೧ |
ಇಸ್ರಯೇಲ್ ವಂಶದವರೇ, ಸರ್ವೇಶ್ವರ ಸ್ವಾಮಿ ನಿಮಗೆ ನುಡಿಯುವ ಮಾತನ್ನು ಕೇಳಿರಿ; ಅವರು ಹೇಳುವುದು ಇದು: |
೨ |
“ಅನ್ಯಜನಾಂಗಗಳ ಆಚರಣೆಯನ್ನು ಅನುಸರಿಸಬೇಡಿ ಅವರು ಹೆದರುವ ಆಕಾಶದ ಉತ್ಪಾತಗಳಿಗೆ ನೀವು ಹೆದರಬೇಡಿ. |
೩ |
ಆ ಜನಾಂಗಗಳ ಧಾರ್ಮಿಕ ಪದ್ಧತಿಗಳು ಶೂನ್ಯ. ಅರಣ್ಯದ ಮರಗಳನ್ನು ಅವರು ಕತ್ತರಿಸುತ್ತಾರೆ ಬಡಗಿಯ ಕೈಯಿಂದ, ಅವನ ಉಳಿಯಿಂದ, ಅದನ್ನು ರೂಪಿಸುತ್ತಾರೆ. |
ಕನ್ನಡ ಬೈಬಲ್ (KNCL) 2016 |
|
೧ |
ಯೆರೆವಿಾಯನಿಗೆ ಕರ್ತನಿಂದ ಉಂಟಾದ ವಾಕ್ಯವೇನಂದರೆ--ನೀವು ಈ ಒಡಂಬಡಿ ಕೆಯ ಮಾತುಗಳನ್ನು ಕೇಳಿರಿ; |
೨ |
ಯೆಹೂದದ ಮನುಷ್ಯರ ಸಂಗಡಲೂ ಯೆರೂಸಲೇಮಿನ ನಿವಾಸಿಗಳ ಸಂಗ ಡಲೂ ಮಾತನಾಡಿ ಅವರಿಗೆ ನೀನು ಹೇಳಬೇಕಾದ ದ್ದೇನಂದರೆ-- |
೩ |
ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಈ ಒಡಂಬಡಿಕೆಯ ಮಾತುಗಳಿಗೆ ವಿಧೇಯನಾಗದ ಮನುಷ್ಯನಿಗೆ ಶಾಪವಿರಲಿ. |
ಕನ್ನಡ ಬೈಬಲ್ 2016 |
|
೧ |
ಇಸ್ರೇಲ್ ವಂಶದವರೇ, ಯೆಹೋವನ ಮಾತುಗಳನ್ನು ಕೇಳಿರಿ. |
೨ |
ಯೆಹೋವನು ಹೀಗೆ ಹೇಳುತ್ತಾನೆ: “ಬೇರೆ ಜನಾಂಗಗಳಂತೆ ಜೀವಿಸಬೇಡಿ. ಆಕಾಶದಲ್ಲಿ ಕಾಣುವ ವಿಶೇಷ ಉತ್ಪಾತಗಳಿಗೆ ಹೆದರಬೇಡಿರಿ. ಆಕಾಶದಲ್ಲಿ ಕಾಣುವ ಉತ್ಪಾತಗಳಿಗೆ ಬೇರೆ ಜನಾಂಗಗಳು ಹೆದರುತ್ತವೆ. ಆದರೆ ನೀವು ಅವುಗಳಿಗೆ ಹೆದರಬಾರದು. |
೩ |
ಬೇರೆ ಜನರ ಸಂಪ್ರದಾಯಗಳು ನಿಷ್ಪ್ರಯೋಜಕವಾದವುಗಳಾಗಿವೆ. ಅವರ ವಿಗ್ರಹಗಳು ಅರಣ್ಯದ ಮರವಲ್ಲದೆ ಮತ್ತೇನಲ್ಲ. ಅವರ ವಿಗ್ರಹಗಳು ಘಡಗಿಯು ಉಳಿಯಿಂದ ಮಾಡಲ್ಪಟ್ಟವುಗಳು. |
ಕನ್ನಡ ಬೈಬಲ್ 1934 |
|