A A A A A
×

ಕನ್ನಡ ಬೈಬಲ್ (KNCL) 2016

ಕ್ರಾನಿಕಲ್ಸ್ ೧ ೨೬

ದೇವಾಲಯದ ಕಾವಲುಗಾರರಾಗಿ ಸೇವೆಮಾಡಲು ನೇಮಕಗೊಂಡ ಲೇವಿಯರ ಹೆಸರುಗಳು: ಕೋರಹೀಯನಾದ ಮೆಷೆಲೆಮ್ಯ; ಇವನು ಕೊರೇಯನ ಮಗ ಹಾಗೂ ಆಸಾಫನ ಮೊಮ್ಮಗ;
ಮೆಷಲೆಮ್ಯನ ಮಕ್ಕಳಲ್ಲಿ ಜೆಕರ್ಯನು ಚೊಚ್ಚಲನು; ಎದೀಯಯೇಲನು ಮರಚಲನು; ಜೆಬದ್ಯನು ಮೂರನೆಯವನು; ಯೆತ್ನಿಯೇಲನು ನಾಲ್ಕನೆಯವನು.
ಏಲಾಮನು ಐದನೆಯವನು. ಯೆಹೋಹಾನಾನನು ಆರನೆಯವನು; ಎಲ್ಯೆಹೋಯೇನೈ ಏಳನೆಯವನು.
ಓಬೇದೆದೋಮನ ಮಕ್ಕಳಲ್ಲಿ ಶೆಮಾಯನು ಚೊಚ್ಚಲನು; ಯೆಹೋಜಾಬಾದನು ಮರಚಲನು; ಯೋವಾಹನು ಮೂರನೆಯವನು; ಸಾಕಾರನು ನಾಲ್ಕನೆಯವನು; ನೆತನೇಲನು ಐದನೆಯವನು;
ಅಮ್ಮೀಯೇಲನು ಆರನೆಯವನು; ಇಸ್ಸಾಕಾರನು ಏಳನೆಯವನು; ಪೆಯುಲ್ಲಿತೈಯು ಎಂಟನೆಯವನು. ಓಬೇದೆದೋಮನು ದೇವರ ಆಶೀರ್ವಾದಕ್ಕೆ ಪಾತ್ರನಾಗಿದ್ದನು.
ಅವನ ಮಗ ಶೆಮಾಯನ ಮಕ್ಕಳು ಗೋತ್ರಪ್ರಧಾನರೂ ಮಹಾಸಮರ್ಥರೂ ಆಗಿದ್ದರು.
ಇವರು ಯಾರೆಂದರೆ, ಒತ್ನೀ, ರೆಫಾಯೇಲ್, ಓಬೇದ್, ಎಲ್ಜಾಬಾದ್ ಇವರು ಹಾಗೂ ಬಹು ಸಮರ್ಥರಾದ, ಎಲೀಹು, ಸೆಮಕ್ಯ ಎಂಬ ಇವರ ಸಹೋದರರು.
ಇವರೆಲ್ಲರೂ ಓಬೇದೆದೋಮನ ಸಂತಾನದವರು. ಸಮರ್ಥರೂ ಸೇವೆಯಲ್ಲಿ ಗಟ್ಟಿಗರೂ ಆಗಿದ್ದ ಇವರೂ ಇವರ ಮಕ್ಕಳೂ ಸಹೋದರರೂ ಕೂಡಿ ಅರವತ್ತೆರಡು ಮಂದಿ ಇದ್ದರು.
ಮೆಷೆಲಿಮ್ಯನ ಮಕ್ಕಳೂ ಸಹೋದರರೂ ಹದಿನೆಂಟು ಮಂದಿ; ಇವರೂ ಸಮರ್ಥರಾಗಿದ್ದರು.
೧೦
ಮೆರಾರೀಯನಾದ ಹೋಸನಿಗೂ ಮಕ್ಕಳಿದ್ದರು; ಅವರಲ್ಲಿ ಶಿಮ್ರಿ ಎಂಬವನು ಮುಖ್ಯಸ್ಥನಾಗಿದ್ದನು. ಇವನು ಚೊಚ್ಚಲನಲ್ಲದಿದ್ದರೂ ತಂದೆ ಅವನನ್ನೇ ಮುಖ್ಯಸ್ಥನನ್ನಾಗಿ ನೇಮಿಸಿದನು.
೧೧
ಹಿಲ್ಕೀಯನು ಎರಡನೆಯವನು; ಟೋಬಲ್ಯನು ಮೂರನೆಯವನು; ಜೆಕರ್ಯನು ನಾಲ್ಕನೆಯವನು. ಹೋಸನ ಮಕ್ಕಳೂ ಸಹೋದರರೂ ಒಟ್ಟಿಗೆ ಹದಿಮೂರು ಮಂದಿ.
೧೨
ಈ ದ್ವಾರಪಾಲಕ ವರ್ಗಗಳ ಪ್ರಧಾನ ಪುರುಷರು ತಮ್ಮ ಕುಲಬಂಧುಗಳಂತೆ ಸರ್ವೇಶ್ವರನ ಆಲಯದಲ್ಲಿ ಸೇವೆಮಾಡುತ್ತಿದ್ದರು.
೧೩
ಅವರು, ಕನಿಷ್ಠ ಕುಟುಂಬವೆಂದಾಗಲಿ ಶ್ರೇಷ್ಠ ಕುಟುಂಬವೆಂದಾಗಲಿ ವ್ಯತ್ಯಾಸಮಾಡದೆ, ತಮ್ಮಲ್ಲಿ ಪ್ರತಿಯೊಬ್ಬನು ಕಾಯತಕ್ಕ ಹೆಬ್ಬಾಗಿಲುಗಳನ್ನು ಚೀಟಿನಿಂದಲೇ ಗೊತ್ತುಮಾಡಿಕೊಳ್ಳುತ್ತಿದ್ದರು.
೧೪
ಪೂರ್ವದಿಕ್ಕಿನ ಚೀಟು ಶೆಲೆಮ್ಯನ ಹೆಸರಿಗೆ ಬಿದ್ದಿತ್ತು. ಬಹು ವಿವೇಕವುಳ್ಳ ಪಂಚಾಯತಗಾರನಾಗಿರುವ ಅವನ ಮಗ ಜೆಕರ್ಯನ ಹೆಸರಿಗೆ ಉತ್ತರ ದಿಕ್ಕಿನ ಚೀಟು ಬಿದ್ದಿತ್ತು.
೧೫
ಓಬೇದೆದೋಮನಿಗೆ ದಕ್ಷಿಣ ಬಾಗಿಲೂ ಅವನ ಮಕ್ಕಳಿಗೆ ಉಗ್ರಾಣ ಮಂದಿರವೂ
೧೬
ಶುಪ್ಪೀಮ್, ಹೋಸ ಎಂಬವರಿಗೆ ಪಶ್ಚಿಮ ಬಾಗಿಲೂ ಅದರ ಸಮೀಪದಲ್ಲಿರುವ ಶೆಲ್ಲೆಕೆತೆಂಬ ಬಾಗಿಲೂ ಚೀಟಿನಿಂದ ನೇಮಕವಾಗಿದ್ದವು. ಶೆಲ್ಲೆಕೆತ್ ಬಾಗಿಲು ಪಟ್ಟಣದಿಂದ ದೇವಾಲಯಕ್ಕೆ ಏರಿಹೋಗುವ ದಾರಿಯಲ್ಲಿದೆ.
೧೭
ಲೇವಿಯರಲ್ಲಿ ಪ್ರತಿದಿನವೂ ಪೂರ್ವ ಬಾಗಿಲನ್ನು ಆರು ಮಂದಿ, ಪಶ್ಚಿಮ ಬಾಗಿಲನ್ನು ನಾಲ್ಕು ಮಂದಿ, ದಕ್ಷಿಣ ಬಾಗಿಲನ್ನು ನಾಲ್ಕು ಮಂದಿ, ಉಗ್ರಾಣ ಮಂದಿರದ ಎರಡು ಬಾಗಿಲುಗಳನ್ನು ಇಬ್ಬಿಬ್ಬರು,
೧೮
ಪರ್ಬರೆಂಬ ಕಟ್ಟಡವಿರುವ ಪಶ್ಚಿಮ ದಿಕ್ಕಿನ ದಾರಿಯ ಬಾಗಿಲನ್ನು ನಾಲ್ಕು ಮಂದಿ, ಪರ್ಬರನ್ನು ಇಬ್ಬರು ಕಾಯುತ್ತಿದ್ದರು.
೧೯
ಕೋರಹೀಯರ ಮತ್ತು ಮೆರಾರೀಯರ ದ್ವಾರಪಾಲಕ ವರ್ಗಗಳು ಇವೇ.
೨೦
ಮೇಲೆ ಕಂಡವರ ಕುಲಬಂಧುಗಳೂ ಹಾಗೂ ದೇವಾಲಯದ ಭಂಡಾರ, ಪರಿಶುದ್ಧ ವಸ್ತುಗಳ ಭಂಡಾರ ಇವುಗಳನ್ನು ಕಾಯುವ ಲೇವಿಯರ ಪಟ್ಟಿ:
೨೧
ಗೇರ್ಷೋಮನಿಗೆ ಹುಟ್ಟಿದ ಲದ್ದಾನ ಸಂತಾನದವರಾದ ಲದ್ದಾನ್ಯ ಕುಟುಂಬಗಳ ಮುಖ್ಯಸ್ಥರಲ್ಲಿ ಯೆಹೀಯೇಲೀ;
೨೨
ಮತ್ತು ಯೆಹೀಯೇಲ್ಯರಾದ ಜೇತಾಮನು ಹಾಗೂ ಯೋವೇಲನೆಂಬ ಅವನ ತಮ್ಮನು ಸರ್ವೇಶ್ವರನ ಆಲಯದ ಭಂಡಾರಗಳನ್ನು ಕಾಯುತ್ತಿದ್ದರು.
೨೩
ಅಮ್ರಾಮ್, ಇಚ್ಚಾರ್, ಹೆಬ್ರೋನ್, ಉಜ್ಜೀಯೇಲ್
೨೪
ಇವರ ಸಂತಾನದವರಲ್ಲಿ ಗೇರ್ಷೋಮನ ಮಗನೂ ಮೋಶೆಯ ಮೊಮ್ಮಗನೂ ಆಗಿರುವ ಶೆಬೂವೇಲನು ಭಂಡಾರಗಳನ್ನು ಕಾಯುವವರ ಮುಖ್ಯಸ್ಥನು.
೨೫
ಎಲೀಯೆಜೆರನ ಮಗ ರೆಹಬ್ಯನಿಗೆ ಹುಟ್ಟಿದ ಯೆಶಾಯನ ಮರಿಮಗನೂ ಯೋರಾಮನ ಮೊಮ್ಮಗನೂ
೨೬
ಜಿಕ್ರೀಯ ಮಗನೂ ಆಗಿರುವ ಶೆಕೋಮೋತನೂ ಅವನ ಸಹೋದರರೂ ಪ್ರತಿಷ್ಠಿತ ವಸ್ತುಗಳ ಭಂಡಾರವನ್ನು ಕಾಯುವವರು; ಇವರು ಶೆಬೂವೇಲನ ಗೋತ್ರ ಬಂಧುಗಳು.
೨೭
ಅರಸನಾದ ದಾವೀದನೂ ಗೋತ್ರ ಪ್ರಧಾನರೂ ಸಹಸ್ರ ಅಧಿಪತಿಗಳೂ ಶತಾಧಿಪತಿಗಳ ಸೇನಾನಾಯಕರೂ ಸರ್ವೇಶ್ವರನ ಆಲಯದ ವೃದ್ಧಿಗಾಗಿ ತಮಗೆ ಯುದ್ಧದಲ್ಲಿ ಸಿಕ್ಕಿದ ಕೊಳ್ಳೆಯ ಒಂದು ಭಾಗವನ್ನು ಸರ್ವೇಶ್ವರನಿಗೆಂದು ಮುಡಿಪಾಗಿಟ್ಟರು.
೨೮
ಇವರಲ್ಲದೆ ದರ್ಶಿಯಾದ ಸಮುವೇಲನೂ ಕೀಷನ ಮಗ ಸೌಲನೂ ನೇರನ ಮಗ ಅಬ್ನೇರನೂ ಜೆರೂಯಳ ಮಗ ಯೋವಾಬನೂ ಹಾಗೆಯೇ ಮಾಡಿದ್ದರು. ಈ ಪ್ರಕಾರ ಪ್ರತಿಷ್ಠಿತವಾದದ್ದೆಲ್ಲವೂ ಶೆಲೋಮೋತನ ಮತ್ತು ಅವನ ಸಹೋದರರ ವಶದಲ್ಲಿತ್ತು.
೨೯
ಇಚ್ಹಾರ್ಯರಲ್ಲಿ ಕೆನನ್ಯನೂ ಅವನ ಮಕ್ಕಳೂ ಲೌಕಿಕೋದ್ಯೋಗದಲ್ಲಿದ್ದರು. ಅವರು ಇಸ್ರಯೇಲರ ಅಧಿಕಾರಿಗಳೂ ನ್ಯಾಯಾಧಿಪತಿಗಳೂ ಆಗಿದ್ದರು.
೩೦
ಹೆಬ್ರೋನ್ಯರಲ್ಲಿ ಹಷಬ್ಯನೂ ಅವನ ಸಹೋದರರೂ ಜೋರ್ಡನ್ ನದಿಯ ಪಶ್ಚಿಮ ಪ್ರಾಂತ್ಯಗಳಲ್ಲಿದ್ದ ಇಸ್ರಯೇಲರೊಳಗೆ ಸರ್ವೇಶ್ವರನ ಸೇವಾಕಾರ್ಯಗಳನ್ನೂ ರಾಜಕೀಯ ಕಾರ್ಯಗಳನ್ನೂ ನಡೆಸುತ್ತಿದ್ದರು. ಸಮರ್ಥರಾದ ಅವರು ಸಾವಿರದ ಏಳುನೂರು ಮಂದಿ ಇದ್ದರು.
೩೧
ದಾವೀದನ ಆಳ್ವಿಕೆಯ ನಲವತ್ತನೆಯ ವರ್ಷದಲ್ಲಿ ಹೆಬ್ರೋನ್ಯರಿಗೆ ಸೇರಿದವರು ಯಾರಾರೆಂದು ವಿಚಾರಣೆ ನಡೆದಾಗ ಗಿಲ್ಯಾದಿನ ಯಾಜೇರಿನ ಶ್ರೀಮಂತರಲ್ಲಿ ಅನೇಕರು ಅವರ ಗೋತ್ರದವರು ಯಾರೆಂದು ಗೊತ್ತಾಯಿತು. ಈ ಹೆಬ್ರೋನ್ಯರಲ್ಲಿ ಯೇರೀಯನು ಮುಖ್ಯಸ್ಥನು;
೩೨
ಶ್ರೀಮಂತರೂ ಕುಟುಂಬಪ್ರಧಾನರೂ ಆದ ಅವನ ಗೋತ್ರಬಂಧುಗಳು ಎರಡು ಸಾವಿರದ ಏಳುನೂರು ಮಂದಿ ಇದ್ದರು. ಅರಸ ದಾವೀದನು ರೂಬೇನ್, ಗಾದ್, ಅರ್ಧಮನಸ್ಸೆ ಕುಲಗಳವರ ಮೇಲೆ ಇವರನ್ನೇ ದೈವಿಕ ಕಾರ್ಯಗಳಲ್ಲೂ ರಾಜಕೀಯ ಕಾರ್ಯಗಳಲ್ಲೂ ಅಧಿಕಾರಿಗಳನ್ನಾಗಿ ನೇಮಿಸಿದನು.
ಕ್ರಾನಿಕಲ್ಸ್ ೧ ೨೬:1
ಕ್ರಾನಿಕಲ್ಸ್ ೧ ೨೬:2
ಕ್ರಾನಿಕಲ್ಸ್ ೧ ೨೬:3
ಕ್ರಾನಿಕಲ್ಸ್ ೧ ೨೬:4
ಕ್ರಾನಿಕಲ್ಸ್ ೧ ೨೬:5
ಕ್ರಾನಿಕಲ್ಸ್ ೧ ೨೬:6
ಕ್ರಾನಿಕಲ್ಸ್ ೧ ೨೬:7
ಕ್ರಾನಿಕಲ್ಸ್ ೧ ೨೬:8
ಕ್ರಾನಿಕಲ್ಸ್ ೧ ೨೬:9
ಕ್ರಾನಿಕಲ್ಸ್ ೧ ೨೬:10
ಕ್ರಾನಿಕಲ್ಸ್ ೧ ೨೬:11
ಕ್ರಾನಿಕಲ್ಸ್ ೧ ೨೬:12
ಕ್ರಾನಿಕಲ್ಸ್ ೧ ೨೬:13
ಕ್ರಾನಿಕಲ್ಸ್ ೧ ೨೬:14
ಕ್ರಾನಿಕಲ್ಸ್ ೧ ೨೬:15
ಕ್ರಾನಿಕಲ್ಸ್ ೧ ೨೬:16
ಕ್ರಾನಿಕಲ್ಸ್ ೧ ೨೬:17
ಕ್ರಾನಿಕಲ್ಸ್ ೧ ೨೬:18
ಕ್ರಾನಿಕಲ್ಸ್ ೧ ೨೬:19
ಕ್ರಾನಿಕಲ್ಸ್ ೧ ೨೬:20
ಕ್ರಾನಿಕಲ್ಸ್ ೧ ೨೬:21
ಕ್ರಾನಿಕಲ್ಸ್ ೧ ೨೬:22
ಕ್ರಾನಿಕಲ್ಸ್ ೧ ೨೬:23
ಕ್ರಾನಿಕಲ್ಸ್ ೧ ೨೬:24
ಕ್ರಾನಿಕಲ್ಸ್ ೧ ೨೬:25
ಕ್ರಾನಿಕಲ್ಸ್ ೧ ೨೬:26
ಕ್ರಾನಿಕಲ್ಸ್ ೧ ೨೬:27
ಕ್ರಾನಿಕಲ್ಸ್ ೧ ೨೬:28
ಕ್ರಾನಿಕಲ್ಸ್ ೧ ೨೬:29
ಕ್ರಾನಿಕಲ್ಸ್ ೧ ೨೬:30
ಕ್ರಾನಿಕಲ್ಸ್ ೧ ೨೬:31
ಕ್ರಾನಿಕಲ್ಸ್ ೧ ೨೬:32
ಕ್ರಾನಿಕಲ್ಸ್ ೧ 1 / ಕ್ರಾನಿ೧ 1
ಕ್ರಾನಿಕಲ್ಸ್ ೧ 2 / ಕ್ರಾನಿ೧ 2
ಕ್ರಾನಿಕಲ್ಸ್ ೧ 3 / ಕ್ರಾನಿ೧ 3
ಕ್ರಾನಿಕಲ್ಸ್ ೧ 4 / ಕ್ರಾನಿ೧ 4
ಕ್ರಾನಿಕಲ್ಸ್ ೧ 5 / ಕ್ರಾನಿ೧ 5
ಕ್ರಾನಿಕಲ್ಸ್ ೧ 6 / ಕ್ರಾನಿ೧ 6
ಕ್ರಾನಿಕಲ್ಸ್ ೧ 7 / ಕ್ರಾನಿ೧ 7
ಕ್ರಾನಿಕಲ್ಸ್ ೧ 8 / ಕ್ರಾನಿ೧ 8
ಕ್ರಾನಿಕಲ್ಸ್ ೧ 9 / ಕ್ರಾನಿ೧ 9
ಕ್ರಾನಿಕಲ್ಸ್ ೧ 10 / ಕ್ರಾನಿ೧ 10
ಕ್ರಾನಿಕಲ್ಸ್ ೧ 11 / ಕ್ರಾನಿ೧ 11
ಕ್ರಾನಿಕಲ್ಸ್ ೧ 12 / ಕ್ರಾನಿ೧ 12
ಕ್ರಾನಿಕಲ್ಸ್ ೧ 13 / ಕ್ರಾನಿ೧ 13
ಕ್ರಾನಿಕಲ್ಸ್ ೧ 14 / ಕ್ರಾನಿ೧ 14
ಕ್ರಾನಿಕಲ್ಸ್ ೧ 15 / ಕ್ರಾನಿ೧ 15
ಕ್ರಾನಿಕಲ್ಸ್ ೧ 16 / ಕ್ರಾನಿ೧ 16
ಕ್ರಾನಿಕಲ್ಸ್ ೧ 17 / ಕ್ರಾನಿ೧ 17
ಕ್ರಾನಿಕಲ್ಸ್ ೧ 18 / ಕ್ರಾನಿ೧ 18
ಕ್ರಾನಿಕಲ್ಸ್ ೧ 19 / ಕ್ರಾನಿ೧ 19
ಕ್ರಾನಿಕಲ್ಸ್ ೧ 20 / ಕ್ರಾನಿ೧ 20
ಕ್ರಾನಿಕಲ್ಸ್ ೧ 21 / ಕ್ರಾನಿ೧ 21
ಕ್ರಾನಿಕಲ್ಸ್ ೧ 22 / ಕ್ರಾನಿ೧ 22
ಕ್ರಾನಿಕಲ್ಸ್ ೧ 23 / ಕ್ರಾನಿ೧ 23
ಕ್ರಾನಿಕಲ್ಸ್ ೧ 24 / ಕ್ರಾನಿ೧ 24
ಕ್ರಾನಿಕಲ್ಸ್ ೧ 25 / ಕ್ರಾನಿ೧ 25
ಕ್ರಾನಿಕಲ್ಸ್ ೧ 26 / ಕ್ರಾನಿ೧ 26
ಕ್ರಾನಿಕಲ್ಸ್ ೧ 27 / ಕ್ರಾನಿ೧ 27
ಕ್ರಾನಿಕಲ್ಸ್ ೧ 28 / ಕ್ರಾನಿ೧ 28
ಕ್ರಾನಿಕಲ್ಸ್ ೧ 29 / ಕ್ರಾನಿ೧ 29