A A A A A
ಯೆಶಾಯನ ೬೫
ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ: “ನನ್ನನ್ನು ವಿಚಾರಿಸದವರಿಗೂ ನಾ ದರ್ಶನವಿತ್ತೆ. ನನ್ನನ್ನು ಹುಡುಕದವರಿಗೂ ನಾ ಒಡನೆ ಸಿಕ್ಕಿದೆ. ನನ್ನ ನಾಮಸ್ಮರಣೆ ಮಾಡದ ಜನಾಂಗಕ್ಕೆ, ಇಗೋ, ‘ಇದ್ದೇನೆ, ಇಲ್ಲೇ ಇದ್ದೇನೆ’ ಎನ್ನುತ್ತಿದ್ದೆ.
ಕನ್ನಡ ಬೈಬಲ್ (KNCL) 2016

ಕೇಳದವರಿಂದ ನಾನು ವಿಚಾರಿಸಲ್ಪಟ್ಟಿದ್ದೇನೆ, ನನ್ನನ್ನು ಹುಡುಕದವರಿಗೂ ಕಂಡು ಕೊಳ್ಳಲ್ಪಟ್ಟಿದ್ದೇನೆ; ನನ್ನ ಹೆಸರಿನಿಂದ ಕರೆಯಲ್ಪಡದ ಜನಾಂಗಕ್ಕೆ--ಇಗೋ, ಇದ್ದೇನೆ; ಇಗೋ, ಇದ್ದೇನೆ ಎಂದು ಹೇಳಿದೆನು.
ಕನ್ನಡ ಬೈಬಲ್ 2016

ಯೆಹೋವನು ಹೇಳುವುದೇನೆಂದರೆ, “ನನ್ನ ಆಲೋಚನೆಯನ್ನು ಕೇಳಲು ಬಾರದೆ ಹೋದ ಜನರಿಗೂ ನಾನು ಸಹಾಯ ಮಾಡಿದೆನು. ನನ್ನನ್ನು ಹುಡುಕದವರಿಗೂ ಸಿಕ್ಕಿದೆನು. ನನ್ನ ಹೆಸರನ್ನು ಧರಿಸದ ಜನಾಂಗದೊಡನೆ ನಾನು ಮಾತನಾಡಿದೆನು. ಅವರಿಗೆ, ‘ನಾನಿಲ್ಲಿದ್ದೇನೆ! ನಾನಿಲ್ಲಿದ್ದೇನೆ!’ ಅಂದೆನು.
ಕನ್ನಡ ಬೈಬಲ್ 1934