A A A A A
ಯೆರೆಮೀಯನ ಗ್ರಂಥ ೩೭
ಹೀಗಿರುವಲ್ಲಿ ಅರಸ ಚಿದ್ಕೀಯನು ಶೆಲೆಮ್ಯನ ಮಗ ಯೆಹೂಕಲನನ್ನು ಮತ್ತು ಯಾಜಕ ಮಾಸೇಯನ ಮಗ ಚೆಫನ್ಯನನ್ನು ಯೆರೆಮೀಯನ ಬಳಿಗೆ ಕಳಿಸಿ, “ನಮಗಾಗಿ ನಮ್ಮ ದೇವರಾದ ಸರ್ವೇಶ್ವರನನ್ನು ಪ್ರಾರ್ಥಿಸು” ಎಂದು ವಿನಂತಿಸಿದನು.
ಕನ್ನಡ ಬೈಬಲ್ (KNCL) 2016

ಅವನು ಬದುಕುವನು. ಕರ್ತನು ಹೇಳುವದೇನಂದರೆ--ಈ ಪಟ್ಟಣವು ನಿಶ್ಚಯವಾಗಿ ಬಾಬೆಲ್‌ ಅರಸನ ಸೈನ್ಯದ ಕೈಯಲ್ಲಿ ಒಪ್ಪಿಸಲ್ಪಡುವದು; ಅದು ಅದನ್ನು ವಶಮಾಡಿ ಕೊಳ್ಳುವದು.
ಕನ್ನಡ ಬೈಬಲ್ 2016

ರಾಜನಾದ ಚಿದ್ಕೀಯನು ಶೆಲೆಮ್ಯನ ಮಗನಾದ ಯೆಹೂಕಲನನ್ನು ಮತ್ತು ಮಾಸೇಯನ ಮಗನಾದ ಯಾಜಕ ಚೆಫನನನ್ನು ಒಂದು ಸಂದೇಶದೊಂದಿಗೆ ಯೆರೆಮೀಯನಲ್ಲಿಗೆ ಕಳುಹಿಸಿದನು. ಯೆರೆಮೀಯನಿಗೆ ಅವರು ತಂದ ಸಂದೇಶ ಹೀಗಿತ್ತು: “ಯೆರಮೀಯನೇ, ನಮ್ಮ ದೇವರಾದ ಯೆಹೋವನನ್ನು ನಮಗಾಗಿ ಪ್ರಾರ್ಥಿಸು.”
ಕನ್ನಡ ಬೈಬಲ್ 1934