A A A A A
×

ಕನ್ನಡ ಬೈಬಲ್ (KNCL) 2016

ಅರಸುಗಳು ೨ ೫

ಸಿರಿಯಾದ ರಾಜನಿಗೆ ನಾಮಾನ್ ಎಂಬೊಬ್ಬ ಸೇನಾಪತಿಯಿದ್ದನು. ಸರ್ವೇಶ್ವರಸ್ವಾಮಿ ಇವನ ಮುಂಖಾತರ ಸಿರಿಯಾದವರಿಗೆ ಜಯವನ್ನು ಅನುಗ್ರಹಿಸಿದ್ದರು. ಆದ್ದರಿಂದ ರಾಜನು ಇವನನ್ನು ಮಹಾಪುರುಷನೆಂದೂ ಸನ್ಮಾನ್ಯನೆಂದೂ ಗೌರವಿಸುತ್ತಿದ್ದನು. ಆದರೆ ಪರಾಕ್ರಮಶಾಲಿಯಾದ ಇವನು ಭೀಕರ ಚರ್ಮರೋಗದಿಂದ ನರಳುತ್ತಿದ್ದನು.
ಸಿರಿಯಾದವರು, ಒಮ್ಮೆ ಸುಲಿಗೆಗಾಗಿ ಇಸ್ರಯೇಲರ ಪ್ರಾಂತ್ಯಕ್ಕೆ ಹೋಗಿಬರುವಾಗ, ಅಲ್ಲಿನ ಒಬ್ಬ ಹುಡುಗಿಯನ್ನು ಹಿಡಿದುಕೊಂಡು ಬಂದರು. ಆಕೆ ನಾಮಾನನ ಹೆಂಡತಿಗೆ ದಾಸಿಯಾದಳು.
ಒಂದು ದಿನ ಆಕೆ ತನ್ನ ಯಜಮಾನಿಗೆ, “ನಮ್ಮ ದಣಿಯವರು ಸಮಾರಿಯದಲ್ಲಿರುವ ಪ್ರವಾದಿಯ ಹತ್ತಿರ ಇದ್ದಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು; ಅವರು ಇವರನ್ನು ಈ ಚರ್ಮರೋಗದಿಂದ ಗುಣಪಡಿಸುತ್ತಿದ್ದರು,” ಎಂದು ಹೇಳಿದಳು.
ನಾಮಾನನು ರಾಜನ ಸನ್ನಿಧಿಗೆ ಹೋಗಿ, ಇಸ್ರಯೇಲ್ ನಾಡಿನ ಹುಡುಗಿ ಹೇಳಿದ್ದನ್ನು ತಿಳಿಸಿದನು.
ಅವನು, “ನೀನು ಅಲ್ಲಿಗೆ ಹೋಗಿ ಬಾ; ನಾನು ನಿನ್ನ ಕೈಯಲ್ಲಿ ಇಸ್ರಯೇಲರ ಅರಸನಿಗೆ ಒಂದು ಪತ್ರವನ್ನು ಕೊಡುತ್ತೇನೆ,” ಎಂದನು. ನಾಮಾನನು ಮೂವತ್ತು ಸಾವಿರ ಬೆಳ್ಳಿ, ಆರು ಸಾವಿರ ಬಂಗಾರ ನಾಣ್ಯಗಳನ್ನೂ, ಹತ್ತು ದುಸ್ತು ಬಟ್ಟೆಗಳನ್ನೂ ತೆಗೆದುಕೊಂಡು ಸಮಾರಿಯಕ್ಕೆ ಹೋದನು;
ತಂದ ಪತ್ರವನ್ನು ಇಸ್ರಯೇಲರ ಅರಸನಿಗೆ ಕೊಟ್ಟನು. ಅದರಲ್ಲಿ, “ನನ್ನ ಸೇವಕ ನಾಮಾನನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ; ನೀವು ಅವನ ಚರ್ಮರೋಗವನ್ನು ವಾಸಿಮಾಡತಕ್ಕದ್ದೆಂದು ಈ ಪತ್ರದಿಂದ ತಿಳಿದುಕೊಳ್ಳಿ,” ಎಂಬುದಾಗಿ ಬರೆದಿತ್ತು.
ಇಸ್ರಯೇಲರ ಅರಸನು ಈ ಪತ್ರವನ್ನು ಓದಿದ ಕೂಡಲೆ, ಸಿಟ್ಟಿನಿಂದ ಬಟ್ಟೆಗಳನ್ನು ಹರಿದುಕೊಂಡು, ತನ್ನ ಪರಿವಾರದವರಿಗೆ, “ತಾನು ಕಳುಹಿಸಿದ ವ್ಯಕ್ತಿಯನ್ನು ಚರ್ಮರೋಗದಿಂದ ನಾನು ವಾಸಿಮಾಡಬೇಕಂತೆ! ಇದು ಎಂಥ ಅಪ್ಪಣೆ; ನಾನೇನು ದೇವರೋ? ಜೀವದಾನ ಮಾಡುವುದಕ್ಕಾಗಲಿ ಜೀವಹರಣ ಮಾಡುವುದಕ್ಕಾಗಲಿ ನನಗೆ ಸಾಮರ್ಥ್ಯವುಂಟೇ? ಇವನು ನನ್ನೊಡನೆ ಯುದ್ಧಮಾಡುವುದಕ್ಕೆ ನೆಪ ಹುಡುಕುತ್ತಾನಲ್ಲದೆ ಮತ್ತೇನು? ನೀವೇ ಆಲೋಚಿಸಿ ನೋಡಿ,” ಎಂದು ಹೇಳೀದನು.
ಇಸ್ರಯೇಲರ ಅರಸನು ಸಿಟ್ಟಿನಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನೆಂಬುದನ್ನು ದೈವಪುರುಷ ಎಲೀಷನು ಕೇಳಿದನು. ದೂತರ ಮುಖಾಂತರ ಅವನಿಗೆ, “ನೀವು ನಿಮ್ಮ ಬಟ್ಟೆಗಳನ್ನು ಹರಿದುಕೊಂಡದ್ದೇಕೆ? ಅವನನ್ನು ನನ್ನ ಬಳಿಗೆ ಕಳುಹಿಸಿ; ಇಸ್ರಯಲರಲ್ಲಿ ಒಬ್ಬ ಪ್ರವಾದಿ ಇದ್ದಾನೆಂಬುದು ಅವನಿಗೆ ಗೊತ್ತಾಗಲಿ,” ಎಂದು ಹೇಳಿ ಕಳುಹಿಸಿದನು.
ನಾಮಾನನು ರಥರಥಾಶ್ವಗಳೊಡನೆ ಎಲೀಷನ ಮನೆಗೆ ಹೋಗಿ ಬಾಗಿಲಿನ ಮುಂದೆ ನಿಂತನು.
೧೦
ಎಲೀಷನು ಅವನಿಗೆ, “ಹೋಗಿ ಜೋರ್ಡನ್ ನದಿಯಲ್ಲಿ ಏಳು ಸಾರಿ ಸ್ನಾನಮಾಡು; ಆಗ ನಿನ್ನ ದೇಹ ಮೊದಲಿದ್ದಂತಾಗುವುದು; ನೀನು ಶುದ್ಧನಾಗುವೆ,” ಎಂದು ಹೇಳಿಕಳುಹಿಸಿದನು.
೧೧
ನಾಮಾನನು ಇದನ್ನು ಕೇಳಿ ಕೋಪಗೊಂಡನು. “ಇದೇನು! ಇವನು ಖಂಡಿತ ವಾಗಿ ಹೊರಗೆಬಂದು ನಿಂತು, ತನ್ನ ದೇವರಾದ ಸರ್ವೇಶ್ವರ ನ ಹೆಸರು ಹೇಳಿ, ನನ್ನ ಚರ್ಮ ದ ಮೇಲೆ ಕೈಯಾಡಿಸಿ, ರೋಗ ವಾಸಿ ಮಾಡುವನೆಂದು ನೆನಸಿದೆ.
೧೨
ದಮಸ್ಕದ ಅಬಾನಾ ಹಾಗು ಪರ್ಪರ್ ಎಂಬ ನದಿಗಳು ಇಸ್ರಯೇಲರ ಎಲ್ಲಾ ನದಿ ಹೊಳೆಗಳಿಗಿಂತ ಉತ್ತಮವಾಗಿವೆಯಲ್ಲವೇ? ಸ್ನಾನದಿಂದ ವಾಸಿಯಾಗುವ ಹಾಗಿದ್ದರೆ ನಾನು ಅವುಗಳಲ್ಲಿಯೇ ಸ್ನಾನಮಾಡಬಹುದಿತ್ತಲ್ಲವೇ?” ಎಂದು ಹೇಳಿ, ಬಹಳ ಸಿಟ್ಟಿನಿಂದ ಹೊರಟುಹೋದನು.
೧೩
ಆಗ ಅವನ ಸೇವಕರು ಹತ್ತಿರಬಂದು, “ಯಜಮಾನರೇ, ಪ್ರವಾದಿ ಒಂದು ಕಠಿಣವಾದ ಕೆಲಸವನ್ನು ಹೇಳಿದ್ದರೆ ಅದನ್ನು ಮಾಡುತ್ತಿದ್ದಿರಲ್ಲವೆ? ಹಾಗಾದರೆ ‘ಸ್ನಾನಮಾಡಿ, ಶುದ್ಧರಾಗುವಿರಿ’ ಎಂದು ಹೇಳಿದರೆ ಏಕೆ ಅದರಂತೆ ಮಾಡಬಾರದು?” ಎಂದರು.
೧೪
ಅವನು ಅಂತೆಯೇ ಜೋರ್ಡನಿಗೆ ಹೋಗಿ, ಏಳು ಸಾರಿ ಅದರಲ್ಲಿ ಮುಳುಗಿ ಎದ್ದನು. ಕೂಡಲೆ ದೈವಪುರುಷನ ಮಾತಿಗನುಸಾರ ಅವನ ದೇಹ ಒಂದು ಮಗುವಿನ ದೇಹದಂತೆ ಶುದ್ಧವಾಯಿತು.
೧೫
ಅನಂತರ ನಾಮಾನನು ತನ್ನ ಪರಿವಾರದವರೊಡನೆ ಹಿಂದಿರುಗಿ ದೈವಪುರುಷನ ಬಳಿಗೆ ಹೋಗಿ ಅವನ ಮುಂದೆ ನಿಂತನು. “ಇಸ್ರಯೇಲ್ ನಾಡಿನಲ್ಲಿರುವ ದೇವರ ಹೊರತು, ಲೋಕದಲ್ಲಿ ಬೇರೆ ದೇವರು ಇಲ್ಲವೇ ಇಲ್ಲವೆಂಬುದು ಈಗ ನನಗೆ ಗೊತ್ತಾಯಿತು; ತಾವು ದಯವಿಟ್ಟು ಈ ಕಾಣಿಕೆಯನ್ನು ಅಂಗೀಕರಿಸಬೇಕು,” ಎಂದು ಹೇಳಿದನು.
೧೬
ಅದಕ್ಕೆ ಎಲೀಷನು, “ನಾನು ಸನ್ನಿಧಿಸೇವೆ ಮಾಡುತ್ತಿರುವ ಸರ್ವೇಶ್ವರನಾಣೆ, ನಿನ್ನಿಂದ ಏನೂ ತೆಗೆದುಕೊಳ್ಳುವುದಿಲ್ಲ,” ಎಂದನು. ನಾಮಾನನು ಎಷ್ಟು ಒತ್ತಾಯಪಡಿಸಿದರೂ ಅವನು ತೆಗೆದುಕೊಳ್ಳಲೇ ಇಲ್ಲ.
೧೭
ಆಗ ಅವನು ಎಲೀಷನಿಗೆ, “ತಾವು ಏನನ್ನೂ ಸ್ವೀಕರಿಸದಿದ್ದರೆ ತಮ್ಮ ಸೇವಕನಾದ ನನಗೆ ಎರಡು ಹೇಸರಕತ್ತೆಗಳು ಹೊರುವಷ್ಟು ಮಣ್ಣನ್ನು ಕೊಡಿಸಬೇಕೆಂದು ಬೇಡಿಕೊಳ್ಳುತ್ತೇನೆ. ನಾನು ಇನ್ನು ಮುಂದೆ ಎಲ್ಲಾ ದೇವತೆಗಳನ್ನು ಬಿಟ್ಟು ಸರ್ವೇಶ್ವರಸ್ವಾಮಿ ಒಬ್ಬರಿಗೇ ದಹನಬಲಿಗಳನ್ನು ಸಮರ್ಪಿಸಬೇಕೆಂದಿರುತ್ತೇನೆ.
೧೮
ಆದರೆ ಈ ವಿಷಯದಲ್ಲಿ ಸರ್ವೇಶ್ವರ ನನ್ನನ್ನು ಕ್ಷಮಿಸಲಿ; ನನ್ನ ಒಡೆಯ ಆರಾಧನೆಗೋಸ್ಕರ ರಿಮ್ಮೋನನ ದೇವಸ್ಥಾನಕ್ಕೆ ಹೋಗಿ, ನನ್ನ ಕೈಹಿಡಿದು, ಆ ದೇವತೆಗೆ ನಮಸ್ಕಾರ ಮಾಡುವಾಗ ನಾನೂ ನಮಸ್ಕಾರ ಮಾಡಬೇಕಾಗುವುದು. ಈ ಒಂದು ವಿಷಯದಲ್ಲಿ ಮಾತ್ರ ಸರ್ವೇಶ್ವರ ನನಗೆ ಕ್ಷಮೆಯನ್ನು ಅನುಗ್ರಹಿಸಬೇಕು,” ಎಂದನು.
೧೯
ಎಲೀಷನು, “ಸಮಾಧಾನದಿಂದ ಹೋಗು,” ಎಂದು ಉತ್ತರಕೊಟ್ಟನು. ಅವನು ಹೊರಟುಹೋದನು.
೨೦
ನಾಮಾನನು ಸ್ವಲ್ಪದೂರಕ್ಕೆ ಹೋದನಂತರ ದೈವಪುರುಷನಾದ ಎಲೀಷನ ಸೇವಕ ಗೇಹಜಿಯು ಮನಸ್ಸಿನಲ್ಲೇ, “ನನ್ನ ಯಜಮಾನ ಆ ಸಿರಿಯಾದ ನಾಮಾನನಿಂದ ಏನೂ ತೆಗೆದುಕೊಳ್ಳದೆ ಅವನನ್ನು ಹಾಗೆಯೇ ಕಳುಹಿಸಿಬಿಟ್ಟರಲ್ಲಾ! ಸರ್ವೇಶ್ವರನಾಣೆ, ನಾನು ಅವನ ಹಿಂದೆ ಓಡುತ್ತಾ ಹೋಗಿ, ಅವನಿಂದ ಸ್ವಲ್ಪವನ್ನಾದರೂ ಬಾಚಿಕೊಂಡು ಬರುವೆನು,” ಎಂದುಕೊಂಡು ಹೊರಟನು.
೨೧
ನಾಮಾನನು ತನ್ನ ಹಿಂದೆ ಓಡುತ್ತಾ ಬರುವ ಗೇಹಜಿಯನ್ನು ಕಂಡು, ರಥದಿಂದಿಳಿದು, ಅವನನ್ನು ಎದುರುಗೊಂಡನು, “ಕ್ಷೇಮವೇ,” ಎಂದು ಕೇಳಿದನು.
೨೨
ಅವನು, “ಕ್ಷೇಮ; ಎಫ್ರಯಿಮ್ ಗುಡ್ಡಪ್ರದೇಶದಿಂದ ಪ್ರವಾದಿಮಂಡಲಿಯವರಾದ ಇಬ್ಬರು ಯೌವನಸ್ಥರು ಬಂದಿರುತ್ತಾರೆ. ಆದುದರಿಂದ ಅವರಿಗಾಗಿ ಬೇಗನೆ ಮೂರುಸಾವಿರ ಬೆಳ್ಳಿಯ ನಾಣ್ಯಗಳನ್ನೂ ಎರಡು ದುಸ್ತು ಬಟ್ಟೆಗಳನ್ನೂ ತೆಗೆದುಕೊಂಡು ಬರಬೇಕೆಂಬುದಾಗಿ ನನ್ನ ಯಜಮಾನ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದರು,” ಎಂದು ಉತ್ತರಕೊಟ್ಟನು.
೨೩
ನಾಮಾನನು, “ಆರು ಸಾವಿರ ನಾಣ್ಯವನ್ನಾದರೂ ತೆಗೆದುಕೊಳ್ಳಬಾರದೇ,” ಎಂದು ಅವನನ್ನು ಒತ್ತಾಯಪಡಿಸಿ, ಅದನ್ನು ಎರಡು ಚೀಲಗಳಲ್ಲಿ ಹಾಕಿಸಿ, ಆ ಚೀಲಗಳನ್ನೂ ಎರಡು ದುಸ್ತು ಬಟ್ಟೆಗಳನ್ನೂ ಇಬ್ಬರು ಸೇವಕರ ಮೇಲೆ ಹೊರಿಸಿ, ಅವರನ್ನು ಗೇಹಜಿಯ ಸಂಗಡ ಕಳುಹಿಸಿದನು. ಅವರು ಹೊತ್ತುಕೊಂಡು ಇವನ ಮುಂದೆ ನಡೆದರು.
೨೪
ಗುಡ್ಡವನ್ನು ಮುಟ್ಟಿದಾಗ, ಗೇಹಜಿಯು ಅವುಗಳನ್ನು ತೆಗೆದುಕೊಂಡು, ಮನೆಯಲ್ಲಿ ಅಡಗಿಸಿಬಿಟ್ಟು, ಆಳುಗಳನ್ನು ಕಳುಹಿಸಿಬಿಟ್ಟನು.
೨೫
ಅವರು ಹೋದನಂತರ, ಇವನು ತನ್ನ ಯಜಮಾನನ ಬಳಿಗೆ ಬಂದನು. ಎಲೀಷನು ಅವನನ್ನು, “ಗೇಹಜಿಯೇ, ಎಲ್ಲಿಗೆ ಹೋಗಿ ಬಂದೆ?” ಎಂದು ಕೇಳಿದನು. ಅದಕ್ಕೆ ಅವನು, “ನಿಮ್ಮ ಸೇವಕನಾದ ನಾನು ಎಲ್ಲಿಯೂ ಹೋಗಲಿಲ್ಲ,” ಎಂದು ಉತ್ತರಕೊಟ್ಟನು.
೨೬
ಆಗ ಎಲೀಷನು, “ಒಬ್ಬನು ರಥದಿಂದಿಳಿದು ಬಂದು ನಿನ್ನನ್ನು ಎದುರುಗೊಂಡದ್ದು ನನ್ನ ಜ್ಞಾನದೃಷ್ಟಿಗೆ ಕಾಣಿಸಲಿಲ್ಲವೆಂದು ನೆನಸುತ್ತೀಯೋ? ದ್ರವ್ಯ, ಬಟ್ಟೆಗಳು, ಎಣ್ಣೇಮರದ ತೋಪುಗಳು, ದ್ರಾಕ್ಷೀತೋಟಗಳು, ಕುರಿದನಗಳು, ಗಂಡಾಳು, ಹೆಣ್ಣಾಳುಗಳು, ಇವನ್ನು ಸಂಪಾದಿಸುವುದಕ್ಕೆ ಇದು ಸಮಯವೇ?
೨೭
ನಾಮಾನನ ಚರ್ಮರೋಗವು ನಿನ್ನನ್ನೂ ನಿನ್ನ ಸಂತಾನದವರನ್ನೂ ಸದಾಕಾಲ ಬಾಧಿಸುವುದು,” ಎಂದನು. ಕೂಡಲೆ ಅವನಿಗೆ ಆ ರೋಗ ಹತ್ತಿತು. ಅವನು ಹಿಮದಂತೆ ಬಿಳುಪಾಗಿ, ಅಲ್ಲಿಂದ ಹೊರಟುಹೋದನು.
ಅರಸುಗಳು ೨ ೫:1
ಅರಸುಗಳು ೨ ೫:2
ಅರಸುಗಳು ೨ ೫:3
ಅರಸುಗಳು ೨ ೫:4
ಅರಸುಗಳು ೨ ೫:5
ಅರಸುಗಳು ೨ ೫:6
ಅರಸುಗಳು ೨ ೫:7
ಅರಸುಗಳು ೨ ೫:8
ಅರಸುಗಳು ೨ ೫:9
ಅರಸುಗಳು ೨ ೫:10
ಅರಸುಗಳು ೨ ೫:11
ಅರಸುಗಳು ೨ ೫:12
ಅರಸುಗಳು ೨ ೫:13
ಅರಸುಗಳು ೨ ೫:14
ಅರಸುಗಳು ೨ ೫:15
ಅರಸುಗಳು ೨ ೫:16
ಅರಸುಗಳು ೨ ೫:17
ಅರಸುಗಳು ೨ ೫:18
ಅರಸುಗಳು ೨ ೫:19
ಅರಸುಗಳು ೨ ೫:20
ಅರಸುಗಳು ೨ ೫:21
ಅರಸುಗಳು ೨ ೫:22
ಅರಸುಗಳು ೨ ೫:23
ಅರಸುಗಳು ೨ ೫:24
ಅರಸುಗಳು ೨ ೫:25
ಅರಸುಗಳು ೨ ೫:26
ಅರಸುಗಳು ೨ ೫:27
ಅರಸುಗಳು ೨ 1 / ಅರಸ೨ 1
ಅರಸುಗಳು ೨ 2 / ಅರಸ೨ 2
ಅರಸುಗಳು ೨ 3 / ಅರಸ೨ 3
ಅರಸುಗಳು ೨ 4 / ಅರಸ೨ 4
ಅರಸುಗಳು ೨ 5 / ಅರಸ೨ 5
ಅರಸುಗಳು ೨ 6 / ಅರಸ೨ 6
ಅರಸುಗಳು ೨ 7 / ಅರಸ೨ 7
ಅರಸುಗಳು ೨ 8 / ಅರಸ೨ 8
ಅರಸುಗಳು ೨ 9 / ಅರಸ೨ 9
ಅರಸುಗಳು ೨ 10 / ಅರಸ೨ 10
ಅರಸುಗಳು ೨ 11 / ಅರಸ೨ 11
ಅರಸುಗಳು ೨ 12 / ಅರಸ೨ 12
ಅರಸುಗಳು ೨ 13 / ಅರಸ೨ 13
ಅರಸುಗಳು ೨ 14 / ಅರಸ೨ 14
ಅರಸುಗಳು ೨ 15 / ಅರಸ೨ 15
ಅರಸುಗಳು ೨ 16 / ಅರಸ೨ 16
ಅರಸುಗಳು ೨ 17 / ಅರಸ೨ 17
ಅರಸುಗಳು ೨ 18 / ಅರಸ೨ 18
ಅರಸುಗಳು ೨ 19 / ಅರಸ೨ 19
ಅರಸುಗಳು ೨ 20 / ಅರಸ೨ 20
ಅರಸುಗಳು ೨ 21 / ಅರಸ೨ 21
ಅರಸುಗಳು ೨ 22 / ಅರಸ೨ 22
ಅರಸುಗಳು ೨ 23 / ಅರಸ೨ 23
ಅರಸುಗಳು ೨ 24 / ಅರಸ೨ 24
ಅರಸುಗಳು ೨ 25 / ಅರಸ೨ 25