A A A A A

ವಿಮೋಚನಾಕಾಂಡ ೮

೨೬
ಆದರೆ ಮೋಶೆ, “ಹಾಗೆ ಮಾಡುವುದು ಸರಿಯಲ್ಲ. ನಮ್ಮ ದೇವರಾದ ಸರ್ವೇಶ್ವರನಿಗೆ ನಾವು ಬಲಿಯಾಗಿ ಕೊಡುವ ಆಹುತಿ ಈಜಿಪ್ಟಿನವರಿಗೆ ನಿಷಿದ್ಧವಾದದ್ದು. ನಿಷಿದ್ಧವೆಂದು ಈಜಿಪ್ಟಿನವರು ತಿಳಿದುಕೊಂಡು ಇರುವ ಆಹುತಿಯನ್ನು ನಾವು ಅವರ ಕಣ್ಮುಂದೆಯೇ ಮಾಡಿದರೆ ಅವರು ನಮ್ಮನ್ನು ಕಲ್ಲೆಸೆದು ಕೊಲ್ಲುವರಲ್ಲವೆ?
ಕನ್ನಡ ಬೈಬಲ್ (KNCL) 2016

೨೬
ಆದರೆ ಮೋಶೆಯು ಫರೋಹನಿಗೆ--ಹಾಗೆ ಮಾಡುವದು ಯುಕ್ತವಲ್ಲ, ನಮ್ಮ ಕರ್ತನಾದ ದೇವರಿಗೆ ಯಜ್ಞವನ್ನ ರ್ಪಿಸುವದು ಐಗುಪ್ತ್ಯರಿಗೆ ಅಸಹ್ಯವಾಗಿದೆ; ಇಗೋ, ಐಗುಪ್ತ್ಯರಿಗೆ ಅಸಹ್ಯವಾಗಿರುವದನ್ನು ಅವರ ಕಣ್ಣೆ ದುರಿಗೆ ಅರ್ಪಿಸಿದರೆ ಅವರು ನಮಗೆ ಕಲ್ಲೆಸೆದಾರು.
ಕನ್ನಡ ಬೈಬಲ್ 2016

೨೬
ಅದಕ್ಕೆ ಮೋಶೆ, “ಅದು ಸರಿಯಲ್ಲ. ನಮ್ಮ ದೇವರಾದ ಯೆಹೋವನಿಗೆ ನಾವು ಅರ್ಪಿಸುವ ಯಜ್ಞಗಳು ಈಜಿಪ್ಟಿನವರಿಗೆ ನಿಷಿದ್ಧವಾಗಿವೆ. ಹೀಗಿರಲು ಅವರ ಕಣ್ಣೆದುರಿಗೇ ಅಂಥ ಯಜ್ಞಗಳನ್ನು ಅರ್ಪಿಸಿದರೆ, ಅವರು ನಮ್ಮನ್ನು ಕಲ್ಲೆಸೆದು ಕೊಲ್ಲುವುದಿಲ್ಲವೇ?
ಕನ್ನಡ ಬೈಬಲ್ 1934