A A A A A
ಯೆಶಾಯನ ೧೬
ನಿಸ್ಸಾರವಾಗಿದೆ ಹೆಷ್ಬೋನಿನ ಹೊಲ, ಸಿಬ್ಮದ ದ್ರಾಕ್ಷಾಲತೆ, ಒಮ್ಮೆ ವ್ಯಾಪಿಸಿತ್ತು ಆ ರಾಜ್ಯದ್ರಾಕ್ಷಿ ಯಜ್ಜೇರಿನವರೆಗೆ, ಹಬ್ಬಿತ್ತದರ ಶಾಖೆ ಮರುಭೂಮಿಗೆ, ಸಮುದ್ರದಾಚೆ, ಮಾಡಿತು ನಾಡಿನೊಡೆಯರನು ಕುಡಿದು ಮತ್ತರಾಗುವಂತೆ.
ಕನ್ನಡ ಬೈಬಲ್ (KNCL) 2016

ಹೆಷ್ಬೋನಿನ ಹೊಲ ಗಳೂ, ಸಿಬ್ಮದ ದ್ರಾಕ್ಷೆಯೂ ನಿಸ್ಸಾರವಾಗಿವೆ; ಅನ್ಯ ಜನಗಳ ಪ್ರಭುಗಳು ಅದರ ಮುಖ್ಯವಾದ ಗಿಡಗಳನ್ನು ಮುರಿದುಹಾಕಿದ್ದಾರೆ; ಅವರು ಯಜ್ಜೇರಿನ ವರೆಗೂ ಬಂದರು; ಅಡವಿಯಲ್ಲಿ ಅವರು ಸಂಚರಿಸಿದರು. ಅವಳ ಕೊಂಬೆಗಳು ಚಾಚಲ್ಪಟ್ಟವು ಅವರು ಸಮುದ್ರದ ಮೇಲೆ ಹೋದರು.
ಕನ್ನಡ ಬೈಬಲ್ 2016

ಹೆಷ್ಬೋನಿನ ತೋಟಗಳು ಮತ್ತು ಸಿಬ್ಮದ ದ್ರಾಕ್ಷಾಲತೆಗಳು ದ್ರಾಕ್ಷಿಯನ್ನು ಫಲಿಸಲಾರದ ಕಾರಣ ಜನರು ವ್ಯಸನದಿಂದಿರುವರು. ಶತ್ರುಸೈನ್ಯವು ಯೆಜ್ಜೇರಿನಿಂದ ಮರುಭೂಮಿಯವರೆಗೂ ಮತ್ತು ಸಮುದ್ರದವರೆಗೂ ಆವರಿಸಿಕೊಂಡಿರುವರು.
ಕನ್ನಡ ಬೈಬಲ್ 1934