A A A A A
ನ್ಯಾಯಸ್ಥಾಪಕರು ೧೪
ಸಂಸೋನನು ತಿಮ್ನಾ ಊರಿಗೆ ಇಳಿದುಹೋಗಿ ಅಲ್ಲಿನ ಫಿಲಿಷ್ಟಿಯರ ಹೆಣ್ಣುಗಳಲ್ಲಿ ಒಬ್ಬಳನ್ನು ನೋಡಿದನು.
ತಂದೆ ತಾಯಿಗಳ ಬಳಿಗೆ ಬಂದು ಅವರಿಗೆ, “ನಾನು ತಿಮ್ನಾ ಊರಲ್ಲಿ ಒಬ್ಬ ಫಿಲಿಷ್ಟಿಯ ಹೆಣ್ಣನ್ನು ನೋಡಿ ಇದ್ದೇನೆ; ಆಕೆಯನ್ನು ನನಗೆ ಮದುವೆ ಮಾಡಿಕೊಡಿ,” ಎಂದು ಹೇಳಿದನು.
ಆಗ ಅವರು ಅವನಿಗೆ, “ಸುನ್ನತಿಯಿಲ್ಲದ ಫಿಲಿಷ್ಟಿಯರ ಹೆಣ್ಣನ್ನು ವರಿಸಬೇಕೆಂದಿರುವೆಯಾ? ನಿನ್ನ ಬಂಧುಗಳಲ್ಲಿ ಅದೂ ನಮ್ಮ ಎಲ್ಲಾ ಜನರಲ್ಲಿ ನಿನಗೆ ಹೆಣ್ಣು ಸಿಕ್ಕುವುದಿಲ್ಲವೇ?” ಎಂದು ಪ್ರತಿಭಟಿಸಿದರು. ಅವನು, “ನನಗಾಗಿ ಆಕೆಯನ್ನೇ ತನ್ನಿ. ಆಕೆಯನ್ನೇ ಮೆಚ್ಚಿಕೊಂಡಿದ್ದೇನೆ,” ಎಂದನು.
ಕನ್ನಡ ಬೈಬಲ್ (KNCL) 2016

ಸಂಸೋನನು ತಿಮ್ನಾಗೆ ಹೋಗಿ ತಿಮ್ನಾ ದೊಳಗೆ ಪಿಲಿಷ್ಟಿಯರ ಕುಮಾರ್ತೆಯರಲ್ಲಿ ಒಬ್ಬ ಸ್ತ್ರೀಯನ್ನು ನೋಡಿ
ತನ್ನ ತಂದೆತಾಯಿಗಳ ಬಳಿಗೆ ಬಂದು ಅವರಿಗೆ--ನಾನು ತಿಮ್ನಾದಲ್ಲಿ ಫಿಲಿಷ್ಟಿಯರ ಕುರ್ಮಾತೆಯರೊಳಗೆ ಒಬ್ಬ ಸ್ತ್ರೀಯನ್ನು ನೋಡಿದೆನು. ಈಗ ಅವಳನ್ನು ಹೆಂಡತಿಯಾಗುವದಕ್ಕೆ ನನಗೆ ತಕ್ಕೊಳ್ಳಿರಿ ಅಂದನು.
ಆಗ ಅವನ ತಂದೆ ತಾಯಿಯೂ ಅವನಿಗೆ--ನಿನಗೆ ಸುನ್ನತಿ ಇಲ್ಲದ ಫಿಲಿಷ್ಟಿ ಯರಲ್ಲಿ ಹೆಂಡತಿಯನ್ನು ತಕ್ಕೊಳ್ಳುವದಕ್ಕೆ ನಿನ್ನ ಸಹೋ ದರರ ಕುಮಾರ್ತೆಯರಲ್ಲಿಯೂ ನಮ್ಮ ಎಲ್ಲಾ ಜನರ ಲ್ಲಿಯೂ ಸ್ತ್ರೀ ಇಲ್ಲವೋ ಅಂದರು. ಆದರೆ ಸಂಸೋನನು ತನ್ನ ತಂದೆಗೆ--ಅವಳನ್ನು ನನಗೆ ತೆಗೆದುಕೋ; ಅವಳು ನನ್ನ ಮನಸ್ಸಿಗೆ ಒಪ್ಪಿದ್ದಾಳೆ ಅಂದನು.
ಕನ್ನಡ ಬೈಬಲ್ 2016

ಸಂಸೋನನು ತಿಮ್ನಾ ನಗರಕ್ಕೆ ಹೋದನು. ಅವನು ಅಲ್ಲಿ ಒಬ್ಬ ಫಿಲಿಷ್ಟಿಯರ ತರುಣಿಯನ್ನು ನೋಡಿದನು.
ಅವನು ಮನೆಗೆ ಹಿಂದಿರುಗಿ ತನ್ನ ತಂದೆತಾಯಿಗಳಿಗೆ, “ನಾನು ತಿಮ್ನಾ ನಗರದಲ್ಲಿ ಫಿಲಿಷ್ಟಿಯರ ಸ್ತ್ರೀಯನ್ನು ನೋಡಿದ್ದೇನೆ. ನೀವು ಅವಳನ್ನು ನನಗೆ ಮದುವೆ ಮಾಡಿಸಿಕೊಡಿ” ಎಂದು ಕೇಳಿದನು.
ಅವನ ತಂದೆತಾಯಿಗಳು, “ಇಸ್ರೇಲರಲ್ಲಿಯೇ ಒಬ್ಬ ಸ್ತ್ರೀ ಇದ್ದಾಳೆ. ನೀನು ಅವಳನ್ನು ಮದುವೆಯಾಗು. ನೀನು ಫಿಲಿಷ್ಟಯರ ಹೆಣ್ಣನ್ನು ಮದುವೆಯಾಗುವುದೇಕೆ? ಅವರು ಸುನ್ನತಿಯನ್ನು ಮಾಡಿಸಿಕೊಂಡವರಲ್ಲ” ಎಂದರು. ಆದರೆ ಸಂಸೋನನು, “ನನಗೆ ಆಕೆಯನ್ನೇ ಮದುವೆಯಾಗಬೇಕು. ನಾನು ಆಕೆಯನ್ನೇ ಮೆಚ್ಚಿಕೊಂಡಿದ್ದೇನೆ” ಎಂದನು.
ಕನ್ನಡ ಬೈಬಲ್ 1934