A A A A A
×

ಕನ್ನಡ ಬೈಬಲ್ (KNCL) 2016

ಆದಿಕಾಂಡ ೩೬

ಎತೋಮನೆಂಬ ಏಸಾವನ ವಂಶಾವಳಿ ಇದು:
ಏಸಾವನು ಕಾನಾನ್ಯರ ಮಹಿಳೆಯರಲ್ಲಿ ಹಿತ್ತಿಯನಾದ ಏಲೋನನ ಮಗಳಾದ ಆದಾಳನ್ನು, ಹಿವ್ವಿಯನಾದ ಸಿಬೆಯೋನನ ಮಗಳಾದ ಅನಾಹಳ ಮಗಳು ಒಹೊಲೀಬಾಮಳನ್ನು ಮತ್ತು
ಇಷ್ಮಾಯೇಲನ ಮಗಳು ಹಾಗು ನೆಬಾಯೋತನ ಸಹೋದರಿ ಬಾಸೆಮತಳನ್ನೂ ಮದುವೆ ಆಗಿದ್ದನು.
ಏಸಾವನಿಗೆ ಆದಾಳು ಎಲೀಫಜನನ್ನು ಹೆತ್ತಳು. ಬಾಸೆಮತಳು ರೆಗೂವೇಲನನ್ನು ಹೆತ್ತಳು.
ಒಹೊಲೀಬಾಮಳು ಯೊಗೂಷನನ್ನು, ಯಳಾಮನನ್ನು ಹಾಗು ಕೋರಹನನ್ನು ಹೆತ್ತಳು. ಇವರೆಲ್ಲರು ಏಸಾವನು ಕಾನಾನ್ ನಾಡಿನಲ್ಲಿ ಇದ್ದಾಗ ಹುಟ್ಟಿದರು.
ಏಸಾವನು ತನ್ನ ಹೆಂಡತಿಯರನ್ನೂ ಗಂಡುಹೆಣ್ಣು ಮಕ್ಕಳನ್ನೂ ತನ್ನ ಮನೆಗೆ ಸೇರಿದ ಎಲ್ಲರನ್ನೂ, ತನಗಿದ್ದ ಪಶುಪ್ರಾಣಿಗಳನ್ನೂ ಕಾನಾನ್ ನಾಡಿನಲ್ಲಿ ತಾನು ಸಂಪಾದಿಸಿದ್ದ ಆಸ್ತಿಪಾಸ್ತಿ ಎಲ್ಲವನ್ನೂ ತೆಗೆದುಕೊಂಡು ತನ್ನ ತಮ್ಮ ಯಕೋಬನ ಬಳಿಯಿಂದ ಹೊರನಾಡಿಗೆ ಹೊರಟುಹೋದನು.
ಸಿರಿಸಂಪತ್ತು ಹೆಚ್ಚಾಗಿ ಇದ್ದುದರಿಂದ ಅವರಿಬ್ಬರೂ ಒಂದೇ ಸ್ಥಳದಲ್ಲಿ ವಾಸಮಾಡಲು ಅನುಕೂಲವಾಗಿರಲಿಲ್ಲ; ಪಶುಪ್ರಾಣಿಗಳು ಬಹಳ ಆಗಿದ್ದುದರಿಂದ ಅವರು ತಂಗಿದ್ದ ನಾಡು ಅವರಿಗೆ ಸಾಲದೆ ಹೋಯಿತು.
ಈ ಕಾರಣ ಏದೋಮನೆಂಬ ಏಸಾವನು ಸೇಯೀರ್ ಮಲೆನಾಡಿಗೆ ಹೋಗಿ ಅಲ್ಲೇ ವಾಸವಾಗಿದ್ದನು.
ಸೇಯೀರ್ ಮಲೆನಾಡಿನಲ್ಲಿದ್ದ ಎದೋಮ್ಯರ ಮೂಲಪುರುಷನಾದ ಏಸಾವನ ವಂಶಾವಳಿ ಹೀಗಿದೆ:
೧೦
ಏಸಾವನಿಗೆ ಹೆಂಡತಿ ಆದಾಳಲ್ಲಿ ಮಗ ಎಲೀಫಜನು ಹುಟ್ಟಿದನು; ಹೆಂಡತಿ ಬಾಸೆಮತಳಲ್ಲಿ ಮಗ ರೆಗೂವೇಲನು ಹುಟ್ಟಿದನು.
೧೧
ಎಲೀಫಜನಿಗೆ ತೇಮಾನ್, ಓಮಾರ್, ಚೆಫೋ, ಗತಾಮ್, ಕೆನಜ್, ಎಂಬ ಐದು ಮಕ್ಕಳು.
೧೨
ಏಸಾವನ ಮಗನಾದ ಈ ಎಲೀಫಜನಿಗೆ ತಿಮ್ನ ಎಂಬ ಉಪಪತ್ನಿ ಇದ್ದಳು. ಇವಳು ಅವನಿಗೆ ಅಮಾಲೇಕನನ್ನು ಹೆತ್ತಳು. ಇವರೇ ಏಸಾವನ ಹೆಂಡತಿ ಆದಾಳ ಮೊಮ್ಮಕ್ಕಳು.
೧೩
ರೆಗೂವೇಲನಿಗೆ ನಹತ್, ಜೆರಹ, ಶಮ್ಮಾ, ಮಿಜ್ಜಾ ಎಂಬ ನಾಲ್ಕು ಮಕ್ಕಳು. ಇವರು ಏಸಾವನ ಹೆಂಡತಿ ಬಾಸೆಮತಳ ಮೊಮ್ಮಕ್ಕಳು.
೧೪
ಏಸಾವನ ಹೆಂಡತಿಯೂ ಸಿಬೆಯೋನನ ಮಗ ಅನಾಹನ ಮಗಳೂ ಆಗಿದ್ದ ಒಹೊಲೀಬಾಮಳಿಗೆ ಯೆಗೂಷ್, ಯಳಾಮ್ ಮತ್ತು ಕೋರಹ ಎಂಬ ಮೂರು ಮಕ್ಕಳಿದ್ದರು.
೧೫
ಏಸಾವನ ವಂಶದ ಕುಲನಾಯಕರು: ಏಸಾವನ ಜೇಷ್ಠಪುತ್ರನಾದ ಎಲೀಫಜನಿಂದ ತೇಮಾನ, ಏಮಾರ, ಚೆಫೋ, ಕೆನೆಜ್,
೧೬
ಕೊರಹ, ಗತಾಮ, ಅಮಾಲೇಕ ಎಂಬ ಕುಲನಾಯಕರು ಹುಟ್ಟಿದರು. ಈ ಅಧಿಪತಿಗಳು ಎದೋಮ್ಯರ ನಾಡಿನಲ್ಲಿ ಆದಾಳ ಸಂತತಿಯಲ್ಲಿ ಹುಟ್ಟಿದರು.
೧೭
ಏಸಾವನ ಮಗ ರೆಗೂವೇಲನಿಗೆ ನಹತ, ಜೆರಹ, ಶಮ್ಮಾ, ಮಿಜ್ಜಾ ಎಂಬ ಕುಲನಾಯಕರು ಹುಟ್ಟಿದರು. ಇವರು ಎದೋಮ್ಯರ ನಾಡಿನಲ್ಲಿ ಏಸಾವನ ಹೆಂಡತಿ ಬಾಸೆಮತಳ ಸಂತತಿಯಲ್ಲಿ ಹುಟ್ಟಿದವರು.
೧೮
ಏಸಾವನ ಹೆಂಡತಿ ಒಹೊಲೀಬಾಮಳ ಸಂತಾನದಲ್ಲಿ ಹುಟ್ಟಿದ ಕುಲನಾಯಕರು ಯಾರೆಂದರೆ - ಯೆಗೂಷ್, ಯಳಾಮ ಮತ್ತು ಕೊರಹ. ಇವರೇ ಅನಾಹನ ಮಗಳೂ ಏಸಾವನ ಹೆಂಡತಿಯೂ ಆಗಿದ್ದ ಒಹೊಲೀಬಾಮಳ ಸಂತಾನದವರು.
೧೯
ಎದೋಮನೆನಿಸಿಕೊಳ್ಳುವ ಏಸಾವನಿಂದ ಹುಟ್ಟಿದ ಕುಲಗಳಿಗೆ ಇವರೇ ನಾಯಕರು.
೨೦
ಆ ನಾಡಿನ ಮೂಲನಿವಾಸಿಗಳು ಹೋರಿಯನಾದ ಸೇಯೀರನಿಂದ ಹುಟ್ಟಿದವರು. ಲೋಟಾನ್, ಶೋಬಾಲ್, ಸಿದೆಯೋನ್, ಅನಾಹ,
೨೧
ದೀಶೋನ್, ಏಚೆರ್, ದೀಶಾನ್, ಎಂದು ಅವರನ್ನು ಹೆಸರಿಸಲಾಗಿತ್ತು. ಅವರು ಎದೋಮ್ಯರ ನಾಡಿನಲ್ಲಿ ಸೇಯೀರನ ಸಂತತಿಯವರಾದ ಹೋರಿಯರಲ್ಲಿ ಹುಟ್ಟಿದ ಕುಲನಾಯಕರು.
೨೨
ಲೋಟಾನನಿಗೆ ಹೋರಿ ಮತ್ತು ಹೇಮಾಮ್ ಎಂಬ ಮಕ್ಕಳಿದ್ದರು. ತಿಮ್ನಾ ಎಂಬ ತಂಗಿಯೂ ಇದ್ದಳು.
೨೩
ಶೋಬಾಲನ ಮಕ್ಕಳು - ಅಲ್ವಾನ್, ಮಾನಹತ್, ಗೇಬಾಲ್,ಶೆಫೋ ಮತ್ತು ಓನಾಮ್ ಎಂಬುವರು.
೨೪
ಸಿಬೆಯೋನನಿಗೆ ಅಯ್ಯಾ ಮತ್ತು ಅನಾಹ ಎಂಬ ಇಬ್ಬರು ಮಕ್ಕಳು. ಈ ಅನಾಹನೇ ತನ್ನ ತಂದೆ ಸಿಬೆಯೋನನ ಕತ್ತೆಗಳನ್ನು ಮೇಯಿಸುತ್ತಿದ್ದಾಗ ಕಾಡಿನಲ್ಲಿ ಬಿಸಿ ನೀರಿನ ಒರತೆಗಳನ್ನು ಕಂಡುಹಿಡಿದವನು.
೨೫
ಅನಾಹನ ಮಕ್ಕಳು ದೀಶೋನ್ ಮತ್ತು ಅನಾಹನ ಮಗಳಾದ ಒಹೊಲೀಬಾಮ.
೨೬
ದೀಶೋನನ ಮಕ್ಕಳು - ಹೆಮ್ದಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್.
೨೭
ಏಚೆರನ ಮಕ್ಕಳು - ಬಿಲ್ಹಾನ್, ಜಾವಾನ್ ಮತ್ತು ಆಕಾನ್.
೨೮
ದೀಶಾನನ ಮಕ್ಕಳು ಊಚ್ ಮತ್ತು ಅರಾನ್.
೨೯
ಹೋರಿಯರಿಂದ ಹುಟ್ಟಿದ ಕುಲನಾಯಕರು ಇವರು - ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ,
೩೦
ದೀಶೋನ್, ಏಚೆರ್ ಮತ್ತು ದೀಶಾನ್. ಹೋರಿಯರಿಂದ ಹುಟ್ಟಿದವರಾಗಿ ಸೇಯೀರ್ ನಾಡಿನಲ್ಲಿ ಅಧಿಪತ್ಯ ನಡೆಸಿದ ಕುಲನಾಯಕರು ಇವರೇ.
೩೧
ಇಸ್ರಯೇಲರ ಅರಸರು ಆಳುವುದಕ್ಕೆ ಮುಂಚೆ ಎದೋಮ್ಯರ ನಾಡಲ್ಲಿ ಆಳುತ್ತಿದ್ದ ಅರಸರ ಹೆಸರುಗಳು ಹೀಗಿವೆ:
೩೨
ಬೆಯೋರನ ಮಗ ಬಿಲಗನು ಎದೋಮ್ಯರಲ್ಲಿ ಆಳಿದನು, ಅವನ ರಾಜಧಾನಿಯ ಹೆಸರು ದಿನ್ಹಾಬಾ.
೩೩
ಬೆಲಗನು ಸತ್ತ ಮೇಲೆ ಬೊಚ್ರದವನಾದ ಚೆರಹನ ಮಗ ಯೋಬಾಬನು ಆಧಿಪತ್ಯಕ್ಕೆ ಬಂದನು.
೩೪
ಯೋಬಾಬನು ಸತ್ತ ಮೇಲೆ ತೇಮಾನೀಯರ ನಾಡಿನವನಾದ ಹುಷಾಮನು ಅವನಿಗೆ ಬದಲಾಗಿ ಆಳಿದನು.
೩೫
ಹುಷಾಮನು ಸತ್ತ ಮೇಲೆ ಮೊವಾಬ್ಯರ ಬಯಲಿನಲ್ಲಿ ಮಿದ್ಯಾನರನ್ನು ಸೋಲಿಸಿದ ಬೆದದನ ಮಗನಾದ ಹದದನು ಅರಸನಾದನು. ಅವನ ರಾಜಧಾನಿಯ ಹೆಸರು ಅವೀತ್.
೩೬
ಹದದನು ಸತ್ತ ಮೇಲೆ ಮಸ್ರೇಕದವನಾದ ಸಮ್ಲಾಹನು ಪಟ್ಟಕ್ಕೆ ಬಂದನು.
೩೭
ಸಮ್ಲಾಹನು ಸತ್ತ ಮೇಲೆ ನದೀತೀರದಲ್ಲಿನ ರೆಹೋಬೋತೂರಿನ ಸೌಲನು ಅರಸನಾದನು.
೩೮
ಸೌಲನು ಸತ್ತ ಮೇಲೆ ಅಕ್ಬೋರನ ಮಗ ಬಾಳ್ಹಾನಾನನು ಅರಸನಾದನು.
೩೯
ಅಕ್ಬೋರನ ಮಗ ಬಾಳ್ಹಾನಾನನು ಸತ್ತಾದನಂತರ ಹದದನು ಅರಸನಾದನು; ಅವನ ರಾಜಧಾನಿಯ ಹೆಸರು ಪಾಗು, ಅವನ ಹೆಂಡತಿಯ ಹೆಸರು ಮಹೇಟಬೇಲ್; ಆಕೆ ಮೇಜಾಹಾಬನ ಮಗಳಾದ ಮಟ್ರೀದಳ ಮಗಳು.
೪೦
ಸ್ಥಳ - ಕುಲ ನಾಮಗಳ ಪ್ರಕಾರ ಏಸಾವನಿಂದ ಹುಟ್ಟಿದ ಕುಲನಾಯಕರ ಹೆಸರುಗಳು ಇವು; ತಿಮ್ನ, ಅಲ್ವಾ, ಯತೇತ,
೪೧
ಒಹೊಲೀಬಾಮಾ, ಏಲಾ, ಪೀನೋನ್,
೪೨
ಕೆನಜ್, ತೇಮಾನ್, ಮಿಪ್ಚಾರ, ಮಗ್ಧೀಯೇಲ್, ಗೀರಾಮ್, ಇವರೇ ತಮ್ಮ ನಾಡಿನ ನಿವಾಸಸ್ಥಳಗಳ ಪ್ರಕಾರ ಎದೋಮ್ಯರ ಕುಲನಾಯಕರು. ಈ ಎದೋಮ್ಯರ ಮೂಲಪುರುಷನೇ ಏಸಾವ್.
ಆದಿಕಾಂಡ ೩೬:1
ಆದಿಕಾಂಡ ೩೬:2
ಆದಿಕಾಂಡ ೩೬:3
ಆದಿಕಾಂಡ ೩೬:4
ಆದಿಕಾಂಡ ೩೬:5
ಆದಿಕಾಂಡ ೩೬:6
ಆದಿಕಾಂಡ ೩೬:7
ಆದಿಕಾಂಡ ೩೬:8
ಆದಿಕಾಂಡ ೩೬:9
ಆದಿಕಾಂಡ ೩೬:10
ಆದಿಕಾಂಡ ೩೬:11
ಆದಿಕಾಂಡ ೩೬:12
ಆದಿಕಾಂಡ ೩೬:13
ಆದಿಕಾಂಡ ೩೬:14
ಆದಿಕಾಂಡ ೩೬:15
ಆದಿಕಾಂಡ ೩೬:16
ಆದಿಕಾಂಡ ೩೬:17
ಆದಿಕಾಂಡ ೩೬:18
ಆದಿಕಾಂಡ ೩೬:19
ಆದಿಕಾಂಡ ೩೬:20
ಆದಿಕಾಂಡ ೩೬:21
ಆದಿಕಾಂಡ ೩೬:22
ಆದಿಕಾಂಡ ೩೬:23
ಆದಿಕಾಂಡ ೩೬:24
ಆದಿಕಾಂಡ ೩೬:25
ಆದಿಕಾಂಡ ೩೬:26
ಆದಿಕಾಂಡ ೩೬:27
ಆದಿಕಾಂಡ ೩೬:28
ಆದಿಕಾಂಡ ೩೬:29
ಆದಿಕಾಂಡ ೩೬:30
ಆದಿಕಾಂಡ ೩೬:31
ಆದಿಕಾಂಡ ೩೬:32
ಆದಿಕಾಂಡ ೩೬:33
ಆದಿಕಾಂಡ ೩೬:34
ಆದಿಕಾಂಡ ೩೬:35
ಆದಿಕಾಂಡ ೩೬:36
ಆದಿಕಾಂಡ ೩೬:37
ಆದಿಕಾಂಡ ೩೬:38
ಆದಿಕಾಂಡ ೩೬:39
ಆದಿಕಾಂಡ ೩೬:40
ಆದಿಕಾಂಡ ೩೬:41
ಆದಿಕಾಂಡ ೩೬:42
ಆದಿಕಾಂಡ 1 / ಆದಿಕಾ 1
ಆದಿಕಾಂಡ 2 / ಆದಿಕಾ 2
ಆದಿಕಾಂಡ 3 / ಆದಿಕಾ 3
ಆದಿಕಾಂಡ 4 / ಆದಿಕಾ 4
ಆದಿಕಾಂಡ 5 / ಆದಿಕಾ 5
ಆದಿಕಾಂಡ 6 / ಆದಿಕಾ 6
ಆದಿಕಾಂಡ 7 / ಆದಿಕಾ 7
ಆದಿಕಾಂಡ 8 / ಆದಿಕಾ 8
ಆದಿಕಾಂಡ 9 / ಆದಿಕಾ 9
ಆದಿಕಾಂಡ 10 / ಆದಿಕಾ 10
ಆದಿಕಾಂಡ 11 / ಆದಿಕಾ 11
ಆದಿಕಾಂಡ 12 / ಆದಿಕಾ 12
ಆದಿಕಾಂಡ 13 / ಆದಿಕಾ 13
ಆದಿಕಾಂಡ 14 / ಆದಿಕಾ 14
ಆದಿಕಾಂಡ 15 / ಆದಿಕಾ 15
ಆದಿಕಾಂಡ 16 / ಆದಿಕಾ 16
ಆದಿಕಾಂಡ 17 / ಆದಿಕಾ 17
ಆದಿಕಾಂಡ 18 / ಆದಿಕಾ 18
ಆದಿಕಾಂಡ 19 / ಆದಿಕಾ 19
ಆದಿಕಾಂಡ 20 / ಆದಿಕಾ 20
ಆದಿಕಾಂಡ 21 / ಆದಿಕಾ 21
ಆದಿಕಾಂಡ 22 / ಆದಿಕಾ 22
ಆದಿಕಾಂಡ 23 / ಆದಿಕಾ 23
ಆದಿಕಾಂಡ 24 / ಆದಿಕಾ 24
ಆದಿಕಾಂಡ 25 / ಆದಿಕಾ 25
ಆದಿಕಾಂಡ 26 / ಆದಿಕಾ 26
ಆದಿಕಾಂಡ 27 / ಆದಿಕಾ 27
ಆದಿಕಾಂಡ 28 / ಆದಿಕಾ 28
ಆದಿಕಾಂಡ 29 / ಆದಿಕಾ 29
ಆದಿಕಾಂಡ 30 / ಆದಿಕಾ 30
ಆದಿಕಾಂಡ 31 / ಆದಿಕಾ 31
ಆದಿಕಾಂಡ 32 / ಆದಿಕಾ 32
ಆದಿಕಾಂಡ 33 / ಆದಿಕಾ 33
ಆದಿಕಾಂಡ 34 / ಆದಿಕಾ 34
ಆದಿಕಾಂಡ 35 / ಆದಿಕಾ 35
ಆದಿಕಾಂಡ 36 / ಆದಿಕಾ 36
ಆದಿಕಾಂಡ 37 / ಆದಿಕಾ 37
ಆದಿಕಾಂಡ 38 / ಆದಿಕಾ 38
ಆದಿಕಾಂಡ 39 / ಆದಿಕಾ 39
ಆದಿಕಾಂಡ 40 / ಆದಿಕಾ 40
ಆದಿಕಾಂಡ 41 / ಆದಿಕಾ 41
ಆದಿಕಾಂಡ 42 / ಆದಿಕಾ 42
ಆದಿಕಾಂಡ 43 / ಆದಿಕಾ 43
ಆದಿಕಾಂಡ 44 / ಆದಿಕಾ 44
ಆದಿಕಾಂಡ 45 / ಆದಿಕಾ 45
ಆದಿಕಾಂಡ 46 / ಆದಿಕಾ 46
ಆದಿಕಾಂಡ 47 / ಆದಿಕಾ 47
ಆದಿಕಾಂಡ 48 / ಆದಿಕಾ 48
ಆದಿಕಾಂಡ 49 / ಆದಿಕಾ 49
ಆದಿಕಾಂಡ 50 / ಆದಿಕಾ 50