್ತಾ ಅನ್ನಪಾನಗಳನ್ನು ತೆಗೆದುಕೊಳ್ಳದೆ ರಾತ್ರಿಯನ್ನು ಕಳೆದನು.
ತರುವಾಯ ಜುದೇಯದಲ್ಲೂ ಜೆರುಸಲೇಮಿನಲ್ಲೂ ಈ ಪ್ರಕಟನೆಯನ್ನು ಹೊರಡಿಸಲಾಯಿತು: “ಸೆರೆಯಿಂದ ಬಂದವರೆಲ್ಲರೂ ಜೆರುಸಲೇಮಿನಲ್ಲಿ ಒಂದುಗೂಡಬೇಕು.
ಮುಖ್ಯಸ್ಥರ ಮತ್ತು ಹಿರಿಯರ ನಿರ್ಣಯದ ಪ್ರಕಾರ ಮೂರು ದಿವಸಗಳೊಳಗೆ ಬರಬೇಕು; ಬಾರದವನು ತನ್ನ ಎಲ್ಲ ಆಸ್ತಿಪಾಸ್ತಿಯನ್ನೂ ಕಳೆದುಕೊಂಡು ಸೆರೆಯಿಂದ ಬಂದವರ ಸಭೆಯಿಂದ ಬಹಿಷ್ಕೃತನಾಗುವನು,” ಎಂದು ತಿಳಿಸಲಾಯಿತು.
ಆಗ ಮೂರನೆಯ ದಿನದಲ್ಲಿ ಅಂದರೆ, ಒಂಬತ್ತನೆಯ ತಿಂಗಳಿನ ಇಪ್ಪತ್ತನೆಯ ದಿನದಲ್ಲಿ, ಯೆಹೂದ್ಯರ ಮತ್ತು ಬೆನ್ಯಾಮೀನ್ಯರ ಎಲ್ಲ ಪುರುಷರೂ ಜೆರುಸಲೇಮಿನಲ್ಲಿ ಕೂಡಿಬಂದರು. ಆ ಸಂಗತಿಯ ನಿಮಿತ್ತ ಹಾಗು ದೊಡ್ಡ ಮಳೆಯ ದೆಸೆಯಿಂದ ನಡುಗುತ್ತಾ ಬಂದು ದೇವಾಲಯದ ಬಯಲಿನಲ್ಲಿ ಕುಳಿತುಕೊಂಡರು.
೧೦
ಆಗ ಯಾಜಕನಾದ ಎಜ್ರನು ಎದ್ದು ನಿಂತು ಅವರಿಗೆ, “ನೀವು ಅನ್ಯಜನರ ಹೆಣ್ಣುಗಳನ್ನು ಮದುವೆ ಮಾಡಿಕೊಂಡು ಇಸ್ರಯೇಲರ ಅಪರಾಧವನ್ನು ಹೆಚ್ಚಿಸಿ ಇದ್ದೀರಿ.
೧೧
ಈಗ ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರಸ್ವಾಮಿಗೆ ನಿಮ್ಮ ಪಾಪಗಳನ್ನು ಅರಿಕೆಮಾಡಿ, ಅವರ ಚಿತ್ತಕ್ಕನುಸಾರ ದೇಶನಿವಾಸಿಗಳನ್ನೂ ಅನ್ಯಜನರಿಂದ ತಂದ ಹೆಂಡತಿಯರನ್ನೂ ಬಿಟ್ಟು ಬೇರೆಯಾಗಿರಿ,” ಎಂದನು.
೧೨
ಕೂಡಿಬಂದವರೆಲ್ಲರೂ ಗಟ್ಟಿಯಾಗಿ, “ನೀವು ಹೇಳಿದಂತೆಯೇ ಮಾಡುವುದು ನಮ್ಮ ಕರ್ತವ್ಯ.
೧೩
ಆದರೆ ಕೂಡಿಬಂದಿರುವವರು ಬಹುಮಂದಿ; ಈಗ ಮಳೆಗಾಲ; ಹೊರಗೆ ನಿಲ್ಲುವುದು ಅಸಾಧ್ಯ. ಈ ಕೆಲಸ ಒಂದೆರಡು ದಿನಗಳಲ್ಲಿ ತೀರುವಂಥದಲ್ಲ; ಈ ವಿಷಯದಲ್ಲಿ ನಮ್ಮ ಅಪರಾಧ ದೊಡ್ಡದು.
೧೪
ಆದುದರಿಂದ ನಮ್ಮ ಮುಂದಾಳುಗಳು ಸರ್ವಸಮೂಹದ ಪರವಾಗಿ ಈ ಕಾರ್ಯವನ್ನು ವಹಿಸಿಕೊಳ್ಳಲಿ; ನಮ್ಮ ನಮ್ಮ ಊರುಗಳಲ್ಲಿ ಅನ್ಯಜನರ ಸ್ತ್ರೀಯರನ್ನು ಮದುವೆಮಾಡಿಕೊಂಡವರೆಲ್ಲರು, ನೇಮಿತ ದಿನದಲ್ಲಿ, ತಮ್ಮ ಊರಿನ ಹಿರಿಯರೊಡನೆ ಹಾಗು ನ್ಯಾಯಾಧಿಪತಿಗಳೊಡನೆ ಇಲ್ಲಿಗೆ ಬರಲಿ. ನಮ್ಮ ದೇವರು ಈ ವಿಷಯದಲ್ಲಿ ನಮ್ಮ ಬಗ್ಗೆ ತಾಳಿರುವ ಉಗ್ರಕೋಪ ಹೀಗೆ ಪರಿಹಾರವಾಗಲಿ,” ಎಂದು ಉತ್ತರಕೊಟ್ಟರು.
೧೫
ಅಸಾಹೇಲನ ಮಗ ಯೋನಾತಾನ್, ಹಾಗು ತಿಕ್ವನ ಮಗ ಯಹ್ಜೆಯ ಎಂಬವರು ಮಾತ್ರ. ಈ ಅಭಿಪ್ರಾಯವನ್ನು ವಿರೋಧಿಸಿದರು. ಲೇವಿಯರಾದ ಮೆಷುಲ್ಲಾಮ್, ಶಬ್ಬೆತೈ ಎಂಬವರೂ ಇವರನ್ನು ಬೆಂಬಲಿಸಿದರು.
೧೬
ಆದರೆ ಸೆರೆಯಿಂದ ಮರಳಿ ಬಂದ ಇತರರು ಮೇಲೆ ಹೇಳಿರುವುದನ್ನೇ ಒಪ್ಪಿಕೊಂಡರು. ಈ ವಿಚಾರಣೆಯನ್ನು ನಡೆಸುವುದಕ್ಕೆ ಯಾಜಕ ಎಜ್ರನೂ ಆಯಾ ಗೋತ್ರಗಳ ಮುಖಂಡರೂ ಹೆಸರು ಹೆಸರಾಗಿ ನೇಮಕಗೊಂಡರು. ಹತ್ತನೆಯ ತಿಂಗಳಿನ ಮೊದಲನೆಯ ದಿನ, ಇವರ ಮೊದಲನೆಯ ಕೂಟ ನಡೆಯಿತು.
೧೭
ಅನ್ಯಜನರ ಸ್ತ್ರೀಯರನ್ನು ಮದುವೆಮಾಡಿಕೊಂಡವರ ವಿಷಯವನ್ನು ಮೊದಲನೆಯ ತಿಂಗಳಿನ ಮೊದಲನೆಯ ದಿನವೇ ಪೂರ್ತಿಯಾಗಿ ವಿಚಾರಿಸಿ ತೀರ್ಮಾನಿಸಿದರು.
೧೮
ಅನ್ಯಜನರ ಸ್ತ್ರೀಯರನ್ನು ಮದುವೆಮಾಡಿಕೊಂಡವರ ಪಟ್ಟಿ ಇದು: ಯಾಜಕರಲ್ಲಿ: ಯೋಚಾದಾಕನ ಮಗ ಯೆಷೂವನ ಮತ್ತು ಅವನ ಸಹೋದರರ ಸಂತಾನದವರಾದ ಮಾಸೇಯ, ಎಲೀಯೆಜೆರ್, ಯಾರೀಬ್, ಗೆದಲ್ಯ ಎಂಬವರು.
೧೯
ಇವರು ತಮ್ಮ ಹೆಂಡತಿಯರನ್ನು ಕಳುಹಿಸಿಬಿಡುವುದಾಗಿ ಕೈಮುಟ್ಟಿ ಪ್ರಮಾಣಮಾಡಿದರು; ತಾವು ಅಪರಾಧಿಗಳೆಂದು ಒಪ್ಪಿ ಪ್ರಾಯಶ್ಚಿತ್ತವಾಗಿ ಒಂದು ಟಗರನ್ನು ಸಮರ್ಪಿಸಿದರು.
೨೦
ಇಮ್ಮೇರನ ಸಂತಾನದವರಾದ ಹನಾನೀ, ಜೆಬದ್ಯ;
೨೧
ಹಾರೀಮನ ಸಂತಾನದವರಾದ ಮಾಸೇಯ, ಎಲೀಯ, ಶೆಮಾಯ, ಯೆಹೀಯೇಲ್, ಹಾಗು ಉಜ್ಜೀಯ;
೨೨
ಪಷ್ಹೂರನ ಸಂತಾನದವರಾದ ಎಲ್ಯೋವೇನೈ, ಮಾಸೇಯ, ಇಷ್ಮಾಯೇಲ್, ನೆತನೇಲ್, ಯೋಜಾಬಾದ್ ಹಾಗು ಎಲ್ಲಾಸ;
೨೩
ಲೇವಿಯರಲ್ಲಿ: ಯೊಜಾಬಾದ್, ಶಿಮ್ಮೀ, ಕೆಲೀಟ ಅನ್ನಿಸಿಕೊಳ್ಳುವ ಕೇಲಾಯ, ಪೆತಹ್ಯ, ಯೆಹೂದ ಹಾಗು ಎಲೀಯೆಜೆರ್.
೨೪
ಗಾಯಕರಲ್ಲಿ: ಎಲ್ಯಾಷೀಬ್. ದ್ವಾರಪಾಲಕರಲ್ಲಿ: ಶಲ್ಲೂಮ್, ಟೆಲೆಮ್ ಹಾಗು ಊರೀ.
೨೫
ಬೇರೆ ಇಸ್ರಯೇಲರಲ್ಲಿ: ಪರೋಷ್ ಸಂತಾನದವರಾದ ರಮ್ಯಾಹ, ಇಜ್ಜೀಯ, ಮಲ್ಕೀಯ, ಮಿಯ್ಯಾಮಿನ್, ಎಲ್ಲಾಜಾರ್, ಮಲ್ಕೀಯ ಹಾಗು ಬೆನಾಯ;
೨೬
ಏಲಾಮ್ ಸಂತಾನದವರಾದ ಮತ್ತನ್ಯ, ಜೆಕರ್ಯ, ಯೆಹೀಯೇಲ್, ಅಬ್ದೀ, ಯೆರೇಮೋತ್ ಹಾಗು ಏಲೀಯ;
೨೭
ಜತ್ತೂ ಸಂತಾನದವರಾದ ಎಲ್ಯೋವೇನ್ಯೆ, ಎಲ್ಯಾಷೀಬ್, ಮತ್ತನ್ಯ, ಯೆರೇಮೋತ್, ಜಾಬದ್, ಹಾಗು ಅಜೀಜಾ;
೨೮
ಬೇಬೈ ಸಂತಾನದವರಾದ ಯೆಹೋಹಾನಾನ್, ಹನನ್ಯ, ಜಬ್ಬೈ ಹಾಗು ಅತ್ಲೈ;
೨೯
ಬಾನೀ ಸಂತಾನದವರಾದ ಮೆಷುಲ್ಲಾಮ್, ಮಲ್ಲೂಕ್, ಅದಾಯ, ಯಾಷೂಬ್, ಶೆಯಾಲ್ ಹಾಗು ರಾಮೋತ್;
೩೦
ಪಹತ್ ಮೊವಾಬ್ ಸಂತಾನದವರಾದ ಅದ್ನ, ಕೆಲಾಲ್, ಬೆನಾಯ, ಮಾಸೇಯ, ಮತ್ತನ್ಯ, ಬೆಚಲೇಲ್, ಬಿನ್ನೂಯ್ ಹಾಗು ಮನಸ್ಸೆ;
೩೧
ಹಾರೀಮ್ ಸಂತಾನದವರಾದ ಎಲೀಯೆಜೆರ್, ಇಷೀಯ, ಮಲ್ಕೀಯ, ಶೆಮಾಯ, ಸಿಮೆಯೋನ್,
೩೨
ಬೆನ್ಯಾಮೀನ್, ಮಲ್ಲೂಕ್ ಹಾಗು ಶಮರ್ಯ;
೩೩
ಹಾಷುಮ್ ಸಂತಾನದವರಾದ ಮತ್ತೆನೈ, ಮತ್ತತ್ಯ, ಜಾಬಾದ್, ಎಲೀಫೆಲೆಟ್, ಯೆರೇಮೈ, ಮನಸ್ಸೆ ಹಾಗು ಶಿಮ್ಮೀ;
೩೪
ಬಾನೀ ಸಂತಾನದವರಾದ ಮಾದೈ, ಅಮ್ರಾಮ್,
೩೫
ಊವೇಲ್, ಬೆನಾಯ, ಬೇದೆಯ, ಕೆಲೂಹು,
೩೬
ವನ್ಯಾಹ, ಮೆರೇಮೋತ್, ಎಲ್ಯಾಷೀಬ್,
೩೭
ಮತ್ತನ್ಯ, ಮತ್ತೆನೈ,
೩೮
ಯಾಸೈ, ಬಾನೀ, ಬಿನ್ನೂಯ್, ಶಿಮ್ಮೀ,
೩೯
ಶೆಲೆಮ್ಯ, ನಾತಾನ್ ಹಾಗು ಅದಾಯ;
೪೦
ಮಕ್ನದೆಬೈ, ತಾಷೈ, ಶಾರೈ,
೪೧
ಅಜರೇಲ್, ಶೆಲೆಮ್ಯ, ಶೆಮರ್ಯ,
೪೨
ಶಲ್ಲೂಮ್, ಅಮರ್ಯ ಹಾಗು ಜೋಸೆಫ್;
೪೩
ನೆಬೊ ಸಂತಾನದವರಾದ ಯೆಗೀಯೇಲ್, ಮತ್ತಿತ್ಯ, ಜಾಬಾದ್, ಜೆಬೀನ, ಯದ್ದೈ, ಯೋವೇಲ್ ಹಾಗು ಬೆನಾಯ;
೪೪
ಇವರೆಲ್ಲರು ಅನ್ಯಕುಲದ ಸ್ತ್ರೀಯರನ್ನು ಮದುವೆ ಮಾಡಿಕೊಂಡವರು. ಕೆಲವರಿಗೆ ಆ ಸ್ತ್ರೀಯರಲ್ಲಿ ಮಕ್ಕಳೂ ಹುಟ್ಟಿದ್ದರು.