A A A A A
×

ಕನ್ನಡ ಬೈಬಲ್ (KNCL) 2016

ಕ್ರಾನಿಕಲ್ಸ್ ೨ ೬

ಆಗ ಸೊಲೊಮೋನನು ಹೀಗೆಂದು ಪ್ರಾರ್ಥಿಸಿದನು: “ಹೇ ಸರ್ವೇಶ್ವರಾ, ರವಿಯನ್ನು ಆಗಸದಲ್ಲಿ ಸ್ಥಿರವಾಗಿರಿಸಿದ ನೀವು ಆರಿಸಿಕೊಂಡಿರಿ ಕರಿಮೋಡದಲಿ ವಾಸಿಸಲು.
ನಾ ನಿರ್ಮಿಸಿರುವ ಈ ಭವ್ಯ ಮಂದಿರ ನಿಮಗಾಗಲಿ ಶಾಶ್ವತ ನಿವಾಸ.”
ಇದಾದ ಮೇಲೆ ಎದ್ದು ನಿಂತಿದ್ದ ಇಸ್ರಯೇಲ್ ಸಮಾಜದ ಕಡೆಗೆ ತಿರುಗಿಕೊಂಡು ಅವರನ್ನು ಆಶೀರ್ವದಿಸಿದನು.
“ಇಸ್ರಯೇಲಿನ ದೇವರಾದ ಸರ್ವೇಶ್ವರನಿಗೆ ಸ್ತೋತ್ರವಾಗಲಿ! ನನ್ನ ತಂದೆ ದಾವೀದನಿಗೆ ಅವರು ಬಾಯಿಂದ ನುಡಿದದ್ದನ್ನು ಈಗ ಕೈಯಿಂದ ನೆರವೇರಿಸಿದ್ದಾರೆ.
ಅವರು, ‘ನನ್ನ ಜನರಾದ ಇಸ್ರಯೇಲರನ್ನು ಈಜಿಪ್ಟಿನಿಂದ ಬರಮಾಡಿದಂದಿನಿಂದ ನನ್ನ ನಾಮದ ನಿವಾಸಕ್ಕಾಗಿ ಇಸ್ರಯೇಲ್ ಕುಲಗಳಲ್ಲಿ ಯಾವ ಪಟ್ಟಣವನ್ನೂ ಆಲಯಸ್ಥಾನವನ್ನಾಗಿ ಆರಿಸಿಕೊಳ್ಳಲಿಲ್ಲ; ನನ್ನ ಪ್ರಜೆ ಇಸ್ರಯೇಲರನ್ನು ಆಳುವುದಕ್ಕೆ ಯಾವ ವ್ಯಕ್ತಿಯನ್ನು ಆರಿಸಿಕೊಂಡದ್ದೂ ಇಲ್ಲ.
ಆದರೆ ಈಗ ನನ್ನ ನಾಮಸ್ಥಾಪನೆಗಾಗಿ ಜೆರುಸಲೇಮನ್ನೂ ನನ್ನ ಪ್ರಜೆಗಳಾದ ಇಸ್ರಯೇಲರನ್ನು ಆಳುವುದಕ್ಕೆ ದಾವೀದನನ್ನೂ ಆರಿಸಿಕೊಂಡಿದ್ದೇನೆ’, ಎಂದು ಹೇಳಿದ್ದರು.
“ನನ್ನ ತಂದೆ ದಾವೀದನು ಇಸ್ರಯೇಲ್ ದೇವರಾದ ಸರ್ವೇಶ್ವರನ ಹೆಸರಿಗಾಗಿ ಒಂದು ಆಲಯವನ್ನು ಕಟ್ಟಬೇಕೆಂದು ಮನಸ್ಸು ಮಾಡಿದಾಗ,
‘ನೀನು ನನ್ನ ಹೆಸರಿಗಾಗಿ ಒಂದು ಮನೆಯನ್ನು ಕಟ್ಟುವುದಕ್ಕೆ ಮನಸ್ಸು ಮಾಡಿದ್ದು ಒಳ್ಳೆಯದೇ ಸರಿ.
ಆದರೂ ಅದನ್ನು ಕಟ್ಟಬೇಕಾದವನು ನೀನಲ್ಲ. ನಿನ್ನಿಂದ ಹುಟ್ಟುವ ಮಗನು ಅದನ್ನು ನನ್ನ ಹೆಸರಿಗಾಗಿ ಕಟ್ಟಬೇಕು,’ ಎಂದು ಹೇಳಿದ್ದರು.
೧೦
ತಾವು ಕೊಟ್ಟ ಮಾತನ್ನು ಸರ್ವೇಶ್ವರ ನೆರವೇರಿಸಿದ್ದಾರೆ. ಅವರ ವಾಗ್ದಾನದಂತೆ ನಾನು ನನ್ನ ತಂದೆ ದಾವೀದನ ಸ್ಥಾನದಲ್ಲಿ ಕುಳಿತುಕೊಂಡಿದ್ದೇನೆ. ಇಸ್ರಯೇಲ್ ದೇವರಾದ ಸರ್ವೇಶ್ವರನ ಹೆಸರಿಗಾಗಿ ಈ ಆಲಯವನ್ನು ಕಟ್ಟಿಸಿದ್ದೇನೆ.
೧೧
ಇದಲ್ಲದೆ ಇಸ್ರಯೇಲರಿಗೆ ಸರ್ವೇಶ್ವರನಿಂದ ದೊರಕಿದ ನಿಬಂಧನಶಾಸನಗಳಿರುವ ಮಂಜೂಷವನ್ನು ಅದರಲ್ಲಿಟ್ಟಿದ್ದೇನೆ,” ಎಂದು ಹೇಳಿದನು.
೧೨
ಸೊಲೊಮೋನನು ಇಸ್ರಯೇಲರೆಲ್ಲರ ಎದುರಿನಲ್ಲಿ ಸರ್ವೇಶ್ವರನ ಬಲಿಪೀಠದ ಮುಂದೆ ಕೈಗಳನ್ನೆತ್ತಿಕೊಂಡು ಪ್ರಾರ್ಥನಾ ಭಂಗಿಯಲ್ಲಿ ನಿಂತನು.
೧೩
ಅವನು 2:2 ಮೀಟರ್ ಉದ್ದ, 2:2 ಮೀಟರ್ ಅಗಲ, 1:3 ಮೀಟರ್ ಎತ್ತರವಾಗಿರುವ ಒಂದು ಕಂಚಿನ ಪೀಠವನ್ನು ಮಾಡಿಸಿ ಪ್ರಾಕಾರದ ಮಧ್ಯದಲ್ಲಿರಿಸಿದನು.ಇಸ್ರಯೇಲ್ ಸರ್ವಸಮೂಹದ ಎದುರಿನಲ್ಲಿ ಅದನ್ನು ಹತ್ತಿ ಅದರ ಮೇಲೆ ಮೊಣಕಾಲೂರಿಕೊಂಡು, ಆಕಾಶದ ಕಡೆಗೆ ಕೈಗಳನ್ನೆತ್ತಿ, ಹೀಗೆ ಪ್ರಾರ್ಥಿಸಿದನು:
೧೪
“ಇಸ್ರಯೇಲ್ ದೇವರಾದ ಸರ್ವೇಶ್ವರಾ, ಭೂಲೋಕದಲ್ಲೂ ಪರಲೋಕದಲ್ಲೂ ನಿಮಗೆ ಸಮಾನರಾದ ದೇವರಿಲ್ಲ; ಪೂರ್ಣಮನಸ್ಸಿನಿಂದ ನಿಮಗೆ ಪ್ರಾಮಾಣಿಕರಾಗಿ ನಡೆದುಕೊಳ್ಳುವಂಥ ಭಕ್ತರ ಬಗ್ಗೆ ನೀವು ನಿಮ್ಮ ಒಡಂಬಡಿಕೆಯನ್ನು ನೆರವೇರಿಸಿ ಕೃಪೆಯನ್ನು ತೋರಿಸುತ್ತೀರಿ.
೧೫
ನಿಮ್ಮ ದಾಸನೂ ನನ್ನ ತಂದೆಯೂ ಆದ ದಾವೀದನಿಗೆ ಕೊಟ್ಟ ಮಾತನ್ನು ಈಡೇರಿಸಿದ್ದೀರಿ; ನಿಮ್ಮ ಬಾಯಿ ನುಡಿದದ್ದನ್ನು ನಿಮ್ಮ ಕೈ ಈಗ ನೆರವೇರಿಸಿತು.
೧೬
ಇಸ್ರಯೇಲ್ ದೇವರಾದ ಸರ್ವೇಶ್ವರಾ, ನೀವು ನನ್ನ ತಂದೆ ದಾವೀದನಿಗೆ, ‘ನಿನ್ನ ಸಂತಾನದವರು ನಿನ್ನಂತೆ ಜಾಗರೂಕತೆಯಿಂದ ನನ್ನ ಕಟ್ಟಳೆಯನ್ನು ಅನುಸರಿಸಿ ನನ್ನ ಮಾರ್ಗದಲ್ಲಿ ನಡೆದುಕೊಂಡರೆ ಅವರು ಇಸ್ರಯೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದು ತಪ್ಪದು’ ಎಂಬುದಾಗಿ ವಾಗ್ದಾನ ಮಾಡಿದ್ದೀರಿ; ಅದನ್ನು ನೆರವೇರಿಸಿರಿ.
೧೭
ಇಸ್ರಯೇಲ್ ದೇವರೇ, ಸರ್ವೇಶ್ವರಾ, ನೀವು ನಿಮ್ಮ ದಾಸ ದಾವೀದನಿಗೆ ನುಡಿದದ್ದೆಲ್ಲವೂ ಸಾರ್ಥಕವಾಗಲಿ!
೧೮
“ದೇವರು ನಿಜವಾಗಿ ಮಾನವರೊಡನೆ ಭೂಲೋಕದಲ್ಲಿ ವಾಸಿಸುವರೋ? ಆಕಾಶವೂ ಉನ್ನತೋನ್ನತವಾದ ಆಕಾಶವೂ ನಿಮ್ಮ ವಾಸಕ್ಕೆ ಸಾಲವು; ಹೀಗಿರುವಲ್ಲಿ ನಾನು ಕಟ್ಟಿಸಿದ ಈ ಮಂದಿರವು ಹೇಗೆ ತಾನೆ ಸಾಕಾದೀತು?
೧೯
ಆದರೂ ನನ್ನ ದೇವರೇ, ಸರ್ವೇಶ್ವರಾ, ನಿಮ್ಮ ದಾಸನ ಪ್ರಾರ್ಥನೆಗೂ ವಿಜ್ಞಾಪನೆಗೂ ಕಿವಿಗೊಡಿ; ನಿಮ್ಮನ್ನು ಪ್ರಾರ್ಥಿಸುತ್ತಿರುವ ನಿಮ್ಮ ದಾಸನ ಮೊರೆಯನ್ನು ಆಲಿಸಿರಿ.
೨೦
ಈ ಸ್ಥಳವನ್ನು ಕುರಿತು, ‘ನನ್ನ ನಾಮದ ಮಹಿಮೆ ಇಲ್ಲಿ ನೆಲೆಸುವುದು’ ಎಂದು ಹೇಳಿದ್ದೀರಿ, ನಿಮ್ಮ ಕೃಪಾಕಟಾಕ್ಷವು ಹಗಲಿರುಳೂ ಈ ಮಂದಿರದ ಮೇಲಿರಲಿ; ಇಲ್ಲಿ ನಿಮ್ಮ ದಾಸನು ಪ್ರಾರ್ಥಿಸುವಾಗಲೆಲ್ಲಾ ಅವನಿಗೆ ಸದುತ್ತರವನ್ನು ದಯಪಾಲಿಸಿರಿ.
೨೧
ನಿಮ್ಮ ದಾಸನಾದ ನಾನಾಗಲಿ, ನಿಮ್ಮ ಪ್ರಜೆಗಳಾದ ಇಸ್ರಯೇಲರಾಗಲಿ, ಈ ಸ್ಥಳದ ಕಡೆಗೆ ತಿರುಗಿಕೊಂಡು ನಿಮ್ಮನ್ನು ಪ್ರಾರ್ಥಿಸುವಾಗ ನಿಮ್ಮ ನಿವಾಸವಾಗಿರುವ ಪರಲೋಕದಿಂದ ನಮ್ಮ ಬಿನ್ನಹಗಳನ್ನು ಕೇಳಿ, ಕ್ಷಮೆಯನ್ನು ಅನುಗ್ರಹಿಸಿರಿ.
೨೨
“ನೆರೆಯವನಿಗೆ ವಿರುದ್ಧ ತಪ್ಪುಮಾಡಿದವನು ಎಂಬ ಸಂಶಯಕ್ಕೆ ಗುರಿಯಾದ ಒಬ್ಬ ವ್ಯಕ್ತಿ ತಾನು ನಿರ್ದೋಷಿಯೆಂದು ಪ್ರಮಾಣಮಾಡಬೇಕಾದಾಗ, ಅವನು ಈ ಆಲಯಕ್ಕೆ ಬಂದು, ನಿಮ್ಮ ಪೀಠದ ಮುಂದೆ ನಿಂತು ಪ್ರಮಾಣಮಾಡಿದರೆ,
೨೩
ನೀವು ಪರಲೋಕದಿಂದ ಅದನ್ನು ಕೇಳಿ ನಿಮ್ಮ ಭಕ್ತರ ವ್ಯಾಜ್ಯವನ್ನು ತೀರಿಸಿರಿ. ದುಷ್ಟನನ್ನು ಖಂಡಿಸಿ ಅವನ ತಪ್ಪನ್ನು ಅವನ ಮೇಲೆಯೇ ಹೊರಿಸಿರಿ; ಅವನು ಅಪರಾಧಿಯೆಂದು ತೋರಿಸಿಕೊಡಿ. ನೀತಿವಂತನಿಗೆ ಅವನ ನೀತಿಯ ಫಲವನ್ನು ಅನುಗ್ರಹಿಸಿ, ಅವನು ನೀತಿವಂತನೆಂದು ತೋರಿಸಿಕೊಡಿ.
೨೪
“ತಮ್ಮ ಪಾಪಗಳ ನಿಮಿತ್ತ ಶತ್ರುಗಳ ಮುಂದೆ ತಲೆತಗ್ಗಿಸಬೇಕಾಗುವ ನಿಮ್ಮ ಪ್ರಜೆಗಳಾದ ಇಸ್ರಯೇಲರು ನಿಮ್ಮ ಕಡೆಗೆ ತಿರುಗಿಕೊಂಡು, ನಿಮ್ಮ ನಾಮವನ್ನು ಎತ್ತಿ, ಈ ಆಲಯಕ್ಕೆ ಬಂದು, ನಿಮ್ಮ ಸನ್ನಿಧಿಯಲ್ಲಿ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಮಾಡಿದರೆ,
೨೫
ನೀವು ಪರಲೋಕದಿಂದ ಆಲಿಸಿ ಅವರ ಪಾಪಗಳನ್ನು ಕ್ಷಮಿಸಿ, ಅವರಿಗೂ ಅವರ ಪಿತೃಗಳಿಗೂ ನೀವು ಕೊಟ್ಟ ನಾಡಿಗೆ ಅವರನ್ನು ಮರಳಿ ಬರಮಾಡಿ.
೨೬
“ಅವರ ಪಾಪಗಳ ನಿಮಿತ್ತ ನೀವು ಆಕಾಶವನ್ನು ಮಳೆಗರೆಯದಂತೆ ಮುಚ್ಚಿ, ಅವರನ್ನು ತಗ್ಗಿಸಿದಾಗ, ಅವರು ತಮ್ಮ ಪಾಪಗಳನ್ನು ಬಿಟ್ಟು ತಮ್ಮನ್ನು ತಗ್ಗಿಸಿದವರು ನೀವೇ ಎಂದು ನಿಮ್ಮ ನಾಮವನ್ನು ಎತ್ತಿ, ಈ ಆಲಯದ ಕಡೆಗೆ ತಿರುಗಿಕೊಂಡು, ನಿಮ್ಮನ್ನು ಪ್ರಾರ್ಥಿಸಿದರೆ,
೨೭
ಪರಲೋಕದಲ್ಲಿರುವ ನೀವು ಆಲಿಸಿ ನಿಮ್ಮ ಭಕ್ತರೂ ಪ್ರಜೆಗಳೂ ಆದ ಇಸ್ರಯೇಲರ ಪಾಪಗಳನ್ನು ಕ್ಷಮಿಸಿ, ಅವರು ನಡೆಯಬೇಕಾದ ಸನ್ಮಾರ್ಗವನ್ನು ತೋರಿಸಿ, ನಿಮ್ಮ ಪ್ರಜೆಗೆ ಸ್ವಂತ ಸೊತ್ತಾಗಿ ಕೊಟ್ಟ ಈ ನಾಡಿಗೆ ಮಳೆಯನ್ನು ಅನುಗ್ರಹಿಸಿರಿ.
೨೮
“ನಾಡಿಗೆ ಕ್ಷಾಮ, ಘೋರವ್ಯಾಧಿ, ಬೆಳೆಗೆ ಬಿಸಿಗಾಳಿ, ಬೂದಿ, ಮಿಡತೆ, ಚಿಟ್ಟೆಹುಳ, ಪಟ್ಟಣಗಳಿಗೆ ಶತ್ರುಗಳ ಮುತ್ತಿಗೆ, ಇಂಥ ಯಾವ ಉಪದ್ರವದಿಂದಾಗಲಿ, ವ್ಯಾಧಿಯಿಂದಾಗಲಿ, ಬಾಧೆಯುಂಟಾದರೆ
೨೯
ಎಲ್ಲಾ ಇಸ್ರಯೇಲರಾಗಲಿ, ಅವರಲ್ಲೊಬ್ಬನಾಗಲಿ, ತಾವು ಅನುಭವಿಸುತ್ತಿರುವ ಉಪದ್ರವ, ದುಃಖಗಳ ನಿಮಿತ್ತ ಈ ಆಲಯದ ಕಡೆಗೆ ಕೈಯೆತ್ತಿ ನಿಮಗೆ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಮಾಡಿದರೆ,
೩೦
ಮನುಷ್ಯರ ಹೃದಯಗಳನ್ನು ಬಲ್ಲಂಥ ನೀವು ನಿಮ್ಮ ನಿವಾಸವಾಗಿರುವ ಪರಲೋಕದಿಂದ ಆಲಿಸಿರಿ; ಅವರಿಗೆ ಪಾಪಪರಿಹಾರವನ್ನು ಅನುಗ್ರಹಿಸಿರಿ. ಮನುಷ್ಯರ ಅಂತರಂಗಗಳನ್ನು ಬಲ್ಲವರು ನೀವೊಬ್ಬರೇ. ಪ್ರತಿಯೊಬ್ಬನಿಗೂ ಅವನವನು ಹಿಡಿಯುವ ಮಾರ್ಗಕ್ಕೆ ತಕ್ಕಹಾಗೆ ಫಲವನ್ನು ಕೊಡಿ.
೩೧
ಆಗ ನಮ್ಮ ಪಿತೃಗಳಿಗೆ ನೀವು ಕೊಟ್ಟ ಈ ನಾಡಿನಲ್ಲಿ ಅವರು ವಾಸಿಸುವ ಕಾಲವೆಲ್ಲಾ ನಿಮ್ಮಲ್ಲಿ ಭಯಭಕ್ತಿಯುಳ್ಳವರಾಗಿ ನಿಮ್ಮ ಮಾರ್ಗದಲ್ಲೇ ನಡೆಯುವರು.
೩೨
“ನಿಮ್ಮ ಪ್ರಜೆಗಳಾದ ಇಸ್ರಯೇಲರಿಗೆ ಸೇರದಂಥ ಒಬ್ಬ ಪರದೇಶಿಯು ನಿಮ್ಮ ನಾಮಮಹತ್ತು, ಭುಜಬಲ, ಶಿಕ್ಷಾಹಸ್ತ ಇವುಗಳ ಸಂದೇಶವನ್ನು ಕೇಳಿ ದೂರದೇಶದಿಂದ ಬಂದು, ಈ ಆಲಯದ ಮುಂದೆ ನಿಂತು, ನಿಮ್ಮನ್ನು ಪ್ರಾರ್ಥಿಸಿದರೆ ನಿಮ್ಮ ನಿವಾಸವಾಗಿರುವ
೩೩
ಪರಲೋಕದಿಂದ ಅವನ ಪ್ರಾರ್ಥನೆಯನ್ನು ಕೇಳಿ ಅವನು ಬೇಡಿಕೊಂಡದ್ದನ್ನು ಅನುಗ್ರಹಿಸಿರಿ. ಆಗ ಲೋಕದ ಎಲ್ಲ ಜನರೂ ನಿಮ್ಮ ನಾಮಮಹತ್ತನ್ನು ತಿಳಿದು, ನಿಮ್ಮ ಜನರಾದ ಇಸ್ರಯೇಲರಂತೆ, ನಿಮ್ಮಲ್ಲಿ ಭಯಭಕ್ತಿಯುಳ್ಳವರಾಗಿ ನಾನು ನಿಮ್ಮ ಹೆಸರಿಗಾಗಿ ಈ ಆಲಯವನ್ನು ಕಟ್ಟಿಸಿದ್ದೇನೆಂದು ತಿಳಿದುಕೊಳ್ಳುವರು.
೩೪
“ನೀವು ನಿಮ್ಮ ಜನರನ್ನು ಶತ್ರುಗಳೊಡನೆ ಯುದ್ಧಮಾಡುವುದಕ್ಕೆ ಎಲ್ಲಿಗಾದರೂ ಕಳುಹಿಸಿದಾಗ ಅವರು ಅಲ್ಲಿಂದ ನೀವು ಆರಿಸಿಕೊಂಡ ಪಟ್ಟಣದ ಕಡೆಗೂ ನಾನು ನಿಮ್ಮ ಹೆಸರಿಗಾಗಿ ಕಟ್ಟಿಸಿದ ಆ ಆಲಯದ ಕಡೆಗೂ ತಿರುಗಿಕೊಂಡು ನಿಮ್ಮನ್ನು ಪ್ರಾರ್ಥಿಸಿದರೆ,
೩೫
ನೀವು ಪರಲೋಕದಿಂದ ಅವರ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಕೇಳಿ ಅವರಿಗೆ ಜಯವನ್ನು ನೀಡಿರಿ.
೩೬
“ಅವರು ನಿಮಗೆ ವಿರುದ್ಧ ಪಾಪಮಾಡಬಹುದು. ಪಾಪಮಾಡದ ವ್ಯಕ್ತಿ ಒಬ್ಬನೂ ಇಲ್ಲ. ನೀವು ಅವರ ಮೇಲೆ ಕೋಪಗೊಂಡು ಅವರನ್ನು ಶತ್ರುಗಳ ಕೈಗೆ ಒಪ್ಪಿಸಿದಾಗ ಮತ್ತು ಆ ಶತ್ರುಗಳು ಅವರನ್ನು ಸೆರೆಹಿಡಿದು ದೂರದಲ್ಲಾಗಲಿ, ಸಮೀಪದಲ್ಲಾಗಲಿ ಇರುವ ದೇಶಕ್ಕೆ ಒಯ್ದಾಗ,
೩೭
ಅವರು ಸೆರೆಯವರಾಗಿ ಬಿದ್ದುಕೊಂಡಿರುವ ದೇಶದಲ್ಲಿ ಪಶ್ಚಾತ್ತಾಪಪಟ್ಟು, ನಿಮ್ಮ ಅನುಗ್ರಹದಿಂದ
೩೮
ತಮ್ಮ ಪಿತೃಗಳಿಗೆ ದೊರಕಿದ ನಾಡಿನ ಕಡೆಗೆ, ನೀವು ಆರಿಸಿಕೊಂಡ ಪಟ್ಟಣದ ಕಡೆಗೆ, ನಾನು ನಿಮ್ಮ ಹೆಸರಿಗಾಗಿ ಕಟ್ಟಿಸಿದ ಈ ಆಲಯದ ಕಡೆಗೆ ತಿರುಗಿಕೊಂಡು, ‘ನಾವು ನಿಮ್ಮ ಆಜ್ಞೆಗಳನ್ನು ಮೀರಿ ಪಾಪಮಾಡಿ ದ್ರೋಹಿಗಳಾದೆವು’ ಎಂದು ಒಪ್ಪಿಕೊಂಡು ಪೂರ್ಣಮನಸ್ಸಿನಿಂದ ಹಾಗೂ ಪೂರ್ಣಪ್ರಾಣದಿಂದ ನಿಮ್ಮನ್ನು ಪ್ರಾರ್ಥಿಸಿದರೆ,
೩೯
ನೀವು ನಿಮ್ಮ ನಿವಾಸವಾಗಿರುವ ಪರಲೋಕದಿಂದ ಅವರ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಆಲಿಸಿ, ಅವರಿಗೆ ದಯೆ ತೋರಿಸಿ, ನಿಮಗೆ ವಿರುದ್ಧ ಪಾಪಮಾಡಿದ ನಿಮ್ಮ ಪ್ರಜೆಗೆ ಕ್ಷಮೆಯನ್ನು ಅನುಗ್ರಹಿಸಿರಿ.
೪೦
“ನನ್ನ ದೇವರೇ, ಕಟಾಕ್ಷವಿಡಿ, ಈ ಸ್ಥಳದಲ್ಲಿ ಮಾಡುವ ಪ್ರಾರ್ಥನೆಗೆ ಕಿವಿಗೊಡಿ.
೪೧
ದೇವರಾದ ಸರ್ವೇಶ್ವರಾ, ಎದ್ದು ಬನ್ನಿ, ನಿಮ್ಮ ತೇಜೋಮಯ ಮಂಜೂಷದೊಡನೆ ನಿಮ್ಮ ವಾಸಸ್ಥಾನದೊಳಗೆ ಸೇರಿಕೊಳ್ಳಿ. ದೇವರಾದ ಸರ್ವೇಶ್ವರಾ, ನಿಮ್ಮ ಯಾಜಕರು ರಕ್ಷಣೆಯೆಂಬ ಕವಚವನ್ನು ಹೊದ್ದುಕೊಳ್ಳಲಿ, ನಿಮ್ಮ ಭಕ್ತರು ಸೌಭಾಗ್ಯದಲ್ಲಿ ಹರ್ಷಿಸಲಿ.
೪೨
ದೇವರಾದ ಸರ್ವೇಶ್ವರಾ, ನಿಮ್ಮಿಂದ ಅಭಿಷೇಕ ಆದವನನ್ನು ತಳ್ಳಿಬಿಡಬೇಡಿ. ನಿಮ್ಮ ದಾಸ ದಾವೀದನಿಗೆ ಅನುಗ್ರಹಿಸಿದ ಕೃಪೆಯನ್ನು ನೆನಪುಮಾಡಿಕೊಳ್ಳಿ.”
ಕ್ರಾನಿಕಲ್ಸ್ ೨ ೬:1
ಕ್ರಾನಿಕಲ್ಸ್ ೨ ೬:2
ಕ್ರಾನಿಕಲ್ಸ್ ೨ ೬:3
ಕ್ರಾನಿಕಲ್ಸ್ ೨ ೬:4
ಕ್ರಾನಿಕಲ್ಸ್ ೨ ೬:5
ಕ್ರಾನಿಕಲ್ಸ್ ೨ ೬:6
ಕ್ರಾನಿಕಲ್ಸ್ ೨ ೬:7
ಕ್ರಾನಿಕಲ್ಸ್ ೨ ೬:8
ಕ್ರಾನಿಕಲ್ಸ್ ೨ ೬:9
ಕ್ರಾನಿಕಲ್ಸ್ ೨ ೬:10
ಕ್ರಾನಿಕಲ್ಸ್ ೨ ೬:11
ಕ್ರಾನಿಕಲ್ಸ್ ೨ ೬:12
ಕ್ರಾನಿಕಲ್ಸ್ ೨ ೬:13
ಕ್ರಾನಿಕಲ್ಸ್ ೨ ೬:14
ಕ್ರಾನಿಕಲ್ಸ್ ೨ ೬:15
ಕ್ರಾನಿಕಲ್ಸ್ ೨ ೬:16
ಕ್ರಾನಿಕಲ್ಸ್ ೨ ೬:17
ಕ್ರಾನಿಕಲ್ಸ್ ೨ ೬:18
ಕ್ರಾನಿಕಲ್ಸ್ ೨ ೬:19
ಕ್ರಾನಿಕಲ್ಸ್ ೨ ೬:20
ಕ್ರಾನಿಕಲ್ಸ್ ೨ ೬:21
ಕ್ರಾನಿಕಲ್ಸ್ ೨ ೬:22
ಕ್ರಾನಿಕಲ್ಸ್ ೨ ೬:23
ಕ್ರಾನಿಕಲ್ಸ್ ೨ ೬:24
ಕ್ರಾನಿಕಲ್ಸ್ ೨ ೬:25
ಕ್ರಾನಿಕಲ್ಸ್ ೨ ೬:26
ಕ್ರಾನಿಕಲ್ಸ್ ೨ ೬:27
ಕ್ರಾನಿಕಲ್ಸ್ ೨ ೬:28
ಕ್ರಾನಿಕಲ್ಸ್ ೨ ೬:29
ಕ್ರಾನಿಕಲ್ಸ್ ೨ ೬:30
ಕ್ರಾನಿಕಲ್ಸ್ ೨ ೬:31
ಕ್ರಾನಿಕಲ್ಸ್ ೨ ೬:32
ಕ್ರಾನಿಕಲ್ಸ್ ೨ ೬:33
ಕ್ರಾನಿಕಲ್ಸ್ ೨ ೬:34
ಕ್ರಾನಿಕಲ್ಸ್ ೨ ೬:35
ಕ್ರಾನಿಕಲ್ಸ್ ೨ ೬:36
ಕ್ರಾನಿಕಲ್ಸ್ ೨ ೬:37
ಕ್ರಾನಿಕಲ್ಸ್ ೨ ೬:38
ಕ್ರಾನಿಕಲ್ಸ್ ೨ ೬:39
ಕ್ರಾನಿಕಲ್ಸ್ ೨ ೬:40
ಕ್ರಾನಿಕಲ್ಸ್ ೨ ೬:41
ಕ್ರಾನಿಕಲ್ಸ್ ೨ ೬:42
ಕ್ರಾನಿಕಲ್ಸ್ ೨ 1 / ಕ್ರಾನಿ೨ 1
ಕ್ರಾನಿಕಲ್ಸ್ ೨ 2 / ಕ್ರಾನಿ೨ 2
ಕ್ರಾನಿಕಲ್ಸ್ ೨ 3 / ಕ್ರಾನಿ೨ 3
ಕ್ರಾನಿಕಲ್ಸ್ ೨ 4 / ಕ್ರಾನಿ೨ 4
ಕ್ರಾನಿಕಲ್ಸ್ ೨ 5 / ಕ್ರಾನಿ೨ 5
ಕ್ರಾನಿಕಲ್ಸ್ ೨ 6 / ಕ್ರಾನಿ೨ 6
ಕ್ರಾನಿಕಲ್ಸ್ ೨ 7 / ಕ್ರಾನಿ೨ 7
ಕ್ರಾನಿಕಲ್ಸ್ ೨ 8 / ಕ್ರಾನಿ೨ 8
ಕ್ರಾನಿಕಲ್ಸ್ ೨ 9 / ಕ್ರಾನಿ೨ 9
ಕ್ರಾನಿಕಲ್ಸ್ ೨ 10 / ಕ್ರಾನಿ೨ 10
ಕ್ರಾನಿಕಲ್ಸ್ ೨ 11 / ಕ್ರಾನಿ೨ 11
ಕ್ರಾನಿಕಲ್ಸ್ ೨ 12 / ಕ್ರಾನಿ೨ 12
ಕ್ರಾನಿಕಲ್ಸ್ ೨ 13 / ಕ್ರಾನಿ೨ 13
ಕ್ರಾನಿಕಲ್ಸ್ ೨ 14 / ಕ್ರಾನಿ೨ 14
ಕ್ರಾನಿಕಲ್ಸ್ ೨ 15 / ಕ್ರಾನಿ೨ 15
ಕ್ರಾನಿಕಲ್ಸ್ ೨ 16 / ಕ್ರಾನಿ೨ 16
ಕ್ರಾನಿಕಲ್ಸ್ ೨ 17 / ಕ್ರಾನಿ೨ 17
ಕ್ರಾನಿಕಲ್ಸ್ ೨ 18 / ಕ್ರಾನಿ೨ 18
ಕ್ರಾನಿಕಲ್ಸ್ ೨ 19 / ಕ್ರಾನಿ೨ 19
ಕ್ರಾನಿಕಲ್ಸ್ ೨ 20 / ಕ್ರಾನಿ೨ 20
ಕ್ರಾನಿಕಲ್ಸ್ ೨ 21 / ಕ್ರಾನಿ೨ 21
ಕ್ರಾನಿಕಲ್ಸ್ ೨ 22 / ಕ್ರಾನಿ೨ 22
ಕ್ರಾನಿಕಲ್ಸ್ ೨ 23 / ಕ್ರಾನಿ೨ 23
ಕ್ರಾನಿಕಲ್ಸ್ ೨ 24 / ಕ್ರಾನಿ೨ 24
ಕ್ರಾನಿಕಲ್ಸ್ ೨ 25 / ಕ್ರಾನಿ೨ 25
ಕ್ರಾನಿಕಲ್ಸ್ ೨ 26 / ಕ್ರಾನಿ೨ 26
ಕ್ರಾನಿಕಲ್ಸ್ ೨ 27 / ಕ್ರಾನಿ೨ 27
ಕ್ರಾನಿಕಲ್ಸ್ ೨ 28 / ಕ್ರಾನಿ೨ 28
ಕ್ರಾನಿಕಲ್ಸ್ ೨ 29 / ಕ್ರಾನಿ೨ 29
ಕ್ರಾನಿಕಲ್ಸ್ ೨ 30 / ಕ್ರಾನಿ೨ 30
ಕ್ರಾನಿಕಲ್ಸ್ ೨ 31 / ಕ್ರಾನಿ೨ 31
ಕ್ರಾನಿಕಲ್ಸ್ ೨ 32 / ಕ್ರಾನಿ೨ 32
ಕ್ರಾನಿಕಲ್ಸ್ ೨ 33 / ಕ್ರಾನಿ೨ 33
ಕ್ರಾನಿಕಲ್ಸ್ ೨ 34 / ಕ್ರಾನಿ೨ 34
ಕ್ರಾನಿಕಲ್ಸ್ ೨ 35 / ಕ್ರಾನಿ೨ 35
ಕ್ರಾನಿಕಲ್ಸ್ ೨ 36 / ಕ್ರಾನಿ೨ 36