A A A A A
×

ಕನ್ನಡ ಬೈಬಲ್ (KNCL) 2016

ಕ್ರಾನಿಕಲ್ಸ್ ೨ ೨೯

ಹಿಜ್ಕೀಯನು ಪಟ್ಟಕ್ಕೆ ಬಂದಾಗ ಅವನಿಗೆ ಇಪ್ಪತ್ತೈದು ವರ್ಷ ಪ್ರಾಯ. ಅವನು ಜೆರುಸಲೇಮಿನಲ್ಲಿ ಇಪ್ಪತ್ತೊಂಬತ್ತು ವರ್ಷ ಆಳಿದನು. ಜೆಕರ್ಯನ ಮಗಳಾದ ಅಬೀಯ ಎಂಬಾಕೆ ಅವನ ತಾಯಿ.
ಅವನು ಎಲ್ಲಾ ವಿಷಯಗಳಲ್ಲೂ ತನ್ನ ಪೂರ್ವಜ ದಾವೀದನಂತೆ ಸರ್ವೇಶ್ವರನ ಚಿತ್ತಾನುಸಾರ ನಡೆದನು.
ಹಿಜ್ಕೀಯನು ತನ್ನ ಆಳ್ವಿಕೆಯ ಮೊದಲನೆಯ ವರ್ಷದ ಮೊದಲನೆಯ ತಿಂಗಳಲ್ಲಿ ಸರ್ವೇಶ್ವರನ ಆಲಯದ ಬಾಗಿಲುಗಳನ್ನು ತೆರೆಯಿಸಿ ಅವುಗಳನ್ನು ಭದ್ರಪಡಿಸಿದನು.
ಆಮೇಲೆ ಯಾಜಕರನ್ನೂ ಲೇವಿಯರನ್ನೂ ದೇವಾಲಯದ ಪೂರ್ವದಿಕ್ಕಿನ ಬಯಲಿನಲ್ಲಿ ಕೂಡಿಸಿ ಅವರಿಗೆ,
“ಲೇವಿಯರೇ, ನನ್ನ ಮಾತನ್ನು ಕೇಳಿರಿ; ಈಗ ನಿಮ್ಮನ್ನೇ ಶುದ್ಧಪಡಿಸಿಕೊಂಡು, ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರನ ಪವಿತ್ರಾಲಯದಿಂದ ಹೊಲಸನ್ನೆಲ್ಲಾ ಹೊರಗೆ ಹಾಕಿ, ಆಲಯವನ್ನು ಶುದ್ಧೀಕರಿಸಿರಿ.
ನಿಮ್ಮ ಪೂರ್ವಜರು ನಮ್ಮ ದೇವರಾದ ಸರ್ವೇಶ್ವರನಿಗೆ ದ್ರೋಹಮಾಡಿ ಅವರ ಚಿತ್ತಕ್ಕೆ ವಿರುದ್ಧ ನಡೆದು ಅವರನ್ನು ತೊರೆದುಬಿಟ್ಟರು; ಅವರ ನಿವಾಸ ಸ್ಥಳಕ್ಕೆ ಬೆನ್ನುಕೊಟ್ಟು ವಿಮುಖರಾದರು.
ಅದರ ಮಂಟಪದ ಬಾಗಿಲುಗಳನ್ನು ಮುಚ್ಚಿ, ದೀಪಗಳನ್ನು ನಂದಿಸಿದರು; ಇಸ್ರಯೇಲ್‍ದೇವರ ಪವಿತ್ರಸ್ಥಾನದಲ್ಲಿ ಧೂಪಾರತಿ ಎತ್ತುವುದನ್ನೂ ದಹನಬಲಿ ಸಮರ್ಪಿಸುವುದನ್ನೂ ನಿಲ್ಲಿಸಿಬಿಟ್ಟರು.
ಆದುದರಿಂದ ಸರ್ವೇಶ್ವರ, ಜುದೇಯ ನಾಡಿನ ಮೇಲೂ ಜೆರುಸಲೇಮಿನ ಮೇಲೂ ಕೋಪಗೊಂಡು ಅವುಗಳನ್ನು ಭಯಭೀತಿಗೂ ಹಾಸ್ಯಪರಿಹಾಸ್ಯಗಳಿಗೂ ಆಸ್ಪದವಾಗಿಸಿದ್ದಾರೆ. ಇದಕ್ಕೆ ನೀವೇ ಸಾಕ್ಷಿಗಳು.
ಅದೇ ಕಾರಣದಿಂದ ನಮ್ಮ ಹಿರಿಯರು ಕತ್ತಿಗೆ ತುತ್ತಾಗಿದ್ದಾರೆ. ನಮ್ಮ ಗಂಡುಹೆಣ್ಣುಮಕ್ಕಳೂ ಹೆಂಡತಿಯರೂ ಸೆರೆಯಾಳುಗಳಾಗಿ ಹೋಗಬೇಕಾಯಿತು.
೧೦
ಈಗ ನಮ್ಮ ಮೇಲಿರುವ ದೈವಕೋಪಾಗ್ನಿ ತೊಲಗಿಹೋಗುವಂತೆ ಇಸ್ರಯೇಲ್ ದೇವರಾದ ಸರ್ವೇಶ್ವರನೊಡನೆ ಒಡಂಬಡಿಕೆ ಮಾಡಿಕೊಳ್ಳುವುದಕ್ಕೆ ತೀರ್ಮಾನಿಸಿದ್ದೇನೆ.
೧೧
ಹೀಗಿರಲಾಗಿ ನನ್ನ ಮಕ್ಕಳೇ, ಉದಾಸೀನರಾಗಿರಬೇಡಿ; ಸರ್ವೇಶ್ವರ ತಮ್ಮನ್ನು ಆರಾಧಿಸುವುದಕ್ಕೂ ತಮಗೆ ಧೂಪಾರತಿ ಎತ್ತುವುದಕ್ಕೂ ನಿಮ್ಮನ್ನು ತಮ್ಮ ಸಾನ್ನಿಧ್ಯಸೇವಕರನ್ನಾಗಿ ಆರಿಸಿಕೊಂಡರಲ್ಲವೇ?’ ಎಂದು ಹೇಳಿದನು.
೧೨
ಕೂಡಲೆ ಕೆಹಾತ್ಯರಲ್ಲಿ ಅಮಾಸೈಯ ಮಗ ಮೆಹತ್, ಅಜರ್ಯನ ಮಗ ಯೋವೇಲ್, ಮೆರಾರೀಯರಲ್ಲಿ ಅಬ್ದೀಯ ಮಗ ಕೀಷ್, ಯೆಹಲ್ಲೆಲೇಲನ ಮಗ ಅಜರ್ಯ, ಗೆರ್ಷೋನ್ಯರಲ್ಲಿ ಜಿಮ್ಮನ ಮಗ ಯೋವಾಹ,
೧೩
ಯೋವಾಹನ ಮಗ ಏದೆನ್, ಎಲೀಚಾಫಾನ್ಯರಲ್ಲಿ ಶಿಮ್ರೀ, ಯೆಗೀಯೇಲ್, ಅಸಾಫ್ಯರಲ್ಲಿ ಜೆಕರ್ಯ,
೧೪
ಮತ್ತನ್ಯ, ಹೇಮಾನ್ಯರಲ್ಲಿ ಯೆಹೀಯೇಲ್, ಶಿಮ್ಮೀ, ಯೆದೂತೂನ್ಯರಲ್ಲಿ ಶೆಮಾಯ ಹಾಗು ಉಜ್ಜೀಯೇಲ್
೧೫
ಎಂಬ ಲೇವಿಯರು ಮುಂದೆ ಬಂದು ತಮ್ಮ ಸಹೋದರರನ್ನು ಒಂದುಗೂಡಿಸಿದರು. ಅವರು ಅರಸನ ಆಜ್ಞಾಧಾರಕರಾಗಿ ಸರ್ವೇಶ್ವರನ ಧರ್ಮಶಾಸ್ತ್ರವಿಧಿಯ ಮೇರೆಗೆ ತಮ್ಮನ್ನು ಶುದ್ಧಪಡಿಸಿಕೊಂಡು ಸರ್ವೇಶ್ವರನ ಆಲಯವನ್ನು ಶುದ್ಧೀಕರಿಸುವುದಕ್ಕೆ ಸಿದ್ಧರಾದರು.
೧೬
ಯಾಜಕರು ಸರ್ವೇಶ್ವರನ ಆಲಯವನ್ನು‍ ಶುದ್ಧಮಾಡುವುದಕ್ಕೆ ಒಳಗೆ ಹೋಗಿ ಪವಿತ್ರಸ್ಥಾನದಲ್ಲಿದ್ದ ಹೊಲಸನ್ನೆಲ್ಲಾ ಹೊರಗೆ ತಂದು ಪ್ರಾಕಾರದಲ್ಲಿ ಹಾಕಿದರು. ಲೇವಿಯರು ಅದನ್ನು ಕೂಡಿಸಿ ಹೊರಗೆ ಒಯ್ದು ಕಿದ್ರೋನ್ ಹಳ್ಳದಲ್ಲಿ ಹಾಕಿದರು.
೧೭
ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಈ ಶುದ್ಧೀಕರಣವನ್ನು ಪ್ರಾರಂಭಿಸಿದರು. ಎಂಟನೆಯ ದಿನದಲ್ಲಿ ಸರ್ವೇಶ್ವರನ ಆಲಯದ ಮಂಟಪಕ್ಕೆ ಕೈಹಾಕಿದರು; ಹೀಗೆ ಸರ್ವೇಶ್ವರನ ಆಲಯವನ್ನು ಶುದ್ಧಪಡಿಸುವುದರಲ್ಲಿ ಎಂಟು ದಿನಗಳು ಕಳೆದವು. ಮೊದಲನೆಯ ತಿಂಗಳಿನ ಹದಿನಾರನೆಯ ದಿನದಲ್ಲಿ ಕೆಲಸವೆಲ್ಲಾ ಮುಗಿಯಿತು.
೧೮
ಆಮೇಲೆ ಅವರು ಅರಮನೆಗೆ ಹೋಗಿ, ಅರಸ ಹಿಜ್ಕೀಯನಿಗೆ, “ನಾವು ಸರ್ವೇಶ್ವರನ ಆಲಯವನ್ನು ಪೂರ್ತಿಯಾಗಿ ಶುದ್ಧೀಕರಿಸಿದೆವು. ಬಲಿಪೀಠವನ್ನು, ಅದರ ಉಪಕರಣಗಳನ್ನು, ನೈವೇದ್ಯ ರೊಟ್ಟಿಗಳನ್ನಿಡತಕ್ಕ ಮೇಜನ್ನು ಹಾಗು ಅದರ ಸಾಮಗ್ರಿಗಳನ್ನೂ ಶುದ್ಧಮಾಡಿದೆವು.
೧೯
ಅರಸ ಅಹಾಜನು, ತನ್ನ ಆಳ್ವಿಕೆಯಲ್ಲಿ ದೇವದ್ರೋಹಿಯಾಗಿ ತಳ್ಳಿಬಿಟ್ಟಿದ್ದ ಪಾತ್ರೆಗಳನ್ನು ಮತ್ತೆ ತಂದು ಇಟ್ಟು ಪ್ರತಿಷ್ಠಿಸಿದ್ದೇವೆ; ಅವು ಈಗ ಸರ್ವೇಶ್ವರನ ಬಲಿಪೀಠದ ಮುಂದಿರುತ್ತವೆ,” ಎಂದು ವರದಿಮಾಡಿದರು.
೨೦
ಅರಸ ಹಿಜ್ಕೀಯನು ಮರುದಿನ ಬೆಳಗಿನ ಜಾವದಲ್ಲೆದ್ದು ಪಟ್ಟಣದ ಮುಖಂಡರನ್ನು ಕೂಡಿಸಿ ಅವರೊಡನೆ ಸರ್ವೇಶ್ವರನ ಆಲಯಕ್ಕೆ ಹೋದನು.
೨೧
ಅವರು ಸರಕಾರಿ, ದೇವಾಲಯ ಹಾಗು ಯೆಹೂದಪ್ರಜೆ ಇವುಗಳಿಗಾಗಿ ದೋಷಪರಿಹಾರಕ ಬಲಿಯರ್ಪಿಸುವುದಕ್ಕಾಗಿ ಹೋರಿ, ಟಗರು, ಕುರಿಮರಿ, ಹೋತ, ಇವುಗಳಲ್ಲಿ ಏಳೇಳನ್ನು ತಂದರು. ಅರಸನು ಯಾಜಕ ಆರೋನನ ಸಂತಾನದವರಿಗೆ ಸರ್ವೇಶ್ವರನ ಬಲಿಪೀಠದ ಮೇಲೆ ದಹನಬಲಿ ಮಾಡಬೇಕೆಂದು ಆಜ್ಞಾಪಿಸಿದನು.
೨೨
ಹೋರಿಗಳನ್ನು ವಧಿಸಿದ ಮೇಲೆ ಯಾಜಕರು ರಕ್ತವನ್ನು ಕೂಡಿಸಿ ಬಲಿಪೀಠಕ್ಕೆ ಪ್ರೋಕ್ಷಿಸಿದರು. ಅನಂತರ ಟಗರುಗಳನ್ನು ವಧಿಸಿ ಅವುಗಳ ರಕ್ತವನ್ನು ಬಲಿಪೀಠಕ್ಕೆ ಪ್ರೋಕ್ಷಿಸಿದರು. ಆಮೇಲೆ ಕುರಿದನಗಳನ್ನು ವಧಿಸಿ ಅವುಗಳ ರಕ್ತವನ್ನೂ ಬಲಿಪೀಠಕ್ಕೆ ಪ್ರೋಕ್ಷಿಸಿದರು.
೨೩
ಕಡೆಯಲ್ಲಿ ದೋಷಪರಿಹಾರಕ ಬಲಿಗಾಗಿ ತಂದ ಹೋತಗಳನ್ನು ಅರಸನ ಮುಂದೆಯೂ ಸಮಾಜದವರ ಮುಂದೆಯೂ ನಿಲ್ಲಿಸಿದರು. ಅವರು ಅವುಗಳ ಮೇಲೆ ತಮ್ಮ ಕೈಗಳನ್ನು ಚಾಚಿದರು.
೨೪
ಅನಂತರ ಯಾಜಕರು ಅವುಗಳನ್ನು ವಧಿಸಿ ಅವುಗಳ ರಕ್ತವನ್ನು ಸಮಸ್ತ ಇಸ್ರಯೇಲರ ದೋಷಪರಿಹಾರಕ್ಕಾಗಿ ಬಲಿಪೀಠದ ಮೇಲೆ ಸುರಿದರು. ಆ ದಹನಬಲಿಗಳೂ ದೋಷಪರಿಹಾರಕ ಬಲಿಗಳೂ ಎಲ್ಲ ಇಸ್ರಯೇಲರ ಪರವಾಗಿ ಆಗಬೇಕೆಂದು ಅರಸನು ಆಜ್ಞಾಪಿಸಿದ್ದನು.
೨೫
ಇದಲ್ಲದೆ, ಅವನು ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಭಜಿಸುವುದಕ್ಕಾಗಿ ಲೇವಿಯರನ್ನು ನೇಮಿಸಿದನು. ದಾವೀದನ ರಾಜದರ್ಶಿಯಾದ ಗಾದ್ ಹಾಗು ಪ್ರವಾದಿ ನಾತಾನ್ ಇವರ ಆಜ್ಞಾನುಸಾರ ಸರ್ವೇಶ್ವರನ ಆಲಯದಲ್ಲಿ ಈ ಗಾಯಕರನ್ನು ಇರಿಸಿದ್ದನು. ಸರ್ವೇಶ್ವರಸ್ವಾಮಿಯೇ ಪ್ರವಾದಿಗಳ ಮುಖಾಂತರ ಹೀಗೆ ಆಜ್ಞಾಪಿಸಿದ್ದರು.
೨೬
ಆ ಲೇವಿಯರು ದಾವೀದನ ವಾದ್ಯಗಳನ್ನೂ ಯಾಜಕರು ತುತೂರಿಗಳನ್ನೂ ಹಿಡಿದು ನಿಂತಿರಲು ಹಿಜ್ಕೀಯನು ಬಲಿಪೀಠದ ಮೇಲೆ ದಹನಬಲಿಯನ್ನು ಸಮರ್ಪಿಸುವುದಕ್ಕೆ ಆಜ್ಞಾಪಿಸಿದನು.
೨೭
ಹೀಗೆ ದಹನಬಲಿ ಸಮರ್ಪಣೆ ಪ್ರಾರಂಭಿಸಿದೊಡನೆ ಇಸ್ರಯೇಲ್ ಅರಸ ದಾವೀದನ ವಾದ್ಯಗಳಿಂದ ಸರ್ವೇಶ್ವರನನ್ನು ಭಜಿಸುವುದೂ ತುತೂರಿ ಊದುವುದೂ ಆರಂಭವಾಯಿತು.
೨೮
ದಹನಬಲಿ ಸಮರ್ಪಣೆಯು ಮುಗಿಯುವವರೆಗೆ ಸಭೆಸೇರಿದವರು ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಇದ್ದರು; ಗಾಯಕರು ಗಾನ ಮಾಡುತ್ತಾ ಇದ್ದರು; ತುತೂರಿ ಊದುವವರು ಊದುತ್ತಾ ಇದ್ದರು.
೨೯
ದಹನಬಲಿ ಸಮರ್ಪಣೆ ತೀರಿದ ಮೇಲೆ ಅರಸನೂ ಅವನ ಜೊತೆಯಲ್ಲಿದ್ದವರೆಲ್ಲರೂ ಸಾಷ್ಟಾಂಗ ನಮಸ್ಕಾರ ಮಾಡಿದರು.
೩೦
ಅರಸ ಹಿಜ್ಕೀಯನೂ ಪದಾಧಿಕಾರಿಗಳೂ ದಾವೀದನ ಮತ್ತು ದರ್ಶಿಯಾದ ಆಸಾಫನ ಕೀರ್ತನೆಗಳಿಂದ ಸರ್ವೇಶ್ವರನನ್ನು ಸ್ತುತಿಸಬೇಕೆಂದು ಲೇವಿಯರಿಗೆ ಆಜ್ಞಾಪಿಸಿದರು. ಅವರು ಉತ್ಸಾಹದಿಂದ ಸ್ತುತಿಸುತ್ತಾ ತಲೆಬಾಗಿ ನಮಸ್ಕರಿಸಿದರು.
೩೧
ಆಮೇಲೆ ಹಿಜ್ಕೀಯನು ಸಭೆ ಸೇರಿದವರಿಗೆ, “ನೀವು ಈಗ ಸರ್ವೇಶ್ವರನಿಗಾಗಿ ನಿಮ್ಮನ್ನೇ ಪ್ರತಿಷ್ಠಿಸಿಕೊಂಡಿದ್ದೀರಿ; ಹತ್ತಿರ ಬಂದು ಸರ್ವೇಶ್ವರನ ಆಲಯಕ್ಕೆ ಸಮಾಧಾನಬಲಿಗಳನ್ನೂ ಕೃತಜ್ಞತಾಬಲಿಗಳನ್ನೂ ಸಮರ್ಪಿಸಿರಿ,” ಎಂದನು. ಸಭೆ ಸೇರಿದ್ದವರು ಸಮಾಧಾನ ಬಲಿಗಳನ್ನೂ ಕೃತಜ್ಞತಾಬಲಿಗಳನ್ನೂ ಸಮರ್ಪಿಸಿದ್ದಲ್ಲದೆ, ಅನೇಕರು ಸ್ವಇಚ್ಛೆಯಿಂದ ದಹನಬಲಿಗಳನ್ನೂ ಸಮರ್ಪಿಸಿದರು.
೩೨
ಹೀಗೆ ಸಭಿಕರು ದಹನಬಲಿದಾನಕ್ಕಾಗಿ ತಂದೊಪ್ಪಿಸಿದ ಹೋರಿಗಳು ಎಪ್ಪತ್ತು, ಟಗರುಗಳು ನೂರು, ಕುರಿಮರಿಗಳು ಇನ್ನೂರು. ಇವೆಲ್ಲವು ಸರ್ವೇಶ್ವರನಿಗೆ ದಹನಬಲಿ ಸಮರ್ಪಣೆಗಾಗಿಯೇ ಕೊಡಲಾದುವು.
೩೩
ಹೀಗೆ ದೇವರಿಗೆ ಕಾಣಿಕೆಯಾಗಿ ತರಲಾದ ಹೋರಿಗಳು ಆರುನೂರು, ಕುರಿಗಳು ಮೂರು ಸಾವಿರ.
೩೪
ಈ ಎಲ್ಲಾ ಪ್ರಾಣಿಗಳನ್ನು ವಧಿಸುವ ಕೆಲಸಕ್ಕೆ ಯಾಜಕರು ಸಾಲದೆಹೋದುದರಿಂದ ಆ ಕಾರ್ಯ ಮುಗಿವ ತನಕ, ಅವರ ಬಂಧುಗಳಾದ ಲೇವಿಯರು ಅವರಿಗೆ ಸಹಾಯ ಮಾಡುತ್ತಿದ್ದರು; ಅಷ್ಟರಲ್ಲಿ ಮಿಕ್ಕ ಯಾಜಕರು ತಮ್ಮನ್ನೇ ಶುದ್ಧೀಪಡಿಸಿಕೊಳ್ಳುತ್ತಿದ್ದರು. ತಮ್ಮನ್ನು ಶುದ್ಧಪಡಿಸಿಕೊಳ್ಳುವುದರಲ್ಲಿ ಯಾಜಕರಿಗಿಂತ ಲೇವಿಯರೇ ಹೆಚ್ಚು ಶ್ರದ್ಧೆಯುಳ್ಳವರಾಗಿದ್ದರು.
೩೫
ಇದಲ್ಲದೆ, ಯಾಜಕರು ಸಮರ್ಪಿಸಬೇಕಾಗಿದ್ದ ದಹನಬಲಿ, ಶಾಂತಿಸಮಾಧಾನ ಬಲಿಗಳ ಕೊಬ್ಬು ಹಾಗು ದಹನಬಲಿ ಸಂಬಂಧವಾದ ಪಾನದ್ರವ್ಯ ಇವೂ ಅಪಾರವಾಗಿ ಇದ್ದವು.
೩೬
ಹೀಗೆ ಸರ್ವೇಶ್ವರನ ಆಲಯದ ಸೇವಾಕ್ರಮವು ಪುನಃ ಸ್ಥಾಪಿತವಾಯಿತು. ಯಾರೂ ಗಮನಿಸುವುದಕ್ಕೆ ಮುಂಚೆಯೇ, ದೇವರು ತಾವೇ ತಮ್ಮ ಪ್ರಜೆಗಳಿಗಾಗಿ ಈ ಕಾರ್ಯವನ್ನು ನೆರವೇರಿಸಿದ್ದರಿಂದ ಹಿಜ್ಕೀಯನೂ ಎಲ್ಲ ಜನರೂ ಸಂತೋಷಪಟ್ಟರು.
ಕ್ರಾನಿಕಲ್ಸ್ ೨ ೨೯:1
ಕ್ರಾನಿಕಲ್ಸ್ ೨ ೨೯:2
ಕ್ರಾನಿಕಲ್ಸ್ ೨ ೨೯:3
ಕ್ರಾನಿಕಲ್ಸ್ ೨ ೨೯:4
ಕ್ರಾನಿಕಲ್ಸ್ ೨ ೨೯:5
ಕ್ರಾನಿಕಲ್ಸ್ ೨ ೨೯:6
ಕ್ರಾನಿಕಲ್ಸ್ ೨ ೨೯:7
ಕ್ರಾನಿಕಲ್ಸ್ ೨ ೨೯:8
ಕ್ರಾನಿಕಲ್ಸ್ ೨ ೨೯:9
ಕ್ರಾನಿಕಲ್ಸ್ ೨ ೨೯:10
ಕ್ರಾನಿಕಲ್ಸ್ ೨ ೨೯:11
ಕ್ರಾನಿಕಲ್ಸ್ ೨ ೨೯:12
ಕ್ರಾನಿಕಲ್ಸ್ ೨ ೨೯:13
ಕ್ರಾನಿಕಲ್ಸ್ ೨ ೨೯:14
ಕ್ರಾನಿಕಲ್ಸ್ ೨ ೨೯:15
ಕ್ರಾನಿಕಲ್ಸ್ ೨ ೨೯:16
ಕ್ರಾನಿಕಲ್ಸ್ ೨ ೨೯:17
ಕ್ರಾನಿಕಲ್ಸ್ ೨ ೨೯:18
ಕ್ರಾನಿಕಲ್ಸ್ ೨ ೨೯:19
ಕ್ರಾನಿಕಲ್ಸ್ ೨ ೨೯:20
ಕ್ರಾನಿಕಲ್ಸ್ ೨ ೨೯:21
ಕ್ರಾನಿಕಲ್ಸ್ ೨ ೨೯:22
ಕ್ರಾನಿಕಲ್ಸ್ ೨ ೨೯:23
ಕ್ರಾನಿಕಲ್ಸ್ ೨ ೨೯:24
ಕ್ರಾನಿಕಲ್ಸ್ ೨ ೨೯:25
ಕ್ರಾನಿಕಲ್ಸ್ ೨ ೨೯:26
ಕ್ರಾನಿಕಲ್ಸ್ ೨ ೨೯:27
ಕ್ರಾನಿಕಲ್ಸ್ ೨ ೨೯:28
ಕ್ರಾನಿಕಲ್ಸ್ ೨ ೨೯:29
ಕ್ರಾನಿಕಲ್ಸ್ ೨ ೨೯:30
ಕ್ರಾನಿಕಲ್ಸ್ ೨ ೨೯:31
ಕ್ರಾನಿಕಲ್ಸ್ ೨ ೨೯:32
ಕ್ರಾನಿಕಲ್ಸ್ ೨ ೨೯:33
ಕ್ರಾನಿಕಲ್ಸ್ ೨ ೨೯:34
ಕ್ರಾನಿಕಲ್ಸ್ ೨ ೨೯:35
ಕ್ರಾನಿಕಲ್ಸ್ ೨ ೨೯:36
ಕ್ರಾನಿಕಲ್ಸ್ ೨ 1 / 2Krø 1
ಕ್ರಾನಿಕಲ್ಸ್ ೨ 2 / 2Krø 2
ಕ್ರಾನಿಕಲ್ಸ್ ೨ 3 / 2Krø 3
ಕ್ರಾನಿಕಲ್ಸ್ ೨ 4 / 2Krø 4
ಕ್ರಾನಿಕಲ್ಸ್ ೨ 5 / 2Krø 5
ಕ್ರಾನಿಕಲ್ಸ್ ೨ 6 / 2Krø 6
ಕ್ರಾನಿಕಲ್ಸ್ ೨ 7 / 2Krø 7
ಕ್ರಾನಿಕಲ್ಸ್ ೨ 8 / 2Krø 8
ಕ್ರಾನಿಕಲ್ಸ್ ೨ 9 / 2Krø 9
ಕ್ರಾನಿಕಲ್ಸ್ ೨ 10 / 2Krø 10
ಕ್ರಾನಿಕಲ್ಸ್ ೨ 11 / 2Krø 11
ಕ್ರಾನಿಕಲ್ಸ್ ೨ 12 / 2Krø 12
ಕ್ರಾನಿಕಲ್ಸ್ ೨ 13 / 2Krø 13
ಕ್ರಾನಿಕಲ್ಸ್ ೨ 14 / 2Krø 14
ಕ್ರಾನಿಕಲ್ಸ್ ೨ 15 / 2Krø 15
ಕ್ರಾನಿಕಲ್ಸ್ ೨ 16 / 2Krø 16
ಕ್ರಾನಿಕಲ್ಸ್ ೨ 17 / 2Krø 17
ಕ್ರಾನಿಕಲ್ಸ್ ೨ 18 / 2Krø 18
ಕ್ರಾನಿಕಲ್ಸ್ ೨ 19 / 2Krø 19
ಕ್ರಾನಿಕಲ್ಸ್ ೨ 20 / 2Krø 20
ಕ್ರಾನಿಕಲ್ಸ್ ೨ 21 / 2Krø 21
ಕ್ರಾನಿಕಲ್ಸ್ ೨ 22 / 2Krø 22
ಕ್ರಾನಿಕಲ್ಸ್ ೨ 23 / 2Krø 23
ಕ್ರಾನಿಕಲ್ಸ್ ೨ 24 / 2Krø 24
ಕ್ರಾನಿಕಲ್ಸ್ ೨ 25 / 2Krø 25
ಕ್ರಾನಿಕಲ್ಸ್ ೨ 26 / 2Krø 26
ಕ್ರಾನಿಕಲ್ಸ್ ೨ 27 / 2Krø 27
ಕ್ರಾನಿಕಲ್ಸ್ ೨ 28 / 2Krø 28
ಕ್ರಾನಿಕಲ್ಸ್ ೨ 29 / 2Krø 29
ಕ್ರಾನಿಕಲ್ಸ್ ೨ 30 / 2Krø 30
ಕ್ರಾನಿಕಲ್ಸ್ ೨ 31 / 2Krø 31
ಕ್ರಾನಿಕಲ್ಸ್ ೨ 32 / 2Krø 32
ಕ್ರಾನಿಕಲ್ಸ್ ೨ 33 / 2Krø 33
ಕ್ರಾನಿಕಲ್ಸ್ ೨ 34 / 2Krø 34
ಕ್ರಾನಿಕಲ್ಸ್ ೨ 35 / 2Krø 35
ಕ್ರಾನಿಕಲ್ಸ್ ೨ 36 / 2Krø 36