೨೨ |
ನಾನು ಗೋಗನ ಸಂಗಡ ವ್ಯಾಜ್ಯವಾಡುತ್ತಾ ಅವನನ್ನು ವ್ಯಾಧಿಗೂ ವಧೆಗೂ ಗುರಿಮಾಡುವೆನು. ಅವನ ಮೇಲೂ ಅವನ ಪಡೆಗಳ ಮೇಲೂ ಅವನೊಂದಿಗಿರುವ ಬಹು ಜನಾಂಗಗಳ ಮೇಲೂ ವಿಪರೀತ ಮಳೆ, ದೊಡ್ಡ ದೊಡ್ಡ ಆನೆಕಲ್ಲು, ಬೆಂಕಿ, ಗಂಧಕ, ಇವುಗಳನ್ನು ಸುರಿಸುವೆನು. |
ಕನ್ನಡ ಬೈಬಲ್ (KNCL) 2016 |
|
೨೨ |
ನಾನು ಅವನಿಗೆ ವಿರುದ್ಧ ವಾಗಿ ವ್ಯಾಧಿಯಿಂದಲೂ ರಕ್ತದಿಂದಲೂ ವಾದಿಸು ತ್ತೇನೆ. ನಾನು ಅವನ ಮೇಲೆ ಅವನ ದಂಡುಗಳ ಮೇಲೆ ಮಳೆಯನ್ನು ಸುರಿಸುವೆನು. ಅವನೊಂದಿಗಿರುವ ಅನೇಕ ಜನರ ಮೇಲೆ ಬೆಂಕಿಯನ್ನೂ ಗಂಧಕವನ್ನೂ ನುಣುಪಾದ ಕಲ್ಲುಗಳಿಂದ ತುಂಬಿ ಹರಿಯುವಂತಹ ಮಹಾ ಮಳೆಯನ್ನು ಸುರಿಸುವೆನು.ಹೀಗೆ ನನ್ನೊಂದಿಗೆ ನಾನೇ ಹೆಚ್ಚಿಸಿಕೊಂಡು ಮತ್ತು ನನಗೆ ನಾನೇ ಪರಿಶುದ್ಧಪಡಿಸಿಕೊಂಡು ಅನೇಕ ಜನಾಂಗಗಳ ಕಣ್ಣುಗಳ ಮುಂದೆ ನಾನು ತಿಳಿಯಪಡಿಸಿಕೊಳ್ಳುತ್ತೇನೆ. ಅವರು ನಾನೇ ಕರ್ತನೆಂದು ತಿಳಿದುಕೊಳ್ಳುವರು. |
ಕನ್ನಡ ಬೈಬಲ್ 2016 |
|
೨೨ |
ನಾನು ಗೋಗನನ್ನು ರೋಗಮರಣಗಳಿಂದ ಶಿಕ್ಷಿಸುವೆನು. ಅವನ ಮೇಲೆಯೂ ಅವನೊಂದಿಗೆ ಘಂದ ಘಹುದೇಶದ ಸೈನಿಕರ ಮೇಲೆಯೂ ಆಲಿಕಲ್ಲು, ಬೆಂಕಿ, ಗಂಧಕದ ಮಳೆಯಿಂದ ಶಿಕ್ಷಿಸುವೆನು. |
ಕನ್ನಡ ಬೈಬಲ್ 1934 |
|