A A A A A
×

ಕನ್ನಡ ಬೈಬಲ್ (KNCL) 2016

ಸಮುವೇಲನು ೨ ೨೨

ಸರ್ವೇಶ್ವರಸ್ವಾಮಿ ದಾವೀದನನ್ನು ಸೌಲನ ಕೈಗೂ ಇತರ ಶತ್ರುಗಳ ಕೈಗೂ ಸಿಕ್ಕದಂತೆ ತಪ್ಪಿಸಿದರು. ಈ ಕಾರಣ ಅವನು ಸರ್ವೇಶ್ವರಸ್ವಾಮಿಯನ್ನು ಕೀರ್ತಿಸುತ್ತಾ ಈ ಜಯಗೀತೆಯನ್ನು ಹಾಡಿದನು:
ಸರ್ವೇಶ್ವರನೇ ನನಗೆ ಪೊರೆಬಂಡೆ, ನನ್ನ ಕಲ್ಲು ಕೋಟೆ, ಆತನೇ ವಿಮೋಚಕ ನನಗೆ
ಆತನೇ ನನಗೆ ದೇವರು, ನನ್ನಾಶ್ರಯಗಿರಿ, ನನ್ನ ರಕ್ಷಣಾಶೃಂಗ, ನನ್ನ ದುರ್ಗ, ನನ್ನ ಗುರಾಣಿ.
ಸರ್ವೇಶ್ವರನು ಸ್ತುತ್ಯಾರ್ಹನು ಶತ್ರುಗಳಿಂದ ಕಾಪಾಡುವನು, ನಾನವಗೆ ಮೊರೆಯಿಡಲು
ಕುತ್ತಿಗೆಗೆ ಬಂದಿದ್ದವು ಸಾವಿನ ಅಲೆಗಳು ನಡುಕ ಹುಟ್ಟಿಸಿದ್ದವು ವಿನಾಶಪ್ರವಾಹಗಳು.
ಸುತ್ತಿಕೊಂಡಿದ್ದವು ಪಾತಾಳಪಾಶಗಳು ನನ್ನ ಕಣ್ಮುಂದಿದ್ದವು ಮರಣಕರ ಉರುಲುಗಳು.
ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ದೇವನಿಗೆ ಪ್ರಾರ್ಥನೆ ಮಾಡಿದೆ ಆ ಸರ್ವೇಶ್ವರನಿಗೆ. ನನ್ನ ಕೂಗು ಕೇಳಿಸಿತು ಆತನ ಮಂದಿರದಲಿ ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ.
ಆಗ ಕಂಪಿಸಿತು ಭೂಮಿ ಗಡಗಡನೆ ಕದಲಿದವು ಆಗಸದಸ್ತಿವಾರಗಳು ಮಿಲಮಿಲನೆ ಏಕೆನೆ ಸಿಟ್ಟೇರಿತ್ತು ಆತನಿಗೆ.
ಹೊರಬಂದಿತು ಹೊಗೆ ಆತನ ಮೂಗಿನಿಂದ ಹೊರಟಿತು ಅಗ್ನಿಜ್ವಾಲೆ ಆತನ ಬಾಯಿಂದ ಕಾದುಕೆಂಡವಾಯಿತು ಅದಕ್ಕೆದುರಿಗೆ ಸಿಕ್ಕಿದುದೆಲ್ಲ.
೧೦
ಆಕಾಶವನೆ ಬಾಗಿಸಿ ಆತನಿಳಿದು ಬರಲು ಸೇರಿತು ಆತನ ಕಾಲಡಿ ಕಾರ್ಮುಗಿಲು.
೧೧
ಬಂದಿಳಿದನು ‘ಕೆರೂಬಿ’ ವಾಹನಾರೂಢನಾಗಿ ಕಾಣಿಸಿಕೊಂಡನು ವಾಯುರೆಕ್ಕೆಗಳ ವೇಗದಲಿ.
೧೨
ಕತ್ತಲನು, ಜಲಮಯ ಮೇಘಗಳನು ಸುತ್ತಲು ಕವಿಸಿಕೊಂಡನು ಛತ್ರಾಂಬರದೊಳು.
೧೩
ಉರಿಗೆಂಡಗಳು ಹೊರಟುಬರುತ್ತಿದ್ದವು ಅಷ್ಟು ಪ್ರಜ್ವಲವಾಗಿತ್ತು ಆತನ ಸಾನ್ನಿಧ್ಯವು.
೧೪
ಗುಡುಗಿದನು ಸರ್ವೇಶ್ವರ ಗಗನಮಂಡಲದಿಂದ ಮೊಳಗಿತು ವಾಣಿ ಆ ಪರಮೋನ್ನತನಿಂದ.
೧೫
ಚದರಿಸಿದನು ಶತ್ರುಗಳನು ಬಾಣಗಳನೆಸೆದು ತಳಮಳಗೊಳಿಸಿದನವರನು ಸಿಡಿಲನು ಹೊಡೆದು.
೧೬
ಆತನಾ ಗದರಿಕೆಗೆ, ಆತನಾ ಶ್ವಾಸಭರಕ್ಕೆ ಕಾಣಿಸಿಕೊಂಡಿತು ಇಂಗಿಹೋದ ಸಮುದ್ರದ ತಳ ತೋರಿಬಂದಿತು ಭೂಲೋಕದ ಅಸ್ತಿವಾರ.
೧೭
ಮೇಲಣಾಲೋಕದಿಂದ ಹಿಡಿದುಕೊಂಡ ಎನ್ನನು ಕೈಚಾಚಿ ಸೆಳೆದುಕೊಂಡ ಆ ಜಲರಾಶಿಗಳಿಂದೆನ್ನನು ಕೈನೀಡಿ.
೧೮
ನನ್ನ ಬಿಡಿಸಿ ರಕ್ಷಿಸಿದನು ಶತ್ರುಗಳಿಂದ ನನಗಿಂತ ಪುಷ್ಟ, ಬಲಿಷ್ಠ ಹಗೆಗಳಿಂದ.
೧೯
ನನ್ನ ಮೇಲೆರಗಿದ್ದರಾ ಹಗೆಗಳು ದುರಂತ ಕಾಲದಲಿ ನನಗುದ್ಧಾರಕನಾದ ಸರ್ವೇಶ್ವರನು, ಆ ವಿಪತ್ಕಾಲದಲಿ.
೨೦
ಬಿಕ್ಕಟ್ಟಿನಿಂದ ಬಿಡಿಸಿ ತಂದನು ಬಯಲಿಗೆ ಅಕ್ಕರೆಯಿಂದ ಮೆಚ್ಚಿ ನನಗಾದನು ರಕ್ಷೆ.
೨೧
ನನಗೊಳಿತು ಮಾಡಿದನಾತ ಸನ್ನಡತೆಗೆ ತಕ್ಕಂತೆ ಪ್ರತಿಫಲವನಿತ್ತನು ನನ್ನ ಹಸ್ತಶುದ್ಧತೆಗೆ ತಕ್ಕ ಹಾಗೆ.
೨೨
ದೇವರನು ತೊರೆದು ದುರುಳನಾಗದೆ ನಾನನುಸರಿಸಿದೆ ಸರ್ವೇಶ್ವರನ ಮಾರ್ಗವನೆ.
೨೩
ಆತನ ವಿಧಿನಿಯಮಗಳನ್ನು ಕೈಬಿಡದೆ ಆತನಾಜ್ಞೆಗಳನಿಟ್ಟೆ ಸದಾ ನನ್ನ ಕಣ್ಣ ಮುಂದೆ.
೨೪
ಪಾಪದಲಿ ಬೀಳದೆ ನಡೆದೆ ಎಚ್ಚರಿಕೆಯಾಗಿ ಆತನ ದೃಷ್ಟಿಯಲಿದ್ದೆ ನಿರ್ದೋಷಿಯಾಗಿ.
೨೫
ನಾ ನೀತಿವಂತ, ನಿರಪರಾಧಿಯೆಂದರಿತು ನನಗಿತ್ತನಾ ಸರ್ವೇಶ್ವರ ತಕ್ಕ ಪ್ರತಿಫಲವನು.
೨೬
ಕರುಣೆಯುಳ್ಳವನಿಗಾತ ಕರುಣಾಮಯಿ ದೋಷರಹಿತನಿಗಾತ ನಿರ್ದೋಷಿ.
೨೭
ಶುದ್ಧನಿಗಾತ ಪರಿಶುದ್ಧನು ಮೂರ್ಖನಿಗಾತ ಮಹಾವಕ್ರನು.
೨೮
ದೀನದಲಿತರನು ಉದ್ಧರಿಸುವನು ಗರ್ವಿಗಳನು ಗುರುತಿಸಿ ತಗ್ಗಿಸುವನು.
೨೯
ಹೇ ಸರ್ವೇಶ್ವರಾ, ನೀನೆನಗೆ ಜ್ಯೋತಿ ಕತ್ತಲನು ನೀಗಿಸಿ, ಬೆಳಕನು ನೀಡುತಿ.
೩೦
ನಿನ್ನ ಶಕ್ತಿಯಿದ್ದಲ್ಲಿ ನಾ ದಂಡಿನ ಮೇಲೆ ಬೀಳಬಲ್ಲೆ ದೈವನೆರವಿದ್ದಲ್ಲಿ ನಾ ಕೋಟೆಕೊತ್ತಲನೆ ಹಾರಬಲ್ಲೆ.
೩೧
ದೇವರ ಮಾರ್ಗ ದೋಷರಹಿತ ಸರ್ವೇಶ್ವರನ ವಚನ ಪರಮಪುನೀತ ಆಶ್ರಿತರೆಲ್ಲರಿಗಾತ ರಕ್ಷಣಾಕವಚ.
೩೨
ಸರ್ವೇಶ್ವರನಲ್ಲದೆ ಇನ್ನಾವ ದೇವರುಂಟು? ನಮ್ಮ ದೇವನಲ್ಲದೆ ಉದ್ಧಾರಕನೆಲ್ಲುಂಟು?
೩೩
ದೇವನೇ ನನಗೆ ಭದ್ರವಾದ ದುರ್ಗ ಆತನಿಂದಲೇ ಸರಾಗ ನನ್ನ ಮಾರ್ಗ.
೩೪
ನನಗಿತ್ತನಾತ ಹುಲ್ಲೆಯಂಥ ಮೊನೆಗಾಲು ಎನ್ನ ಬಿಗಿನಿಲ್ಲಿಸಿದ ಮಲೆಗಳ ಮೇಲೂ.
೩೫
ಯುದ್ಧವಿದ್ಯೆಯ ಕಲಿತೆ ಆತನಿಂದಲೆ ಎಂದೇ ನಾ ಕಂಚಿನ ಬಿಲ್ಲನೆ ಬಗ್ಗಿಸಬಲ್ಲೆ.
೩೬
ನನ್ನ ಪರ ನೀನೇ ಗುರಾಣಿ ಹಿಡಿದು ರಕ್ಷಿಸಿದೆ ನಿನ್ನ ಕೃಪಾವರ ತಂದಿತು ನನಗೆ ದೊಡ್ಡಸ್ತಿಕೆ.
೩೭
ನೀನಿತ್ತೆ ನನ್ನ ಪಾದಗಳಿಗೆ ವಿಶಾಲಸ್ಥಳ ನನ್ನ ಹೆಜ್ಜೆಗಳು ಕದಲವು ಈ ನಿಮಿತ್ತ.
೩೮
ಸದೆಬಡಿವೆನು ಶತ್ರುಗಳನು ಬೆನ್ನಟ್ಟಿ ಅವರನು ನಿರ್ಮೂಲ ಮಾಡದೆ ಬರೆ ಹಿಂದಿರುಗಿ.
೩೯
ಅವರನು ಹೊಡೆದೆ ಮತ್ತೆ ಏಳದಂತೆ ಅವರನು ಮಾಡಿದೆ ಕಾಲಿಗೆ ಬೀಳುವಂತೆ.
೪೦
ನನಗಿತ್ತೆ ನೀ ಕದನಕ್ಕಾಗುವ ಶೌರ್ಯವೆಂಬ ನಡುಕಟ್ಟು ತಗ್ಗಿಸಿದೆ ಎದುರಾಳಿಗಳ ನನಗಧೀನ ಮಾಡಿಬಿಟ್ಟು.
೪೧
ಆ ಶತ್ರುಗಳೋಡಿದರು ನನಗೆ ಬೆಂಗೊಟ್ಟು ಆ ಹಗೆಗಳನು ನಿರ್ಮೂಲಮಾಡಿದೆ ನಾ ಗುರಿಯಿಟ್ಟು.
೪೨
ಎಲ್ಲಿ ಯಾಚಿಸಿದರೂ ಅವರಿಗಿರಲಿಲ್ಲ ರಕ್ಷಕ ಸರ್ವೇಶ್ವರನಿಗೆ ಮೊರೆಯಿಟ್ಟರೂ ಅವರಿಗೆ ದೊರಕಲಿಲ್ಲ ಉತ್ತರ.
೪೩
ಪುಡಿಪುಡಿ ಮಾಡಿದೆ ನಾನವರನು ಮಣ್ಣಿನ ಹೆಂಟೆಯಂತೆ ಎತ್ತೆಸೆದುಬಿಟ್ಟೆ ನಾನವರನು ಮೋರಿಯ ಕೆಸರಿನಂತೆ.
೪೪
ನನ್ನ ಜನರ ಒಳಕಲಹದಿಂದೆನ್ನ ನೀ ತಪ್ಪಿಸಿದೆ ನನ್ನನುಳಿಸಿ ಜನಾಂಗಗಳಿಗೆ ಜನಪನಾಗಿಸಿದೆ ನಾನರಿಯದ ಜನರನ್ನೂ ನನಗಧೀನರನ್ನಾಗಿಸಿದೆ.
೪೫
ದೇಶಾಂತರದವರೂ ಮುದುರಿಕೊಂಡರು ನನ್ನ ಮುಂದೆ ವಿಧೇಯರಾದರೆನಗೆ ನನ್ನ ಸುದ್ದಿ ಕೇಳಿದ ಮಾತ್ರಕೆ.
೪೬
ಎದೆಗುಂದಿದವರಾದರು ಆ ವಿದೇಶಿಯರು ತಮ್ಮ ಕೋಟೆಯಿಂದ ನಡುಗುತ್ತಾ ಹೊರಬಂದರು.
೪೭
ಸರ್ವೇಶ್ವರನು ಚೈತನ್ಯಸ್ವರೂಪನು ನನ್ನುದ್ಧಾರಕನವಗೆ ಸ್ತುತಿಸ್ತೋತ್ರವು ನನ್ನಾಶ್ರಯಸಿರಿ ದೇವಗೆ ಜಯಕಾರವು.
೪೮
ನನ್ನ ಶತ್ರುಗಳಿಗೆ ವಿಧಿಸುವನಾ ದೇವ ಪ್ರತಿದಂಡನೆ ಜನಾಂಗಗಳನು ಅಧೀನಪಡಿಸುವನಾತ ನನಗೆ.
೪೯
ಶತ್ರುಗಳಿಂದ ನೀನೆನ್ನ ಮುಕ್ತಗೊಳಿಸಿದೆ ಎದುರಾಳಿಗೆ ತಪ್ಪಿಸಿ ನನ್ನನುನ್ನತಿಗೇರಿಸಿದೆ ಹಿಂಸಾತ್ಮಕರಿಂದ ನೀಯೆನ್ನ ಸಂರಕ್ಷಿಸಿದೆ.
೫೦
ಎಂತಲೆ, ನಿನ್ನ ಸ್ತುತಿಪೆನು ಅನ್ಯಜನಗಳ ಮಧ್ಯೆ ನಿನ್ನ ನಾಮವನು ಹೇ ಸರ್ವೇಶ್ವರಾ ಸಂಕೀರ್ತಿಪೆ.
೫೧
ತಾನೇ ನೇಮಿಸಿದ ಅರಸನಿಗೆ ಆತನೀವನು ವಿಶೇಷ ರಕ್ಷಣೆ.
೫೨
ಅನುಗ್ರಹಿಸುವನಾತ ಅನಂತಾನಂತ ಕೃಪೆ ತಾನಭಿಷೇಕಿಸಿದ ದಾವೀದನಿಗೆ, ಆತನ ಸಂತತಿಗೆ.
ಸಮುವೇಲನು ೨ ೨೨:1
ಸಮುವೇಲನು ೨ ೨೨:2
ಸಮುವೇಲನು ೨ ೨೨:3
ಸಮುವೇಲನು ೨ ೨೨:4
ಸಮುವೇಲನು ೨ ೨೨:5
ಸಮುವೇಲನು ೨ ೨೨:6
ಸಮುವೇಲನು ೨ ೨೨:7
ಸಮುವೇಲನು ೨ ೨೨:8
ಸಮುವೇಲನು ೨ ೨೨:9
ಸಮುವೇಲನು ೨ ೨೨:10
ಸಮುವೇಲನು ೨ ೨೨:11
ಸಮುವೇಲನು ೨ ೨೨:12
ಸಮುವೇಲನು ೨ ೨೨:13
ಸಮುವೇಲನು ೨ ೨೨:14
ಸಮುವೇಲನು ೨ ೨೨:15
ಸಮುವೇಲನು ೨ ೨೨:16
ಸಮುವೇಲನು ೨ ೨೨:17
ಸಮುವೇಲನು ೨ ೨೨:18
ಸಮುವೇಲನು ೨ ೨೨:19
ಸಮುವೇಲನು ೨ ೨೨:20
ಸಮುವೇಲನು ೨ ೨೨:21
ಸಮುವೇಲನು ೨ ೨೨:22
ಸಮುವೇಲನು ೨ ೨೨:23
ಸಮುವೇಲನು ೨ ೨೨:24
ಸಮುವೇಲನು ೨ ೨೨:25
ಸಮುವೇಲನು ೨ ೨೨:26
ಸಮುವೇಲನು ೨ ೨೨:27
ಸಮುವೇಲನು ೨ ೨೨:28
ಸಮುವೇಲನು ೨ ೨೨:29
ಸಮುವೇಲನು ೨ ೨೨:30
ಸಮುವೇಲನು ೨ ೨೨:31
ಸಮುವೇಲನು ೨ ೨೨:32
ಸಮುವೇಲನು ೨ ೨೨:33
ಸಮುವೇಲನು ೨ ೨೨:34
ಸಮುವೇಲನು ೨ ೨೨:35
ಸಮುವೇಲನು ೨ ೨೨:36
ಸಮುವೇಲನು ೨ ೨೨:37
ಸಮುವೇಲನು ೨ ೨೨:38
ಸಮುವೇಲನು ೨ ೨೨:39
ಸಮುವೇಲನು ೨ ೨೨:40
ಸಮುವೇಲನು ೨ ೨೨:41
ಸಮುವೇಲನು ೨ ೨೨:42
ಸಮುವೇಲನು ೨ ೨೨:43
ಸಮುವೇಲನು ೨ ೨೨:44
ಸಮುವೇಲನು ೨ ೨೨:45
ಸಮುವೇಲನು ೨ ೨೨:46
ಸಮುವೇಲನು ೨ ೨೨:47
ಸಮುವೇಲನು ೨ ೨೨:48
ಸಮುವೇಲನು ೨ ೨೨:49
ಸಮುವೇಲನು ೨ ೨೨:50
ಸಮುವೇಲನು ೨ ೨೨:51
ಸಮುವೇಲನು ೨ ೨೨:52
ಸಮುವೇಲನು ೨ 1 / ಸಮು೨ 1
ಸಮುವೇಲನು ೨ 2 / ಸಮು೨ 2
ಸಮುವೇಲನು ೨ 3 / ಸಮು೨ 3
ಸಮುವೇಲನು ೨ 4 / ಸಮು೨ 4
ಸಮುವೇಲನು ೨ 5 / ಸಮು೨ 5
ಸಮುವೇಲನು ೨ 6 / ಸಮು೨ 6
ಸಮುವೇಲನು ೨ 7 / ಸಮು೨ 7
ಸಮುವೇಲನು ೨ 8 / ಸಮು೨ 8
ಸಮುವೇಲನು ೨ 9 / ಸಮು೨ 9
ಸಮುವೇಲನು ೨ 10 / ಸಮು೨ 10
ಸಮುವೇಲನು ೨ 11 / ಸಮು೨ 11
ಸಮುವೇಲನು ೨ 12 / ಸಮು೨ 12
ಸಮುವೇಲನು ೨ 13 / ಸಮು೨ 13
ಸಮುವೇಲನು ೨ 14 / ಸಮು೨ 14
ಸಮುವೇಲನು ೨ 15 / ಸಮು೨ 15
ಸಮುವೇಲನು ೨ 16 / ಸಮು೨ 16
ಸಮುವೇಲನು ೨ 17 / ಸಮು೨ 17
ಸಮುವೇಲನು ೨ 18 / ಸಮು೨ 18
ಸಮುವೇಲನು ೨ 19 / ಸಮು೨ 19
ಸಮುವೇಲನು ೨ 20 / ಸಮು೨ 20
ಸಮುವೇಲನು ೨ 21 / ಸಮು೨ 21
ಸಮುವೇಲನು ೨ 22 / ಸಮು೨ 22
ಸಮುವೇಲನು ೨ 23 / ಸಮು೨ 23
ಸಮುವೇಲನು ೨ 24 / ಸಮು೨ 24