A A A A A
ಧರ್ಮೋಪದೇಷಕಾಂಡ ೨೨
೨೯
ಅವನು ಅವಳನ್ನು ಮಾನಭಂಗಪಡಿಸಿದ್ದರಿಂದ ಅವಳ ತಂದೆಗೆ ಐವತ್ತು ಬೆಳ್ಳಿನಾಣ್ಯ ಕೊಟ್ಟು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬೇಕು. ಅವನು ಬದುಕುವ ತನಕ ಅವಳನ್ನು ಪರಿತ್ಯಾಗ ಮಾಡುವುದಕ್ಕೆ ಅವನಿಗೆ ಅಧಿಕಾರವಿರುವುದಿಲ್ಲ.
ಕನ್ನಡ ಬೈಬಲ್ (KNCL) 2016

೨೯
ಅವಳ ಸಂಗಡ ಮಲಗಿದ ಮನುಷ್ಯನು ಆ ಹುಡುಗಿಯ ತಂದೆಗೆ ಐವತ್ತು ಬೆಳ್ಳಿಯ ಹಣಗಳನ್ನು ಕೊಡಬೇಕು; ಮತ್ತು ಅವಳು ಅವನಿಗೆ ಹೆಂಡತಿಯಾಗಬೇಕು; ಅವನು ಅವಳನ್ನು ಕೆಡಿಸಿದ್ದರಿಂದ ಬದುಕುವ ದಿವಸಗಳೆಲ್ಲಾ ಅವಳನ್ನು ಕಳುಹಿಸಿಬಿಡಕೂಡದು.ಒಬ್ಬನು ತನ್ನ ತಂದೆಯ ಹೆಂಡತಿಯನ್ನು ತಕ್ಕೊಳ್ಳ ಕೂಡದು; ತನ್ನ ತಂದೆಯ ವಸ್ತ್ರದ ಸೆರಗನ್ನು ತೆರೆಯ ಕೂಡದು.
ಕನ್ನಡ ಬೈಬಲ್ 2016

೨೯
ಅವನು ಹುಡುಗಿಯ ತಂದೆಗೆ ಇಪ್ಪತ್ತು ತೊಲ ಬೆಳ್ಳಿಯನ್ನು ಕೊಟ್ಟು ಆಕೆಯನ್ನು ತನ್ನ ಹೆಂಡತಿಯನ್ನಾಗಿ ತೆಗೆದುಕೊಳ್ಳಬೇಕು. ಅವನು ಆಕೆಯನ್ನು ಮದುವೆಗಿಂತ ಮುಂಚೆ ಕೂಡಿದ್ದರಿಂದ ಅವನು ಆಕೆಯನ್ನು ಎಂದಿಗೂ ಬಿಟ್ಟುಬಿಡಬಾರದು.
ಕನ್ನಡ ಬೈಬಲ್ 1934