೧ |
ಸಾರಳು ನೂರಿಪ್ಪತ್ತೇಳು ವರುಷ ಬದುಕಿದ್ದಳು. |
೨ |
ಇಷ್ಟು ವರ್ಷಗಳಾದ ಮೇಲೆ ಆಕೆ ಕಾನಾನ್ ನಾಡಿನ ಹೆಬ್ರೋನೆಂಬ ಕಿರ್ಯತರ್ಬದಲ್ಲಿ ಕಾಲವಾದಳು. ಅಬ್ರಹಾಮನು ಅಲ್ಲಿಗೆ ಬಂದು ಅವಳಿಗಾಗಿ ಕಣ್ಣೀರಿಟ್ಟು ಗೋಳಾಡಿದನು. |
೩ |
ಅನಂತರ ಅವನು ಶವದ ಬಳಿಯಿಂದ ಎದ್ದು ಹಿತ್ತಿಯರ ಬಳಿಗೆ ಬಂದು, |
೪ |
“ನಿಮ್ಮ ಮಧ್ಯೆ ನಾನೊಬ್ಬ ಹೊರನಾಡಿಗ, ಒಬ್ಬ ಪ್ರವಾಸಿ, ಮೃತಳಾಗಿರುವ ನನ್ನ ಪತ್ನಿಯನ್ನು ಸಮಾಧಿ ಮಾಡಲು ಸ್ವಲ್ಪ ಜಮೀನನ್ನು ನನ್ನ ಸ್ವಂತಕ್ಕೆ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ,” ಎಂದನು. |
೫ |
ಆ ಹಿತ್ತಿಯರು, “ಒಡೆಯಾ, ಇತ್ತ ಕೇಳಿ, ನೀವು ನಮಗೆ ಒಬ್ಬ ಮಹಾರಾಜರಂತೆ ಇದ್ದೀರಿ. ಮೃತಳಾದ ನಿಮ್ಮ ಪತ್ನಿಯ ಶವವನ್ನು ನಮ್ಮಲ್ಲಿರುವ ಶ್ರೇಷ್ಠ ಸಮಾಧಿಗಳೊಂದರಲ್ಲಿ ಭೂಸ್ಥಾಪನೆ ಮಾಡಬಹುದು. ನಮ್ಮಲ್ಲಿ ಸ್ಮಶಾನ ಭೂಮಿಯಿರುವ ಯಾರೂ ನಿಮಗೆ ಕೊಡುವುದಕ್ಕೆ ಹಿಂಜರಿಯುವುದಿಲ್ಲ,” ಎಂದು ಉತ್ತರಕೊಟ್ಟರು. |
೬ |
*** |
೭ |
ಅಬ್ರಹಾಮನು ಎದ್ದುನಿಂತು ಆ ಹಿತ್ತಿಯ ನಾಡಿಗರಿಗೆ ಬಾಗಿ ನಮಸ್ಕರಿಸಿದನು. |
೮ |
ಅವರೊಡನೆ ಮಾತನ್ನು ಮುಂದುವರಿಸುತ್ತಾ ಅವನು, “ನನ್ನ ಪತ್ನಿಯ ಶವವನ್ನು ಇಲ್ಲಿ ಸಮಾಧಿಮಾಡುವುದು ನಿಮಗೆ ಒಪ್ಪಿಗೆಯಾದರೆ ನನ್ನ ವಿಜ್ಞಾಪನೆ ಇದು: ನೀವು ಜೋಹರನ ಮಗನಾದ ಎಫ್ರೋನನ ಸಂಗಡ ನನ್ನ ಪರವಾಗಿ ಮಾತಾಡಿ, |
೯ |
ಅವನ ಜಮೀನಿನ ಅಂಚಿನಲ್ಲಿರುವ ಮಕ್ಪೇಲದ ಗವಿಯನ್ನು ನನಗೆ ಕೊಡಿಸಬೇಕೆಂದು ವಿನಂತಿಸುತ್ತೇನೆ. ಅವನು ಆ ಸಮಾಧಿಯ ಸ್ಥಳವನ್ನು ನನ್ನ ಸ್ವಂತಕ್ಕೆ ನಿಮ್ಮ ಎದುರಿಗೇ ಬಿಟ್ಟುಕೊಟ್ಟರೆ ಪೂರ್ಣಕ್ರಯವನ್ನು ಕೊಟ್ಟುಬಿಡುತ್ತೇನೆ,” ಎಂದನು. |
೧೦ |
ಸದ್ಯಕ್ಕೆ ಎಫ್ರೋನನೇ ಅಲ್ಲಿ ಆ ಹಿತ್ತಿಯರ ನಡುವೆ ಕುಳಿತಿದ್ದನು. ಅವನೂ ಒಬ್ಬ ಹಿತ್ತಿಯನಾಗಿದ್ದನು. ಹಿತ್ತಿಯರಾಗಿದ್ದ ಆ ಊರಿನವರೆಲ್ಲರ ಮುಂದೆ ಅವನು ಅಬ್ರಹಾಮನಿಗೆ, |
೧೧ |
“ಒಡೆಯಾ, ನನ್ನ ಮಾತಿಗೆ ಸ್ವಲ್ಪ ಕಿವಿಗೊಡಿ; ಆ ಜಮೀನನ್ನೂ ಅದರಲ್ಲಿರುವ ಗವಿಯನ್ನೂ ನಿಮಗೆ ದಾನಮಾಡಿಬಿಡುತ್ತೇನೆ; ನನ್ನ ಈ ಜನರ ಮುಂದೆಯೇ ದಾನಕೊಡುತ್ತೇನೆ; ಮೃತಳಾದ ನಿಮ್ಮ ಪತ್ನಿಯನ್ನು ಅದರಲ್ಲಿ ಸಮಾಧಿ ಮಾಡಬಹುದು,” ಎಂದು ಹೇಳಿದನು. |
೧೨ |
ಅಬ್ರಹಾಮನು ಆ ನಾಡಿಗರಿಗೆ ಬಾಗಿ ವಂದಿಸಿದನು. |
೧೩ |
ಅವರೆಲ್ಲರ ಮುಂದೆ ಎಫ್ರೋನನನ್ನು ಉದ್ದೇಶಿಸಿ, “ಕೊಡಲು ಇಷ್ಟವಿದ್ದರೆ ದಯವಿಟ್ಟು ನಾನು ಅರಿಕೆ ಮಾಡುವುದನ್ನು ಕೇಳು; ಆ ಜಮೀನಿಗೆ ಕ್ರಯ ಕೊಡುತ್ತೇನೆ; ಆ ಕ್ರಯವನ್ನು ತೆಗೆದುಕೊಳ್ಳಲು ಸಮ್ಮತಿಸಿದರೆ ನನ್ನ ಪತ್ನಿಯನ್ನು ಅಲ್ಲಿ ಸಮಾಧಿ ಮಾಡುತ್ತೇನೆ,” ಎಂದು ಹೇಳಿದನು. |
೧೪ |
ಅದಕ್ಕೆ ಎಫ್ರೋನನು, “ಒಡೆಯಾ, ನನ್ನ ಮಾತನ್ನು ಆಲಿಸು; ಕೇವಲ ನಾನೂರು ಬೆಳ್ಳಿ ನಾಣ್ಯ ಬಾಳುವ ಆ ಜಮೀನಿನ ವಿಷಯದಲ್ಲಿ ನಿಮಗೂ ನನಗೂ ವಾದವೇತಕ್ಕೆ? ಸಮಾಧಿ ಮಾಡಬಹುದು,” ಎಂದನು. |
೧೫ |
*** |
೧೬ |
ಅಬ್ರಹಾಮನು ಎಫ್ರೋನನ ಮಾತಿಗೆ ಒಪ್ಪಿ, ಅವನು ಆ ಹಿತ್ತಿಯರ ಮುಂದೆ ಸೂಚಿಸಿದ ನಾನೂರು ಬೆಳ್ಳಿ ನಾಣ್ಯಗಳನ್ನು, ವ್ಯಾಪಾರಿಗಳಲ್ಲಿ ಪ್ರಚಲಿತವಾಗಿದ್ದ ಬೆಳ್ಳಿಯಿಂದ ತೂಕಮಾಡಿ ಕೊಟ್ಟನು. |
೧೭ |
ಹೀಗೆ ಮಮ್ರೆಗೆ ಎದುರಾಗಿರುವ ಮಕ್ಪೇಲಕ್ಕೆ ಸೇರಿದ ಎಫ್ರೋನನ ಜಮೀನು, ಅದಕ್ಕೆ ಸೇರಿದ ಗವಿ, ಅದರಲ್ಲಿ ಮತ್ತು ಅದರ ಸುತ್ತಣ ಅಂಚಿನಲ್ಲಿದ್ದ ಮರಗಳು, ಇವೆಲ್ಲವೂ |
೧೮ |
ಅಬ್ರಹಾಮನಿಗೆ ಸ್ವಂತವೆಂದು ಹಿತ್ತಿಯರಾಗಿದ್ದ ಆ ಊರಿನವರೆಲ್ಲರ ಮುಂದೆಯೇ ತೀರ್ಮಾನವಾಯಿತು. |
೧೯ |
ಇದಾದ ಮೇಲೆ ಹೆಬ್ರೋನೆಂಬ ಮಮ್ರೆಗೆ ಎದುರಾಗಿರುವ ಮಕ್ಪೇಲದ ಜಮೀನಿನಲ್ಲಿರುವ ಗವಿಯೊಳಗೆ ಸಮಾಧಿಮಾಡಿದನು. |
೨೦ |
ಆ ಜಮೀನನ್ನೂ ಅದರಲ್ಲಿರುವ ಗವಿಯನ್ನೂ ಅಬ್ರಹಾಮನಿಗೆ ಸ್ವಂತ ಸ್ಮಶಾನಭೂಮಿಯಾಗಲೆಂದು ಸ್ವಾಧೀನಗೊಳಿಸಿದವರು ಆ ಹಿತ್ತಿಯರೇ.
|
Kannada Bible (KNCL) 2016 |
No Data |