A A A A A
×

ಕನ್ನಡ ಬೈಬಲ್ (KNCL) 2016

ಕ್ರಾನಿಕಲ್ಸ್ ೨ ೩೦

ತರುವಾಯ ಹಿಜ್ಕೀಯನು, ಇಸ್ರಯೇಲ್ ದೇವರಾದ ಸರ್ವೇಶ್ವರಸ್ವಾಮಿಯ ಪಾಸ್ಕವನ್ನು ಆಚರಿಸುವುದಕ್ಕಾಗಿ ಜೆರುಸಲೇಮಿನಲ್ಲಿರುವ ಸರ್ವೇಶ್ವರನ ಮಹಾಲಯಕ್ಕೆ ಬರಬೇಕೆಂದು ಎಲ್ಲ ಇಸ್ರಯೇಲರಿಗೆ, ಯೆಹೂದ್ಯರಿಗೆ, ಎಫ್ರಯಿಮರಿಗೆ ಹಾಗು ಮನಸ್ಸೆಯವರಿಗೆ ದೂತರ ಮುಖಾಂತರ ಮತ್ತು ಪತ್ರಗಳ ಮೂಲಕ ತಿಳಿಯಪಡಿಸಿದನು.
ಯಾಜಕರಲ್ಲಿ ತಕ್ಕಷ್ಟು ಮಂದಿ ತಮ್ಮನ್ನು ಶುದ್ಧಪಡಿಸಿಕೊಂಡಿರಲಿಲ್ಲ. ಜನರು ಜೆರುಸಲೇಮಿನಲ್ಲಿ ಇನ್ನೂ ಕೂಡಿಬಂದಿರಲಿಲ್ಲವಾದುದರಿಂದ ಪಾಸ್ಕವನ್ನು ಕೂಡಲೆ ಆಚರಿಸಲಾಗದೆಂದು ಅರಸನು, ಅವನ ಪದಾಧಿಕಾರಿಗಳು ಹಾಗು ಜೆರುಸಲೇಮಿನ ಸರ್ವಸಂಘದವರು ತಿಳಿದು
ಎರಡನೆಯ ತಿಂಗಳಿನಲ್ಲಿ ಅದನ್ನು ಆಚರಿಸಬೇಕೆಂದು ಅಭಿಪ್ರಾಯಪಟ್ಟರು.
ಈ ಅಭಿಪ್ರಾಯ ಅರಸನಿಗೂ ಸಾರ್ವಜನಿಕರಿಗೂ ಸರಿಕಂಡಿತು.
ಜನರು ಇಸ್ರಯೇಲ್ ದೇವರಾದ ಸರ್ವೇಶ್ವರನಿಗೆ ಪಾಸ್ಕವನ್ನು ಆಚರಿಸುವುದಕ್ಕಾಗಿ ಜೆರುಸಲೇಮಿಗೆ ಬರಬೇಕೆಂಬುದಾಗಿ ಬೇರ್ಷೆಬದಿಂದ ದಾನಿನವರೆಗೂ ವಾಸಿಸುವ ಇಸ್ರಯೇಲರೊಳಗೆ ಡಂಗುರ ಹೊಡಿಸಬೇಕೆಂದು ನಿರ್ಣಯಿಸಿದರು. ಆವರೆಗೂ, ಜನರಲ್ಲಿ ಹೆಚ್ಚುಮಂದಿ ಧರ್ಮಶಾಸ್ತ್ರವಿಧಿಯ ಮೇರೆಗೆ, ಪಾಸ್ಕವನ್ನು ಆಚರಿಸಲಿಲ್ಲ.
ಅರಸನ ಮತ್ತು ಅವನ ಪದಾಧಿಕಾರಿಗಳ ಪತ್ರವನ್ನು ತೆಗೆದುಕೊಂಡುಹೋದ ದೂತರು ಇಸ್ರಯೇಲ್ ಹಾಗು ಜುದೇಯ ನಾಡುಗಳಲ್ಲೆಲ್ಲಾ ಸಂಚರಿಸಿ ರಾಜಾಜ್ಞೆಯಂತೆ ಹೀಗೆಂದು ಪ್ರಕಟಿಸಿದರು: “ಇಸ್ರಯೇಲರೇ, ಅಬ್ರಹಾಮ್, ಇಸಾಕ್, ಇಸ್ರಯೇಲರ ದೇವರಾದ ಸರ್ವೇಶ್ವರನಿಗೆ ಅಭಿಮುಖರಾಗಿರಿ. ಆಗ ಅವರೂ ನಿಮ್ಮಲ್ಲಿ ಅಸ್ಸೀರಿಯಾದ ಅರಸನ ಕೈಗೆ ಸಿಕ್ಕದೆ ತಪ್ಪಿಸಿಕೊಂಡ ಅಳಿದುಳಿದವರಿಗೆ ಅಭಿಮುಖರಾಗುವರು.
ನಿಮ್ಮ ಹೆತ್ತವರೂ ಸಹೋದರರೂ ನಡೆದಂತೆ ನೀವೂ ನಡೆಯಬೇಡಿ. ಅವರು ತಮ್ಮ ಪಿತೃಗಳ ದೇವರಾದ ಸರ್ವೇಶ್ವರನಿಗೆ ದ್ರೋಹಿಗಳಾದರು; ಈ ಕಾರಣ ನಾಶನಕ್ಕೆ ಗುರಿಯಾದರು. ಅದಕ್ಕೆ ನೀವೇ ಸಾಕ್ಷಿಗಳು.
ಈಗ ನಿಮ್ಮ ಪೂರ್ವಜರಂತೆ ಆಜ್ಞೆಗೆ ಮಣಿಯದವರಾಗಬೇಡಿ. ಸರ್ವೇಶ್ವರನಿಗೆ ಅಧೀನರಾಗಿರಿ. ನಿಮ್ಮ ದೇವರಾದ ಸರ್ವೇಶ್ವರ ಸದಾಕಾಲಕ್ಕೂ ಪ್ರತಿಷ್ಠಿಸಿಕೊಂಡ ಪವಿತ್ರಾಲಯಕ್ಕೆ ಬಂದು ಅವರನ್ನು ಅವಲಂಬಿಸಿರಿ. ಆಗ ನಿಮ್ಮ ಮೇಲಿರುವ ಅವರ ಉಗ್ರಕೋಪ ತೊಲಗಿಹೋಗುವುದು.
ನೀವು ಸರ್ವೇಶ್ವರನಿಗೆ ಅಭಿಮುಖರಾದರೆ, ನಿಮ್ಮ ಸಹೋದರರೂ ಮಕ್ಕಳೂ ತಮ್ಮನ್ನು ಸೆರೆಯೊಯ್ದವರ ದೃಷ್ಟಿಯಲ್ಲಿ ದಯೆಗೆ ಪಾತ್ರರಾಗಿ, ಮರಳಿ ಸ್ವದೇಶಕ್ಕೆ ಬರುವರು. ನಿಮ್ಮ ದೇವರಾದ ಸರ್ವೇಶ್ವರ ದಯಾವಂತರು, ಕನಿಕರವುಳ್ಳವರು. ತಮಗೆ ಅಭಿಮುಖರಾಗುವ ನಿಮ್ಮನ್ನು ಕಟಾಕ್ಷಿಸದೆ ಇರುವುದಿಲ್ಲ.”
೧೦
ದೂತರು ಎಫ್ರಯಿಮ್, ಮನಸ್ಸೆ, ಜೆಬುಲೂನ್ ಪ್ರಾಂತಗಳಲ್ಲಿ ಪಟ್ಟಣದಿಂದ ಪಟ್ಟಣಕ್ಕೆ ಹೋದರು. ಆದರೆ ಜನರು ಅವರನ್ನು ಕಂಡು ನಕ್ಕು ಗೇಲಿಮಾಡಿದರು.
೧೧
ಕೆಲವು ಮಂದಿ ಆಶೇರ್ಯರು, ಮನಸ್ಸೆಯವರು ಹಾಗು ಜೆಬುಲೂನ್ಯರು ಮಾತ್ರ ದೀನಮನಸ್ಕರಾಗಿ ಜೆರುಸಲೇಮಿಗೆ ಬಂದರು.
೧೨
ಯೆಹೂದ್ಯರಾದರೋ ದೇವರ ಕೃಪಾಹಸ್ತದಿಂದ, ಅವರ ಪ್ರೇರಣೆಯಿಂದ, ಏಕಮನಸ್ಸುಳ್ಳವರಾಗಿ, ಸರ್ವೇಶ್ವರನ ಧರ್ಮಶಾಸ್ತ್ರಾನುಸಾರ, ಅರಸನಿಂದಲೂ ಅಧಿಕಾರಿಗಳಿಂದಲೂ ಹೊರಟ ಆಜ್ಞೆಯನ್ನು ಕೈಕೊಂಡರು.
೧೩
ಹೀಗೆ, ಅನೇಕಾನೇಕ ಜನರು ಎರಡನೆಯ ತಿಂಗಳಿನಲ್ಲಿ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸುವುದಕ್ಕಾಗಿ ಜೆರುಸಲೇಮಿನಲ್ಲಿ ಕೂಡಿದರು; ಅದೊಂದು ಮಹಾಕೂಟವಾಗಿತ್ತು.
೧೪
ಅವರು ಜೆರುಸಲೇಮಿನಲ್ಲಿದ್ದ ಯಜ್ಞವೇದಿಗಳನ್ನೂ ಧೂಪವೇದಿಗಳನ್ನೂ ತೆಗೆದುಕೊಂಡು ಹೋಗಿ ಕಿದ್ರೋನ್ ಹಳ್ಳದಲ್ಲಿ ಬಿಸಾಡಿಬಿಟ್ಟರು.
೧೫
ಆಮೇಲೆ ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿನ ಪಾಸ್ಕಹಬ್ಬಕ್ಕಾಗಿ ಕುರಿಮರಿಗಳನ್ನು ವಧಿಸಿದರು. ಯಾಜಕರೂ ಲೇವಿಯರೂ, ಮೊದಲನೆಯ ಸಾರಿ ತಪ್ಪಿದ್ದಕ್ಕಾಗಿ ನಾಚಿಕೆಪಟ್ಟು, ತಮ್ಮನ್ನು ಶುದ್ಧಪಡಿಸಿಕೊಂಡರು. ಸರ್ವೇಶ್ವರನ ಆಲಯದಲ್ಲಿ ದಹನಬಲಿಗಳನ್ನು ಸಮರ್ಪಿಸಿದರು;
೧೬
ತಮ್ಮ ತಮ್ಮ ಸ್ಥಳಗಳಲ್ಲಿ ನಿಂತು, ದೈವಪುರುಷನಾದ ಮೋಶೆಯ ಧರ್ಮಶಾಸ್ತ್ರದಿಂದ ತಮಗೆ ನೇಮಕವಾದ, ಸೇವೆಯನ್ನು ಸಲ್ಲಿಸಿದರು. ಯಾಜಕರು ಲೇವಿಯರ ಕೈಯಿಂದ ರಕ್ತವನ್ನು ತೆಗೆದುಕೊಂಡು ಅದನ್ನು ಪ್ರೋಕ್ಷಿಸಿದರು.
೧೭
ಜನಸಮೂಹದಲ್ಲಿ ಅನೇಕರು ತಮ್ಮನ್ನು ಶುದ್ಧಪಡಿಸಿಕೊಳ್ಳದೆ ಇದ್ದುದರಿಂದ, ಅಶುದ್ಧರಾಗಿದ್ದವರೆಲ್ಲರ ಬಲಿಪಶುಗಳು ಸರ್ವೇಶ್ವರನಿಗೆ ಮೀಸಲಾಗುವಂತೆ ಅವುಗಳನ್ನು ಲೇವಿಯರೇ ವಧಿಸಿದರು.
೧೮
ಜನರಲ್ಲಿ ಅನೇಕಾನೇಕರು ಅಂದರೆ, ಹೆಚ್ಚಾಗಿ ಎಫ್ರಯಿಮ್, ಮನಸ್ಸೆ, ಇಸ್ಸಾಕಾರ್ ಹಾಗು ಜೆಬಲೂನ್ ಪ್ರಾಂತಗಳವರು, ತಮ್ಮನ್ನು ಶುದ್ಧಪಡಿಸಿಕೊಳ್ಳದೆ, ಧರ್ಮಶಾಸ್ತ್ರಕ್ಕೆ ವಿರುದ್ಧವಾದ ರೀತಿಯಿಂದ, ಪಾಸ್ಕಭೋಜನವನ್ನು ಮಾಡಿದರು. ಆದರೆ ಹಿಜ್ಕೀಯನು, “ಸರ್ವೇಶ್ವರಾ, ದಯಾಪರರಾದ ದೇವರೇ, ಈ ದೇವಾಲಯಕ್ಕೆ ಯಾತ್ರಿಕರಾಗಿ ಬಂದಿರುವವರಲ್ಲಿ ಇರಬೇಕಾದ ಪರಿಶುದ್ಧತೆ ಅನೇಕರಲ್ಲಿ ಇಲ್ಲ.
೧೯
ಆದರೂ ಪಿತೃಗಳ ದೇವರಾದ ನಿಮ್ಮನ್ನು ಅರಸುವ ಮನಸ್ಸಿನಿಂದ ಬಂದಿರುವವರಿಗೆಲ್ಲಾ ಕ್ಷಮೆಯನ್ನು ಅನುಗ್ರಹಿಸಿರಿ,” ಎಂದು ವಿಜ್ಞಾಪನೆ ಮಾಡಿದನು.
೨೦
ಅಂತೆಯೇ ಸರ್ವೇಶ್ವರ ಹಿಜ್ಕೀಯನ ಪ್ರಾರ್ಥನೆಯನ್ನು ಆಲಿಸಿದರು; ಜನರಿಗೆ ಕೇಡು ಮಾಡಲಿಲ್ಲ.
೨೧
ಜೆರುಸಲೇಮಿನಲ್ಲಿ ಕೂಡಿಬಂದ ಇಸ್ರಯೇಲರು ಏಳು ದಿನಗಳವರೆಗೂ ಮಹಾಸಂತೋಷದಿಂದ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸಿದರು. ಲೇವಿಯರೂ ಯಾಜಕರೂ ಮಹಾವಾದ್ಯದೊಡನೆ ಸರ್ವೇಶ್ವರನನ್ನು ಪ್ರತಿದಿನವೂ ಕೀರ್ತಿಸುತ್ತಿದ್ದರು.
೨೨
ಹಿಜ್ಕೀಯನು ಸರ್ವೇಶ್ವರನ ಸೇವೆಯಲ್ಲಿ ನಿಪುಣರಾದ ಎಲ್ಲ ಲೇವಿಯರನ್ನು ಪುರಸ್ಕರಿಸಿದನು. ನೇಮಕವಾದ ಏಳು ದಿನಗಳವರೆಗೂ ಜನರು ಶಾಂತಿಸಮಾಧಾನ ಬಲಿಗಳನ್ನು ಅರ್ಪಿಸುತ್ತಾ ತಮ್ಮ ಪಿತೃಗಳ ದೇವರಾದ ಸರ್ವೇಶ್ವರನನ್ನು ತಮ್ಮ ದೇವರೆಂದು ಕೊಂಡಾಡುತ್ತಾ ಔತಣಮಾಡಿದರು.
೨೩
ಜುದೇಯದ ಅರಸ ಹಿಜ್ಕೀಯನು ಸಾವಿರ ಹೋರಿಗಳನ್ನು, ಏಳು ಸಾವಿರ ಕುರಿಗಳನ್ನು, ಪದಾಧಿಕಾರಿಗಳು ಸಾವಿರ ಹೋರಿಗಳನ್ನು ಹಾಗು ಹತ್ತು ಸಾವಿರ ಕುರಿಗಳನ್ನು ಜನರಿಗೆ ದಾನಮಾಡಿದರು; ಯಾಜಕರಲ್ಲಿ ಬಹುಮಂದಿ ತಮ್ಮನ್ನು ಶುದ್ಧಪಡಿಸಿಕೊಂಡರು.
೨೪
ಈ ಕಾರಣ, ಸಮೂಹದವರು ಇನ್ನೂ ಏಳು ದಿವಸ ಹಬ್ಬಮಾಡಬೇಕೆಂದು ತೀರ್ಮಾನಿಸಿಕೊಂಡರು. ಆ ಏಳು ದಿನಗಳಲ್ಲಿಯೂ ಬಹಳವಾಗಿ ಸಂತೋಷದಿಂದ ಹಬ್ಬವನ್ನು ಆಚರಿಸಿದರು.
೨೫
ಯೆಹೂದ್ಯರ ಸರ್ವಸಮೂಹದವರು, ಯಾಜಕರು, ಲೇವಿಯರು ಇಸ್ರಯೇಲ್ ಪ್ರಾಂತಗಳಿಂದ ನೆರೆದುಬಂದವರು ಎಲ್ಲರು ಹಾಗು ಇಸ್ರಯೇಲ್, ಜುದೇಯ ಪ್ರಾಂತ್ಯಗಳಲ್ಲಿದ್ದ ಪ್ರವಾಸಿಗಳು ಈ ಉತ್ಸವದಲ್ಲಿ ಪಾಲುಗಾರರಾಗಿದ್ದರು.
೨೬
ದಾವೀದನ ಮಗನೂ ಇಸ್ರಯೇಲರ ಅರಸನೂ ಆದ ಸೊಲೊಮೋನನ ಕಾಲದಿಂದ ಜೆರುಸಲೇಮಿನಲ್ಲಿ ಅಂಥ ಉತ್ಸವ ನಡೆದಿರಲಿಲ್ಲ. ಆದುದರಿಂದ ಜೆರುಸಲೇಮಿನಲ್ಲಿ ಹೇಳತೀರದ ಆನಂದವಿತ್ತು.
೨೭
ಯಾಜಕರು ಆಗಿದ್ದ ಲೇವಿಯರು ಆಮೇಲೆ ಎದ್ದು ನಿಂತು ಜನರನ್ನು ಆಶೀರ್ವದಿಸಿದರು. ಅವರ ಸ್ವರ ದೇವರಿಗೆ ಕೇಳಿಸಿತು; ಅವರ ಪ್ರಾರ್ಥನೆ ಪರಲೋಕದಲ್ಲಿರುವ ಆ ದೇವರ ಪರಿಶುದ್ಧ ನಿವಾಸಕ್ಕೆ ಮುಟ್ಟಿತು.
ಕ್ರಾನಿಕಲ್ಸ್ ೨ ೩೦:1
ಕ್ರಾನಿಕಲ್ಸ್ ೨ ೩೦:2
ಕ್ರಾನಿಕಲ್ಸ್ ೨ ೩೦:3
ಕ್ರಾನಿಕಲ್ಸ್ ೨ ೩೦:4
ಕ್ರಾನಿಕಲ್ಸ್ ೨ ೩೦:5
ಕ್ರಾನಿಕಲ್ಸ್ ೨ ೩೦:6
ಕ್ರಾನಿಕಲ್ಸ್ ೨ ೩೦:7
ಕ್ರಾನಿಕಲ್ಸ್ ೨ ೩೦:8
ಕ್ರಾನಿಕಲ್ಸ್ ೨ ೩೦:9
ಕ್ರಾನಿಕಲ್ಸ್ ೨ ೩೦:10
ಕ್ರಾನಿಕಲ್ಸ್ ೨ ೩೦:11
ಕ್ರಾನಿಕಲ್ಸ್ ೨ ೩೦:12
ಕ್ರಾನಿಕಲ್ಸ್ ೨ ೩೦:13
ಕ್ರಾನಿಕಲ್ಸ್ ೨ ೩೦:14
ಕ್ರಾನಿಕಲ್ಸ್ ೨ ೩೦:15
ಕ್ರಾನಿಕಲ್ಸ್ ೨ ೩೦:16
ಕ್ರಾನಿಕಲ್ಸ್ ೨ ೩೦:17
ಕ್ರಾನಿಕಲ್ಸ್ ೨ ೩೦:18
ಕ್ರಾನಿಕಲ್ಸ್ ೨ ೩೦:19
ಕ್ರಾನಿಕಲ್ಸ್ ೨ ೩೦:20
ಕ್ರಾನಿಕಲ್ಸ್ ೨ ೩೦:21
ಕ್ರಾನಿಕಲ್ಸ್ ೨ ೩೦:22
ಕ್ರಾನಿಕಲ್ಸ್ ೨ ೩೦:23
ಕ್ರಾನಿಕಲ್ಸ್ ೨ ೩೦:24
ಕ್ರಾನಿಕಲ್ಸ್ ೨ ೩೦:25
ಕ್ರಾನಿಕಲ್ಸ್ ೨ ೩೦:26
ಕ್ರಾನಿಕಲ್ಸ್ ೨ ೩೦:27
ಕ್ರಾನಿಕಲ್ಸ್ ೨ 1 / ಕ್ರಾನಿ೨ 1
ಕ್ರಾನಿಕಲ್ಸ್ ೨ 2 / ಕ್ರಾನಿ೨ 2
ಕ್ರಾನಿಕಲ್ಸ್ ೨ 3 / ಕ್ರಾನಿ೨ 3
ಕ್ರಾನಿಕಲ್ಸ್ ೨ 4 / ಕ್ರಾನಿ೨ 4
ಕ್ರಾನಿಕಲ್ಸ್ ೨ 5 / ಕ್ರಾನಿ೨ 5
ಕ್ರಾನಿಕಲ್ಸ್ ೨ 6 / ಕ್ರಾನಿ೨ 6
ಕ್ರಾನಿಕಲ್ಸ್ ೨ 7 / ಕ್ರಾನಿ೨ 7
ಕ್ರಾನಿಕಲ್ಸ್ ೨ 8 / ಕ್ರಾನಿ೨ 8
ಕ್ರಾನಿಕಲ್ಸ್ ೨ 9 / ಕ್ರಾನಿ೨ 9
ಕ್ರಾನಿಕಲ್ಸ್ ೨ 10 / ಕ್ರಾನಿ೨ 10
ಕ್ರಾನಿಕಲ್ಸ್ ೨ 11 / ಕ್ರಾನಿ೨ 11
ಕ್ರಾನಿಕಲ್ಸ್ ೨ 12 / ಕ್ರಾನಿ೨ 12
ಕ್ರಾನಿಕಲ್ಸ್ ೨ 13 / ಕ್ರಾನಿ೨ 13
ಕ್ರಾನಿಕಲ್ಸ್ ೨ 14 / ಕ್ರಾನಿ೨ 14
ಕ್ರಾನಿಕಲ್ಸ್ ೨ 15 / ಕ್ರಾನಿ೨ 15
ಕ್ರಾನಿಕಲ್ಸ್ ೨ 16 / ಕ್ರಾನಿ೨ 16
ಕ್ರಾನಿಕಲ್ಸ್ ೨ 17 / ಕ್ರಾನಿ೨ 17
ಕ್ರಾನಿಕಲ್ಸ್ ೨ 18 / ಕ್ರಾನಿ೨ 18
ಕ್ರಾನಿಕಲ್ಸ್ ೨ 19 / ಕ್ರಾನಿ೨ 19
ಕ್ರಾನಿಕಲ್ಸ್ ೨ 20 / ಕ್ರಾನಿ೨ 20
ಕ್ರಾನಿಕಲ್ಸ್ ೨ 21 / ಕ್ರಾನಿ೨ 21
ಕ್ರಾನಿಕಲ್ಸ್ ೨ 22 / ಕ್ರಾನಿ೨ 22
ಕ್ರಾನಿಕಲ್ಸ್ ೨ 23 / ಕ್ರಾನಿ೨ 23
ಕ್ರಾನಿಕಲ್ಸ್ ೨ 24 / ಕ್ರಾನಿ೨ 24
ಕ್ರಾನಿಕಲ್ಸ್ ೨ 25 / ಕ್ರಾನಿ೨ 25
ಕ್ರಾನಿಕಲ್ಸ್ ೨ 26 / ಕ್ರಾನಿ೨ 26
ಕ್ರಾನಿಕಲ್ಸ್ ೨ 27 / ಕ್ರಾನಿ೨ 27
ಕ್ರಾನಿಕಲ್ಸ್ ೨ 28 / ಕ್ರಾನಿ೨ 28
ಕ್ರಾನಿಕಲ್ಸ್ ೨ 29 / ಕ್ರಾನಿ೨ 29
ಕ್ರಾನಿಕಲ್ಸ್ ೨ 30 / ಕ್ರಾನಿ೨ 30
ಕ್ರಾನಿಕಲ್ಸ್ ೨ 31 / ಕ್ರಾನಿ೨ 31
ಕ್ರಾನಿಕಲ್ಸ್ ೨ 32 / ಕ್ರಾನಿ೨ 32
ಕ್ರಾನಿಕಲ್ಸ್ ೨ 33 / ಕ್ರಾನಿ೨ 33
ಕ್ರಾನಿಕಲ್ಸ್ ೨ 34 / ಕ್ರಾನಿ೨ 34
ಕ್ರಾನಿಕಲ್ಸ್ ೨ 35 / ಕ್ರಾನಿ೨ 35
ಕ್ರಾನಿಕಲ್ಸ್ ೨ 36 / ಕ್ರಾನಿ೨ 36