೮ |
ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ: “ದ್ರಾಕ್ಷಿಯ ಗೊಂಚಲಿನಲ್ಲಿ ರಸವಿರುವ ತನಕ, ‘ಅದನ್ನು ಹಾಳುಮಾಡಬೇಡ, ಅದೊಂದು ಪ್ರಸಾದ,’ ಎನ್ನುತ್ತಾರೆ ಜನ. ಅಂತೆಯೇ ನಾನು ನನ್ನ ಭಕ್ತಾದಿಗಳನ್ನು ಲಕ್ಷ್ಯಕ್ಕೆ ತಂದುಕೊಂಡು ಜನರೆಲ್ಲರನ್ನು ಹಾಳುಮಾಡಬಾರದು ಎಂದುಕೊಂಡೆನು. |
ಕನ್ನಡ ಬೈಬಲ್ (KNCL) 2016 |
|
೮ |
ಕರ್ತನು ಹೇಳುವದೇನಂದರೆ--ದ್ರಾಕ್ಷೇಗೊನೆ ಯಲ್ಲಿ ಹೊಸದ್ರಾಕ್ಷಾರಸ ಕಂಡುಕೊಳ್ಳುವದನ್ನು ಒಬ್ಬನು ನೋಡಿ--ಕೆಡಿಸಬೇಡ, ಅದರಲ್ಲಿ ಆಶೀರ್ವಾದ ಉಂಟೆಂದು ಹೇಳುವದು ಹೇಗೋ ಹಾಗೆಯೇ ನನ್ನ ಸೇವಕರಿಗೋಸ್ಕರ ಅವರನ್ನೆಲ್ಲಾ ನಾನು ಕೆಡಿಸಿ ಬಿಡದ ಹಾಗೆ ಮಾಡುವೆನು. |
ಕನ್ನಡ ಬೈಬಲ್ 2016 |
|
೮ |
ಯೆಹೋವನು ಹೇಳುವುದೇನೆಂದರೆ: “ದ್ರಾಕ್ಷಿಹಣ್ಣಿನಲ್ಲಿ ಹೊಸ ರಸವು ಇರುವಾಗ ಜನರು ಅದನ್ನು ಹಿಂಡಿ ರಸವನ್ನು ತೆಗೆಯುವರು. ಯಾಕೆಂದರೆ ಆ ಹಣ್ಣನ್ನು ಮತ್ತೆ ಉಪಯೋಗಿಸಬೇಕೆಂಬ ಉದ್ದೇಶದಿಂದ ಅದನ್ನು ಸಂಪೂರ್ಣವಾಗಿ ಹಾಳು ಮಾಡುವದಿಲ್ಲ. ಅದೇ ರೀತಿ ನಾನು ನನ್ನ ಸೇವಕರಿಗೂ ಮಾಡುವೆನು. ಅವರನ್ನು ನಾನು ಸಂಪೂರ್ಣವಾಗಿ ನಾಶಮಾಡುವದಿಲ್ಲ. |
ಕನ್ನಡ ಬೈಬಲ್ 1934 |
|