A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಕ್ರಾನಿಕಲ್ಸ್ ೧ ೨೪



ಆರೋನನ ಸಂತಾನದವರನ್ನು ವರ್ಗಗಳಾಗಿ ವಿಂಗಡಿಸಲಾಗಿತ್ತು. ಆರೋನನಿಗೆ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಎಂಬ ನಾಲ್ವರು ಮಕ್ಕಳಿದ್ದರು.
ನಾದಾಬ್, ಅಬೀಹೂ ಎಂಬವರು ಮಕ್ಕಳಿಲ್ಲದೆ ತಮ್ಮ ತಂದೆಗಿಂತ ಮೊದಲೇ ಸತ್ತುಹೋದುದರಿಂದ ಎಲ್ಲಾಜಾರ್ ಈತಾಮಾರರು ಯಾಜಕ ಉದ್ಯೋಗವನ್ನು ನಡೆಸುತ್ತಿದ್ದರು.
ದಾವೀದನೂ ಎಲ್ಲಾಜಾರನ ಸಂತಾನದವನಾದ ಚಾದೋಕನೂ ಈತಾಮಾರನ ಸಂತಾನದವನಾದ ಅಹೀಮೆಲೆಕನೂ ಯಾಜಕರನ್ನು ಸರದಿಯ ಮೇಲೆ ಸೇವೆ ಸಲ್ಲಿಸತಕ್ಕ ವರ್ಗಗಳನ್ನಾಗಿ ವಿಭಾಗಿಸಿದ್ದರು.
ಎಲ್ಲಾಜಾರನ ಸಂತಾನದಲ್ಲಿ ಕುಟುಂಬ ಮುಖ್ಯಸ್ಥರು ಈತಾಮಾರ್ಯರಿಗಿಂತ ಹೆಚ್ಚೆಂದು ಕಂಡುಬಂದುದರಿಂದ, ಎಲ್ಲಾಜಾರ್ಯರ ಕುಟುಂಬಗಳನ್ನು ಮುಖ್ಯಸ್ಥರ ಲೆಕ್ಕದ ಪ್ರಕಾರ ಹದಿನಾರು ವರ್ಗಗಳನ್ನಾಗಿಯೂ ಈತಾಮಾರ್ಯರ ಕುಟುಂಬಗಳನ್ನು ಎಂಟು ವರ್ಗಗಳನ್ನಾಗಿಯೂ ಮಾಡಿ,
ಈ ವರ್ಗಗಳ ವಿಷಯವಾಗಿ ಚೀಟುಹಾಕಿ ಕೆಲಸವನ್ನು ವಹಿಸುತ್ತಿದ್ದರು. ಎಲ್ಲಾಜಾರನ ಸಂತಾನದವರಲ್ಲಿ ಹೇಗೋ ಹಾಗೆಯೇ ಈತಾಮಾರನ ಸಂತಾನದವರಲ್ಲಿಯೂ ಪವಿತ್ರಾಯಲಯದ ಅಧಿಪತಿಗಳೂ ದೈವಿಕ ಕಾರ್ಯಗಳ ಅಧ್ಯಕ್ಷರೂ ಇದ್ದುದರಿಂದ ಉಭಯ ಸಂತಾನಗಳವರು ಸಮಾನ ಸ್ಥಾನದವರಾಗಿದ್ದರು.
ನೆತನೇಲನ ಮಗ ಶೆಮಾಯನೆಂಬ ಲೇವಿಯ ಲೇಖಕನು, ಅರಸನ ಮುಂದೆ, ಅಧಿಪತಿಗಳ ಮುಂದೆ ಹಾಗೂ ಯಾಜಕನಾದ ಚಾದೋಕ್, ಎಬ್ಯಾತಾರನ ಮಗ ಅಹೀಮೆಲೆಕ್, ಯಾಜಕರ ಮತ್ತು ಲೇವಿಯರ ಕುಟುಂಬಗಳ ಮುಖ್ಯಸ್ಥರ ಮುಂದೆ, ಆ ವರ್ಗಗಳ ಪಟ್ಟಿಯನ್ನು ಬರೆಯುತ್ತಿದ್ದನು. ಎಲ್ಲಾಜಾರ್ಯರ ಒಂದು ವರ್ಗದವರ ಸರದಿ ಆದ ನಂತರ ಈತಾಮಾರ್ಯರ ಒಂದು ವರ್ಗದವರು ಸೇವೆಸಲ್ಲಿಸಬೇಕೆಂದು ನೇಮಿಸಿ, ಎಲ್ಲಾ ವರ್ಗಗಳ ಸರದಿಯನ್ನು ಚೀಟಿನಿಂದಲೇ ಗೊತ್ತುಮಾಡುತ್ತಿದ್ದರು.
ಮೊದಲನೆಯ ಚೀಟು ಯೆಹೋಯಾರೀಬನಿಗೆ ಬಿದ್ದಿತು;
ಎರಡನೆಯದು ಯೆದಾಯನಿಗೆ; ಮೂರನೆಯದು ಹಾರೀಮನಿಗೆ;
ನಾಲ್ಕನೆಯದು ಸೆಯೋರೀಮನಿಗೆ; ಐದನೆಯದು ಮಲ್ಕೀಯನಿಗೆ; ಆರನೆಯದು ಮಿಯ್ಯಾಮೀನನಿಗೆ;
೧೦
ಏಳನೆಯದು ಹಕ್ಕೋಚನಿಗೆ; ಎಂಟನೆಯದು ಅಬೀಯನಿಗೆ;
೧೧
ಒಂಬತ್ತನೆಯದು ಯೆಷೂವನಿಗೆ;
೧೨
ಹತ್ತನೆಯದು ಶೆಕನ್ಯನಿಗೆ; ಹನ್ನೊಂದನೆಯದು ಎಲ್ಯಾಷೀಬನಿಗೆ;
೧೩
ಹನ್ನೆರಡನೆಯದು ಯಾಕೀಮನಿಗೆ; ಹದಿಮೂರನೆಯದು ಹುಪ್ಪನಿಗೆ; ಹದಿನಾಲ್ಕನೆಯದು ಎಫೆಬಾಬನಿಗೆ;
೧೪
ಹದಿನೈದನೆಯದು ಬಿಲ್ಗನಿಗೆ; ಹದಿನಾರನೆಯದು ಇಮ್ಮೇರನಿಗೆ;
೧೫
ಹದಿನೇಳನೆಯದು ಹೇಜಿರನಿಗೆ;
೧೬
ಹದಿನೆಂಟನೆಯದು ಹಪ್ಪಿಚ್ಚೇಚನಿಗೆ; ಹತ್ತೊಂಬತ್ತನೆಯದು ಪೆತಹ್ಯನಿಗೆ; ಇಪ್ಪತ್ತನೆಯದು ಯೆಹೆಜ್ಕೇಲನಿಗೆ;
೧೭
ಇಪ್ಪತ್ತೊಂದನೆಯದು ಯಾಕೀನನಿಗೆ; ಇಪ್ಪತ್ತೆರಡನೆಯದು ಗಾಮೂಲನಿಗೆ;
೧೮
ಇಪ್ಪತ್ತಮೂರನೆಯದು ದೆಲಾಯನಿಗೆ; ಇಪ್ಪತ್ತನಾಲ್ಕನೆಯದು ಮಾಜ್ಯನಿಗೆ.
೧೯
ಆರೋನ್ಯರು ಈ ವರ್ಗಕ್ರಮದಲ್ಲಿ ಸರ್ವೇಶ್ವರನ ಆಲಯಕ್ಕೆ ಬಂದು, ಲೇವಿಯರ ಮೂಲ ಪುರುಷನಾದ ಆರೋನನ ಮುಖಾಂತರ ಇಸ್ರಯೇಲ್ ದೇವರಾದ ಸರ್ವೇಶ್ವರ ನಿಯಮಿಸಿದ ಸೇವೆಯನ್ನು ನಡೆಸಬೇಕಾಗಿತ್ತು.
೨೦
ಉಳಿದ ಲೇವಿಯರ ಪಟ್ಟಿ: ಅಮ್ರಾಮನ ಸಂತಾನದವನಾದ ಶೂಬಾಯೇಲನ ಕುಟುಂಬದವರಲ್ಲಿ ಯೆಹ್ದೆಯಾಹನು,
೨೧
ರೆಹಬ್ಯನ ಸಂತಾನದವರಲ್ಲಿ ಇಷ್ಷೀಯನು,
೨೨
ಹಾಗೂ ಇಚ್ಚಾರನ ಸಂತಾನದವನಾದ ಶೆಲೋಮೋತನ ಕುಟುಂಬದವರಲ್ಲಿ ಯಹತನು ಮುಖ್ಯಸ್ಥರು.
೨೩
ಹೆಬ್ರೋನನ ಸಂತಾನದವರಲ್ಲಿ, ಯೆರೀಯನು ಮುಖ್ಯಸ್ಥನು, ಅಮರ್ಯನು ಎರಡನೆಯವನು, ಯೆಹಜೀಯೇಲನು ಮೂರನೆಯವನು, ಯೆಕಮ್ಮಾಮನು ನಾಲ್ಕನೆಯವನು.
೨೪
ಉಜ್ಜಿಯೇಲನ ಮಗ ಮೀಕನ ಸಂತಾನದವರಲ್ಲಿ ಶಾಮೀರನು
೨೫
ಹಾಗೂ ಮೀಕನ ತಮ್ಮನಾದ ಇಷ್ಷೀಯನ ಸಂತಾನದವರಲ್ಲಿ ಜೆಕರ್ಯನು ಮುಖ್ಯಸ್ಥರು.
೨೬
ಮೆರಾರೀಯ ಮಕ್ಕಳು ಮಹ್ಲೀ ಮತ್ತು ಮೂಷೀ ಎಂಬವರು ಹಾಗೂ ಅವನ ಮತ್ತೊಬ್ಬ ಮಗ ಯಾಜ್ಯನ ವಂಶದವರು.
೨೭
ಮೆರಾರೀಯ ಸಂತಾನದವರಲ್ಲಿ ಯಾಜ್ಯನಿಂದ ಹುಟ್ಟಿದವರು ಬೆನೋ, ಶೋಹಮ್, ಜಕ್ಕೂರ್, ಇಬ್ರೀ ಇವರು.
೨೮
ಮಹ್ಲೀಯಿಂದ ಹುಟ್ಟಿದವರು: ಮಕ್ಕಳಿಲ್ಲದೆ ಸತ್ತ ಎಲ್ಲಾಜಾರನು ಹಾಗು ಕೀಷನು.
೨೯
ಕೀಷನಿಂದ ಯೆರಹ್ಮೇಲನು ಹುಟ್ಟಿದನು.
೩೦
ಮೂಷೀಯ ಮಕ್ಕಳು: ಮಹ್ಲೀ, ಏದೆರ್, ಯೆರೀಮೋತ್ ಎಂಬವರು.
೩೧
ಇವರೆಲ್ಲಾ ಲೇವಿ ಸಂತಾನದವರು. ಇವರ ಕುಟುಂಬಗಳಲ್ಲಿ ಎಲ್ಲಾ ಹಿರಿಯರೂ ಕಿರಿಯರೂ, ತಮ್ಮ ಕುಲಬಂಧುಗಳಾದ ಆರೋನ್ಯರಂತೆ, ಅರಸನಾದ ದಾವೀದ್, ಚಾದೋಕ್, ಅಹೀಮೆಲೆಕ್ ಇವರ ಮುಂದೆ ಹಾಗೂ ಯಾಜಕರ ಮತ್ತು ಲೇವಿಯರ ಕುಟುಂಬ ಮುಖ್ಯಸ್ಥರ ಮುಂದೆ, ಚೀಟಿನಿಂದ ತಮ್ಮಲ್ಲಿ ಸರದಿಗಳನ್ನು ನೇಮಿಸಿಕೊಂಡರು.