A A A A A
×

ಕನ್ನಡ ಬೈಬಲ್ (KNCL) 2016

ಅರಸುಗಳು ೨ ೧೩

ಜುದೇಯದ ಅರಸನೂ ಅಹಜ್ಯನ ಮಗನೂ ಆದ ಯೆಹೋವಾಷನ ಆಳ್ವಿಕೆಯ ಇಪ್ಪತ್ತಮೂರನೆಯ ವರ್ಷದಲ್ಲಿ, ಯೇಹುವಿನ ಮಗ ಯೆಹೋವಾಹಾಜನು, ಇಸ್ರಯೇಲರ ಅರಸನಾಗಿ ಸಮಾರಿಯದಲ್ಲಿ ಹದಿನೇಳು ವರ್ಷ ಆಳಿದನು.
ಅವನು ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿದ ನೆಬಾಟನ ಮಗ ಯಾರೊಬ್ಬಾಮನ ದುರ್ಮಾರ್ಗವನ್ನು ಕೈಬಿಡದೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು.
ಆದುದರಿಂದ ಸರ್ವೇಶ್ವರಸ್ವಾಮಿ ಇಸ್ರಯೇಲರ ಮೇಲೆ ಕೋಪಗೊಂಡು, ಅವರನ್ನು ಸಿರಿಯಾದವರ ಅರಸನಾದ ಹಜಾಯೇಲನ ಕೈಗೂ ಅವನ ಮಗನಾದ ಬೆನ್ಹದದನ ಕೈಗೂ ಒಪ್ಪಿಸಿದರು. ಇಸ್ರಯೇಲರು ಯೆಹೋವಾಹಾಜನ ಜೀವಮಾನದಲ್ಲೆಲ್ಲಾ ಸಿರಿಯಾದವರ ಕೈಕೆಳಗಿದ್ದರು.
ಯೆಹೋವಾಹಾಜನು ಸರ್ವೇಶ್ವರನಿಗೆ ಮೊರೆ ಇಟ್ಟನು. ಅವರು ಅವನ ಮೊರೆಗೆ ಓಗೊಟ್ಟು, ಸಿರಿಯಾದವರ ಅರಸನಿಂದ ಬಹಳವಾಗಿ ಶೋಷಿತರಾದ ಇಸ್ರಯೇಲರ ಮೇಲೆ ಕಟಾಕ್ಷವಿಟ್ಟು, ಅವರಿಗೆ ಒಬ್ಬ ವಿಮೋಚಕನನ್ನು ಅನುಗ್ರಹಿಸಿದರು.
ಅವನ ಮುಖಾಂತರವಾಗಿ ಅವರು ಸಿರಿಯಾದವರ ಕೈಯಿಂದ ಬಿಡುಗಡೆಯಾಗಿ, ಮುಂದಿನಂತೆ ತಮ್ಮ ತಮ್ಮ ಮನೆಗಳಲ್ಲಿ ಸುರಕ್ಷಿತರಾಗಿ ವಾಸಿಸುವವರಾದರು.
ಆದರೂ ಅವರು ತಮ್ಮನ್ನು ಪಾಪಕ್ಕೆ ಪ್ರೇರಿಸಿದ ಯಾರೊಬ್ಬಾಮನ ಮನೆಯವರ ದುರ್ಮಾರ್ಗದಲ್ಲಿ ನಡೆದರು. ಅದನ್ನು ಬಿಡಲೇ ಇಲ್ಲ. ಸಮಾರಿಯದಲ್ಲಿ ಅಶೇರ ವಿಗ್ರಹಸ್ಥಂಭವು ಇನ್ನೂ ಉಳಿದಿತ್ತು.
ಯೆಹೋವಾಹಾಜನಿಗೆ ಐವತ್ತುಮಂದಿ ರಾಹುತರು, ಹತ್ತು ರಥಗಳು, ಹತ್ತುಸಾವಿರ ಮಂದಿ ಕಾಲಾಳುಗಳು ಮಾತ್ರ ಉಳಿದಿದ್ದರು. ಸಿರಿಯಾದವರ ಅರಸನು ಬೇರೆ ಎಲ್ಲರನ್ನೂ ಸಂಹರಿಸಿ, ಕಣದ ಧೂಳಿಪಟದಂತೆ ಮಾಡಿಬಿಟ್ಟನು.
ಯೆಹೋವಾಹಾಜನ ಉಳಿದ ಚರಿತ್ರೆ ಹಾಗು ಅವನ ಶೂರಕೃತ್ಯಗಳ ವಿವರ ಇಸ್ರಯೇಲ್ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.
ಅವನು ನಿಧನನಾಗಿ ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ಸಮಾರಿಯದಲ್ಲಿ ಸಮಾಧಿ ಮಾಡಿದರು. ಅವನ ಸ್ಥಾನದಲ್ಲಿ ಅವನ ಮಗ ಯೋವಾಷನು ಅರಸನಾದನು.
೧೦
ಜುದೇಯದ ಅರಸನಾದ ಯೆಹೋವಾಷಾನ ಆಳ್ವಿಕೆಯ ಮೂವತ್ತೇಳನೆಯ ವರ್ಷದಲ್ಲಿ ಯೆಹೋವಾಹಾಜನ ಮಗ ಯೋವಾಷನು ಇಸ್ರಯೇಲರ ಅರಸನಾಗಿ ಸಮಾರಿಯದಲ್ಲಿ ಹದಿನಾರು ವರ್ಷ ಆಳಿದನು.
೧೧
ಇವನು ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ದುರ್ಮಾರ್ಗವನ್ನು ಬಿಡದೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು.
೧೨
ಇವನ ಉಳಿದ ಚರಿತ್ರೆ, ಶೂರಕೃತ್ಯಗಳ ಹಾಗು ಇವನು ಯೆಹೂದ್ಯರ ಅರಸನಾದ ಅಮಚ್ಯನು ಎಂಬವನೊಡನೆ ನಡೆಸಿದ ಯುದ್ಧದ ವಿವರವು ಇಸ್ರಯೇಲ್ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.
೧೩
ಇವನು ನಿಧನನಾಗಿ ಪಿತೃಗಳ ಬಳಿ ಸೇರಲು ಇವನ ಶವವನ್ನು ಸಮಾರಿಯದೊಳಗೆ ಇಸ್ರಯೇಲ್ ರಾಜಸ್ಮಶಾನದಲ್ಲಿ ಸಮಾಧಿ ಮಾಡಿದರು. ಇವನ ತರುವಾಯ ಯಾರೊಬ್ಬಾಮನು ಸಿಂಹಾಸನವನ್ನೇರಿದನು.
೧೪
ಎಲೀಷನು ಮಾರಕರೋಗದಿಂದ ನರಳುತ್ತಿದ್ದನು. ಇಸ್ರಯೇಲರ ಅರಸ ಯೋವಾಷನು ಇದನ್ನು ಕೇಳಿ ಅವನ ಬಳಿಗೆ ಹೋಗಿ, “ತಂದೆಯೇ, ನನ್ನ ತಂದೆಯೇ, ಇಸ್ರಯೇಲರಿಗೆ ರಥಾರಥಾಶ್ವಬಲಗಳಾಗಿ ಇದ್ದವರೇ,” ಎಂದು ಗೋಳಿಡುತ್ತಾ ಅಧೋಮುಖನಾಗಿ ಬಿದ್ದು ಅತ್ತು ಪ್ರಲಾಪಿಸಿದನು.
೧೫
ಆಗ ಎಲೀಷನು ಇಸ್ರಯೇಲರ ಅರಸನಿಗೆ, “ಬಿಲ್ಲನ್ನೂ ಬಾಣಗಳನ್ನೂ ತರಿಸಿ,” ಎಂದು ಹೇಳಿದನು; ಅವನು ತರಿಸಿದನು.
೧೬
ಆಗ, “ಬಿಲ್ಲನ್ನು ಹಿಡಿದುಕೋ,” ಎಂದು ಆಜ್ಞಾಪಿಸಿದನು. ಅವನು ಹಿಡಿದುಕೊಳ್ಳಲು ತನ್ನ ಕೈಯನ್ನು ಅವನ ಕೈ ಮೇಲೆ ಇಟ್ಟು,
೧೭
“ಪೂರ್ವದಿಕ್ಕಿಗಿರುವ ಕಿಟಕಿಯನ್ನು ತೆರೆ,” ಎಂದನು. ಅವನು ತೆರೆದನು. ಅನಂತರ, “ಬಾಣವನ್ನೆಸೆ,” ಎಂದು ಆಜ್ಞಾಪಿಸಿದನು. ಅವನು ಎಸೆಯಲು, “ಇದು ಜಯಪ್ರದವಾದ ಸರ್ವೇಶ್ವರನ ಬಾಣ; ಸಿರಿಯಾದವರನ್ನು ಜಯಿಸುವ ಬಾಣ. ಆ ಸಿರಿಯಾದವರನ್ನು ನೀನು ಅಫೇಕದಲ್ಲಿ ಸೋಲಿಸಿ ಸಂಹರಿಸಿಬಿಡುವೆ,” ಎಂದು ಹೇಳಿದನು.
೧೮
ಇದಲ್ಲದೆ, ಎಲೀಷನು ಇಸ್ರಯೇಲರ ಅರಸನಿಗೆ, “ಬಾಣಗಳನ್ನು ತೆಗೆದುಕೋ,” ಎಂದು ಆಜ್ಞಾಪಿಸಿದಾಗ ಅವನು ತೆಗೆದುಕೊಳ್ಳಲು, “ಇವುಗಳಿಂದ ನೆಲವನ್ನು ಸೀಳು,” ಎಂದನು. ಅವನು ಮೂರು ಸಾರಿ ಬಾಣಬಿಟ್ಟು ಸುಮ್ಮನೆ ನಿಂತನು.
೧೯
ಆಗ ದೈವಪುರುಷನು ಅವನ ಮೇಲೆ ಸಿಟ್ಟುಗೊಂಡು, “ನೀನು ಐದಾರು ಸಾರಿ ಬಾಣಬಿಡಬೇಕಾಗಿತ್ತು. ಹಾಗೆ ಮಾಡಿದ್ದರೆ ಸಿರಿಯಾದವರು ನಿರ್ನಾಮವಾಗಿ ಹೋಗುವವರೆಗೂ ಅವರ ಮೇಲೆ ನಿನಗೆ ಜಯ ದೊರಕುತ್ತಿತ್ತು. ನೀನು ಮೂರು ಸಾರಿ ಮಾತ್ರ ಬಾಣಬಿಟ್ಟದ್ದರಿಂದ ಅವರನ್ನು ಮೂರು ಸಾರಿ ಮಾತ್ರ ಸೋಲಿಸುವೆ,” ಎಂದು ಹೇಳಿದನು.
೨೦
ಎಲೀಷನು ಮೃತನಾದನು. ಅವನ ಶವವನ್ನು ಸಮಾಧಿಮಾಡಿದರು. ಮೋವಾಬ್ಯರು ಪ್ರತಿವರ್ಷದ ಪ್ರಾರಂಭದಲ್ಲಿ ಸುಲಿಗೆಮಾಡುವುದಕ್ಕಾಗಿ ಗುಂಪುಗುಂಪಾಗಿ ಬರುತ್ತಿದ್ದರು.
೨೧
ಒಂದು ದಿನ, ಜನರು ಒಬ್ಬ ಸತ್ತವನನ್ನು ಸಮಾಧಿ ಮಾಡುವುದಕ್ಕೆ ಹೋದಾಗ, ಮೋವಾಬ್ಯರ ಗುಂಪು ಬರುತ್ತಿರುವುದನ್ನು ಕಂಡು, ಶವವನ್ನು ಎಲೀಷನ ಸಮಾಧಿಯಲ್ಲೆ ಬಿಸಾಡಿ ಓಡಿಹೋದರು. ಸತ್ತ ವ್ಯಕ್ತಿಯ ಶವ ಎಲೀಷನ ಎಲುಬುಗಳಿಗೆ ತಗುಲಿದ ಕೂಡಲೆ, ಆ ವ್ಯಕ್ತಿ ಉಜ್ಜೀವಿಸಿ ಎದ್ದುನಿಂತನು.
೨೨
ಸಿರಿಯಾದವರ ಅರಸನಾದ ಹಜಾಯೇಲನು ಯೆಹೋವಾಹಾಜನ ಆಳ್ವಿಕೆಯಲ್ಲೆಲ್ಲಾ ಇಸ್ರಯೇಲರನ್ನು ಪೀಡಿಸುತ್ತಿದ್ದನು.
೨೩
ಆದರೂ ಸರ್ವೇಶ್ವರ ಅವರನ್ನು ಸಂಪೂರ್ಣವಾಗಿ ಹಾಳುಮಾಡಗೊಡಲಿಲ್ಲ. ಅವರನ್ನು ಈ ಕಾಲದಲ್ಲಿಯೂ ತಮ್ಮ ಸನ್ನಿಧಿಯಿಂದ ತಳ್ಳಿಬಿಡಲಿಲ್ಲ. ತಾವು ಅಬ್ರಹಾಮ್, ಇಸಾಕ್, ಯಕೋಬರೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಸ್ಮರಿಸಿ, ಅವರಿಗೆ ದಯೆತೋರಿಸಿದರು; ಕರುಳುಕರಗಿದವರಾಗಿ ಅವರಿಗೆ ಪ್ರಸನ್ನರಾದರು.
೨೪
ಸಿರಿಯಾದವರ ಅರಸನಾದ ಹಜಾಯೇಲನು ಮರಣಹೊಂದಲು ಅವನಿಗೆ ಬದಲಾಗಿ ಅವನ ಮಗ ಬೆನ್ಹದದನು ಅರಸನಾದನು.
೨೫
ಯೆಹೋವಾಹಾಜನ ಮಗ ಯೋವಾಷನು, ತನ್ನ ತಂದೆಯ ಕಾಲದಲ್ಲಿ ಹಜಾಯೇಲನು ಯುದ್ಧಮಾಡಿ ಕಿತ್ತುಕೊಂಡಿದ್ದ ಪಟ್ಟಣಗಳನ್ನು, ಬೆನ್ಹದದನಿಂದ ತಿರುಗಿ ತೆಗೆದುಕೊಂಡನು. ಅವನನ್ನು ಮೂರು ಸಾರಿ ಸೋಲಿಸಿ, ಇಸ್ರಯೇಲರ ಎಲ್ಲಾ ಪಟ್ಟಣಗಳನ್ನು ಹಿಂದಕ್ಕೆ ಪಡೆದನು.
ಅರಸುಗಳು ೨ ೧೩:1
ಅರಸುಗಳು ೨ ೧೩:2
ಅರಸುಗಳು ೨ ೧೩:3
ಅರಸುಗಳು ೨ ೧೩:4
ಅರಸುಗಳು ೨ ೧೩:5
ಅರಸುಗಳು ೨ ೧೩:6
ಅರಸುಗಳು ೨ ೧೩:7
ಅರಸುಗಳು ೨ ೧೩:8
ಅರಸುಗಳು ೨ ೧೩:9
ಅರಸುಗಳು ೨ ೧೩:10
ಅರಸುಗಳು ೨ ೧೩:11
ಅರಸುಗಳು ೨ ೧೩:12
ಅರಸುಗಳು ೨ ೧೩:13
ಅರಸುಗಳು ೨ ೧೩:14
ಅರಸುಗಳು ೨ ೧೩:15
ಅರಸುಗಳು ೨ ೧೩:16
ಅರಸುಗಳು ೨ ೧೩:17
ಅರಸುಗಳು ೨ ೧೩:18
ಅರಸುಗಳು ೨ ೧೩:19
ಅರಸುಗಳು ೨ ೧೩:20
ಅರಸುಗಳು ೨ ೧೩:21
ಅರಸುಗಳು ೨ ೧೩:22
ಅರಸುಗಳು ೨ ೧೩:23
ಅರಸುಗಳು ೨ ೧೩:24
ಅರಸುಗಳು ೨ ೧೩:25
ಅರಸುಗಳು ೨ 1 / ಅರಸ೨ 1
ಅರಸುಗಳು ೨ 2 / ಅರಸ೨ 2
ಅರಸುಗಳು ೨ 3 / ಅರಸ೨ 3
ಅರಸುಗಳು ೨ 4 / ಅರಸ೨ 4
ಅರಸುಗಳು ೨ 5 / ಅರಸ೨ 5
ಅರಸುಗಳು ೨ 6 / ಅರಸ೨ 6
ಅರಸುಗಳು ೨ 7 / ಅರಸ೨ 7
ಅರಸುಗಳು ೨ 8 / ಅರಸ೨ 8
ಅರಸುಗಳು ೨ 9 / ಅರಸ೨ 9
ಅರಸುಗಳು ೨ 10 / ಅರಸ೨ 10
ಅರಸುಗಳು ೨ 11 / ಅರಸ೨ 11
ಅರಸುಗಳು ೨ 12 / ಅರಸ೨ 12
ಅರಸುಗಳು ೨ 13 / ಅರಸ೨ 13
ಅರಸುಗಳು ೨ 14 / ಅರಸ೨ 14
ಅರಸುಗಳು ೨ 15 / ಅರಸ೨ 15
ಅರಸುಗಳು ೨ 16 / ಅರಸ೨ 16
ಅರಸುಗಳು ೨ 17 / ಅರಸ೨ 17
ಅರಸುಗಳು ೨ 18 / ಅರಸ೨ 18
ಅರಸುಗಳು ೨ 19 / ಅರಸ೨ 19
ಅರಸುಗಳು ೨ 20 / ಅರಸ೨ 20
ಅರಸುಗಳು ೨ 21 / ಅರಸ೨ 21
ಅರಸುಗಳು ೨ 22 / ಅರಸ೨ 22
ಅರಸುಗಳು ೨ 23 / ಅರಸ೨ 23
ಅರಸುಗಳು ೨ 24 / ಅರಸ೨ 24
ಅರಸುಗಳು ೨ 25 / ಅರಸ೨ 25