A A A A A
ಯೆಜೆಕಿಯೇಲನ ೪೧
ಆಮೇಲೆ ಆ ಪುರುಷ ನನ್ನನ್ನು ಪರಿಶುದ್ಧಸ್ಥಳಕ್ಕೆ ತಂದು ಅದನ್ನು ಅಳೆಯಲು ಅದರ ಎದುರುಬದುರಿನ ನಿಲವುಕಂಬಗಳ ಅಗಲ ದೇವರ ಗುಡಾರದ ಅಗಲದಂತೆ ಮೂರು ಮೂರು ಮೀಟರ್,
ದ್ವಾರದ ಅಗಲ ಐದು ಮೀಟರು ದ್ವಾರದ ಎರಡು ಪಕ್ಕದ ಗೋಡೆಗಳ ಅಗಲ ಎರಡುವರೆ ಎರಡುವರೆ ಮೀಟರ್, ಪರಿಶುದ್ಧ ಸ್ಥಳದ ಉದ್ದ ಇಪ್ಪತ್ತು ಮೀಟರ್, ಅಗಲ ಹತ್ತು ಮೀಟರ್ ಇದ್ದವು.
ಆಮೇಲೆ ಆ ಪುರುಷ ಇನ್ನೂ ಮುಂದಕ್ಕೆ ಹೋಗಿ ಪರಿಶುದ್ಧ ಸ್ಥಳದ ಕೊನೆಯಲ್ಲಿ ಗರ್ಭಗೃಹವನ್ನು ಅಳೆಯಲು ದ್ವಾರದ ಒಂದೊಂದು ನಿಲವುಕಂಬದ ಅಗಲ ಒಂದೊಂದು ಮೀಟರ್, ದ್ವಾರದ ಅಗಲ ಮೂರು ಮೀಟರ್.
ಕನ್ನಡ ಬೈಬಲ್ (KNCL) 2016

ಆಮೇಲೆ, ಅವನು ನನ್ನನು ದೇವಾಲಯಕ್ಕೆ ಕರೆತಂದು ಕಂಬಗಳನ್ನೂ ಒಂದು ಕಡೆಯಲ್ಲಿ ಆರು ಮೊಳ ಅಗಲವೆಂದೂ ಮತ್ತೊಂದು ಕಡೆ ಆರು ಮೊಳ ಅಗಲವೆಂದೂ ಅಳೆದನು. ಇದೇ ಆ ಗುಡಾರದ ಅಡ್ಡಗಲವಾಗಿತ್ತು.
ಬಾಗಲಿನ ಅಗಲವು ಹತ್ತು ಮೊಳ ಬಾಗಲಿನ ಪಾರ್ಶ್ವಗಳು ಒಂದು ಕಡೆಯಲ್ಲಿ ಐದು ಮೊಳ, ಇನ್ನೊಂದು ಕಡೆಯಲ್ಲಿ ಐದು ಮೊಳವೆಂದು ಅವನು ಅದರ ಉದ್ದವನ್ನು ನಲವತ್ತು ಮೊಳವೆಂದೂ ಅಗಲವನ್ನು ಇಪ್ಪತ್ತು ಮೊಳವೆಂದೂ ಅಳೆದನು.
ಆಮೇಲೆ ಅವನು ಒಳಗೆ ಹೋಗಿ ಬಾಗಿಲಿನ ಕಂಬವನ್ನು ಎರಡು ಮೊಳವೆಂದೂ ಬಾಗಿಲನ್ನು ಆರು ಮೊಳವೆಂದೂ ಬಾಗಿಲಿನ ಅಗಲ ಏಳು ಮೊಳವೆಂದೂ ಅಳೆದನು.
ಕನ್ನಡ ಬೈಬಲ್ 2016

ಆಮೇಲೆ ಅವನು ನನ್ನನ್ನು ಪವಿತ್ರಸ್ಥಳಕ್ಕೆ ಕರೆದುಕೊಂಡು ಹೋದನು. ಅದರ ಇಕ್ಕೆಡೆಗಳಲ್ಲಿರುವ ಗೋಡೆಯನ್ನು ಅವನು ಅಳತೆ ಮಾಡಿದನು. ಆ ಗೋಡೆಗಳು ಆರು ಮೊಳ ದಪ್ಪವಾಗಿದ್ದವು.
ಅದರ ಬಾಗಿಲು ಹತ್ತು ಮೊಳ ಅಗಲವಾಗಿದ್ದು ಅದರ ಎರಡು ಘದಿಯೂ ಐದೈದು ಮೊಳವಿದ್ದವು. ಅವನು ಆ ಕೋಣೆಯ ಅಳತೆ ತೆಗೆದನು. ಅದು ನಲವತ್ತು ಮೊಳ ಉದ್ದ, ಇಪ್ಪತ್ತು ಮೊಳ ಅಗಲವಿತ್ತು.
ಆಮೇಲೆ ಅವನು ಕೊನೆಯ ಕೋಣೆಗೆ ಪ್ರವೇಶಿಸಿದನು. ಅದರ ಬಾಗಿಲಿನ ಇಕ್ಕೆಡೆಗಳಲ್ಲಿರುವ ಗೋಡೆಗಳನ್ನು ಅವನು ಅಳತೆ ಮಾಡಿದನು. ಆ ಗೋಡೆಗಳು ಎರಡು ಮೊಳ ದಪ್ಪವಾಗಿದ್ದು ಏಳು ಮೊಳ ಅಗಲವಾಗಿದ್ದವು. ದ್ವಾರವು ಆರು ಮೊಳ ಅಗಲವಾಗಿತ್ತು.
ಕನ್ನಡ ಬೈಬಲ್ 1934