೧ |
ಕಳುಹಿಸಿ ಕುರಿಗಳನು ಕಪ್ಪಕಾಣಿಕೆಯಾಗಿ ದೇಶಾಧಿಪತಿಗೆ, ಕಳುಹಿಸಿ ಮರುಭೂಮಿಯ ಸೆಲಾದಿಂದ ಸಿಯೋನ್ ಪರ್ವತಕೆ. |
೨ |
ಮೋವಾಬಿನ ಮಹಿಳೆಯರು ಅರ್ನೊನ್ ನದಿಯ ಹಾಯ್ಗಡಗಳಲಿ, ಅಲೆಯುತಿಹರು ಗೂಡಿಂದ ಹೊರದೂಡಲಾದ ಹಕ್ಕಿಮರಿಗಳ ಪರಿ. |
೩ |
ಇಂತೆನ್ನುವರವರು ಯೆಹೂದ ಜನತೆಗೆ: “ನೀಡಿ ಸಲಹೆಯೊಂದನ್ನು ನಮಗೆ, ಕೊಡಿ ನ್ಯಾಯತೀರ್ಪನೆಮಗೆ, ಇರುಳಿನಂತಿರಲಿ ನಿಮ್ಮ ನೆರಳು ಉರಿಬಿಸಿಲೊಳೆಮಗೆ, ನೆಲೆನೀಡಿ ವಲಸಿಗರಿಗೆ, ದೂಡಬೇಡಿ ಅಲೆಯುವವರನು ಬಯಲಿಗೆ. |
ಕನ್ನಡ ಬೈಬಲ್ (KNCL) 2016 |
|
೧ |
ದೇಶವನ್ನು ಆಳುವವನಿಗೆ ಕುರಿಮರಿಯನ್ನು ಸೆಲದಿಂದ ಅರಣ್ಯದ ಕಡೆಗೆ ಚೀಯೋನಿನ ಕುಮಾರ್ತೆಯರ ಬೆಟ್ಟಕ್ಕೆ ಕಳುಹಿಸಿರಿ. |
೨ |
ಗೂಡಿನಿಂದ ಹೊರಗೆ ಬಂದ ಹಕ್ಕಿಗಳು ಅಲೆದಾಡುವ ಹಾಗೆ ಮೋವಾಬಿನ ಕುಮಾರ್ತೆಯರು ಅರ್ನೋನ್ ನದಿಯ ಹಾಯ್ಗಡಗಳಲ್ಲಿ ಇರುವರು. |
೩ |
ಆಲೋಚಿಸಿ ತೀರ್ಮಾನಿಸು; ಮಟ್ಟ ಮಧ್ಯಾಹ್ನದಲ್ಲಿ ನಿನ್ನ ನೆರಳನ್ನು ರಾತ್ರಿಯಂತೆ ಮಾಡು; ತಳ್ಳಿಬಿಟ್ಟವ ರನ್ನು ಅಡಗಿಸು; ಅಲೆಯುವವನನ್ನು ಬೈಲಿಗೆ ತರಬೇಡ. |
ಕನ್ನಡ ಬೈಬಲ್ 2016 |
|
೧ |
ನೀವು ದೇಶದ ಅಧಿಪತಿಗೆ ಕಾಣಿಕೆಗಳನ್ನು ಕಳುಹಿಸಬೇಕು. ನೀವು ಸೇಲದ ಕುರಿಮರಿಯನ್ನು ಮರುಭೂಮಿಯ ಮೂಲಕ ಚೀಯೋನ್ ಕುಮಾರ್ತೆಯ ಪರ್ವತಕ್ಕೆ ಕಳುಹಿಸಿಕೊಡಬೇಕು. |
೨ |
ಮೋವಾಬಿನ ಸ್ತ್ರೀಯರು ಅರ್ನೋನ್ ಹೊಳೆಯನ್ನು ದಾಟಲು ಪ್ರಯತ್ನಿಸುವರು. ಅವರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಹಾಯಕ್ಕಾಗಿ ಓಡುವರು. ಗೂಡಿನಿಂದ ಕೆಳಗೆ ಬಿದ್ದ ಪಕ್ಷಿಮರಿಗಳಂತೆ ಅವರಿರುವರು. |
೩ |
ಅವರು, “ನಮಗೆ ಸಹಾಯ ಮಾಡಿರಿ! ನಾವು ಮಾಡಬೇಕಾದದ್ದನ್ನು ತಿಳಿಸಿರಿ! ವೈರಿಗಳಿಂದ ನಮ್ಮನ್ನು ರಕ್ಷಿಸಿರಿ. ನಮ್ಮನ್ನು ನಡುಮಧ್ಯಾಹ್ನದ ಸೂರ್ಯನ ಶಾಖದಿಂದ ನೆರಳು ಕಾಪಾಡುವಂತೆ ನಮ್ಮನ್ನು ಕಾಪಾಡಿರಿ. ನಾವು ನಮ್ಮ ಶತ್ರುಗಳಿಂದ ಓಡಿಹೋಗುತ್ತಿದ್ದೇವೆ. ನಮ್ಮನ್ನು ಅಡಗಿಸಿಡಿರಿ, ವೈರಿಗಳ ಕೈಗೆ ನಮ್ಮನ್ನು ಕೊಡಬೇಡಿರಿ. |
ಕನ್ನಡ ಬೈಬಲ್ 1934 |
|