೨೫ |
ಮೂರನೆಯ ದಿನ ಆ ಗಂಡಸರೆಲ್ಲರು ಗಾಯದಿಂದ ಇನ್ನು ಬಹಳ ಬಾಧೆಪಡುತ್ತಿದ್ದರು. ಆಗ, ಯಕೋಬನ ಮಕ್ಕಳಲ್ಲಿ ದೀನಳ ಸಹೋದರರಾದ ಸಿಮೆಯೋನ್ ಮತ್ತು ಲೇವಿ ಎಂಬ ಇಬ್ಬರು ಕೈಯಲ್ಲಿ ಕತ್ತಿಹಿಡಿದು ನಿಶ್ಚಿಂತೆ ಇಂದಿದ್ದ ಆ ಊರಿನವರ ಮೇಲೆ ಬಿದ್ದರು. ದಯೆದಾಕ್ಷಿಣ್ಯವಿಲ್ಲದೆ ಗಂಡಸರೆಲ್ಲರನ್ನು ಕೊಂದರು. |
ಕನ್ನಡ ಬೈಬಲ್ (KNCL) 2016 |
|
೨೫ |
ಮೂರನೆಯ ದಿನದಲ್ಲಿ ಅವರಿಗೆ ನೋವು ಉಂಟಾದಾಗ ಯಾಕೋಬನ ಮಕ್ಕಳಲ್ಲಿ ಇಬ್ಬರು ಅಂದರೆ ದೀನಳ ಸಹೋದರರಾದ ಸಿಮೆಯೋನನೂ ಲೇವಿಯೂ ತಮ್ಮ ತಮ್ಮ ಕತ್ತಿಗಳನ್ನು ತಕ್ಕೊಂಡು ಧೈರ್ಯವಾಗಿ ಪಟ್ಟಣಕ್ಕೆ ಬಂದು ಗಂಡಸರನ್ನೆಲ್ಲಾ ಕೊಂದುಹಾಕಿದರು. |
ಕನ್ನಡ ಬೈಬಲ್ 2016 |
|
೨೫ |
ಮೂರು ದಿನಗದರೂ ಸುನ್ನತಿ ಮಾಡಿಸಿಕೊಂಡಿದ್ದ ಗಂಡಸರು ಇನ್ನೂ ಗಾಯದ ನೋವಿನಲ್ಲಿದ್ದರು. ಈ ಸಮಯದಲ್ಲಿ ಗಂಡಸರು ಬಲಹೀನರಾಗಿರುತ್ತಾರೆ ಎಂಬುದು ಯಾಕೋಬನ ಇಬ್ಬರು ಗಂಡುಮಕ್ಕಳಾದ ಸಿಮೆಯೋನ್ ಮತ್ತು ಲೇವಿಗೆ ತಿಳಿದಿತ್ತು. ಆದ್ದರಿಂದ ಅವರು ಪಟ್ಟಣಕ್ಕೆ ಹೋಗಿ ಅಲ್ಲಿದ್ದ ಎಲ್ಲಾ ಗಂಡಸರನ್ನು ಕೊಂದುಹಾಕಿದರು. |
ಕನ್ನಡ ಬೈಬಲ್ 1934 |
|