೧ |
ದೇವರು ನೋಹನನ್ನೂ ಅವನ ಮಕ್ಕಳನ್ನೂ ಆಶೀರ್ವದಿಸಿ ಹೀಗೆಂದರು - “ನೀವು ಅಭಿವೃದ್ಧಿಯಾಗಿ ಹೆಚ್ಚು ಮಕ್ಕಳನ್ನು ಪಡೆಯಿರಿ’; ಭೂಲೋಕದಲ್ಲೆಲ್ಲ ಹರಡಿಕೊಳ್ಳಿ. |
೨ |
ಭೂಮಿಯ ಮೇಲಿರುವ ಎಲ್ಲ ಪ್ರಾಣಿಗಳೂ ಆಕಾಶದ ಎಲ್ಲ ಪಕ್ಷಿಗಳೂ ನೆಲದ ಮೇಲೆ ಹರಿದಾಡುವ ಎಲ್ಲ ಕ್ರಿಮಿಕೀಟಗಳೂ ಸಮುದ್ರದ ಎಲ್ಲ ಮೀನುಗಳೂ ನಿಮಗೆ ಹೆದರಿ ಬೆದರುವುವು. ಅವುಗಳನ್ನೆಲ್ಲ ನಿಮ್ಮ ಸ್ವಾಧೀನಕ್ಕೆ ಕೊಟ್ಟಿದ್ದೇನೆ. |
೩ |
ಭೂಮಿಯ ಮೇಲೆ ಪೈರುಪಚ್ಚೆಯನ್ನು ಕೊಟ್ಟಂತೆ ಇವುಗಳನ್ನೂ ಕೊಟ್ಟಿದ್ದೇನೆ. |
೪ |
ಆದರೆ ಮಾಂಸವನ್ನು ಅದರ ಜೀವಸತ್ವವಾದ ರಕ್ತಸಮೇತ ತಿನ್ನಬಾರದು. |
೫ |
ನಿಮ್ಮ ರಕ್ತಸುರಿಸಿ ಪ್ರಾಣತೆಗೆಯುವವರೆಗೆ ಮುಯ್ಯಿತೀರಿಸುವೆನು - ಮೃಗವಾಗಿದ್ದರೆ ಅದಕ್ಕೂ, ಮನುಷ್ಯನಾಗಿದ್ದರೆ, ಹತನಾದವನು ಅವನ ಸಹೋದರನಾದುದರಿಂದ ಅವನಿಗೂ ಮುಯ್ಯಿತೀರಿಸುವೆನು. |
೬ |
\ನಿರ್ಮಿಸಿಹರು ದೇವರು ತಮ್ಮ ಸ್ವರೂಪದಲ್ಲಿ ನರನನ್ನು ಎಂತಲೆ ನರನನ್ನು ಕೊಲ್ಲುವವನು ನರನಿಂದಲೇ ಹತನಾಗುವನು. |
೭ |
ನೀವು ಹೆಚ್ಚಿ ಅಭಿವೃದ್ಧಿಯಾಗಿರಿ, ನಿಮ್ಮ ಸಂಖ್ಯೆ ಬೆಳೆಯಲಿ ಭೂಮಿಯಲ್ಲಿ.\ |
೮ |
ಇದಲ್ಲದೆ ದೇವರು ನೋಹನಿಗೂ ಅವನ ಮಕ್ಕಳಿಗೂ ಇಂತೆಂದು ಹೇಳಿದರು: |
೯ |
“ಕೇಳಿ, ನಾನು ನಿಮ್ಮನ್ನೂ ನಿಮ್ಮ ಸಂತತಿಯವರನ್ನೂ |
೧೦ |
ನಿಮ್ಮ ಕೂಡ ನಾವೆಯಿಂದ ಹೊರಟುಬಂದ ಪ್ರಾಣಿ-ಪಕ್ಷಿ-ಮೃಗಾದಿ ಸಕಲ ಭೂಜಂತುಗಳನ್ನೂ ಕುರಿತು ಒಂದು ಸ್ಥಿರ ಪ್ರತಿಜ್ಞೆಯನ್ನು ಮಾಡುತ್ತೇನೆ. |
೧೧ |
ಆ ಪ್ರತಿಜ್ಞೆ ಏನೆಂದರೆ - ಇನ್ನು ಮೇಲೆ ನಾನು ಪ್ರಾಣಿಗಳನ್ನೆಲ್ಲಾ ಜಲಪ್ರಳಯದಿಂದ ನಾಶಮಾಡುವುದಿಲ್ಲ; ಇನ್ನು ಮುಂದೆ ಭೂಮಿಯನ್ನು ಹಾಳುಮಾಡುವ ಪ್ರಳಯವು ಬರುವುದೇ ಇಲ್ಲ.” |
೧೨ |
ದೇವರು ಮತ್ತೆ ಹೇಳಿದ್ದೇನೆಂದರೆ - “ನಾನು ನಿಮ್ಮನ್ನೂ ನಿಮ್ಮ ಸಂಗಡವಿರುವ ಸಮಸ್ತ ಜೀವರಾಶಿಗಳನ್ನೂ ಕುರಿತು ತಲತಲಾಂತರಗಳಿಗೆ ಮಾಡುವ ಈ ಪ್ರತಿಜ್ಞೆಗೆ |
೧೩ |
ಮೇಘಗಳಲ್ಲಿ ನಾನಿಟ್ಟಿರುವ ಮಳೆಬಿಲ್ಲೇ ಗುರುತು. ನನಗೂ ಭೂಪ್ರಾಣಿಗಳಿಗೂ ಆದ ಒಡಂಬಡಿಕೆಗೆ ಇದೇ ಕುರುಹು. |
೧೪ |
ನಾನು ಜಗದ ಮೇಲೆ ಮೇಘಗಳನ್ನು ಕವಿಸುವಾಗ ಆ ಬಿಲ್ಲು ಮೇಘಗಳಲ್ಲಿ ಕಂಡುಬರುವುದು. |
೧೫ |
ಆಗ ನಿಮ್ಮನ್ನೂ ಎಲ್ಲ ಜೀವರಾಶಿಗಳನ್ನೂ ಕುರಿತು ನಾನು ಮಾಡಿದ ಪ್ರತಿಜ್ಞೆಯನ್ನು ನೆನೆಸಿಕೊಳ್ಳುತ್ತೇನೆ. ಇನ್ನು ಮುಂದೆ ಜಲ ಹೆಚ್ಚಿ ಭೂಪ್ರಾಣಿಗಳನ್ನೆಲ್ಲಾ ಹಾಳುಮಾಡುವ ಪ್ರಳಯ ಬರುವುದಿಲ್ಲ. |
೧೬ |
ಆ ಬಿಲ್ಲು ಮೇಘಗಳಲ್ಲಿ ಕಾಣಿಸುವಾಗ ನಾನು ಅದನ್ನು ನೋಡಿ ದೇವರಾದ ನನಗೂ ಭೂಮಿಯ ಮೇಲಿರುವ ಎಲ್ಲ ಜೀವಜಂತುಗಳಿಗೂ ಆದ ಶಾಶ್ವತ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುತ್ತೇನೆ,” |
೧೭ |
ಇದು ಅಲ್ಲದೆ ದೇವರು ನೋಹನಿಗೆ, “ನನಗೂ ಸಮಸ್ತ ಭೂಜೀವಿಗಳಿಗೂ ಆದ ಒಡಂಬಡಿಕೆಗೆ ಇದೇ ಗುರುತು,” ಎಂದು ಹೇಳಿದರು. |
೧೮ |
ನಾವೆಯಿಂದ ಹೊರಟುಬಂದ ನೋಹನ ಮಕ್ಕಳು ಶೇಮ್, ಹಾಮ್, ಯೆಫೆತ್ ಎಂಬುವರು. (ಹಾಮನು ಕಾನಾನನ ತಂದೆ). |
೧೯ |
ಜಗದಲ್ಲೆಲ್ಲ ಹರಡಿಕೊಂಡಿರುವ ಜನರು ನೋಹನ ಈ ಮೂರು ಮಕ್ಕಳಿಂದಲೇ ಉತ್ಪತ್ತಿಯಾದುದು. |
೨೦ |
ನೋಹನು ವ್ಯವಸಾಯಗಾರ. ದ್ರಾಕ್ಷಿತೋಟ ಮಾಡುವುದನ್ನು ಪ್ರಾರಂಭಿಸಿದವನು ಅವನೇ. |
೨೧ |
ಒಮ್ಮೆ ಅವನು ಕುಡಿದು ಅಮಲೇರಿ ಗುಡಾರದಲ್ಲಿ ಬೆತ್ತಲೆಯಾಗಿ ಬಿದ್ದಿದ್ದನು. |
೨೨ |
ತನ್ನ ತಂದೆ ಬೆತ್ತಲೆಯಾಗಿರುವುದನ್ನು ಕಂಡ ಕಾನಾನನ ತಂದೆ ಹಾಮನು ಹೊರಗಿದ್ದ ಶೇಮ್, ಯೆಫೆತ್ ಸೋದರರಿಗೆ ತಿಳಿಸಿದನು. |
೨೩ |
ಅವರಿಬ್ಬರು ಬಂದು ಹೊದಿಕೆಯನ್ನು ತೆಗೆದುಕೊಂಡು, ಬೆನ್ನಿನ ಹಿಂದೆ ಹಾಕಿಕೊಂಡು, ಹಿಂದುಹಿಂದಕ್ಕೆ ನಡೆದುಬಂದು ತಂದೆಗೆ ಅದನ್ನು ಹೊದಿಸಿ ಅವನ ಮಾನವನ್ನು ಕಾಪಾಡಿದರು. ಅವರಿಬ್ಬರು ಹಿಮ್ಮುಖರಾಗಿ ಇದ್ದುದರಿಂದ ತಂದೆ ಬೆತ್ತಲೆಯಾಗಿದ್ದುದನ್ನು ನೋಡಲಿಲ್ಲ. |
೨೪ |
ನೋಹನಿಗೆ ಅಮಲು ಇಳಿದ ಮೇಲೆ ತನ್ನ ಕಿರಿಯ ಮಗ ಮಾಡಿದ್ದು ತಿಳಿಯಿತು. ಆಗ ಅವನು ಹೀಗೆಂದನು: |
೨೫ |
“ಶಾಪ ತಟ್ಟಲಿ ಕಾನಾನಿಗೆ ದಾಸಾನುದಾಸನಾಗಲಿ ಅವನು ತನ್ನ ಸೋದರರಿಗೆ” |
೨೬ |
\ಸ್ತೋತ್ರ, ಶೇಮನ ದೇವರಾದ ಸರ್ವೇಶ್ವರನಿಗೆ ದಾಸನಾಗಲಿ ಕಾನಾನನು ಶೇಮನಿಗೆ\ |
೨೭ |
\ಅಭಿವೃದ್ಧಿಯನು ನೀಡಲಿ ದೇವರು ಯೆಫೆತನಿಗೆ ವಾಸವಾಗಿರಲಿವನು ಶೇಮನ ಗುಡಾರದೊಳಗೆ, ದಾಸನಾಗಿರಲಿ ಕಾನಾನನು ಯೆಫೆತನಿಗೆ” |
೨೮ |
ಜಲಪ್ರಳಯ ಮುಗಿದ ಮೇಲೆ ನೋಹನು 350 ವರ್ಷ ಬದುಕಿದ್ದನು. |
೨೯ |
ಸತ್ತಾಗ ಅವನಿಗೆ ಒಟ್ಟು 950 ವರ್ಷಗಳಾಗಿದ್ದವು.
|
Kannada Bible (KNCL) 2016 |
No Data |