A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಕ್ರಾನಿಕಲ್ಸ್ ೧ ೭ಇಸ್ಸಾಕಾರನಿಗೆ ತೋಲ, ಪೂವ, ಯಾಶೂಬ್, ಶಿಮ್ರೋನ್ ಎಂಬ ನಾಲ್ವರು ಮಕ್ಕಳಿದ್ದರು.
ತೋಲನಿಗೆ ಉಜ್ಜೀ, ರೆಫಾಯ, ಯೆರೀಯೇಲ್, ಯಹ್ಮೈ, ಇಬ್ಸಾಮ್, ಸಮುವೇಲ್ ಎಂಬ ಆರು ಜನ ಮಕ್ಕಳಿದ್ದರು. ಇವರು ತೋಲ ಗೋತ್ರದ ಕುಟುಂಬಗಳ ಮುಖ್ಯಸ್ಥರೂ ಪ್ರಸಿದ್ಧ ವೀರರೂ ಆಗಿದ್ದರು. ಅರಸ ದಾವೀದನ ಕಾಲದಲ್ಲಿ ಅವರ ವಂಶಜರ ಸಂಖ್ಯೆ - 22,600:
ಉಜ್ಜೀ ಎಂಬವನಿಗೆ ಇಜ್ಯಹ್ಯಾಹ ಎಂಬ ಮಗನಿದ್ದನು. ಇವನೂ ಇವನ ನಾಲ್ವರು ಮಕ್ಕಳಾದ ಮೀಕಾಯೇಲ್, ಓಬದ್ಯ, ಯೋವೇಲ್, ಇಷ್ಷೀಯ ಎಂಬವರು ಕುಟುಂಬಗಳ ಮುಖ್ಯಸ್ಥರಾಗಿದ್ದರು.
ಇವರಿಗೆ ಅನೇಕ ಪತ್ನಿಯರೂ ಮಕ್ಕಳೂ ಇದ್ದು ಅವರ ವಂಶಜರಲ್ಲಿ -36,000 ಪುರುಷರನ್ನು ಸೈನ್ಯದಲ್ಲಿ ಸೇವೆಮಾಡಲು ಒದಗಿಸಿಕೊಟ್ಟರು.
ಇಸ್ಸಾಕಾರನ ಗೋತ್ರದ ಎಲ್ಲಾ ಕುಟುಂಬಗಳ ಅಧಿಕೃತ ದಾಖಲೆಗಳು - 8,000 ಪುರುಷರು ಸೈನ್ಯದಲ್ಲಿರಲು ಯೋಗ್ಯರಾಗಿದ್ದರೆಂದು ಪಟ್ಟಿಮಾಡಿರುತ್ತವೆ.
ಬೆನ್ಯಾಮೀನನಿಗೆ ಮೂವರು ಮಕ್ಕಳು: ಬೆಳ, ಬೆಕೆರ್, ಯದೀಯಯೇಲ್ ಎಂಬವರು.
ಬೆಳನಿಗೆ ಐದು ಜನ ಮಕ್ಕಳು: ಎಚ್ಚೋನ್, ಉಜ್ಜೀ, ಉಜ್ಜೀಯೇಲ್, ಯೆರೀಮೋತ್ ಮತ್ತು ಈರೀ ಎಂಬವರು. ಇವರು ಗೋತ್ರದ ಕುಟುಂಬಗಳ ಮುಖ್ಯಸ್ಥರೂ ಪ್ರಸಿದ್ಧ ಯುದ್ಧವೀರರೂ ಆಗಿದ್ದರು. ಇವರ ವಂಶಜರಲ್ಲಿ 22,034 ಜನರು ಸೈನ್ಯದಲ್ಲಿ ಕೆಲಸಮಾಡಲು ಯೋಗ್ಯರಾಗಿದ್ದರು.
ಬೆಕೆರನಿಗೆ ಒಂಬತ್ತು ಜನ ಮಕ್ಕಳು: ಜೆಮೀರ, ಯೋವಾಷ್, ಎಲೀಯೆಜೆರ್, ಎಲ್ಕೋವೇನೈ, ಒಮ್ರಿ, ಯೆರೀಮೋತ್, ಅಬೀಯ, ಅನಾತೋತ್, ಆಲಿಮೆತ್ ಎಂಬವರೇ.
ಕುಟುಂಬಗಳಿಗನುಗುಣವಾದ ಅಧಿಕೃತ ದಾಖಲೆ - 20,200 ಪುರುಷರು ಅವರ ವಂಶಜರಲ್ಲಿ ಸೈನ್ಯ ಸೇರಲು ಅರ್ಹರಾಗಿದ್ದರೆಂದು ಪಟ್ಟಿಮಾಡಿದೆ.
೧೦
ಯದೀಯಯೇಲನಿಗೆ ಬಿಲ್ಹಾನ್ ಎಂಬ ಮಗನಿದ್ದ. ಬಿಲ್ಹಾನ್‍ಗೆ ಏಳು ಜನ ಮಕ್ಕಳು: ಯೆಯೂಷ್, ಬೆನ್ಯಾಮೀನ್, ಏಹೂದ್, ಕೆನಾನ, ಜೇತಾನ್, ತಾರ್ಷೀಷ್, ಅಹೀಷೆಹರ್ ಎಂಬವರು.
೧೧
ಅವರೆಲ್ಲರೂ ತಮ್ಮ ಗೋತ್ರದ ಕುಟುಂಬಗಳ ಮುಖ್ಯಸ್ಥರೂ ಪ್ರಸಿದ್ಧ ಯುದ್ಧವೀರರೂ ಆಗಿದ್ದರು. ಅವರ ವಂಶಜರಲ್ಲಿ 17,200 ಜನರು ಸೈನ್ಯದಲ್ಲಿರಲು ಅರ್ಹತೆ ಪಡೆದಿದ್ದರು.
೧೨
ಶುಪ್ಪೀಮ್ ಮತ್ತು ಹುಪ್ಪೀಮ್ ಎಂಬವರೂ ಸಹ ಇದೇ ಗೋತ್ರಕ್ಕೆ ಸೇರಿದವರು. ದಾನ್ ಗೆ ಹುಶೀಮ ಎಂಬ ಮಗನಿದ್ದನು.
೧೩
ನಫ್ತಾಲಿಗೆ ನಾಲ್ಕು ಜನ ಮಕ್ಕಳು: ಯಹಚಿಯೇಲ್, ಗೂನೀ, ಯೆಚೇರ್, ಶಲ್ಲೂಮ್ ಎಂಬವರು. ಇವರು ಬಿಲ್ಹಳ ಸಂತಾನದವರು.
೧೪
ಅರಾಮ್ಯ ಉಪಪತ್ನಿಯಿಂದ ಮನಸ್ಸೆಗೆ ಅಷ್ರಿಯೇಲ್, ಮಾಕೀರ ಎಂಬಿಬ್ಬರು ಮಕ್ಕಳಿದ್ದರು. ಮಾಕೀರ ಗಿಲ್ಯಾದನ ತಂದೆ.
೧೫
ಮಾಕೀರನು ಹುಪ್ಪೀಮ್ ಮತ್ತು ಶುಪ್ಪೀಮರ ಸೋದರಿಯಾದ ಮಾಕಳನ್ನು ಮದುವೆಯಾದನು. ಚೆಲೋಫಾದ್ ಮಾಕೀರನ ದ್ವಿತೀಯ ಪುತ್ರ. ಅವನಿಗೆ ಕೇವಲ ಹೆಣ್ಣುಮಕ್ಕಳೇ ಇದ್ದರು.
೧೬
ಮಾಕೀರನ ಹೆಂಡತಿ ಮಾಕ ಇಬ್ಬರು ಮಕ್ಕಳಿಗೆ ಜನ್ಮವಿತ್ತಳು. ಅವರಿಗೆ ಪೆರೆಷ್ ಮತ್ತು ಶೆರೆಷ್ ಎಂದು ಹೆಸರಿಟ್ಟನು. ಪೆರೆಷನಿಗೆ ಊಲಾಮ್, ರೆಕೆಮ್ ಎಂಬಿಬ್ಬರು ಮಕ್ಕಳು.
೧೭
ಉಲಾಮ್‍ಗೆ ಬಿದಾನ್ ಎಂಬ ಒಬ್ಬ ಮಗನಿದ್ದ. ಇವರೆಲ್ಲರೂ ಮಾಕೀರನ ಮಗನೂ ಮನಸ್ಸೆಯ ಮೊಮ್ಮಗನೂ ಆದ ಗಿಲ್ಯಾದನ ವಂಶಜರು.
೧೮
ಗಿಲ್ಯಾದನ ತಂಗಿ ಹಮ್ಮೋಲೆಕೆತಳು ಈಷ್ಹೋದ್, ಅಬೀಯೆಜೆರ್, ಮಹ್ಲ ಎಂಬ ಮೂರು ಮಕ್ಕಳಿಗೆ ಜನ್ಮವಿತ್ತಳು.
೧೯
ಶೆಮೀದನ ಮಕ್ಕಳು: ಅಹ್ಯಾನ್, ಶೆಕೆಮ್, ಲಿಕ್ಹೀ, ಅನೀಯಾಮ್ ಎಂಬವರು.
೨೦
ಎಫ್ರಯಿಮನ ಸಂತಾನದವರು: ಶೂತೆಲಹ, ಬೆರೆದ್, ತಹತ್, ಎಲ್ಲಾದ, ತಹತ್,
೨೧
ಜಾಬಾದ್, ಶೂತೆಲಹ ಎಂಬವರು. ಶೂತೆಲಹನಲ್ಲದೆ ಎಫ್ರಯಿಮನಿಗೆ ಎಜೆರ್, ಎಲ್ಲಾದ್ ಎಂಬಿಬ್ಬರು ಮಕ್ಕಳಿದ್ದರು. ಇವರು ಗತ್‍ನ ಮೂಲನಿವಾಸಿಗಳ ದನಗಳನ್ನು ಕದಿಯಲು ಪ್ರಯತ್ನಿಸಿದಾಗ ಕೊಲೆಗೀಡಾದರು.
೨೨
ಇವರ ತಂದೆ ಎಫ್ರಯಿಮ್ ಅನೇಕ ದಿನಗಳವರೆಗೆ ಇವರಿಗಾಗಿ ಶೋಕಿಸಿದನು. ಅವನ ಸಹೋದರರು ಬಂದು ಅವನಿಗೆ ಸಂತಾಪ ಸೂಚಿಸಿದರು.
೨೩
ಅನಂತರ ಅವನು ತನ್ನ ಹೆಂಡತಿಯನ್ನು ಸಂಗಮಿಸಲು ಆಕೆ ಗರ್ಭಧರಿಸಿ ಗಂಡು ಮಗುವಿಗೆ ಜನ್ಮವಿತ್ತಳು. ತಮ್ಮ ಕುಟುಂಬಕ್ಕೆ ಬಂದಿದ್ದ ಕಂಟಕದ ಜ್ಞಾಪಕಾರ್ಥವಾಗಿ ಅವನಿಗೆ ಬೆರೀಯ ಎಂದು ಹೆಸರಿಟ್ಟರು.
೨೪
ಎಫ್ರಯಿಮನಿಗೆ ಶೇರ ಎಂಬ ಮಗಳು ಇದ್ದಳು. ಈಕೆ ಮೇಲಿನ ಹಾಗು ಕೆಳಗಿನ ಬೇತ್ ಹೋರೋನ್ ಪಟ್ಟಣಗಳನ್ನೂ ಉಜ್ಜೇನ್ ಶೇರ ಎಂಬ ಪಟ್ಟಣವನ್ನೂ ಕಟ್ಟಿಸಿದಳು.
೨೫
ಎಫ್ರಯಿಮನಿಗೆ ರೆಫಹ ಎಂಬ ಇನ್ನೊಬ್ಬ ಮಗನಿದ್ದನು. ಅವನ ವಂಶಜರು: ರೆಷೆಫ್, ತೆಲಹ, ತಹನ್, ಲದ್ದಾನ್,
೨೬
ಅಮ್ಮೀಹೂದ್, ಎಲೀಷಾಮ,
೨೭
ನೋನ್, ಯೆಹೋಷುವ ಎಂಬವರೇ.
೨೮
ಅವರು ವಶಪಡಿಸಿಕೊಂಡು ವಾಸಿಸಿದ ಪ್ರದೇಶ ಬೇತೇಲ್ ಹಾಗು ಅದರ ಸುತ್ತಮುತ್ತಲಿನ ಪ್ರದೇಶಗಳನ್ನೂ ಪೂರ್ವದಲ್ಲಿ ನಾರಾನ್ ವರೆಗೆ ಪಶ್ಚಿಮದಲ್ಲಿ ಗೆಜೆರದವರೆಗೆ ಮತ್ತು ಅವುಗಳ ಸುತ್ತಮುತ್ತಲಿನ ಪಟ್ಟಣಗಳನ್ನೂ ಒಳಗೊಂಡಿತ್ತು. ಶೆಕೆಮ್, ಅಯ್ಯಾ ಪಟ್ಟಣಗಳೂ ಅವುಗಳ ಗ್ರಾಮಗಳೂ ಅದರಲ್ಲಿ ಸೇರಿದ್ದವು.
೨೯
ಮನಸ್ಸೆಯ ಸಂತಾನದವರು ಬೇತ್ಷಾನ್, ತಾನಾಕ್, ಮೆಗಿದ್ದೋ, ದೋರ್ ಎಂಬ ಪಟ್ಟಣಗಳನ್ನೂ ಅವುಗಳ ಸುತ್ತಮುತ್ತಲಿನ ಗ್ರಾಮಗಳನ್ನೂ ತಮ್ಮ ವಶದಲ್ಲಿಟ್ಟುಕೊಂಡಿದ್ದರು. ಯಕೋಬನ ಮಗ ಜೋಸೆಫನ ಸಂತತಿಯವರು ಈ ಎಲ್ಲಾ ಪ್ರದೇಶಗಳಲ್ಲಿ ವಾಸಿಸಿದರು.
೩೦
ಆಶೇರನ ಸಂತಾನದವರು: ಇಮ್ನ, ಇಷ್ವ, ಇಷ್ವೀ, ಬೆರೀಯ ಎಂಬವರು. ಇವರ ತಂಗಿ ಸೆರಹ.
೩೧
ಬೆರೀಯನ ಮಕ್ಕಳು - ಹೆಬೆರ್, ಬಿರ್ಜೈತ್ ಊರಿನ ಸ್ಥಾಪಕನಾದ ಮಲ್ಕೀಯೇಲ್ ಎಂಬವರು.
೩೨
ಹೆಬೆರನ ಮಕ್ಕಳು - ಯಫ್ಲೇಟ್, ಶೋಮೇರ್, ಹೋತಾಮ್ ಹಾಗು ಇವರ ತಂಗಿ ಶೂವ.
೩೩
ಯಫ್ಲೇಟನ ಮಕ್ಕಳು - ಪಾಸಕ್, ಬಿಮ್ಹಾಲ್, ಅಶ್ವಾತ್ ಎಂಬವರು.
೩೪
ಶೆಮೆರನ ಮಕ್ಕಳು - ಅಹೀರೊಹ್ಗ, ಹುಬ್ಬ ಮತ್ತು ಅರಾಮ್.
೩೫
ಇವನ ತಮ್ಮ ಹೆಲೆಮನ ಮಕ್ಕಳು - ಜೋಫಹ, ಇಮ್ನ, ಶೇಲಿಷ್ ಮತ್ತು ಅಮಾಲ್.
೩೬
ಜೋಫಹನ ಮಕ್ಕಳು - ಸೂಹ, ಹರ್ನೆಫೆರ್, ಶೂಗಾಲ್, ಬೇರೀ,
೩೭
ಇಮ್ರ, ಬೆಚೆರ್, ಹೋದ್, ಶಮ್ಮ, ಶಿಲ್ಷ, ಇತ್ರಾನ್ ಹಾಗೂ ಬೇರ.
೩೮
ಯೆತೆರನ ಮಕ್ಕಳು - ಯೆಫುನ್ನೆ, ಪಿಸ್ಪ ಹಾಗೂ ಅರಾ.
೩೯
ಉಲ್ಲನ ಮಕ್ಕಳು - ಆರಹ, ಹನ್ನೀಯೇಲ್, ರಿಚ್ಯ ಎಂಬವರು.
೪೦
ಇವರೆಲ್ಲರೂ ಆಶೇರನ ವಂಶಜರು. ಇವರು ಕುಟುಂಬಗಳ ಮುಖ್ಯಸ್ಥರೂ ಯುದ್ಧವೀರರೂ ಶ್ರೇಷ್ಠನಾಯಕರೂ ಆಗಿದ್ದರು. ಆಶೇರನ ವಂಶಜರಲ್ಲಿ - 26,000 ಪುರುಷರು ಸೈನ್ಯದಲ್ಲಿ ಇರಲು ಅರ್ಹತೆ ಪಡೆದಿದ್ದರು.