೧ |
ಆದಾಮನ ಮಗ ಶೇತ್, ಶೇತನ ಮಗ ಎನೋಷ್, ಎನೋಷನ ಮಗ ಕೇನಾನ್, |
೨ |
ಕೇನಾನನ ಮಗ ಮಹಲಲೀಲ್, ಮಹಲಲೀಲನ ಮಗ ಯೆರೆದ್, |
೩ |
ಯೆರೆದನ ಮಗ ಹನೋಕ್, ಹನೋಕನ ಮಗ ಮೆತೂಷೆಲಹ, ಮೆತೂಷೆಲಹನ ಮಗ ಲೆಮೆಕ್, |
೪ |
ಲೆಮೆಕನ ಮಗ ನೋಹ, ನೋಹನಿಗೆ ಶೇಮ್, ಹಾಮ್, ಯೆಫೆತ್ ಎಂಬ ಮೂರು ಜನ ಮಕ್ಕಳು ಇದ್ದರು. |
೫ |
ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್ ಎಂಬವರು ಯೆಫೆತನ ಮಕ್ಕಳು. ಇವರ ಹೆಸರುಗಳಿರುವ ಜನಾಂಗಗಳಿಗೆ ಇವರೇ ಮೂಲಪುರುಷರು. |
೬ |
ಅಷ್ಕೆನೆಜ್, ರೀಫತ್, ತೋಗರ್ಮ - ಇವರು ಗೋಮೆರನ ಮಕ್ಕಳು. |
೭ |
ಎಲೀಷ, ಸ್ಪೇನ್, ಸೈಪ್ರಸ್, ದೋದಾನೀಮ್ ಎಂಬ ಸ್ಥಳಗಳವರು ಯಾವಾನನ ಮಕ್ಕಳು. |
೮ |
ಕೂಷ್, ಈಜಿಪ್ಟ್ (ಮಿಚ್ರಯಿಮ್), ಲಿಬ್ಯ (ಪೂಟ್), ಕಾನಾನ್ಗಳಲ್ಲಿರುವವರು ಹಾಮನ ವಂಶಜರು. ಇವೇ ಈ ಜನಾಂಗಗಳ ಮೂಲಪಿತೃಗಳ ಹೆಸರುಗಳು. |
೯ |
ಸೆಬ, ಹವೀಲ, ಸಬ್ತ, ರಮ್ಮಸಬ್ತೆಕಾಗಳ ಜನರು ಕೂಷನ ಸಂತತಿಯವರು. ಶೆಬ ಮತ್ತು ದೆದಾನಿನವರು ರಮ್ಮ ಸಂತಾನದವರು. ( |
೧೦ |
ಕೂಷನ ಮಗ ನಿಮ್ರೋದ; ಇವನು ಪರಾಕ್ರಮದಿಂದ ಮೊದಲನೆಯ ಭೂರಾಜನಾದನು.) |
೧೧ |
ಈಜಿಪ್ಟಿನ ಜನಾಂಗದಿಂದ ಲೂದ್ಯರೂ, ಅನಾಮ್ಯರೂ ಲೆಹಾಬ್ಯರೂ ನಫ್ತುಹ್ಯರೂ |
೧೨ |
ಪತ್ರುಸ್ಯರೂ ಕಸ್ಲುಹ್ಯರೂ ಕಫ್ತೋರ್ಯರೂ ಜನಿಸಿದರು. (ಫಿಲಿಷ್ಟಿಯರು ಕಸ್ಲುಹ್ಯರಿಂದ ಬಂದವರು.) |
೧೩ |
ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್; ಹೇತ್ ಎರಡನೆಯವನು. ಈ ಹೆಸರಿನ ಜನಾಂಗದವರಿಗೆ ಇವರೇ ಮೂಲಪುರುಷರು. |
೧೪ |
ಯೆಬೂಸಿಯ, ಅಮೋರಿಯ, ಗಿರ್ಗಾಷಿಯ, |
೧೫ |
ಹಿವ್ವಿಯ, ಅರ್ಕಿಯ, ಸೀನಿಯ, |
೧೬ |
ಅರ್ವಾದಿಯ, ಚೆಮಾರಿಯ ಮತ್ತು ಹಮಾತಿನ ಜನರ ಮೂಲಪಿತೃ ಕಾನಾನನು. |
೧೭ |
ಶೇಮನ ಮಕ್ಕಳು - ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್, ಅರಾಮ್, ಊಚ್, ಹೂಲ್, ಗೆತೆರ್, ಮೆಷೆಕ್ ಎಂಬವರು. ಈ ಹೆಸರಿನ ಜನಾಂಗಗಳಿಗೆ ಇವರೇ ಮೂಲಪುರುಷರು. |
೧೮ |
ಅರ್ಪಕ್ಷದ್, ಶೆಲಹನ ತಂದೆ, ಶೆಲಹ, ಏಬೆರನ ತಂದೆ. |
೧೯ |
ಏಬೆರನಿಗೆ ಇಬ್ಬರು ಮಕ್ಕಳು - ಪೆಲೆಗ್ ಎಂಬವನು ಒಬ್ಬ. ಅವನ ಕಾಲದಲ್ಲಿ ಲೋಕದಲ್ಲಿಯ ಜನರು ವಿಭಾಗವಾದದ್ದರಿಂದ ಈ ಹೆಸರು ಅವನಿಗೆ ಬಂದಿತು. ಯೊಕ್ತಾನ ಎಂಬವನು ಇನ್ನೊಬ್ಬ. |
೨೦ |
ಅಲ್ಮೋದಾದ್, ಶೆಲೆಫ್, ಹಚರ್ಮಾವೆತ್, ಯೆರಹ, |
೨೧ |
ಹದೋರಾಮ್, ಊಜಾಲ್, ದಿಕ್ಲ, |
೨೨ |
ಏಬಾಲ್, ಅಬೀಮಾಯೇಲ್, ಶೆಬಾ, |
೨೩ |
ಓಫೀರ್, ಹವೀಲಾ, ಯೋಬಾಬ್ ಎಂಬ ಸ್ಥಳಗಳವರು ಯೊಕ್ತಾನನ ಸಂತಾನದವರು. |
೨೪ |
ಶೇಮನಿಂದ ಅಬ್ರಾಮನವರೆಗಿನ ಸಂತತಿಯವರು ಇವರು: ಅರ್ಪಕ್ಷದ್, ಶೆಲಹ, |
೨೫ |
ಏಬೆರ್, ಪೆಲೆಗ್, ರೆಯೂ, |
೨೬ |
ಸೆರೂಗ್, ನಾಹೋರ್, ತೆರಹ; |
೨೭ |
ಅಬ್ರಾಮ್ (ಇವನು ಅಬ್ರಹಾಮ ಎಂದೂ ಹೆಸರು ಹೊಂದಿದವನು). |
೨೮ |
ಅಬ್ರಹಾಮನಿಗೆ ಇಬ್ಬರು ಮಕ್ಕಳು - ಇಸಾಕ್ ಮತ್ತು ಇಷ್ಮಾಯೇಲ್. |
೨೯ |
ಇಷ್ಮಾಯೇಲನ ಮಕ್ಕಳು ಹನ್ನೆರಡು ಗೋತ್ರಗಳ ಮುಖ್ಯಸ್ಥರಾದರು. ಅವರು - ನೆಬಾಯೋತ್, (ಇಷ್ಮಾಯೇಲನ ಹಿರೀಮಗನಿಂದ ಈ ಹೆಸರಿನ ಉತ್ಪತ್ತಿ), ಕೇದಾರ್, ಅದ್ಬೆಯೇಲ್, ಮಿಬ್ಸಾಮ್, |
೩೦ |
ಮಿಷ್ಮಾ, ದೂಮಾ, ಮಸ್ಸ, ಹದದ್, ತೇಮ, |
೩೧ |
ಯೆಟೂರ್, ನಾಫೀಷ್, ಕೇದೆಮ ಎಂಬವರು. |
೩೨ |
ಅಬ್ರಹಾಮನಿಗೆ ಕೆಟೂರಳೆಂಬ ಉಪಪತ್ನಿ ಇದ್ದಳು. ಇವಳಿಂದ ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಎಂಬ ಆರು ಜನ ಮಕ್ಕಳು ಜನಿಸಿದರು. ಯೊಕ್ಷಾನ್ನಿಗೆ ಶೆಬಾ ಮತ್ತು ದೆದಾನ್ ಎಂಬಿಬ್ಬರು ಮಕ್ಕಳು ಹುಟ್ಟಿದರು. |
೩೩ |
ಮಿದ್ಯಾನ್ ಗೆ ಏಫಾ, ಏಫೆರ್, ಹನೋಕ್, ಅಬೀದ, ಎಲ್ದಾಯ ಎಂಬ ಐದು ಜನ ಮಕ್ಕಳು ಹುಟ್ಟಿದರು. |
೩೪ |
ಅಬ್ರಹಾಮನ ಮಗ ಇಸಾಕನಿಗೆ ಇಬ್ಬರು ಮಕ್ಕಳು - ಏಸಾವ ಮತ್ತು ಯಕೋಬ. |
೩೫ |
ಏಸಾವನ ಮಕ್ಕಳು - ಎಲೀಫಜ್, ರೆಯೂವೇಲ್, ಯೆಯೂಷ್, ಯಳಾಮ್, ಹಾಗೂ ಕೋರಹ ಎಂಬವರು. |
೩೬ |
ಎಲೀಫಜ್ ನ ಮಕ್ಕಳು ತೇಮಾನ್, ಓಮಾರ್, ಜೆಫೀ, ಗತಾಮ್, ಕೆನಜ್ ಹಾಗೂ ತಿಮ್ನ ಎಂಬುವಳಿಂದ ಜನಿಸಿದ ಅಮಾಲೇಕ್ ಎಂಬವರು. |
೩೭ |
ರೆಯೂವೇಲನ ಮಕ್ಕಳು - ನಹತ್, ಜೆರಹ, ಶಮ್ಮ ಮತ್ತು ಮಿಜ್ಜ ಎಂಬವರು. |
೩೮ |
ಈ ಕೆಳಗೆ ನಮೂದಿಸಿದ ಎದೋಮಿನ ಮೂಲನಿವಾಸಿಗಳು ಸೇಯೀರನಿಂದ ಹುಟ್ಟಿದವರು: ಲೋಟಾನ್, ಶೋಬಾಲ್, ಚಿಬ್ಬೋನ್, ಅನಾಹ, ದೀಶೋನ್, ಏಚೆರ್, ದೀಶಾನ್. |
೩೯ |
ಹೋರೀ ಮತ್ತು ಹೋಮಾಮ್ ಕುಲಗಳ ಮೂಲಪುರುಷ ಲೋಟಾನ್. ಲೋಟಾನನಿಗೆ ತಿಮ್ನ ಎಂಬ ಒಬ್ಬ ತಂಗಿಯಿದ್ದಳು. |
೪೦ |
ಶೋಬಾಲ್ - ಇವನು ಅಲ್ಯಾನ್, ಮಾನಹತ್, ಏಬಾಲ್, ಶೆಫೀ, ಓನಾಮ್ ಎಂಬವರ ಕುಲಗಳ ಪೂರ್ವಜ. |
೪೧ |
ಅನಾಹನು ದೀಶೋನನ ತಂದೆ. ದೀಶೋನನು ಹಮ್ರಾನ್, ಎಷ್ಬಾನ್, ಇತ್ರಾನ್, ಕೆರಾನ್ ಗೋತ್ರಗಳ ಪೂರ್ವಜ. |
೪೨ |
ಏಚೆರ್: ಇವನು ಬಿಲ್ಹಾನ್, ಜಾವಾನ್, ಯಾಕಾನ್ ಎಂಬ ಕುಲಗಳ ಮೂಲಪುರುಷ. ದೀಶಾನನು, ಉಚ್ ಹಾಗೂ ಅರಾನ್ ಕುಲಗಳ ಪೂರ್ವಜ. |
೪೩ |
ಇಸ್ರಯೇಲರಲ್ಲಿ ಅರಸರೇ ಇರಲಿಲ್ಲದ ಕಾಲದಲ್ಲಿ ಎದೋಮ್ ದೇಶವನ್ನು ಆಳಿದ ಅರಸರು. ಬೆಯೋರನ ಮಗ ಬೆಳನು; ದಿನ್ಹಾಬಾ ಇವನ ರಾಜಧಾನಿ. |
೪೪ |
ಬೆಳನು ಮರಣಹೊಂದಿದ ತರುವಾಯ ಬೊಚ್ರದ ಜೆರಹನ ಮಗ ಯೋಬಾಬ ಅವನ ಉತ್ತರಾಧಿಕಾರಿಯಾದನು. |
೪೫ |
ಯೋಬಾಬ ಮೃತನಾದ ಮೇಲೆ ತೇಮಾನೀಯರ ನಾಡಿನ ಹುಷಾಮ ಅರಸನಾದ. |
೪೬ |
ಹುಷಾಮ ಮೃತನಾದ ಮೇಲೆ ಅವೀತದ ಬೆದದನ ಮಗ ಹದದ ಅರಸನಾದ. ಇವನು ಮೋವಾಬ್ ದೇಶದಲ್ಲಿ ನಡೆದ ಯುದ್ಧದಲ್ಲಿ ಮಿದ್ಯಾನರನ್ನು ಸೋಲಿಸಿದ; ಅವನ ರಾಜಧಾನಿಯ ಹೆಸರು ಅವೀತ್. |
೪೭ |
ಹದದ ಮೃತನಾದ ಮೇಲೆ ಮಸ್ರೇಕದ ಸಮ್ಲಾಹ ಅರಸನಾದ. |
೪೮ |
ಸಮ್ಲಾಹ ಮೃತನಾದ ಮೇಲೆ ಯುಪ್ರಟಿಸ್ ನದೀತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಅರಸನಾದ. |
೪೯ |
ಸೌಲನು ಮೃತನಾದ ಮೇಲೆ ಅಕ್ಬೋರನ ಮಗ ಬಾಳ್ಹಾನಾನ ಅರಸನಾದ. |
೫೦ |
ಬಾಳ್ಹಾನಾನ್ ಮೃತನಾದ ಮೇಲೆ ಪಾಗೀಯ ಹದದನು ಅರಸನಾದ. ಇವನ ಹೆಂಡತಿ ಮೆಹೇಟಬೇಲ್; ಈಕೆ ಮಟ್ರೇದಳ ಮಗಳು, ಮೇಜಾಹಾಬನ ಮೊಮ್ಮಗಳು. |
೫೧ |
ಹದದನು ಮೃತನಾದ ತರುವಾಯ ಆಳಿದ ಎದೋಮ್ಯರು: ತಿಮ್ನ, ಅಲ್ಯ, ಯೆತೇತ್, ಒಹೋಲಿಬಾಮ, ಏಲ, ಪೀನೋನ್, ಕೆನಜ್, ತೇಮಾನ್, ಮಿಬ್ಚಾರ್, ಮಗ್ದೀಯೇಲ್ ಮತ್ತು ಗೀರಾಮ್ ಎಂಬ ಕುಲನಾಯಕರು.
|
Kannada Bible (KNCL) 2016 |
No Data |