A A A A A
×

ಕನ್ನಡ ಬೈಬಲ್ (KNCL) 2016

ಕ್ರಾನಿಕಲ್ಸ್ ೧ ೧೬

ಅವರು ದೇವಮಂಜೂಷವನ್ನು ತಂದು ದಾವೀದನು ಅದಕ್ಕಾಗಿ ಸಿದ್ಧಪಡಿಸಿದ್ದ ಗುಡಾರದೊಳಗೆ ಒಯ್ದು, ಅಲ್ಲಿ ಅದನ್ನು ಸ್ಥಾಪಿಸಿದರು. ದೇವರಿಗೆ ದಹನಬಲಿಗಳನ್ನೂ, ಶಾಂತಿಸಮಾಧಾನದ ಬಲಿಗಳನ್ನೂ ಸಮರ್ಪಿಸಿದರು.
ಬಲಿಹೋಮಗಳ ಅರ್ಪಣೆ ಮುಗಿದ ತರುವಾಯ ದಾವೀದನು ಸರ್ವೇಶ್ವರನ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿದನು. ಅವರೆಲ್ಲರಿಗೂ ಪ್ರಸಾದವನ್ನು ಹಂಚಿದನು:
ಇಸ್ರಯೇಲಿನ ಪ್ರತಿ ಒಬ್ಬ ಪುರುಷನಿಗೂ ಸ್ತ್ರೀಗೂ ಒಂದೊಂದು ರೊಟ್ಟಿಯನ್ನೂ ಬೇಯಿಸಿದ ಒಂದು ತುಂಡುಮಾಂಸವನ್ನೂ ಒಣಗಿದ ದ್ರಾಕ್ಷೆಗಳನ್ನೂ ಹಂಚಿದನು
ಸರ್ವೇಶ್ವರನ ಮಂಜೂಷದ ಮುಂದೆ ದೇವರ ಆರಾಧನೆ ಮಾಡುವುದಕ್ಕಾಗಿ ದಾವೀದನು ಕೆಲವು ಮಂದಿ ಲೇವಿಯರನ್ನು ನೇಮಿಸಿದನು.
ಅವರಲ್ಲಿ ಆಸಾಫನು ಮುಖ್ಯಸ್ಥನಾಗಿಯೂ ಜೆಕರ್ಯ ಅವನ ಸಹಾಯಕನಾಗಿಯೂ ನೇಮಕಗೊಂಡರು. ಯೇಗೀಯೇಲ್, ಶೆಮೀರಾಮೋತ್, ಯೆಹೀಯೇಲ್, ಮತ್ತಿತ್ಯ, ಎಲೀಯಾಬ್, ಬೆನಾಯ, ಓಬೇದೆದೋಮ್ ಹಾಗು ಯೆಗೀಯೇಲ್ ಸ್ವರಮಂಡಲಗಳನ್ನು ಬಾರಿಸಲು ನೇಮಕವಾದರು. ಆಸಾಫನು ತಾಳಗಳನ್ನು ಬಾರಿಸಬೇಕಾಗಿತ್ತು.
ಬೆನಾಯ ಹಾಗೂ ಯಹಜೀಯೇಲ್ ಎಂಬ ಯಾಜಕರು ನಿಬಂಧನಾ ಮಂಜೂಷದ ಮುಂದೆ ಕ್ರಮವಾಗಿ ತುತೂರಿಗಳನ್ನು ಊದಬೇಕಾಗಿತ್ತು.
ಆಸಾಫನಿಗೂ ಅವನ ಜೊತೆ ಲೇವಿಯರಿಗೂ ಸರ್ವೇಶ್ವರನ ಸ್ತೋತ್ರ ಗೀತೆ ಹಾಡಲು ದಾವೀದನು ಪ್ರಥಮವಾಗಿ ಆ ದಿನದಲ್ಲೇ ನೇಮಿಸಿದನು. ಅವರು ಹೀಗೆಂದು ಹಾಡಿದರು:
ಸಲ್ಲಿಸಿ ಸರ್ವೇಶ್ವರನಿಗೆ ಕೃತಜ್ಞತಾಸ್ತೋತ್ರವನು I ಮಾಡಿರಿ ಆತನ ನಾಮಸ್ಮರಣೆಯನು I ಸಾರಿರಿ ಜಗಕೆ ಆತನ ಸತ್ಕಾರ್ಯಗಳನು II
ಹಾಡಿ ಪಾಡಿ ಹೊಗಳಿರಿ ಆತನನು I ಧ್ಯಾನಿಸಿ ಆತನ ಪವಾಡಗಳನು II
೧೦
ಹೆಮ್ಮೆಪಡಿ, ನೆನೆದು ಆತನ ಶ್ರೀನಾಮವನು I ಹಿಗ್ಗಲಿ ಹೃದಯ, ಕೋರಿ ಆತನ ದರ್ಶನವನು II
೧೧
ಆಶ್ರಯಿಸಿರಿ ಸರ್ವೇಶನನೂ ಆತನ ಶಕ್ತಿಯನೂ I ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು II
೧೨
ಆತನ ದಾಸ ಇಸ್ರಯೇಲನ ಸಂತತಿಯವರೇ I ಆತನಾರಿಸಿಕೊಂಡ ಯಕೋಬನ ವಂಶದವರೇ II
೧೩
ನೆನೆಯಿರಿ ಆತನ ಅದ್ಭುತಗಳನು, ಮಹತ್ಕಾರ್ಯಗಳನು I ಆತನ ವದನ ವಿಧಿಸಿದ ನ್ಯಾಯನಿರ್ಣಯಗಳನು II
೧೪
ಸರ್ವೇಶ ನಮ್ಮ ದೇವನೆಂಬುದು ಪ್ರಕಟಿತ I ಆತನಿತ್ತ ತೀರ್ಪು ವಿಶ್ವವ್ಯಾಪ್ತ II
೧೫
ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು I ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು II
೧೬
ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು I ಇಸಾಕನಿಗೆ ಆಣೆಯಿಟ್ಟು ಆತನು ಹೇಳಿದುದನು II
೧೭
ಯಕೋಬನಿಗೆ ರಾಜಶಾಸನವಾಗಿ ಕೊಟ್ಟದ್ದನು I ಇಸ್ರಯೇಲಿಗೆ ಶಾಶ್ವತವಾಗಿತ್ತ ಈ ಮಾತನು: II
೧೮
“ನಾ ಕೊಡುವೆನು ಕಾನಾನ್ ನಾಡನು ನಿಮಗೆ I ಸ್ವಾಸ್ತ್ಯವಾಗುವುದಿದು ನಿಮ್ಮ ಸಂತತಿಗೆ” II
೧೯
ಅಲ್ಪಸಂಖ್ಯಾತರೂ ಆಗಂತುಕರೂ ಅವರಾಗಿರಲು I ನಾಡಿಂದ ನಾಡಿಗೆ ರಾಜ್ಯದಿಂದ ರಾಜ್ಯಕ್ಕೆ ಅಲೆಯುತ್ತಿರಲು II
೨೦
***
೨೧
ಅವರಿಗಾರಿಂದಲೂ ಅನ್ಯಾಯವಾಗಗೊಡಿಸಲಿಲ್ಲ I ಅವರಿಗಾಗಿ ಅರಸರನ್ನಾತ ಗದರಿಸದೆ ಬಿಡಲಿಲ್ಲ II
೨೨
“ನಾನು ಅಭಿಷೇಕಿಸಿದವರನು ಇಗೋ, ಮುಟ್ಟಬೇಡಿ I ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿ” II
೨೩
ಸರ್ವ ಭೂನಿವಾಸಿಗಳೇ, ಸರ್ವೇಶ್ವರನಿಗೆ ಹಾಡಿರಿ I ಆತನ ಮುಕ್ತಿಮಾರ್ಗವನು ಪ್ರತಿನಿತ್ಯವೂ ಸಾರಿರಿ II
೨೪
ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ I ಆತನದ್ಭುತ ಕಾರ್ಯಗಳನು ಸಕಲ ಜನಾಂಗಗಳಿಗೆ II
೨೫
ಏಕೆನೆ, ಮಹಾತ್ಮನು ಸರ್ವೇಶ್ವರ ಅತಿ ಸ್ತುತ್ಯರ್ಹನು I ಸಕಲ ದೇವರುಗಳಿಗಿಂತಲೂ ಘನಗಂಭೀರನು II
೨೬
ಶೂನ್ಯ ಪ್ರತಿಮೆಗಳು ಅನ್ಯರಾಷ್ಟ್ರಗಳ ದೇವರುಗಳೆಲ್ಲ I ಸರ್ವೇಶ್ವರನಿಂದಲೇ ಉಂಟಾಯಿತು ಆಕಾಶಮಂಡಲವೆಲ್ಲ II
೨೭
ಇವೆ ಮಹಿಮೆ, ಮಹತ್ವ, ಆತನ ಸನ್ನಿಧಿಯಲಿ I ಶಕ್ತಿ, ಸಂತೋಷ ಆತನ ಗರ್ಭಗುಡಿಯಲಿ II
೨೮
ಶಕ್ತಿಸಾಮರ್ಥ್ಯ ಸರ್ವೇಶ್ವರನವೇ ಎಂದು I ಜಗದ ರಾಷ್ಟ್ರಗಳು ಘನಪಡಿಸಲಿ ಆತನನು ಎಂದೆಂದೂ II
೨೯
ಆತನ ನಾಮಕೆ ಘನತೆ ಗೌರವವನು ತನ್ನಿ I ಕಾಣಿಕೆಯೊಂದಿಗೆ ಆತನ ಮಂದಿರಕೆ ಬನ್ನಿ II
೩೦
ಸರ್ವೇಶನಿಗೆ ಮಣಿಯಿರಿ ಪವಿತ್ರ ವಸ್ತ್ರಧಾರಿಗಳಂತೆ I ಅಂಜಿಕೆಯಿಂದ ನಡುಗಲಿ ಜಗವಿಡೀ ಆತನ ಮುಂದೆ I ಕದಲದ ಸ್ಥಿರತೆಯನು ಇತ್ತಿಹನೀ ಧರೆಗೆ II
೩೧
“ಹರ್ಷಿಸಲಿ ಆಕಾಶ, ಸಂತೋಷಿಸಲಿ ಭೂಲೋಕ I ಗರ್ಜಿಸಲಿ ಸಮುದ್ರ ಮತ್ತು ಅದರೊಳಿರುವುದೆಲ್ಲ I ಸಾರಲಿ ರಾಷ್ಟ್ರಗಳಿಗೆ ಸರ್ವೇಶ್ವರ ರಾಜನೆಂದು I ಧರೆಗೆ ನ್ಯಾಯತೀರಿಸಲು ಖಂಡಿತ ಬರುವನೆಂದು II
೩೨
***
೩೩
ಉಲ್ಲಾಸಿಸಲಿ ಹೊಲಗದ್ದೆಗಳು ಪೈರುಪಚ್ಚೆಗಳು I ಹರ್ಷಧ್ವನಿಗೈಯಲಿ ಕಾಡಿನ ಫಲವೃಕ್ಷಗಳು II
೩೪
ಪ್ರಭು ದಯಾಪೂರಿತ, ಆತನ ಪ್ರೀತಿ ಶಾಶ್ವತ I ತೋರಿ ಆತನಿಗೆ ನಿಮ್ಮ ಸ್ತೋತ್ರ ಕೃತಜ್ಞತಾ II
೩೫
ಹೇ ದೇವಾ, ನಮ್ಮ ಸಹಾಯಕ, ನಮ್ಮನ್ನು ಉದ್ಧರಿಸು I ನಾಡು ನಾಡುಗಳಿಂದ ನಮ್ಮನ್ನು ಒಂದುಗೂಡಿಸು I ನಿನ್ನ ಪವಿತ್ರ ನಾಮವನು ಭಜಿಸುವೆವು ನಾವು I ನಿನ್ನ ಸ್ತುತಿಸ್ತೋತ್ರಗಳಲಿ ಹೆಚ್ಚಳಪಡುವೆವು II
೩೬
ಇಸ್ರಯೇಲಿನ ದೇವನಾದ ಸರ್ವೇಶಗೆ ಸ್ತೋತ್ರ I ಅನಾದಿಯಿಂದ ಯುಗಯುಗಾಂತರಕು ಸ್ತೋತ್ರ I ಜನರೆಲ್ಲರು ಹೇಳಲಿ ‘ಆಮೆನ್,’ ಸರ್ವೇಶ್ವರನಿಗೆ ಸ್ತೋತ್ರ II
೩೭
ನಿಬಂಧನಾ ಮಂಜೂಷದ ಮುಂದೆ ಪ್ರತಿದಿನವೂ ಆರಾಧನೆ ನಡೆಸುವ ಜವಾಬ್ದಾರಿಯನ್ನು ಆಸಾಫ ಮತ್ತು ಅವನ ಜೊತೆ ಲೇವಿಯರಿಗೆ ಅರಸ ದಾವೀದ ಶಾಶ್ವತವಾಗಿ ವಹಿಸಿಕೊಟ್ಟನು. ಅಲ್ಲಿ ಅವರು ತಮ್ಮ ಕರ್ತವ್ಯವನ್ನು ದಿನನಿತ್ಯವೂ ನೆರವೇರಿಸಬೇಕಾಗಿತ್ತು.
೩೮
ಯೆದುತೂನನ ಮಗ ಓಬೇದೆದೋಮನೂ ಅವನ ಗೋತ್ರದ ಅರವತ್ತ ಎಂಟು ಜನರೂ ಅವರಿಗೆ ಸಹಾಯಕರು ಆಗಿದ್ದರು. ಹೋಸ ಮತ್ತು ಓಬೇದೆದೋಮರು ದ್ವಾರಪಾಲಕರ ಮೇಲ್ವಿಚಾರಕರಾಗಿದ್ದರು.
೩೯
ಯಾಜಕ ಚಾದೋಕ ಮತ್ತು ಅವನ ಜೊತೆ ಯಾಜಕರು ಗಿಬ್ಯೋನಿನಲ್ಲಿದ್ದ ಸರ್ವೇಶ್ವರನ ಗುಡಾರದಲ್ಲಿ ಆರಾಧನೆಯನ್ನು ನಡೆಸಲು ನೇಮಕರಾಗಿದ್ದರು.
೪೦
ಸರ್ವೇಶ್ವರ ಇಸ್ರಯೇಲರಿಗೆ ಕೊಟ್ಟ ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ಬಲಿಪೀಠದ ಮೇಲೆ ಪ್ರತೀದಿನ ಮುಂಜಾನೆ ಹಾಗು ಸಂಜೆ ದಹನಬಲಿಯರ್ಪಿಸಬೇಕಾಗಿ ಇತ್ತು.
೪೧
ಅಲ್ಲಿ ಅವರೊಂದಿಗೆ ಸರ್ವೇಶ್ವರನ ನಿತ್ಯಪ್ರೀತಿಗಾಗಿ ಅವರನ್ನು ಸ್ತುತಿಸಿ, ಸಂಗೀತ ಹಾಡಲು ಹೇಮಾನ್, ಯೆದುತೂನ ಹಾಗು ಇನ್ನಿತರರು ನಿರ್ದಿಷ್ಟವಾಗಿ ನೇಮಕರಾಗಿದ್ದರು.
೪೨
ಸ್ತುತಿಗೀತೆಗಳನ್ನು ಹಾಡುವಾಗ ತುತೂರಿ, ತಾಳ, ಮತ್ತಿತರ ವಾದ್ಯಗಳನ್ನು ಬಾರಿಸುವವರ ಮೇಲ್ವಿಚಾರಣೆಯೂ ಹೇಮಾನ್ ಮತ್ತು ಯೆದುತೂನರದಾಗಿತ್ತು. ಯೆದುತೂನನ ಮಕ್ಕಳಿಗೆ ದ್ವಾರಗಳನ್ನು ಕಾಯುವ ಹೊಣೆಯೂ ಇತ್ತು.
೪೩
ಅನಂತರ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ತನ್ನ ಕುಟುಂಬದವರನ್ನು ಆಶೀರ್ವದಿಸಲು ದಾವೀದನೂ ತನ್ನ ಮನೆಗೆ ಹೋದನು.
ಕ್ರಾನಿಕಲ್ಸ್ ೧ ೧೬:1
ಕ್ರಾನಿಕಲ್ಸ್ ೧ ೧೬:2
ಕ್ರಾನಿಕಲ್ಸ್ ೧ ೧೬:3
ಕ್ರಾನಿಕಲ್ಸ್ ೧ ೧೬:4
ಕ್ರಾನಿಕಲ್ಸ್ ೧ ೧೬:5
ಕ್ರಾನಿಕಲ್ಸ್ ೧ ೧೬:6
ಕ್ರಾನಿಕಲ್ಸ್ ೧ ೧೬:7
ಕ್ರಾನಿಕಲ್ಸ್ ೧ ೧೬:8
ಕ್ರಾನಿಕಲ್ಸ್ ೧ ೧೬:9
ಕ್ರಾನಿಕಲ್ಸ್ ೧ ೧೬:10
ಕ್ರಾನಿಕಲ್ಸ್ ೧ ೧೬:11
ಕ್ರಾನಿಕಲ್ಸ್ ೧ ೧೬:12
ಕ್ರಾನಿಕಲ್ಸ್ ೧ ೧೬:13
ಕ್ರಾನಿಕಲ್ಸ್ ೧ ೧೬:14
ಕ್ರಾನಿಕಲ್ಸ್ ೧ ೧೬:15
ಕ್ರಾನಿಕಲ್ಸ್ ೧ ೧೬:16
ಕ್ರಾನಿಕಲ್ಸ್ ೧ ೧೬:17
ಕ್ರಾನಿಕಲ್ಸ್ ೧ ೧೬:18
ಕ್ರಾನಿಕಲ್ಸ್ ೧ ೧೬:19
ಕ್ರಾನಿಕಲ್ಸ್ ೧ ೧೬:20
ಕ್ರಾನಿಕಲ್ಸ್ ೧ ೧೬:21
ಕ್ರಾನಿಕಲ್ಸ್ ೧ ೧೬:22
ಕ್ರಾನಿಕಲ್ಸ್ ೧ ೧೬:23
ಕ್ರಾನಿಕಲ್ಸ್ ೧ ೧೬:24
ಕ್ರಾನಿಕಲ್ಸ್ ೧ ೧೬:25
ಕ್ರಾನಿಕಲ್ಸ್ ೧ ೧೬:26
ಕ್ರಾನಿಕಲ್ಸ್ ೧ ೧೬:27
ಕ್ರಾನಿಕಲ್ಸ್ ೧ ೧೬:28
ಕ್ರಾನಿಕಲ್ಸ್ ೧ ೧೬:29
ಕ್ರಾನಿಕಲ್ಸ್ ೧ ೧೬:30
ಕ್ರಾನಿಕಲ್ಸ್ ೧ ೧೬:31
ಕ್ರಾನಿಕಲ್ಸ್ ೧ ೧೬:32
ಕ್ರಾನಿಕಲ್ಸ್ ೧ ೧೬:33
ಕ್ರಾನಿಕಲ್ಸ್ ೧ ೧೬:34
ಕ್ರಾನಿಕಲ್ಸ್ ೧ ೧೬:35
ಕ್ರಾನಿಕಲ್ಸ್ ೧ ೧೬:36
ಕ್ರಾನಿಕಲ್ಸ್ ೧ ೧೬:37
ಕ್ರಾನಿಕಲ್ಸ್ ೧ ೧೬:38
ಕ್ರಾನಿಕಲ್ಸ್ ೧ ೧೬:39
ಕ್ರಾನಿಕಲ್ಸ್ ೧ ೧೬:40
ಕ್ರಾನಿಕಲ್ಸ್ ೧ ೧೬:41
ಕ್ರಾನಿಕಲ್ಸ್ ೧ ೧೬:42
ಕ್ರಾನಿಕಲ್ಸ್ ೧ ೧೬:43
ಕ್ರಾನಿಕಲ್ಸ್ ೧ 1 / ಕ್ರಾನಿ೧ 1
ಕ್ರಾನಿಕಲ್ಸ್ ೧ 2 / ಕ್ರಾನಿ೧ 2
ಕ್ರಾನಿಕಲ್ಸ್ ೧ 3 / ಕ್ರಾನಿ೧ 3
ಕ್ರಾನಿಕಲ್ಸ್ ೧ 4 / ಕ್ರಾನಿ೧ 4
ಕ್ರಾನಿಕಲ್ಸ್ ೧ 5 / ಕ್ರಾನಿ೧ 5
ಕ್ರಾನಿಕಲ್ಸ್ ೧ 6 / ಕ್ರಾನಿ೧ 6
ಕ್ರಾನಿಕಲ್ಸ್ ೧ 7 / ಕ್ರಾನಿ೧ 7
ಕ್ರಾನಿಕಲ್ಸ್ ೧ 8 / ಕ್ರಾನಿ೧ 8
ಕ್ರಾನಿಕಲ್ಸ್ ೧ 9 / ಕ್ರಾನಿ೧ 9
ಕ್ರಾನಿಕಲ್ಸ್ ೧ 10 / ಕ್ರಾನಿ೧ 10
ಕ್ರಾನಿಕಲ್ಸ್ ೧ 11 / ಕ್ರಾನಿ೧ 11
ಕ್ರಾನಿಕಲ್ಸ್ ೧ 12 / ಕ್ರಾನಿ೧ 12
ಕ್ರಾನಿಕಲ್ಸ್ ೧ 13 / ಕ್ರಾನಿ೧ 13
ಕ್ರಾನಿಕಲ್ಸ್ ೧ 14 / ಕ್ರಾನಿ೧ 14
ಕ್ರಾನಿಕಲ್ಸ್ ೧ 15 / ಕ್ರಾನಿ೧ 15
ಕ್ರಾನಿಕಲ್ಸ್ ೧ 16 / ಕ್ರಾನಿ೧ 16
ಕ್ರಾನಿಕಲ್ಸ್ ೧ 17 / ಕ್ರಾನಿ೧ 17
ಕ್ರಾನಿಕಲ್ಸ್ ೧ 18 / ಕ್ರಾನಿ೧ 18
ಕ್ರಾನಿಕಲ್ಸ್ ೧ 19 / ಕ್ರಾನಿ೧ 19
ಕ್ರಾನಿಕಲ್ಸ್ ೧ 20 / ಕ್ರಾನಿ೧ 20
ಕ್ರಾನಿಕಲ್ಸ್ ೧ 21 / ಕ್ರಾನಿ೧ 21
ಕ್ರಾನಿಕಲ್ಸ್ ೧ 22 / ಕ್ರಾನಿ೧ 22
ಕ್ರಾನಿಕಲ್ಸ್ ೧ 23 / ಕ್ರಾನಿ೧ 23
ಕ್ರಾನಿಕಲ್ಸ್ ೧ 24 / ಕ್ರಾನಿ೧ 24
ಕ್ರಾನಿಕಲ್ಸ್ ೧ 25 / ಕ್ರಾನಿ೧ 25
ಕ್ರಾನಿಕಲ್ಸ್ ೧ 26 / ಕ್ರಾನಿ೧ 26
ಕ್ರಾನಿಕಲ್ಸ್ ೧ 27 / ಕ್ರಾನಿ೧ 27
ಕ್ರಾನಿಕಲ್ಸ್ ೧ 28 / ಕ್ರಾನಿ೧ 28
ಕ್ರಾನಿಕಲ್ಸ್ ೧ 29 / ಕ್ರಾನಿ೧ 29