A A A A A
×

ಕನ್ನಡ ಬೈಬಲ್ (KNCL) 2016

ಕ್ರಾನಿಕಲ್ಸ್ ೨ ೩೫

ಯೋಷೀಯನು ಸರ್ವೇಶ್ವರನಿಗೆ ಜೆರುಸಲೇಮಿನಲ್ಲಿ ಪಾಸ್ಕಹಬ್ಬವನ್ನು ಆಚರಿಸುವಂತೆ ಮಾಡಿದನು. ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಪಾಸ್ಕದ ಕುರಿಮರಿಗಳನ್ನು ವಧಿಸಿದರು.
ಯೋಷೀಯನು ಯಾಜಕರನ್ನು ಅವರವರ ಕೆಲಸಕ್ಕೆ ನೇಮಿಸಿ, ಸರ್ವೇಶ್ವರನ ಸೇವೆಮಾಡುವಂತೆ ಪ್ರೋತ್ಸಾಹಿಸಿದನು.
ಎಲ್ಲ ಇಸ್ರಯೇಲರಿಗೆ ಉಪದೇಶಿಸತಕ್ಕವರೂ ಸರ್ವೇಶ್ವರನಿಗೆ ಪ್ರತಿಷ್ಠರೂ ಆದ ಲೇವಿಯರಿಗೆ, “ದಾವೀದನ ಮಗನೂ ಇಸ್ರಯೇಲ್ ಅರಸನೂ ಆದ ಸೊಲೊಮೋನನು ಕಟ್ಟಿಸಿದ ಮಹಾದೇವಾಲಯದಲ್ಲಿ ಪವಿತ್ರ ಮಂಜೂಷವನ್ನು ಇಟ್ಟುಬಿಡಿ; ಅದನ್ನು ಹೆಗಲ ಮೇಲೆ ಹೊತ್ತುಕೊಳ್ಳುವುದು ಅವಶ್ಯವಿಲ್ಲ; ಇನ್ನು ಮುಂದೆ ನಿಮ್ಮ ದೇವರಾದ ಸರ್ವೇಶ್ವರನಿಗೂ ಅವರ ಪ್ರಜೆಗಳಾದ ಇಸ್ರಯೇಲರಿಗೂ ಸೇವೆಸಲ್ಲಿಸಿರಿ.
ಇಸ್ರಯೇಲರ ಅರಸ ದಾವೀದನೂ ಅವನ ಮಗ ಸೊಲೊಮೋನನೂ ಲಿಖಿತವಾಗಿ ನೇಮಿಸಿದಂತೆ ನಿಮ್ಮ ನಿಮ್ಮ ಗೋತ್ರವರ್ಗಗಳ ಪ್ರಕಾರ ಸಿದ್ಧರಾಗಿದ್ದು,
ನಿಮ್ಮ ಸಹೋದರರಾದ ಇಸ್ರಯೇಲರ ಒಂದೊಂದು ಗೋತ್ರ ಶಾಖೆಯ ಪರವಾಗಿ, ನಿಮ್ಮಲ್ಲಿ ಒಂದೊಂದು ಗುಂಪಿನವರು ಪವಿತ್ರಸ್ಥಾನದಲ್ಲಿ ನಿಂತು ಪಾಸ್ಕದ ಕುರಿಮರಿಯನ್ನು ವಧಿಸಲಿ.
ಮೋಶೆಯಿಂದ ಪ್ರಕಟವಾದ ಸರ್ವೇಶ್ವರನ ವಿಧಿಗನುಸಾರ ನಿಮ್ಮ ಸಹೋದರರು ಪಾಸ್ಕಭೋಜನ ಮಾಡುವಂತೆ ನೀವು ನಿಮ್ಮನ್ನು ಶುದ್ಧಿಪಡಿಸಿಕೊಂಡು ಅವರಿಗಾಗಿ ಎಲ್ಲವನ್ನೂ ಸಿದ್ಧಮಾಡಿರಿ,” ಎಂದು ಆಜ್ಞಾಪಿಸಿದನು.
ಯೋಷೀಯನು, ಹಬ್ಬಕ್ಕೆ ಬಂದ ಜನರಿಗೆ ಪಾಸ್ಕ ಬಲಿಗಾಗಿ ಆಸ್ಥಾನದ ಸೊತ್ತಿನಿಂದ ಮೂವತ್ತು ಸಾವಿರ ಆಡುಮರಿಗಳನ್ನೂ ಕುರಿಮರಿಗಳನ್ನೂ ಮೂರು ಸಾವಿರ ಹೋರಿಗಳನ್ನೂ ದಾನಮಾಡಿದನು.
ಅವನ ಪದಾಧಿಕಾರಿಗಳು ಕೂಡ ಜನರಿಗೂ ಯಾಜಕರಿಗೂ ಲೇವಿಯರಿಗೂ ಬಲಿಪಶುಗಳನ್ನು ಸಂತೋಷವಾಗಿ ದಾನಕೊಟ್ಟರು. ದೇವಾಲಯದ ಪ್ರಧಾನರಾದ ಹಿಲ್ಕೀಯ, ಜೆಕರ್ಯ, ಯೆಹೀಯೇಲ್ ಎಂಬುವರು ಯಾಜಕರಿಗೆ ಎರಡು ಸಾವಿರದ ಆರುನೂರು ಪಾಸ್ಕದ ಕುರಿಮರಿಗಳನ್ನೂ ಮುನ್ನೂರು ಹೋರಿಗಳನ್ನೂ ಕೊಟ್ಟರು.
ಲೇವಿಯರಲ್ಲಿ ಮುಖ್ಯಸ್ಥರಾದ ಕೋನನ್ಯ, ಸೆಮಾಯ, ನೆತನೇಲ್ ಎಂಬ ಅಣ್ಣತಮ್ಮಂದಿರೂ ಹಷಲ್ಯ, ಯೆಗೀಯೇಲ್, ಯೋಜಾಬಾದ್ ಎಂಬವರೂ ಲೇವಿಯರಿಗೆ ಐದು ಸಾವಿರ ಪಾಸ್ಕದ ಕುರಿಮರಿಗಳನ್ನೂ ಐನೂರು ಹೋರಿಗಳನ್ನೂ ದಾನಮಾಡಿದರು.
೧೦
ಸೇವೆಯ ಸಂಬಂಧವಾದುದ್ದೆಲ್ಲವನ್ನೂ ಏರ್ಪಡಿಸಿದನಂತರ ಯಾಜಕರು ತಮ್ಮ ತಮ್ಮ ಸ್ಥಳಗಳಲ್ಲಿಯೂ ಲೇವಿಯರು ಅರಸನ ಅಪ್ಪಣೆಯಂತೆ ವರ್ಗವರ್ಗಗಳಾಗಿಯೂ ನಿಂತರು;
೧೧
ಲೇವಿಯರು ಪಾಸ್ಕದ ಪಶುಗಳನ್ನು ವಧಿಸಿದರು. ಯಾಜಕರು ಇವರ ಕೈಯಿಂದ ರಕ್ತವನ್ನು ತೆಗೆದುಕೊಂಡು ಪ್ರೋಕ್ಷಿಸಿದರು.
೧೨
ಲೇವಿಯರು, ಚರ್ಮ ಸುಲಿದು ಹೋಮಕ್ಕಾಗಿ ತೆಗೆದಿಟ್ಟಿದ್ದನ್ನು ಪ್ರತ್ಯೇಕಿಸಿ, ಜನರಿಗೆ ಆಯಾ ಗೋತ್ರಶಾಖೆಗಳಿಗನುಸಾರ, ಕೊಟ್ಟರು. ಇವರು ಅದನ್ನು ಮೋಶೆಯ ಧರ್ಮಶಾಸ್ತ್ರವಿಧಿಯ ಮೇರೆಗೆ ಸರ್ವೇಶ್ವರನಿಗೆ ಸಮರ್ಪಿಸಬೇಕಾಯಿತು. ಹೋರಿಗಳ ವಿಷಯದಲ್ಲೂ ಅದೇ ಕ್ರಮವನ್ನು ಅನುಸರಿಸಿದರು.
೧೩
ಆಮೇಲೆ ಲೇವಿಯರು ಪಾಸ್ಕದ ಮಾಂಸವನ್ನು ನಿಯಮದ ಪ್ರಕಾರ ಬೆಂಕಿಯಲ್ಲಿ ಸುಟ್ಟರು; ದೇವರಿಗೆ ಕಾಣಿಕೆಯಾಗಿ ಸಮರ್ಪಿತವಾದ ಪಶುಗಳ ಮಾಂಸವನ್ನು ಕೊಪ್ಪರಿಗೆ, ಬಾನೆ, ಹಂಡೆಗಳಲ್ಲಿ ಬೇಯಿಸಿ, ಬೇಗನೆ ತಂದು ಜನರಿಗೆ ಬಡಿಸಿದರು.
೧೪
ತರುವಾಯ ತಮಗೆ ಹಾಗು ಯಾಜಕರಿಗೆ ಭೋಜನವನ್ನು ಸಿದ್ಧಮಾಡಿದರು. ಆರೋನನ ಮಕ್ಕಳಾದ ಯಾಜಕರು ರಾತ್ರಿಯವರೆಗೂ ದಹನಬಲಿಗಳನ್ನೂ ಕೊಬ್ಬನ್ನೂ ಸಮರ್ಪಿಸುತ್ತಾ ಇದ್ದುದರಿಂದ ಲೇವಿಯರು ತಮಗೆ ಹೇಗೋ ಹಾಗೆ ಆರೋನನ ಮಕ್ಕಳಾದ ಯಾಜಕರಿಗೂ ಭೋಜನವನ್ನು ಸಿದ್ಧಮಾಡಿದರು.
೧೫
ಆಸಾಫ್ಯರಾದ ಗಾಯಕರು, ಅರಸನಾದ ದಾವೀದನ ಮತ್ತು ಆಸಾಫ್, ಹೇಮಾನ್ ಹಾಗು ಅರಸನ ದರ್ಶಿಯಾದ ಯೆದುತೂನ್ ಇವರ ಆಜ್ಞಾನುಸಾರ ತಮ್ಮ ಸ್ಥಳದಲ್ಲಿ ನಿಂತಿದ್ದರು; ದ್ವಾರಪಾಲಕರು ಆಯಾ ಬಾಗಿಲುಗಳನ್ನು ಕಾಯುತ್ತಿದ್ದರು. ಅವರ ಸಹೋದರರಾದ ಲೇವಿಯರು ಅವರ ಭೋಜನಕ್ಕೆ ಸಿದ್ಧಮಾಡುತ್ತಿದ್ದುದರಿಂದ ಅವರು ತಮ್ಮ ತಮ್ಮ ಸೇವೆಯನ್ನು ಬಿಡುವುದಕ್ಕೆ ಕಾರಣ ಇರಲಿಲ್ಲ.
೧೬
ಈ ಪ್ರಕಾರ ಅರಸ ಯೋಷೀಯನ ಅಪ್ಪಣೆಯಂತೆ ಪಾಸ್ಕವನ್ನು ಆಚರಿಸುವುದಕ್ಕೂ ಸರ್ವೇಶ್ವರನ ಬಲಿಪೀಠದ ಮೇಲೆ ದಹನಬಲಿಗಳನ್ನು ಅರ್ಪಿಸುವುದಕ್ಕೂ ಸರ್ವೇಶ್ವರನ ಸೇವೆಗೆ ಸಂಬಂಧವಾದುದೆಲ್ಲವೂ ಆ ದಿವಸವೇ ಸಿದ್ಧವಾಯಿತು.
೧೭
ಕೂಡಿಬಂದಿದ್ದ ಇಸ್ರಯೇಲರು ಆ ಸಂದರ್ಭದಲ್ಲಿ ಪಾಸ್ಕಹಬ್ಬವನ್ನು ಹಾಗು ಹುಳಿಯಿಲ್ಲದ ರೊಟ್ಟಿಗಳ ಜಾತ್ರೆಯನ್ನು ಏಳು ದಿನಗಳವರೆಗೆ ಆಚರಿಸಿದರು.
೧೮
ಇಂಥಾ ಪಾಸ್ಕಹಬ್ಬ ಪ್ರವಾದಿ ಸಮುವೇಲನ ದಿವಸಗಳಿಂದ ಇಸ್ರಯೇಲರಲ್ಲಿ ನಡೆದಿರಲಿಲ್ಲ. ಯೋಷೀಯನು, ಯಾಜಕರು, ಲೇವಿಯರು, ಕೂಡಿಬಂದಿದ್ದ ಇಸ್ರಯೇಲರು, ಯೆಹೂದ್ಯರು, ಹಾಗು ಜೆರುಸಲೇಮಿನವರು ಈ ಪಾಸ್ಕಹಬ್ಬವನ್ನು ಆಚರಿಸಿದಂತೆ ಇಸ್ರಯೇಲ್ ಅರಸರಲ್ಲಿ ಒಬ್ಬನೂ ಆಚರಿಸಿರಲಿಲ್ಲ.
೧೯
ಈ ಪಾಸ್ಕಹಬ್ಬ ಯೋಷೀಯನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ನಡೆಯಿತು.
೨೦
ಯೋಷೀಯನು ಮಹಾದೇವಾಲಯದ ವಿಷಯದಲ್ಲಿ ಈ ಎಲ್ಲ ವ್ಯವಸ್ಥೆಯನ್ನು ಮಾಡಿದ ನಂತರ, ಈಜಿಪ್ಟಿನ ರಾಜ ನೆಕೋ ಎಂಬುವನು ಯುದ್ಧಮಾಡುವುದಕ್ಕಾಗಿ ಯೂಫ್ರೆಟಿಸ್ ನದಿಯ ತೀರದಲ್ಲಿದ್ದ ಕರ್ಕೆಮೀಷಿಗೆ ಬಂದನು.
೨೧
ಯೋಷೀಯನು ಅವನಿಗೆ ವಿರುದ್ಧ ಹೊರಟನು. ನೆಕೋವನು ಅವನ ಬಳಿಗೆ ದೂತರನ್ನು ಕಳುಹಿಸಿ, “ಜುದೇಯದ ಅರಸನೇ, ನನ್ನ ಗೊಡವೆ ನಿನಗೇಕೆ? ನಾನು ಈ ಸಾರಿ ಯುದ್ಧಕ್ಕೆ ಹೊರಟಿದ್ದು ನಿನಗೆ ವಿರೋಧವಾಗಿ ಅಲ್ಲ, ನನ್ನ ಶತ್ರುವಂಶಕ್ಕೆ ವಿರೋಧವಾಗಿಯೇ, ನಾನು ಮುನ್ನುಗ್ಗಬೇಕೆಂದು ದೇವರ ಅಪ್ಪಣೆ ಆಗಿದೆ. ನನ್ನೊಂದಿಗಿರುವ ದೇವರಿಗೆ ವಿರೋಧವಾಗಿ ನೀನು ಕೈಯೆತ್ತುವುದನ್ನು ಬಿಡು. ಇಲ್ಲವಾದರೆ, ಅವರು ನಿನ್ನನ್ನು ನಾಶಮಾಡುವರು,” ಎಂದು ಹೇಳಿಸಿದನು.
೨೨
ಆದರೆ ಯೋಷೀಯನು ಅವನನ್ನು ಬಿಟ್ಟು ಹಿಂದಿರುಗಲಿಲ್ಲ. ದೇವೋಕ್ತಿಯಾಗಿದ್ದ ನೆಕೋವಿನ ಮಾತಿಗೆ ಕಿವಿಗೊಡದೆ, ವೇಷಹಾಕಿಕೊಂಡು ಅವನೊಡನೆ ಕಾದಾಡುವುದಕ್ಕೆ ಮೆಗಿದ್ದೋ ಬಯಲಿಗೆ ಹೋದನು.
೨೩
ಅಲ್ಲಿ ಬಿಲ್ಲುಗಾರರು ಅರಸ ಯೋಷೀಯನಿಗೆ ಬಾಣವನ್ನೆಸೆದಾಗ ಅವನು ತನ್ನ ಸೇವಕರಿಗೆ, “ನನಗೆ ದೊಡ್ಡ ಗಾಯವಾಯಿತು. ನನ್ನನ್ನು ಆಚೆಗೆ ತೆಗೆದುಕೊಂಡು ಹೋಗಿ,” ಎಂದನು.
೨೪
ಸೇವಕರು ಅವನನ್ನು ಯುದ್ಧ ರಥದಿಂದಿಳಿಸಿ, ಅವನ ಎರಡನೆಯ ರಥದಲ್ಲಿ ಮಲಗಿಸಿ, ಜೆರುಸಲೇಮಿಗೆ ತೆಗೆದುಕೊಂಡು ಹೋದರು. ಅಲ್ಲಿ ಅವನು ಸತ್ತನು. ಅವನ ಶವವನ್ನು ಅವನ ಪೂರ್ವಿಕರ ಸ್ಮಶಾನದಲ್ಲಿ ಸಮಾಧಿ ಮಾಡಿದರು. ಎಲ್ಲ ಯೆಹೂದ್ಯರೂ ಜೆರುಸಲೇಮಿನವರೂ ಯೋಷೀಯನ ಮರಣಕ್ಕಾಗಿ ಶೋಕಿಸಿದರು.
೨೫
ಯೆರೆಮೀಯನು ಯೋಷೀಯನನ್ನು ಕುರಿತು ಶೋಕಗೀತೆಯನ್ನು ರಚಿಸಿದನು. ಎಲ್ಲ ಗಾಯಕರೂ ಗಾಯಕಿಯರೂ ಅವನನ್ನು ಇಂದಿನವರೆಗು ತಮ್ಮ ಶೋಕಗೀತೆಗಳಲ್ಲಿ ವರ್ಣಿಸುತ್ತಿರುತ್ತಾರೆ. ಆ ಗೀತೆಗಳನ್ನು ಹಾಡುವುದು ಇಸ್ರಯೇಲರಲ್ಲಿ ಒಂದು ಪದ್ಧತಿಯಾಗಿದೆ. ಅವು ಶೋಕಗೀತೆ ಗ್ರಂಥದಲ್ಲಿ ಲಿಖಿತವಾಗಿವೆ.
೨೬
ಯೋಷೀಯನ ಉಳಿದ ಚರಿತ್ರೆ, ಸರ್ವೇಶ್ವರನ ಧರ್ಮಶಾಸ್ತ್ರ ಅನುಸಾರವಾಗಿ ಅವನು ಸಾಧಿಸಿದ ಧಾರ್ಮಿಕ ಸುಧಾರಣೆ ಹಾಗು
೨೭
ಅವನ ಪೂರ್ವೋತ್ತರ ವೃತ್ತಾಂತ ಇವು, ಇಸ್ರಯೇಲರ ಮತ್ತು ಯೆಹೂದ್ಯರ ರಾಜಗ್ರಂಥದಲ್ಲಿ ದಾಖಲಾಗಿವೆ.
ಕ್ರಾನಿಕಲ್ಸ್ ೨ ೩೫:1
ಕ್ರಾನಿಕಲ್ಸ್ ೨ ೩೫:2
ಕ್ರಾನಿಕಲ್ಸ್ ೨ ೩೫:3
ಕ್ರಾನಿಕಲ್ಸ್ ೨ ೩೫:4
ಕ್ರಾನಿಕಲ್ಸ್ ೨ ೩೫:5
ಕ್ರಾನಿಕಲ್ಸ್ ೨ ೩೫:6
ಕ್ರಾನಿಕಲ್ಸ್ ೨ ೩೫:7
ಕ್ರಾನಿಕಲ್ಸ್ ೨ ೩೫:8
ಕ್ರಾನಿಕಲ್ಸ್ ೨ ೩೫:9
ಕ್ರಾನಿಕಲ್ಸ್ ೨ ೩೫:10
ಕ್ರಾನಿಕಲ್ಸ್ ೨ ೩೫:11
ಕ್ರಾನಿಕಲ್ಸ್ ೨ ೩೫:12
ಕ್ರಾನಿಕಲ್ಸ್ ೨ ೩೫:13
ಕ್ರಾನಿಕಲ್ಸ್ ೨ ೩೫:14
ಕ್ರಾನಿಕಲ್ಸ್ ೨ ೩೫:15
ಕ್ರಾನಿಕಲ್ಸ್ ೨ ೩೫:16
ಕ್ರಾನಿಕಲ್ಸ್ ೨ ೩೫:17
ಕ್ರಾನಿಕಲ್ಸ್ ೨ ೩೫:18
ಕ್ರಾನಿಕಲ್ಸ್ ೨ ೩೫:19
ಕ್ರಾನಿಕಲ್ಸ್ ೨ ೩೫:20
ಕ್ರಾನಿಕಲ್ಸ್ ೨ ೩೫:21
ಕ್ರಾನಿಕಲ್ಸ್ ೨ ೩೫:22
ಕ್ರಾನಿಕಲ್ಸ್ ೨ ೩೫:23
ಕ್ರಾನಿಕಲ್ಸ್ ೨ ೩೫:24
ಕ್ರಾನಿಕಲ್ಸ್ ೨ ೩೫:25
ಕ್ರಾನಿಕಲ್ಸ್ ೨ ೩೫:26
ಕ್ರಾನಿಕಲ್ಸ್ ೨ ೩೫:27
ಕ್ರಾನಿಕಲ್ಸ್ ೨ 1 / ಕ್ರಾನಿ೨ 1
ಕ್ರಾನಿಕಲ್ಸ್ ೨ 2 / ಕ್ರಾನಿ೨ 2
ಕ್ರಾನಿಕಲ್ಸ್ ೨ 3 / ಕ್ರಾನಿ೨ 3
ಕ್ರಾನಿಕಲ್ಸ್ ೨ 4 / ಕ್ರಾನಿ೨ 4
ಕ್ರಾನಿಕಲ್ಸ್ ೨ 5 / ಕ್ರಾನಿ೨ 5
ಕ್ರಾನಿಕಲ್ಸ್ ೨ 6 / ಕ್ರಾನಿ೨ 6
ಕ್ರಾನಿಕಲ್ಸ್ ೨ 7 / ಕ್ರಾನಿ೨ 7
ಕ್ರಾನಿಕಲ್ಸ್ ೨ 8 / ಕ್ರಾನಿ೨ 8
ಕ್ರಾನಿಕಲ್ಸ್ ೨ 9 / ಕ್ರಾನಿ೨ 9
ಕ್ರಾನಿಕಲ್ಸ್ ೨ 10 / ಕ್ರಾನಿ೨ 10
ಕ್ರಾನಿಕಲ್ಸ್ ೨ 11 / ಕ್ರಾನಿ೨ 11
ಕ್ರಾನಿಕಲ್ಸ್ ೨ 12 / ಕ್ರಾನಿ೨ 12
ಕ್ರಾನಿಕಲ್ಸ್ ೨ 13 / ಕ್ರಾನಿ೨ 13
ಕ್ರಾನಿಕಲ್ಸ್ ೨ 14 / ಕ್ರಾನಿ೨ 14
ಕ್ರಾನಿಕಲ್ಸ್ ೨ 15 / ಕ್ರಾನಿ೨ 15
ಕ್ರಾನಿಕಲ್ಸ್ ೨ 16 / ಕ್ರಾನಿ೨ 16
ಕ್ರಾನಿಕಲ್ಸ್ ೨ 17 / ಕ್ರಾನಿ೨ 17
ಕ್ರಾನಿಕಲ್ಸ್ ೨ 18 / ಕ್ರಾನಿ೨ 18
ಕ್ರಾನಿಕಲ್ಸ್ ೨ 19 / ಕ್ರಾನಿ೨ 19
ಕ್ರಾನಿಕಲ್ಸ್ ೨ 20 / ಕ್ರಾನಿ೨ 20
ಕ್ರಾನಿಕಲ್ಸ್ ೨ 21 / ಕ್ರಾನಿ೨ 21
ಕ್ರಾನಿಕಲ್ಸ್ ೨ 22 / ಕ್ರಾನಿ೨ 22
ಕ್ರಾನಿಕಲ್ಸ್ ೨ 23 / ಕ್ರಾನಿ೨ 23
ಕ್ರಾನಿಕಲ್ಸ್ ೨ 24 / ಕ್ರಾನಿ೨ 24
ಕ್ರಾನಿಕಲ್ಸ್ ೨ 25 / ಕ್ರಾನಿ೨ 25
ಕ್ರಾನಿಕಲ್ಸ್ ೨ 26 / ಕ್ರಾನಿ೨ 26
ಕ್ರಾನಿಕಲ್ಸ್ ೨ 27 / ಕ್ರಾನಿ೨ 27
ಕ್ರಾನಿಕಲ್ಸ್ ೨ 28 / ಕ್ರಾನಿ೨ 28
ಕ್ರಾನಿಕಲ್ಸ್ ೨ 29 / ಕ್ರಾನಿ೨ 29
ಕ್ರಾನಿಕಲ್ಸ್ ೨ 30 / ಕ್ರಾನಿ೨ 30
ಕ್ರಾನಿಕಲ್ಸ್ ೨ 31 / ಕ್ರಾನಿ೨ 31
ಕ್ರಾನಿಕಲ್ಸ್ ೨ 32 / ಕ್ರಾನಿ೨ 32
ಕ್ರಾನಿಕಲ್ಸ್ ೨ 33 / ಕ್ರಾನಿ೨ 33
ಕ್ರಾನಿಕಲ್ಸ್ ೨ 34 / ಕ್ರಾನಿ೨ 34
ಕ್ರಾನಿಕಲ್ಸ್ ೨ 35 / ಕ್ರಾನಿ೨ 35
ಕ್ರಾನಿಕಲ್ಸ್ ೨ 36 / ಕ್ರಾನಿ೨ 36