೩೪ |
'ಚಿಕ್ಕಂದಿನಿಂದ ಇಂದಿನವರೆಗೂ ನಿಮ್ಮ ಸೇವಕರಾದ ನಾವು, ನಮ್ಮ ಪೂರ್ವಜರ ಪದ್ಧತಿಯಂತೆ ಮಂದೆ ಮೇಯಿಸುವವರು,’ ಎಂದು ಹೇಳಿರಿ. ಆಗ ಗೋಷೆನ್ ಪ್ರಾಂತ್ಯವನ್ನು ನಿಮ್ಮ ನಿವಾಸಕ್ಕೆ ನೇಮಿಸುವನು - ಏಕೆಂದರೆ ಕುರಿ ಕಾಯುವವರೆಂದರೆ ಈಜಿಪ್ಟಿಯರಿಗೆ ಹಿಡಿಸದು,” ಎಂದು ಹೇಳಿದನು. |
ಕನ್ನಡ ಬೈಬಲ್ (KNCL) 2016 |
|
೩೪ |
ಗೋಷೆನ್ ದೇಶದಲ್ಲಿ ವಾಸವಾಗಿರು ವಂತೆ ನೀವು ಅವನಿಗೆ--ಚಿಕ್ಕಂದಿನಿಂದ ಇಂದಿನ ವರೆಗೂ ನಿನ್ನ ದಾಸರಾದ ನಾವೂ ನಮ್ಮ ತಂದೆಗಳೂ ಮಂದೆಯನ್ನು ಕಾಯುವವರಾಗಿದ್ದೇವೆ ಎಂದು ಹೇಳ ಬೇಕು. ಯಾಕಂದರೆ ಕುರಿಕಾಯುವವರೆಲ್ಲಾ ಐಗುಪ್ತ್ಯ ರಿಗೆ ಅಸಹ್ಯವಾಗಿದ್ದಾರೆ ಅಂದನು. |
ಕನ್ನಡ ಬೈಬಲ್ 2016 |
|
೩೪ |
ನೀವು ಅವನಿಗೆ, ‘ನಾವು ಕುರುಬರು. ನಮ್ಮ ಜೀವಮಾನವೆಲ್ಲಾ ನಾವು ಪಶುಗಳನ್ನು ಸಾಕುವುದರ ಮೂಲಕ ಜೀವನ ಮಾಡಿದೆವು. ನಮಗಿಂತ ಮೊದಲು ನಮ್ಮ ಪೂರ್ವಿಕರು ಸಹ ಇದೇ ರೀತಿ ಜೀವಿಸಿದರು’ ಎಂದು ಹೇಳಿರಿ. ಆಗ ಅವನು ಗೋಷೆನ್ ಪ್ರಾಂತ್ಯದಲ್ಲಿ ವಾಸಿಸಲು ನಿಮಗೆ ಅವಕಾಶ ಮಾಡಿಕೊಡುತ್ತಾನೆ. ಈಜಿಪ್ಟಿನ ಜನರು ಕುರುಬರನ್ನು ಇಷ್ಟಪಡುವುದಿಲ್ಲ. ಆದ್ದರಿಂದ ನೀವು ಗೋಷೆನಿನಲ್ಲಿ ವಾಸಿಸುವುದು ಒಳ್ಳೆಯದು” ಎಂದು ಹೇಳಿದನು. |
ಕನ್ನಡ ಬೈಬಲ್ 1934 |
|